Share

ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ
ವಿ ಚಂದ್ರಶೇಖರ ನಂಗಲಿ

ಪುಸ್ತಕ ಪ್ರಸ್ತಾಪ

 

 

ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.

 

ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ರಸ್ತೆಯಲ್ಲಿ ಬಾಳಬಂಡಿಯನ್ನು ಚಲಾಯಿಸುವ ಸವಾಲನ್ನು ಎಲ್ಲರೂ ಎದುರಿಸಬೇಕು. ಆದರೆ, ಪ್ರೀತಿ ಪ್ರೇಮವನ್ನು ಬಹುತ್ವ ದೃಷ್ಟಿಯಿಂದ ನೋಡದೆ ‘ಹದಿಹರೆಯದ ಪ್ರೀತಿ’ ಮಾತ್ರ ಎಂಬಂತೆ ಏಕೈಕ ದೃಷ್ಟಿಯಿಂದ ನೋಡುವ ಕುರುಡು ದೃಷ್ಟಿ ಮತ್ತು ಮನೋಧರ್ಮ ಮಾನವನಿರ್ಮಿತ ನಾಗರಿಕತೆಯಲ್ಲಿ ಮೈ ಮನಸ್ಸುಗಳಿಗೆ ಅಂಟಿದ ಸೋಂಕುರೋಗ ಆಗಿಬಿಟ್ಟಿದೆ. ಎಷ್ಟೋ ವೇಳೆ ವಯಸ್ಸಾದ ವ್ಯಕ್ತಿಗಳಲ್ಲೂ ಇದು ಕಂಡುಬರುತ್ತದೆ.

ಇಂಥ ಏಕೈಕ ಪ್ರೀತಿ ಪ್ರೇಮದ ಸೋಂಕುರೋಗದಿಂದ ಪಾರಾಗಿ ಬದುಕನ್ನು ಮುಕ್ತ ಮನಸ್ಸು ಮತ್ತು ಅನಿರ್ಬಂಧಿತ ದೃಷ್ಟಿಯಿಂದ ಪ್ರವೇಶ ಮಾಡಲು ಪ್ರೀತಿಯ ಬಹುತ್ವವೇ ನಮಗಾಧಾರವಾಗಬಲ್ಲುದು. ಈ ಬಹುತ್ವದ ಪ್ರೀತಿ ಪ್ರೇಮವು ಬಗೆ ಬಗೆಯಾಗಿ ಕಾದಂಬಿನಿಯವರ ಕಾವ್ಯಲೋಕದಲ್ಲಿ ಎಡೆಪಡೆದಿದೆ. ಇದನ್ನು ಅರಿತುಕೊಳ್ಳಲು ಪ್ರಾಚೀನ ಗ್ರೀಕರು ನಿರೂಪಣೆ ಮಾಡಿರುವ “ಪ್ರೀತಿ ಪ್ರೇಮದ ಏಳು ಬಗೆಗಳು” ನೆರವಾಗಬಹುದೆಂಬ ಕಾರಣಕ್ಕೆ ಈ ಕುರಿತು ನನ್ನ FB ವಾಲ್ ನಲ್ಲಿ ಚಿಕ್ಕ ಪೋಸ್ಟ್ ಒಂದನ್ನು ಹಾಕಿದೆನು. ನನ್ನ ಮನೋಗತವನ್ನು ಸಹಜವಾಗಿಯೇ ತಿಳಿಯದ(?) ಆತ್ಮೀಯರಾದ ಎಲ್ಸಿ , ಫರ್ಜಾನ, ಕಾದಂಬಿನಿ ಮುಂತಾದ ಸಹೃದಯರೆಲ್ಲರೂ ಇಷ್ಟಪಟ್ಟರು. ಈ ಪೋಸ್ಟ್ ಕಾದಂಬಿನಿಯವರ ಕವನಗಳ ಓದನ್ನು ಲಕ್ಷಿಸಿದ ಒಂದು ಹಸಿರುನಿಶಾನೆ.

ಮಾನವಜೀವನದ ಪ್ರೀತಿ ಪ್ರೇಮಗಳಿಗೆ ಸಂಬಂಧಪಟ್ಟಂತೆ, ಕಾದಂಬಿನಿ ಮನದುಂಬಿ ಬರೆಯುತ್ತಾರೆ. ಹುಟ್ಟು ಮತ್ತು ಸಾವು, ನಗೆ ಮತ್ತು ಕಣ್ಣೀರು, ಮಿಲನ ಮತ್ತು ವಿರಹ ಮುಂತಾದ ವೈರುಧ್ಯಗಳು ಒಂದೇ ನಾಣ್ಯದ ಎರಡು ಮುಖಗಳು. ಒಂದರ ಆಹ್ವಾನಕ್ಕೆ ಒಳಗಾದವರು ಮತ್ತೊಂದನ್ನು ವಿಸರ್ಜನ ಮಾಡುವಂತಿಲ್ಲ ! ಈ ದೃಷ್ಟಿಯಿಂದಲೇ ಸಫರಿಂಗ್ ಅನ್ನು (=ಬಾಧೆಯನ್ನು) ಪ್ರೀತಿ ಪ್ರೇಮದಿಂದ ಎದುರಿಸಬೇಕೆಂಬುದು ಬುದ್ಧಗುರುವಿನ ಅಭಿಮತ. ಈ ಭಾವನೆಯನ್ನು ತೆಲುಗು ಸಿನೆಮಾದ ಹಾಡುಗಳಲ್ಲೂ ಕಂಡಿದ್ದೇನೆ:

1. ಬಾಧೆ ಸೌಖ್ಯಮನೇ ಭಾವನ
ರಾನೀ ಓಯ್! ಆ ಎರುಕೇ ನಿಶ್ಚಲಾನಂದಮೋಯ್! ಬ್ರಹ್ಮಾನಂದಮೋಯ್!
[ ಬಾಧೆ ಸೌಖ್ಯವೆಂಬ ಭಾವನೆ ಬರಲಿ ಓಯ್! ಆ ಅರಿವೇ ನಿಶ್ಚಲಾನಂದವೋಯ್!
ಬ್ರಹ್ಮಾನಂದವೋಯ್! ] – ದೇವದಾಸ್

2. ಬಾಧಲನು ಪ್ರೇಮಿಂಚು ಬಾಯೀ
ಅಂತಕು ಲೇದು ಮಿಂಚಿ ಹಾಯೀ
[ ಬಾಧೆಗಳನ್ನು ಪ್ರೇಮಿಸು ಸೋದರಾ
ಅದಕಿಂತ ಇಲ್ಲ ಮಿಕ್ಕಿದ ಮಧುರಾ]
– ನಿಪ್ಪುಲಾಂಟಿ ಮನಿಷಿ

ಕಾದಂಬಿನಿ ಬರೆದ ‘ನೋವಿನ ತಾವು’ ಎಂಬ ಕವನದಲ್ಲಿ ಹುಟ್ಟಿನಿಂದ ಹಿಡಿದು ಸಾವಿನವರೆಗೆ ಜೀವನಾಡಿಯಾಗಿ ಮಿಡಿವ ನೋವು ಮಾನವನ ಒಡಲಿನ ಬೇರೆ ಬೇರೆ ‘ತಾವು'(=ತಾಣ)ಗಳಲ್ಲಿ ಹುಟ್ಟಿ , ಮಾನವರ ಜೊತೆಯಲ್ಲೇ ಬೆಳೆಯುತ್ತಾ , ಮಾನವರನ್ನು ಆಡಿಸಿ ಏಡಿಸಿ ರೋಡಿಸಿ , ಕಡೆಗೆ ತಾನೂ ಅಳಿಯುವ ಪರಿಯನ್ನು ಅದ್ಭುತವಾಗಿ ನಿರೂಪಿಸಿದೆ. ಜೇಡರ ದಾಸಿಮಯ್ಯನ “ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದಡೆ ವಿಷವೇರಿತ್ತಯ್ಯ ಆಪಾದ ಮಸ್ತಕಕ್ಕೆ”ಯ ಪರಿಣಾಮರಮಣೀಯತೆ ‘ನೋವಿನ ತಾವು’ ಕವನದಲ್ಲೂ ಬಂದಿದೆ. ಬಾಯಿ > ಉದರ > ಜಠರ > ಮೆದುಳು > ನಾಭಿ > ಎದೆಯಲ್ಲೆಲ್ಲ ಸಂಚರಿಸುತ್ತಾ ತಿರುಗಣಿ ಮಡುವಿನಲ್ಲಂತೆ ಸುಳಿಸುಳಿದು ಮಾನವಜೀವನವನ್ನು ಹಿಂಡಿ ಹೈರಾಣ ಮಾಡುವ ವಿದ್ರಾವಕ ಕಥನವು ಇಲ್ಲಿ ರೂಪಕಶಕ್ತಿಯಿಂದ ಮನಸೆಳೆಯುತ್ತದೆ. ಈ ಕವನದಲ್ಲಿ ನೋವು ಪದಮೈತ್ರಿಯಾಗಿ ಮೂಡಿಬಂದಿದೆ.

“ಇರುವುದೊಂದೇ ಕ್ರಾಂತಿಕಾರಿಯಾದ ವಿಚಾರ, ಕ್ರಾಂತಿಕಾರಿ ಕ್ರಿಯೆ ಎಂಬುದಿಲ್ಲ” ಎಂದು ಲೆನಿನ್ ಹೇಳಿದ್ದಾನೆ. ಇದಕ್ಕೆ ನಿದರ್ಶನದಂತಿರುವ ಸಿದ್ಧಲಿಂಗಯ್ಯನವರ ‘ಕ್ರಾಂತಿಕನ್ಯೆ’ ಎಂಬ ಕವನ ಮತ್ತು ಕಾದಂಬಿನಿಯವರ ‘ಕ್ರಾಂತಿಯ ಕಿಡಿ’ ಎಂಬ ಎರಡೂ ಕವನಗಳನ್ನು ಒಟ್ಟಿಗೆ ನೋಡಬೇಕು. ಅಲ್ಲಿರುವ ಉತ್ಸಾಹ, ಆವೇಶ, ವೈಭವಗಳು ಕಾದಂಬಿನಿ ಅವರಲ್ಲಿಲ್ಲ. ಬದಲಿಗೆ ದಲಿತರನ್ನು ಹೆಣ್ಣುಗಳನ್ನು ಯಥಾಸ್ಥಿತಿಗೆ (=ನೋವಿಗೆ) ದೂಡುತ್ತಾ, ಕ್ರಾಂತಿಯ ಕಿಡಿ ಆರಿಹೋಗಿ ತಣ್ಣಗಾಗುವ ಪರಿಯ ಸ್ಫೋಟವಿದೆ.

ಕಾದಂಬಿನಿಯವರ ಕವನಗಳನ್ನು ಹೃದಯದ ಬಟ್ಟಲಿಗೆ ತುಂಬಿಕೊಳ್ಳಬೇಕಾದರೆ, ಅವರ ಕವನಗಳನ್ನೇ ಹಿಡಿದು ಸಿಕ್ಕ ಎಳೆಗಳನ್ನೆಲ್ಲ ಹಾಸುಹೊಕ್ಕಾಗಿ ನೇಯ್ದಲ್ಲಿ ಎದೆತುಂಬಿ ಹರಿದಂತಾಗುವುದು. ‘ಬೆಂಕಿ’ ಎಂಬ ಪುಟ್ಟ ಕವನ ಹೀಗಿದೆ:

“ಹೇಳಿದೆನಲ್ಲಾ…
ನಾನು ಬೆಂಕಿಯೇ!

ನೀನು ಚಿನ್ನವಾದರೆ
ಶುದ್ಧವಾಗುತ್ತೀಯೆ

ತರಗೆಲೆಯಾದರೆ
ಉರಿದು ಹೋಗುತ್ತೀಯೆ!

ಇದನ್ನು ಹೆಣ್ಣು + ಗಂಡು, ನಿಸರ್ಗ + ನಾಗರಿಕತೆ, ಕವಿ + ಸಹೃದಯ ….. ಹೀಗೆ ನಾನಾ ಭಾವಗಳಲ್ಲಿ ನೋಡಬಹುದು. ಇದೇ ಸಂಕಲನದಲ್ಲಿ ‘ಬೂದಿಯಾದಳೇ ?’ ಎಂಬ ಕವನವಿದೆ. ನೀರು ಮತ್ತು ಬೆಂಕಿಯ ರೂಪಕದ ಮೂಲಕ ಮಾನವಜೀವನದ ವೈರುಧ್ಯಗಳು ಮತ್ತು ಬೆಸುಗೆಯ ಸಂಬಂಧ ಶೋಧಿಸುತ್ತಾ ನೀರು ಮತ್ತು ಬೆಂಕಿ ಒಂದೇ ಆಗಿಬಿಡುವ ಮಾಯಾಬಂಧವನ್ನಿಲ್ಲಿ ಮನಗಾಣಿಸಲಾಗಿದೆ. ಕಡೆಗೆ, “ಬೂದಿಯಾದಳೇ ಅವಳು ? ಉಹೂಂ ಚಿನ್ನವಾದಳು !” ಎಂಬ ಸ್ಫೋಟಕ ಗುಣದ ನಿರೂಪಣೆಯಿದೆ. ಇದೇರೀತಿ ‘ಕಟ್ಟಾಜ್ಞೆ’ ಮತ್ತು ‘ಅದೆಷ್ಟು ಚೆನ್ನಿತ್ತು?’ ಎಂಬ ಕವನಗಳನ್ನು ಪರಿಶೀಲಿಸಬಹುದು. ಮೃಗಯಾವಿನೋದ ರೂಪಕದಲ್ಲಿ ಎದೆಯನ್ನು ಹಿಂಡುವ ನೋವು ಒಡಮೂಡಿದೆ.

ಕಾದಂಬಿನಿಯವರ ಕವನಗಳನ್ನು ಹಿಡಿದು ಪ್ರಾಚೀನ ಗ್ರೀಕರು ನಿರೂಪಣೆ ಮಾಡಿರುವ ಪ್ರೀತಿ ಪ್ರೇಮದ ಏಳು ಬಗೆಗಳಿಗೆ ಯಾವಾವ ಕವನ ಹೊಂದಿಕೊಳ್ಳುತ್ತದೆ? ಎಂದು ತಾಳೆ ಮಾಡುವುದು ಪೆದ್ದುತನ. ಏಕೆಂದರೆ ಪ್ರಾಚೀನ ಗ್ರೀಕರ ಸಪ್ತಪ್ರೀತಿಯ ನಿರೂಪಣೆಯೇ ಅಂತರ್ ಸಂಬಂಧ ಮತ್ತು ಕ್ರಮಪರಿಣಾಮ ಪ್ರಕ್ರಿಯೆಯನ್ನು ಹೊಂದಿದ್ದು ಪ್ರತ್ಯೇಕ ಘಟ್ಟಗಳ ಅವಸ್ಥೆ ಎಂಬುದನ್ನು ನಿರಾಕರಿಸುತ್ತದೆ. ಇಲ್ಲಿನ ಕವನಗಳು ಏಳುಬಣ್ಣ ಸೇರಿ ಬಿಳಿಯಬಣ್ಣ ಆದಂತೆ ಸಂಕೀರ್ಣ ಅರ್ಥಪಟಲವನ್ನು ಒಳಗೊಂಡಿದ್ದು , ನಿಜಸಹೃದಯರೆಂಬ ಪ್ರಿಸಂ ನಲ್ಲಿ ಹಾಯುವ ಬೆಳಕಿನ ಕಿರಣಗಳಂತಿವೆ. ಇವನ್ನು ವಿಮರ್ಶೆಯ ಶಾಸ್ತ್ರೀಯ ಚೌಕಟ್ಟಿನಲ್ಲಿ ವಿವರಿಸಲಾಗದು.

ಈ ದೃಷ್ಟಿಯಿಂದ ‘ಕ್ಷಮಿಸು ಬರೆಯಲಾಗಲೇ ಇಲ್ಲ’ ಮತ್ತು ‘ಒದ್ದೆ ಮುದ್ದೆ ಕಾಗದ’ ಎಂಬ ಕವನಗಳನ್ನು ಓದಬೇಕು. ‘ಸೃಜನಶೀಲತೆ ಎಂದರೆ’ ಕವನದ ಕೊನೆಯ ಸಾಲುಗಳಿವು:

“ನಿನ್ನ ಸೃಜನಶೀಲತೆಯೆಂದರೆ
ನನ್ನ ಬದುಕಿನ ಮೇಲೆ
ಯಾರಿಗೂ ಕಾಣದಂತೆ
ನೀನೆಳೆಯುವ ಬರೆ
ನನ್ನ ಸೃಜನಶೀಲತೆ ಎಂದರೆ
ನನ್ನ ಗಾಯಗಳು
ಯಾರಿಗೂ ಕಾಣದಂತೆ
ಮೇಲೆ ನಾನೆಳೆಯುವ ತೆರೆ”

ನೋವುಣ್ಣದೆ ಬರೆಯಲು ಸಾಧ್ಯವೇ ಇಲ್ಲ ಎಂಬಂಥ ಮನೋಧರ್ಮದ ಕವಿಯಾಗಿ ಕಾದಂಬಿನಿ ನನಗೆ ಕಾಣುತ್ತಾರೆ. ‘ಬೆಂದರೆ ಬೇಂದ್ರೆ’ ಎಂಬಂತೆ ‘ನೊಂದರೆ ಕಾದಂಬಿನಿ’ ಎಂದರೆ ಸರಿಹೋದೀತು.

ಇಷ್ಟಿಷ್ಟೇ ಸುಟ್ಟುಕೊಳ್ಳುವುದು, ಗೆರೆ, ಕಾಂಡ ಕೊರಕಹುಳು, ಹೇಗೆ ಸಾಯುವುದು ಹಠಾತ್ತನೆ, ಮುಸಲಧಾರೆ ಮಳೆ, ಕೆಂಡ ಕೊಂಡದೊಳಗಿಂದ, ನಾನೊಬ್ಬ ಪವಿತ್ರ ಹೆಂಗಸು, ಭವದ ಮೋಹ, ತೊಳೆಯುವ ಕಣ್ಣೆಲ್ಲಿಹವು?, ಯಾವುದಾದರೇನು?, ಅವನು ಕುರಿ ಕಾಯುತ್ತಾನೆ, ಎಂಥಾ ಮಾಯಾವಿ ಪದಗಳು, ಟಿಸಿಲೊಡೆದಷ್ಟೂ ಚೆಲುವು, ಹಲ್ಲು ಕಿರಿಯುತ್ತಾ ……… ಮುಂತಾದ ಕವನಗಳು ನೋಯಿಸಿ ಅರಳಿಸುವಂಥವು. ಕಾವ್ಯಕ್ಕಿಂತಲೂ ಬದುಕು ದೊಡ್ಡದು ಮತ್ತು ವಿಮರ್ಶೆಗಿಂತಲೂ ಕಾವ್ಯ ದೊಡ್ಡದು ಎಂಬ ನಂಬಿಕೆ ನನ್ನದು. ಕರಿಯು ಕನ್ನಡಿಯಲ್ಲಿ ಅಡಗಿದಂತೆ ಈ FB ವಾಲ್ ನಲ್ಲಿ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ಯನ್ನು ಪರಿಚಯಿಸಿದ್ದೇನೆ. ಕಾವ್ಯ ಮತ್ತು ಬದುಕು ನಮಗೆ ನೀಡುವ ಎಚ್ಚರವೊಂದನ್ನು ಕುರಿತು ಕಾದಂಬಿನಿ ಹೀಗೆ ಹೇಳಿದ್ದಾರೆ:

ಮರಳುಗಾಡನು ಹೊದ್ದು

ಈ ದಾರಿಯಾಗಿ ಹಾದು ಹೋಗುವಾಗ
ಮೇಲೆ ಬಾನಿನ ನಕ್ಷತ್ರಗಳ ಹೊಳಪಿನಲಿ
ಮೈಮರೆಯದಿರಿ

ನಿಮ್ಮ ಅಡಿಗಳಡಿ
ಮುತ್ತು ರತ್ನಗಳ
ಮಹಾ ಸಮುದ್ರಗಳೇ ಇರಬಹುದು

ಈ ಹೊತ್ತು ಅವು
ನೀವು ಕಾಲ್ಗೆಟ್ಟು ಮುಳುಗದಿರಲೆಂದು
ಮರಳುಗಾಡನು ಹೊದ್ದು
ಮಲಗಿರಬಹುದು

*

ಕಾದಂಬಿನಿ ಜಿಂದಾಬಾದ್!

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...