Share

ವಿಷ್ಣುವರ್ಧನ್ ಅವತ್ತು ಮುರುಡಯ್ಯ ಅಂದದ್ದು ಯಾರನ್ನು?
ಶಿವಶಂಕರ್ ಜಿ

 

 

 

ಎಂದೂ ಯಾರ ಕೇಡನ್ನೂ ಬಯಸದ, ಯಾವ ಮಟ್ಟದಲ್ಲಾದರೂ ನಂಬಬಹುದಾದ ಸಜ್ಜನಿಕೆ – ಸೌಜನ್ಯದ ಸಾಕಾರವಾದ ಮುರುಡಯ್ಯನಂಥ ವ್ಯಕ್ತಿಗಳು ಜಗತ್ತಿಗೆ ಬೇಕು. ಮುರುಡಯ್ಯನಂಥ ಕಲಾವಿದರು ರಂಗಭೂಮಿಗೆ ಬೇಕು. ಅವರು ನೂರ್ಕಾಲ ಸುಖವಾಗಿ, ನೆಮ್ಮದಿಯಾಗಿ ಇರಬೇಕು…

 

 

 

 

ಮುರುಡಯ್ಯ!
ಈ ಹೆಸರನ್ನು ಎಲ್ಲೋ ಕೇಳಿದಂತಿದೆಯಲ್ಲಾ?
ಅದೂ ವಿಷ್ಣುವರ್ಧನ್ ಅವರ ದನಿಯಲ್ಲಿ!!

ಹೌದು, ನೀವು ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರವನ್ನು ನೋಡಿರುವಿರಾದರೆ, ಅದರಲ್ಲಿ ಆತ್ಮಹತ್ಯೆಗೆ ಮುಂದಾದ ಒಬ್ಬ ರೈತನನ್ನು ವಿಷ್ಣು ಈ ಹೆಸರಿಡಿದು ಕೂಗಿ ಕರೆಯುತ್ತಾರೆ. ಆ ಪಾತ್ರ ಮತ್ತು ಪಾತ್ರಧಾರಿಯೇ ನಮ್ಮ ಮುರುಡಯ್ಯ.

ಕಲಾವಿದ ಮುರುಡಯ್ಯ

ಮೈಕೋ ಬಾಷ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ಸಹೋದ್ಯೋಗಿ ಗೆಳೆಯ ಮುರುಡಯ್ಯ ಒಬ್ಬ ಅಸಾಧಾರಣ ರಂಗಭೂಮಿ ಕಲಾವಿದ. ರಂಗ ನಿರಂತರ, ರೂಪಾಂತರವೂ ಸೇರಿದಂತೆ ಹಲವಾರು ಪ್ರತಿಷ್ಠಿತ ರಂಗತಂಡಗಳಲ್ಲಿ ನಟರಾಗಿ, ರಂಗಕರ್ಮಿಯಾಗಿ, ರಂಗ ಸಂಘಟಕರಾಗಿ ಅಪಾರ ಅನುಭವವುಳ್ಳ ಇವರು ಅಭಿನಯಿಸಿರುವ ನಾಟಕಗಳನ್ನು ನೋಡಿ;

ತದ್ರೂಪಿ, ಸಾಹೇಬರು ಬರುತ್ತಾರೆ, ನಮ್ಮೂರ ವಾಡೆ, ಬೆಕುವ, ಮಾಡು ಸಿಕ್ಕದಲ್ಲ, ಏ ಕೆ ರಾಮಾನುಜನ್, ತಲೆದಂಡ, ಕರ್ಣಭಾರ, ಜೋಕುಮಾರ ಸ್ವಾಮಿ, ಗೌಡರ ಮಲ್ಲಿ, ತಿರುಕ ರಾಜ, ಮುದ್ದಣ್ಣನ ಪ್ರಮೋಷನ್ ಪ್ರಸಂಗ, ಜಲಗಾರ, ತ್ರಿಶಂಕು, ಕದಡಿದ ನೀರು, ಹೆಜ್ಜೆಗಳು, ಇಗೋ ಪಂಜರ ಅಗೋ ಮುಗಿಲು, ಕುಸುಮ ಬಾಲೆ, ಚಕೋರಿ, ಅಲ್ಲಮನ ಬಯಲಾಟ, ಶರೀಫ, ಅಲಾಮನ ಅದ್ಭುತ ನ್ಯಾಯ, ಸುರಪುರ ವೆಂಕಟಪ್ಪ ನಾಯಕ, ಅಲ್ಲೇ ಇದ್ದೋರು, ಬೇಲಿ ಮತ್ತು ಹೊಲ, ದಂಡೆ, ಗೌತಮ ಬುದ್ಧ, ಜೀವನ ನಾಟಕ, ದಿಂಡಿ, ತುದಿಯಂಬೋ ತುದಿಯಲ್ಲ… ಈ ಎಲ್ಲವೂ ಕನ್ನಡ ರಂಗಭೂಮಿಯ ಮಹತ್ವದ ನಾಟಕಗಳು ಮತ್ತು ಈ ಎಲ್ಲದರಲ್ಲೂ ಮುರುಡಯ್ಯ ವಹಿಸಿರುವುದು ಪ್ರಧಾನ ಪಾತ್ರಗಳನ್ನು – ಅದೂ ಸಿಜಿಕೆ, ಸಿ. ಬಸವಲಿಂಗಯ್ಯ, ಬಿ. ಜಯಶ್ರೀ, ಸುರೇಶ್ ಆನಗಳ್ಳಿ, ಆರ್. ನಾಗೇಶ್, ಕೃಷ್ಣಮೂರ್ತಿ ಕವತ್ತಾರ್, ಡಾ. ಕೆ ರಾಮಕೃಷ್ಣಯ್ಯ, ರಾಜೇಂದ್ರ ಕಾರಂತ್, ಕೆ ಎಸ್ ಡಿ ಎಲ್ ಚಂದ್ರು, ಮೈಕೋ ಶಿವಶಂಕರ್ – ಇಂತಹ ರಂಗದಿಗ್ಗಜರ ನಿರ್ದೇಶನದಲ್ಲಿ!

ಕುವೆಂಪು ಅವರ ‘ಜಲಗಾರ’ ನಾಟಕದಲ್ಲಿ ಜಲಗಾರನ ಪಾತ್ರದಲ್ಲಾಗಲಿ, ಲಕ್ಷ್ಮೀಪತಿ ಕೋಲಾರ ಅವರ ‘ಅಲ್ಲಮನ ಬಯಲಾಟ’ದ ನಾಗಜ್ಜನ ಪಾತ್ರದಲ್ಲಾಗಲಿ ಮುರುಡಯ್ಯ ಅವರ ಪರಕಾಯ ಪ್ರವೇಶವನ್ನು ಎಂದಿಗೂ ಮರೆಯುವಂತಿಲ್ಲ. ಅವರ ಕನ್ನಡ ಉಚ್ಛಾರಣೆ, ಧ್ವನಿಯ ಏರಿಳಿತ ಬೆರಗು ಮೂಡಿಸುವಷ್ಟು ಅದ್ಭುತ! ಮತ್ತು ಮೇಲೆ ಹೇಳಿದ ನಾಟಕಗಳಲ್ಲಿ ಬಹುತೇಕ ಹೊಸ ನಾಟಕದ ಮೊದಲ ಪ್ರದರ್ಶನದಲ್ಲೇ ಅಭಿನಯಿಸಿರುವ ಮುರುಡಯ್ಯ ಅವರ ಸ್ಥಾನದಲ್ಲಿ ಮತ್ತೊಬ್ಬರನ್ನು ಊಹಿಸಿಕೊಳ್ಳಲೂ ಸಾಧ್ಯವಾಗದಂಥ ಅದ್ವಿತೀಯ ನಟನೆ!

‘ಅಲ್ಲಮನ ಬಯಲಾಟ’ ನಾಟಕದಲ್ಲಿ ರಶ್ಮಿ, ಮುರುಡಯ್ಯ ಮತ್ತು ಮೈಕೋ ಶಿವಶಂಕರ್

 

ಒಂದು ನಾಟಕದ ತಾಲೀಮಿನಲ್ಲಿ ಮುರುಡಯ್ಯ ತೊಡಗಿಕೊಂಡರೆ, ಅವರ ಬದ್ಧತೆ, ಶ್ರದ್ಧೆ, ನಿಷ್ಠೆ, ಸಮಯ ಪ್ರಜ್ಞೆ, ಒಳಗೊಳ್ಳುವಿಕೆ – ಎಲ್ಲವೂ ಬೆರಗುಗೊಳ್ಳುವಂಥದ್ದೇ! ಈ ಎಲ್ಲಾ ಗುಣಗಳೂ ಒಬ್ಬ ಕಲಾವಿದನಲ್ಲೇ ಮೇಳೈಸುವುದೂ ಸಹ ಅಪರೂಪವೇ!

ಇಷ್ಟೆಲ್ಲಾ ಪ್ರತಿಭಾವಂತರಾದರೂ ಪ್ರಚಾರದಿಂದ ಸದಾ ದೂರವೇ ಉಳಿಯುವ ಮುರುಡಯ್ಯ ಕೇವಲ ಕಲಾವಿದರಾಗಿ ಮಾತ್ರವಲ್ಲ, ವ್ಯಕ್ತಿಯಾಗಿಯೂ ಎಲ್ಲರಿಗೂ ಪ್ರಿಯವಾಗುವ ಅತ್ಯಂತ ಸರಳ ಹಾಗೂ ಸ್ನೇಹ ಜೀವಿ. ಸ್ತ್ರೀ ಇರಲಿ ಪುರುಷರಿರಲಿ ಅವರು ನಡೆಸಿಕೊಳ್ಳುವ ರೀತಿ ನೋಡಬೇಕು.

ಎಂದೂ ಯಾರ ಕೇಡನ್ನೂ ಬಯಸದ, ಯಾವ ಮಟ್ಟದಲ್ಲಾದರೂ ನಂಬಬಹುದಾದ ಸಜ್ಜನಿಕೆ – ಸೌಜನ್ಯದ ಸಾಕಾರವಾದ ಮುರುಡಯ್ಯನಂಥ ವ್ಯಕ್ತಿಗಳು ಜಗತ್ತಿಗೆ ಬೇಕು.
ಮುರುಡಯ್ಯನಂಥ ಕಲಾವಿದರು ರಂಗಭೂಮಿಗೆ ಬೇಕು.
ಅವರು ನೂರ್ಕಾಲ ಸುಖವಾಗಿ, ನೆಮ್ಮದಿಯಾಗಿ ಇರಬೇಕು…
ಏಕೆಂದರೆ,
ಮುರುಡಯ್ಯನಂಥ ಅಂತಃಕರಣದ ಗೆಳೆಯರು ನನಗೆ ಬೇಕು…
ಮತ್ತು
ನಿಮಗೆ?

—————

ಶಿವಶಂಕರ್ ಜಿ

ಬೆಂಗಳೂರು ಬಾಷ್ ಲಿಮಿಟೆಡ್ನಲ್ಲಿ ಟೆಕ್ನೀಷಿಯನ್. ಸಾಹಿತ್ಯ, ಸಂಗೀತ, ರಂಗಭೂಮಿ ಹಾಗೂ ಜಾಗತಿಕ ಸಿನಿಮಾ ಆಸಕ್ತಿಯ ಕ್ಷೇತ್ರಗಳು. ಚಾರಣ ಮತ್ತು ಬರಹ ಹವ್ಯಾಸ. ವಿದಾಯ, ಇಬ್ಬಂದಿ, ತಿರುವು – ಧಾರಾವಾಹಿಯಾಗಿರುವ ಕಥೆಗಳು. ಈಟೀವಿಗಾಗಿ ಪಿ.ಎಚ್. ವಿಶ್ವನಾಥ್ ನಿರ್ದೇಶಿಸಿದ ‘ಪ್ರೇಮ ಕಥೆಗಳು’ ಧಾರಾವಾಹಿಗೆ ಚಿತ್ರಕಥೆ, ಸಂಭಾಷಣೆ. ‘ಸರ್ವಶಿಕ್ಷಣ ಅಭಿಯಾನ’ಕ್ಕಾಗಿ ಹಲವಾರು ಸಾಕ್ಷ್ಯ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಹಾಗೂ ಸಹನಿರ್ದೇಶನ. ಜಾಲ, ಗಲಿಬಿಲಿ ಕಲ್ಲೇಶಿ ಧಾರಾವಾಹಿಗೆ ಶೀರ್ಷಿಕೆ ಗೀತೆ ರಚನೆ.

Share

Leave a comment

Your email address will not be published. Required fields are marked *

Recent Posts More

  • 1 week ago No comment

    ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

            ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

  • 1 week ago No comment

    ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

          ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

  • 1 week ago No comment

    ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

    ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

  • 2 weeks ago No comment

    ಉಷಾ ಚಿತ್ತ | ಮೊಲದ ಮರಿ ಗಿಫ್ಟ್

          ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

  • 2 weeks ago No comment

    ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

    ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

  • 14 April 2019
    1 week ago No comment

    ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

            ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

  • 04 April 2019
    2 weeks ago No comment

    ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

    ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

  • 29 March 2019
    3 weeks ago One Comment

    ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                      ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

  • 26 March 2019
    4 weeks ago No comment

    ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

    ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

  • 12 March 2019
    1 month ago No comment

    ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

    ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...