Share

ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು
ದ್ರವಿಡ

 

ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.

 

 

ಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ.

ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ಹೆಣ್ಣುಮಕ್ಕಳ ವಿಚಾರದಲ್ಲಿ ದನಿಯೆತ್ತುತ್ತಿದ್ದಂತೆ ದೊಡ್ಡ ಸಂಚಲನವೇ ಆಯಿತು. ಪತ್ರಕರ್ತರಾಗಿದ್ದಾಗ ಲೈಂಗಿಕ ಕಿರುಕುಳ ಕೊಟ್ಟಿದ್ದರೆಂಬ ಗಂಭೀರ ಆರೋಪಕ್ಕೆ ತುತ್ತಾದ ಎಂ ಜೆ ಅಕ್ಬರ್ ಸಚಿವ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಇದೇ ಹೊತ್ತಲ್ಲಿ, ರಫೇಲ್ ಹಗರಣದ ವಿಚಾರ ಮರೆಮಾಚುವ ಹುನ್ನಾರವಾಗಿ #MeToo ಅಭಿಯಾನವನ್ನು ಮುನ್ನೆಲೆಗೆ ತರಲಾಗಿದೆ ಎಂಬ ಆರೋಪವೂ ಸುತ್ತಿಕೊಂಡಿತು.

ಯಾವುದೇ ಅಸಾಂಪ್ರದಾಯಿಕ ನಡೆಯು ಬಲಗೊಂಡಾಗ, ಅದರ ಹಿಂದೆ ರಾಜಕಾರಣ ಇದ್ದಿರಬಹುದೇ ಎಂಬ ಅನುಮಾನ ಆಕ್ಷೇಪಾರ್ಹವಲ್ಲವಾದರೂ, ಆ ಅನುಮಾನವು ದಮನಿತ ದನಿಯನ್ನೇ ಮತ್ತೆ ಅದುಮುವ, ಅದನ್ನು ಅವಮಾನಿಸುವ ಅಪಾಯವೂ ಇಂಥಲ್ಲಿ ಇರಬಹುದಾದ ಸೂಕ್ಷ್ಮವನ್ನು ಕಡೆಗಣಿಸಲಾಗದು.

ಕನ್ನಡ ಚಿತ್ರರಂಗದಲ್ಲೂ ಈಗ ದೊಡ್ಡ ಬೆಳವಣಿಗೆಯಾಗಿರುವ #MeToo ಆರೋಪ, ಇದುವರೆಗೂ ಬಹುಶಃ ಅನೂಚಾನವೆಂಬಂತೆ ನಡೆದುಕೊಂಡು ಬಂದಿದ್ದಿರಬಹುದಾದ ‘ವ್ಯವಸ್ಥೆ’ಯೊಂದಕ್ಕೆ ಬಲವಾದ ಪೆಟ್ಟನ್ನೇ ಕೊಟ್ಟಿದೆ. ಹಾಗಾಗಿಯೇ ಅದು ಹಲವರಿಗೆ ಮುಜುಗರವನ್ನು ಉಂಟುಮಾಡಿರುವಂತೆಯೇ ಹಲವರ ವಿರೋಧವನ್ನೂ ಎದುರಿಸುತ್ತಿದೆ. #MeToo ಆರೋಪದ ಹಿಂದೆ ಯಾವುದೋ ಒಂದು ಸಂಚು ಇದೆಯೆಂಬ ಶಂಕೆ ಎದ್ದಿರುವಂತೆಯೇ, ಈ ವಿರೋಧದ ಹಿಂದೆಯೂ ಹಿತಾಸಕ್ತಿಯೊಂದು ಕೆಲಸ ಮಾಡುತ್ತಿರಬಹುದಲ್ಲವೇ ಎಂಬ ಪ್ರಶ್ನೆಯೂ ಇನ್ನೊಂದೆಡೆ ಇದೆ. ಇದೆಲ್ಲವೂ ಕಳೆದುಕೊಂಡಿರುವ ಪ್ರಾಮುಖ್ಯತೆಯನ್ನು ಮರಳಿ ಗಳಿಸಿ ಚಾಲ್ತಿಯಲ್ಲಿರುವುದಕ್ಕಾಗಿ ಎಂಬ ಇರಿತವನ್ನೂ #MeToo ಆರೋಪ ಮಾಡುತ್ತಿರುವವರು ಸಹಿಸಬೇಕಾಗಿದೆ. ಹೆಸರು ಬರುವವರೆಗೆ ಏನೆಲ್ಲಾ ಮಾಡಿದವರು ಈಗೇಕೆ ಆರೋಪ ಮಾಡುತ್ತಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಅವರ ಚಾರಿತ್ರ್ಯಕ್ಕೇ ಕಳಂಕ ಹಚ್ಚುವುದಕ್ಕೇ ಮತ್ತೆ ಕೆಲ ಮಹಿಳೆಯರೇ ಮುಂದಾಗಿರುವುದೂ ಅಚ್ಚರಿ ಹುಟ್ಟಿಸಿದೆ. ಆದರೆ ಹೀಗೆ ಹೆಣ್ಣಿಗೆ ಕಳಂಕ ಹಚ್ಚುತ್ತಿರುವವರು ಬೇಕೆಂದೇ ಅಲಕ್ಷಿಸುತ್ತಿರುವ ಪ್ರಶ್ನೆಯೊಂದಿದೆ. ಏನೆಂದರೆ, ಇವತ್ತು ಲೈಂಗಿಕ ಕಿರುಕುಳದ ಆರೋಪ ಮಾಡುತ್ತಿರುವವರು ಒಂದು ಕಾಲದಲ್ಲಿ ಹೆಸರು ಪಡೆಯುವುದಕ್ಕಾಗಿ ಏನೆಲ್ಲಾ ಮಾಡಿದ್ದೇ ಹೌದಾಗಿದ್ದಲ್ಲಿ ಈಗಲೂ ಅದನ್ನೇ ಮಾಡಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಬಹುದಿತ್ತಲ್ಲವೇ? ಆದರೆ ಅವರೇಕೆ ತಾವು ಎದುರಿಬೇಕಾಗಿ ಬರಬಹುದಾದ ಮಾನಸಿಕ ಸಂಕಟ ಎಂಥದೆಂಬುದನ್ನು ತಿಳಿದೂ ತಮಗಾಗಿದ್ದ ಕಿರುಕುಳದ ಬಗ್ಗೆ ಹೇಳಲು ಮುಂದಾಗಿದ್ದಾರೆ ಎಂಬುದು.

ಇನ್ನೂ ಒಂದು ವಿಚಾರ #MeToo ಅಭಿಯಾನದ ವಿಚಾರದಲ್ಲಿ ಕಾಡುತ್ತಿದೆ. ಹೆಣ್ಣಿನ ದನಿಗೆ ಬಲ ಕೊಡುವಲ್ಲಿ ಸಹಕಾರಿಯಾಗುತ್ತಿದೆ ಎಂದುಕೊಳ್ಳುತ್ತಿದ್ದರೂ ಇದಕ್ಕೂ ಹಿಂದಿನ ತಲೆಮಾರಿನ ಅನೇಕ ಮಹಿಳೆಯರೇ ಈ ಅಭಿಯಾನವನ್ನು ಅನುಮಾನದಿಂದ ಕಾಣುತ್ತಿರುವುದನ್ನು ಗಮನಿಸಬೇಕು. ತವ್ಲೀನ್ ಸಿಂಗ್ ಅವರಂಥ ಹಿರಿಯ ಪತ್ರಕರ್ತೆ ಕೂಡ, ಎಂದೋ ಆಗಿರುವುದನ್ನು ಈಗ ಬಹಿರಂಗಗೊಳಿಸುವುದಕ್ಕಿಂತ ಆಗಲೇ ಅದರ ವಿರುದ್ಧ ಧ್ವನಿಯೆತ್ತಬೇಕಿತ್ತು; ಸಂತ್ರಸ್ತರಾಗುವ ಬದಲು ಹೋರಾಟಗಾರ್ತಿಯರಾಗಿ ನಿಲ್ಲಬೇಕಿತ್ತು ಎಂಬಂರ್ಥದ ಮಾತುಗಳನ್ನಾಡಿದ್ದಾರೆ. ಸ್ವಾವಲಂಬಿ ಮಹಿಳೆಯರೇ ದನಿಯೆತ್ತುತ್ತಿದ್ದಾರೆಯೇ ಹೊರತು ಈ ಅಭಿಯಾನ ದುರ್ಬಲ ವರ್ಗದ ಮಹಿಳೆಯರ ದನಿಗೆ ವೇದಿಕೆಯಾಗಿಲ್ಲ ಎಂಬುದೂ ತವ್ಲೀನ್ ತಕರಾರು. ಆದರೆ ತವ್ಲೀನ್ ಅವರು ಹೇಳುವಷ್ಟು ಸರಳ ಸಂಗತಿ ಇದೆಂದು ಅನ್ನಿಸುತ್ತದೆಯೇ?

ಹೆಣ್ಣೊಬ್ಬಳು ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಆ ಕ್ಷಣದಲ್ಲೇ ಧ್ವನಿಯೆತ್ತುವುದಕ್ಕೆ ಸಾಕಷ್ಟು ಪೂರಕ ವಾತಾವರಣ ನಮ್ಮಲ್ಲಿದೆಯೇ ಎಂಬುದನ್ನು ಯೋಚಿಸಬೇಕಾಗುತ್ತದೆ. ಪ್ರತಿಭಟಿಸಿ ನಿಲ್ಲುವ ಯಾರನ್ನೇ ಆದರೂ ಹೇಗೆ ಈ ಸಮಾಜ ಒಬ್ಬಂಟಿಯಾಗಿಸಿಬಿಡಬಲ್ಲುದು ಎಂಬ ಸತ್ಯ ಗೊತ್ತಿರುವಾಗ, ಅಂಥ ಸಂದರ್ಭವು ಹೆಣ್ಣೊಬ್ಬಳ ವಿಚಾರದಲ್ಲಿ ಇನ್ನೆಷ್ಟು ಕರಾಳವಾಗಿರಬುದೆಂಬುದನ್ನು ಊಹಿಸುವುದು ಕಷ್ಟವಲ್ಲ. ಪ್ರಜ್ಞಾವಂತ ಹೆಣ್ಣೇ ಈ ವ್ಯವಸ್ಥೆಯ ಎದುರು ನಿಲ್ಲಲು ಎದೆಗುಂದುವಾಗ, ಅನಕ್ಷರಸ್ಥ ಬಡ ಹೆಣ್ಣಿನೆದುರಿನ ಕಟು ವಾಸ್ತವ ಇನ್ನೆಂಥದ್ದಿರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಈ ಯಾವ ಸಂಗತಿಗಳೂ ತೀರಾ ಉಡಾಫೆಯಿಂದಾಗಲಿ, ತೀರಾ ತೇಲಿಸಿಯಾಗಲಿ ಮಾತಾಡುವಂಥವಲ್ಲ. ಯಾರೋ ಎಲ್ಲೋ ಕೂತು ಯಾವುದೇ ಹೆಣ್ಣಿನ ಚಾರಿತ್ರ್ಯವನ್ನು ಅಳೆಯುವುಕ್ಕೆ, ಹೀಗೇ ಎಂದು ಷರಾ ಬರೆಯುವುದಕ್ಕೆ ಹಕ್ಕು ಪಡೆದಿರುವುದಿಲ್ಲ. ಒಳ್ಳೆಯವರಿರುವಂತೆಯೇ ಕೆಟ್ಟವರೂ ಇರಬಹುದೆಂಬುದನ್ನೂ ತೀರಾ ಸರಳೀಕರಿಸಿ ಹೇಳಲಿಕ್ಕೂ ಸಾಧ್ಯವಿಲ್ಲ.

ಮುಖ್ಯ ಸಂಗತಿಯೇನೆಂದರೆ, ಹೆಣ್ಣಿನ ಹಲವು ಕಾಲದ ನೋವು, ಅಸಹನೆ ಇದೀಗ ಆಸ್ಫೋಟಗೊಳ್ಳಲು ದಾರಿ ಹುಡುಕಿಕೊಂಡಿದೆ. ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು. ಮಾತಾಡಕೂಡದೆಂಬ ಅಲಿಖಿತ ಕಟ್ಟು ಕಟ್ಟಳೆಯನ್ನು ಯಾರೋ ಮೀರಿದಾಗ ಪೋಷಿತ ವ್ಯವಸ್ಥೆಗೆ ಆಗುವ ಭಯ ಇದು. ಈ ಬಿಕ್ಕಟ್ಟನ್ನು ಮೀರಿ ಪ್ರಾಮಾಣಿಕ ಮಾತು ನ್ಯಾಯ ಗಳಿಸುವಲ್ಲಿ ಗೆದ್ದರೆ ಅದು ದೊಡ್ಡ ಜಯ. ಇಂಥ ಅಭಿಯಾನವನ್ನೂ ಈಗ ಕೆಲವರು ಅನುಮಾನಿಸುತ್ತಿರುವಂತೆ ಯಾರದೋ ಸಂಚಿಗಾಗಿ ಇಲ್ಲವೆ ಸ್ವಾರ್ಥಕ್ಕಾಗಿ ಬಲಿ ಕೊಡುವವರಿದ್ದರೆ, ಶತ್ರುಗಳು ಒಳಗೇ ಇರುವ ವ್ಯಂಗ್ಯದ ಕಟುತನಕ್ಕೆ ಮದ್ದಿರಲಾರದು.

Share

Leave a comment

Your email address will not be published. Required fields are marked *

Recent Posts More

  • 6 days ago No comment

    ಬಿಜೆಪಿ ವಿರೋಧಿ ರಂಗ: ಪ್ರತಿಪಕ್ಷ ಸಭೆಯಲ್ಲಿ 20 ಪಕ್ಷಗಳು

    ಆರ್ಬಿಐ ,ಸಿಬಿಐ, ಚುನಾವಣಾ ಆಯೋಗದಂಥ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ನಾಯಕರು ಕಟುವಾಗಿ ಟೀಕಿಸಿದರು.   ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಪ್ರತಿಶಕ್ತಿಯನ್ನು ಕಟ್ಟುವ ಯತ್ನವಾಗಿ ನಡೆದ ಪ್ರತಿಪಕ್ಷ ಸಭೆಗೆ 20 ಪಕ್ಷಗಳ ನಾಯಕರು ಹಾಜರಾಗಿದ್ದರು. ಅಷ್ಟೇ ಅಚ್ಚರಿಯ ವಿಚಾರವೆಂದರೆ, ಈ ಸಭೆಗೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದಿಂದ ಯಾವುದೇ ಮುಖಂಡರು ಆಗಮಿಸಿರಲಿಲ್ಲ. ಡಿ.10ರಂದು, ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ...

  • 1 week ago No comment

    ಅರ್ಧನಾರಿ ಕಥೆಯ ಮತ್ತೆರಡು ಭಾಗಗಳು

    ‘ಮಧೋರುಬಗನ್’ (ಅರ್ಧನಾರಿ) ಎಂಬ ಕಾದಂಬರಿ ಬರೆವ ಮೂಲಕ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ಈಗ ಆ ಕಾದಂಬರಿಯ ಮತ್ತೆರಡು ಭಾಗಗಳ ಪ್ರಕಟಣೆಯೊಂದಿಗೆ ಸುದ್ದಿಯಾಗಿದ್ದಾರೆ. ಆ ಕಾದಂಬರಿಯ ಕೆಲವು ಭಾಗಗಳು ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿವೆ ಎಂದು ಆರೋಪಿಸಿದ್ದ ಬಲಪಂಥೀಯ ಕಾರ್ಯಕರ್ತರು ಹಲ್ಲೆಯೆಸಗಿದಾಗ, ತಮ್ಮ ಬರವಣಿಗೆ ಮೇಲೆ ಸ್ವಯಂ ನಿಷೇಧ ಹೇರಿಕೊಂಡಿದ್ದ ಮುರುಗನ್, ಇದೀಗ ಆ ಕಾದಂಬರಿ ಮುಗಿದಲ್ಲಿಂದಲೇ ಆರಂಭಿಸಿ ಮತ್ತೆರಡು ಭಾಗಗಳನ್ನು ಹೊರತಂದಿದ್ದಾರೆ. ಮೊದಲ ...

  • 1 week ago No comment

    170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

    ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

  • 1 week ago No comment

    ಅಲೆಗಳಾಗುವ ಹಾಡು

        ಕವಿಸಾಲು         ಕನಸುಗಳ ಜಾತ್ರೆ, ಮನಸುಗಳ ಹಬ್ಬ ಎಲ್ಲ ನಿಶ್ಯಬ್ದ, ಮೌನದಲಿ ಮನ ಬಿಡಿಸಿದ ಮೂರ್ತ ರೂಪಕ್ಕೆ ತದ್ರೂಪು ನಿನ್ನದೇ ಸೊಬಗು ಸುರಿವ ಮಳೆ, ಬೀಸೋ ಗಾಳಿ ಒದ್ದೆಯಾದ ಒಡಲಿನಲಿ ಉರಿವ ನನ್ನೆದೆಯ ಮೇಲೆ ಚಿತ್ತಾರ ಬಿಡಿಸುತ್ತವೆ ನಿನ್ನ ಬೆರಳು ಕರಿಕಪ್ಪು ಚಳಿ ರಾತ್ರಿಯಲಿ ಒಂದಪ್ಪುಗೆಯ ಧ್ಯಾನದಲಿ ಬೆನ್ನ ಸುಳಿ ಸೀಳಿ ಮೇಲೇರುವ ನಡುಕದಲಿ ನಿನ್ನೆದೆಯ ಹರವು ಯಾರೋ, ಯಾವತ್ತೋ ಮರಳ ...

  • 2 weeks ago No comment

    ಹೊಸ್ತಿನ ಹಗಲು

    ಕವಿಸಾಲು   ಬಯಲ ಗದ್ದೆಯ ಭತ್ತದ ಕದರು ರೈತರ ಬೆವರ ಬಸಿಯುವ ಕೊಯಿಲು ಕಂಬಳಕಿಂಪಿನ ಪಾಂಗಿನ ಅಮಲು ಹೊಡತಲೆ ಹಗಣದ ಕವಳದ ಸಾಲು ಆಚರಿಸುತಿದೆ ಹೊಸ್ತಿನ ಹಗಲು. ನೇಗಿಲ ಬುಡದಲಿ ಸಸಿಬುಡ ಬೇರು ಕದರಿನ ನಡುವಲಿ ಗಂಧದ ಕೆದರು ಮಣ್ಣೊಳಗ್ಹುದುಗಿದ ಎರೆಹುಳು ಪಾಡು ಹರಡಿದ ಗಿಣಿಗಳ ಹಾಡಿನ ಜಾಡು ಆಚರಿಸುತಿದೆ ಹೊಸ್ತಿನ ಹಗಲು. ಮಣ್ಣಿನ ಬಣ್ಣದ ಮನಸಿನ ತೆವಲು ಕೆಂದರಕಿ ಹೂವಿನ ಕಮಾನು ಹೊಸಿಲು ಹೂಡುವ ಎತ್ತಿನ ಅಡಸಲ ...


Editor's Wall

  • 08 December 2018
    1 week ago No comment

    170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

    ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

  • 30 November 2018
    2 weeks ago No comment

    ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ

    ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...

  • 29 November 2018
    2 weeks ago No comment

    ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?

      ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.     ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ...

  • 09 November 2018
    1 month ago No comment

    ಹೊಸ ಕಾಲದ ಹರಕೆಯ ಕುರಿಗಳು!

      ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

  • 28 October 2018
    2 months ago No comment

    ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

      ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...