Share

ಮನರಂಜನೆಯಾಚೆಗಿನ ಮಾಪಿಳ ಹಾಡುಗಳು
ಸುನೈಫ್

 

 

 

ಮಾಪಿಳ ಸಮುದಾಯದ ಹಲವು ಐತಿಹಾಸಿಕ ಘಟನಾವಳಿಗಳ ಮೂಟೆಯನ್ನೇ ಹೊತ್ತ ಮಾಪಿಳ ಹಾಡುಗಳಿಗೆ ಮೂಲ ಕ್ರಿಶ್ಚಿಯನ್ನರ ನಡುವೆ ಪ್ರಚಲಿತವಿದ್ದ ಮೈಲಾಂಜಿ ಹಾಡುಗಳು ಎನ್ನಲಾಗುತ್ತದೆ. ಅವುಗಳ ಮೂಲ ಕೇರಳದ ಬುಡಕಟ್ಟು ಹಾಡುಗಳು ಎಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ.

 

 

ಕೆ.ಜಿ ಮಾರ್ಕೋಸ್

ಕೇರಳದ ಮಾಪಿಳ ಹಾಡುಗಳಿಗೆ ಸುಮಾರು ಏಳು ಶತಮಾನಗಳ ಇತಿಹಾಸವಿದೆ. ಜಾನಪದ ಶೈಲಿಯ ಈ ಹಾಡುಗಳು ಈಗ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿಲ್ಲ. ನಿಜಾರ್ಥದಲ್ಲಿ ಅದು ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ವಿ.ಎಮ್ ಕುಟ್ಟಿಯಂತಹವರ ಸಮಯೋಚಿತ ಹಸ್ತಕ್ಷೇಪದಿಂದಾಗಿ ಆಧುನಿಕ ಸಂಗೀತೋಪಕರಣಗಳ ಬಳಕೆಯೂ ಮಾಪಿಳ ಹಾಡುಗಳಿಗೆ ಇನ್ನಷ್ಟು ಬೆಂಬಲ ನೀಡಿದವು. ಕೇರಳದ ಪ್ರಮುಖ ಹಾಡುಗಾರರೆಲ್ಲ ಮಾಪಿಳೆ ಹಾಡುಗಳನ್ನು ಹಾಡಿದ್ದಾರೆ. ಯೇಸುದಾಸ್, ಎಂ.ಜಿ ಶ್ರೀಕುಮಾರ್, ಕೆ.ಎಸ್ ಚಿತ್ರಾ, ಸುಜಾತಾ ಮೊದಲಾದವರು ಆ ಸಾಲಿನಲ್ಲಿ ನಿಲ್ಲುತ್ತಾರೆ. ಕೆ.ಜಿ ಮಾರ್ಕೋಸ್ ‘ಮಾಪಿಳ ಹಾಡುಗಳ ಸುಲ್ತಾನ’ ಎಂದೇ ಖ್ಯಾತರಾಗಿದ್ದಾರೆ.

ಉತ್ತರ ಕೇರಳದ ಮುಸ್ಲಿಮರನ್ನು ಮಾಪ್ಪಿಳರು ಎಂದು ಕರೆಯುತ್ತಾರೆ. ಭಾರತದ ಉಳಿದೆಡೆಗೆ ಸಾಮಾನ್ಯವಾಗಿ ಇಸ್ಲಾಂ ಬಂದಿರುವುದು ಪರ್ಶಿಯಾದ ಮೂಲಕವಾದರೆ ಕೇರಳದ ಈ ಭಾಗಕ್ಕೆ ಇಸ್ಲಾಂ ಅರೇಬಿಯಾದಿಂದ ನೇರವಾಗಿ ಬಂದಿತ್ತು. ಹಾಗೆಂದೇ ಮಾಪಿಳರಿಗೂ ಅರೇಬಿಯಾಗೂ ಅವಿನಾಭಾವ ಸಂಬಂಧವೊಂದಿದೆ. ಇದರಿಂದಾಗಿಯೇ ಅರಬ್ಬೀ-ಮಲಯಾಳಂ ಎಂಬ ವಿಶಿಷ್ಟ ಲಿಪಿಯೂ ರೂಢಿಗೆ ಬಂದಿತು. ಈ ಲಿಪಿಯಲ್ಲಿ ಬರೆದ ಹಾಡುಗಳೇ ಮಾಪಿಳ ಹಾಡುಗಳು. ಹಾಗೆಂದೇ ಮಾಪಿಳ ಹಾಡುಗಳಲ್ಲಿ ಧಾರಾಳವಾಗಿ ಅರೇಬಿಕ್ ಪದಗಳು ಬಳಕೆಯಾದವು. ಜೊತೆಗೆ ಪರ್ಶಿಯನ್, ಉರ್ದು ಮತ್ತು ತಮಿಳುಗಳ ಜೊತೆಯೂ ಕೊಡುಕೊಳ್ಳುವಿಕೆ ನಡೆಯಿತು. ಮಾಪ್ಪಿಳ ಹಾಡುಗಳಿಗೆ ಮೂಲ ಕ್ರಿಶ್ಚಿಯನ್ನರ ನಡುವೆ ಪ್ರಚಲಿತವಿದ್ದ ಮೈಲಾಂಜಿ ಹಾಡುಗಳು ಎನ್ನಲಾಗುತ್ತದೆ. ಅವುಗಳ ಮೂಲ ಕೇರಳದ ಬುಡಕಟ್ಟು ಹಾಡುಗಳು ಎಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಇವೆಲ್ಲವುಗಳಿಂದ ಮಾಪಿಳ ಹಾಡುಗಳು ಸಮೃದ್ದವಾಗಿ ಬೆಳೆದವು.

ಮಹಾಕವಿ ಮೋಯಿನ್ ಕುಟ್ಟಿ ವೈದ್ಯರ್ ಹಸ್ತಾಕ್ಷರ

ಮಾಪಿಳ ಹಾಡುಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಮುಖ್ಯವಾದವು ಮಾಲಾಪಾಟ್ಟ್, ಕಿಸ್ಸಪಾಟ್ಟ್, ಕೆಸ್ಸ್ ಪಾಟ್ಟ್, ಪಡಪಾಟ್ಟ್, ಒಪ್ಪನಪಾಟ್ಟ್, ಮೈಲಾಂಜಿಪಾಟ್ಟ್, ಮತ್ತು ಕತ್ತ್ ಪಾಟ್ಟ್. ಇವುಗಳೊಂದಿಗೆ ಮಾಪ್ಪಿಳ ರಾಮಾಯಣವೂ ರಚಿತವಾಗಿದೆ ಎಂಬುದು ಇನ್ನೊಂದು ವಿಶೇಷ. ಈ ಎಲ್ಲ ವಿಧಗಳನ್ನು ಗಮನಿಸಿದರೆ ಕಾಲದ ಬೇಡಿಕೆಯಂತೆ ಇವುಗಳು ಬೆಳೆದು ಬಂದಿವೆ ಎಂಬುದು ಸ್ಪಷ್ಟವಾಗುತ್ತದೆ. ಮೊತ್ತ ಮೊದಲ ಮಾಪಿಳ ಹಾಡು ಮೊಹಿಯುದ್ದೀನ್ ಮಾಲಾವನ್ನು ಸುಮಾರು 1607ರಲ್ಲಿ ಕಲ್ಲಿಕೋಟೆಯ ಖಾಝೀ ಮುಹಮ್ಮದ್ ಎಂಬವರು ರಚಿಸಿರು. ಮಾಲಾಪಾಟ್ಟ್ ಮುಖ್ಯವಾಗಿ ಸೂಫೀ ಸಂತರ ಮಹಿಮೆಯನ್ನು ಹಾಡಿ ಹೊಗಳುತ್ತವೆ. ಖಾದಿರಿಯ್ಯಾ ತ್ವರೀಕತ್ತಿನ ನಾಯಕ ಸೂಫೀ ಸಂತ ಅಬ್ದುಲ್ ಖಾದರ್ ಜೀಲಾನಿಯ ಮಹಿಮೆಯನ್ನು ಮೊಹಿಯುದ್ದೀನ್ ಮಾಲಾ ಹೊಗಳಿದರೆ, ರಿಫಾಯಿ ತ್ವರೀಕತ್ತಿನ ಅಹ್ಮದ್ ರಿಫಾಯಿಯ ಮಹಿಮೆಯನ್ನು ರಿಫಾಯಿ ಮಾಲಾ ಕೊಂಡಾಡುತ್ತದೆ. ಅಬುಲ್ ಹಸನ್ ಶಾದುಲಿ ಎಂಬ ಇನ್ನೊಬ್ಬ ಸೂಫೀ ಸಂತನನ್ನು ಶಾದುಲಿ ಮಾಲಾ ನೆನೆದರೆ, ಈಜಿಪ್ಟಿನ ಸೂಫೀ ಸಂತೆ ನಫೀಸತ್ ಮಿಸ್ರಿಯಾ ನೆನಪಿಗೆ ನಫೀಸತ್ ಮಾಲಾ ಇದೆ. ಇವುಗಳ ಜೊತೆಗೆ ಭಾರತದ ಸೂಫೀ ಸಂತ (ಭಾರತದಲ್ಲಿ ಬದುಕಿ ತೀರಿಕೊಂಡ ಪರ್ಶಿಯಾದ ಸಂತ) ಮುಹಿಯುದ್ದೀನ್ ಚಿಸ್ತಿಯನ್ನು ಕೊಂಡಾಡುವ ಅಜ್ಮೀರ್ ಮಾಲಾ ಕೂಡ ಗಮನಾರ್ಹ. ಮಾಲಾಗಳ ನಂತರ ಬಂದ ಕಿಸ್ಸಪಾಟ್ಟ್ ಇಸ್ಲಾಮ್ ಪೂರ್ವದ ಪ್ರವಾದಿಗಳ ಕತೆಗಳನ್ನು ವರ್ಣಿಸಿದವು. ಅವರ ತತ್ವಾದರ್ಶಗಳನ್ನು ಜನರ ನಡುವೆ ಹರಡಿದವು. ಪ್ರೇಮಕಾವ್ಯಗಳನ್ನು ಕೆಸ್ಸುಗಳು ಎಂದು ವಿಭಾಗಿಸಲಾಗುತ್ತದೆ.

ವಿ ಎಂ ಕುಟ್ಟಿ

ಹತ್ತೊಂಬತ್ತನೇ ಶತಮಾನದ ನಂತರ ಮಾಪಿಳ ಹಾಡುಗಳ ಚಿತ್ರಣ ಬದಲಾಗುತ್ತದೆ. ಪರಕೀಯರ ವಿರುದ್ಧದ ಬಂಡಾಯ ಕಾಲದಲ್ಲಿ ಪಡಪಾಟ್ಟ್ ಎಂಬ ವಿಶಿಷ್ಟ ಶೈಲಿಯೊಂದು ಜನ್ಮ ತಾಳುತ್ತದೆ. ಪಡಪಾಟ್ಟ್ ಎಂದರೆ ‘ಯುದ್ಧದ ಹಾಡು’. ಮೊದಲಿಗೆ ಇಸ್ಲಾಂ ಧರ್ಮದ ಆರಂಭ ಕಾಲದ ಯುದ್ಧಗಳ ಚರಿತ್ರೆ ಹೇಳುತ್ತಾ ಶುರುವಾದ ಪಡಪಾಟ್ಟ್ ಕ್ರಮೇಣ ಪೋರ್ಚುಗೀಸ್ ಮತ್ತು ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಹತರಾದ ಮಾಪಿಳ ಯೋಧರನ್ನು ಸ್ಮರಿಸುತ್ತದೆ. ಇವುಗಳಲ್ಲಿ ಪ್ರಮುಖವಾದವು ಎಂದರೆ ಮೋಯಿನ್ ಕುಟ್ಟಿ ವೈದ್ಯರ್ ಬರೆದ ಮಲಪ್ಪುರಂ ಪಡಪ್ಪಾಟ್ ಹಾಗೂ ಮುಹಮ್ಮದ್ ಕುಟ್ಟಿ ಮತ್ತು ಮೊಹಿಯುದ್ದೀನ್ ಎಂಬಿಬ್ಬರು ಬರೆದ ಚೇರೂರ್ ಪಡಪ್ಪಾಟ್ಟ್. ಪೋರ್ಚುಗೀಸರು ಹುಡುಗಿಯೊಬ್ಬಳನ್ನು ಅಪಹರಿಸಿದ ಸುದ್ದಿ ಕೇಳುವ ಕುಂಞಿ ಮರಕ್ಕಾರ್ ಎಂಬ ಯೋಧ ತನ್ನ ಮದುವೆ ಕಾರ್ಯವನ್ನು ಅರ್ಧಕ್ಕೆ ಬಿಟ್ಟು ಸಮುದ್ರಕ್ಕೆ ಹೊರಡುತ್ತಾನೆ. ಹಡಗಿನಲ್ಲಿ ನಡೆಯುವ ಭೀಕರ ಕಾಳಗದಲ್ಲಿ ಹುಡುಗಿಯನ್ನು ರಕ್ಷಿಸಿದರೂ ಕುಂಞಿ ಮರಕ್ಕಾರ್ ಹತನಾಗುತ್ತಾನೆ. ಈ ಘಟನೆಯೇ ಮಲಪ್ಪುರಂ ಪಡಪ್ಪಾಟ್ ಆಗುತ್ತದೆ. ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ ನಡೆದ ದಂಗೆಯಲ್ಲಿ ತಿರುರಂಗಾಡಿಯಲ್ಲಿ ಹತರಾದ ಯೋಧರ ಕತೆಯನ್ನು ಚೇರೂರ್ ಪಡಪ್ಪಾಟ್ಟ್ ಹೇಳುತ್ತದೆ. ಪಡಪಾಟ್ ಕೆಲವು ಕಾಲ್ಪನಿಕ ಯುದ್ಧ ಕತೆಗಳನ್ನೂ ವರ್ಣಿಸಿತ್ತು. ಅವುಗಳಲ್ಲಿ ಮುಖ್ಯವಾದದ್ದು ಬೆಕ್ಕು ಮತ್ತು ಇಲಿಗಳ ಯುದ್ಧದ ಕತೆ ಹೇಳುವ ‘ಎಲಿಪ್ಪಡ’. ಇದು ಪಂಚತಂತ್ರ ಕತೆಯನ್ನಾಧರಿಸಿತ್ತು ಎಂಬುದು ಗಮನಾರ್ಹ.

ಒಪ್ಪನಪಾಟ್ಟ್, ಮೈಲಾಂಜಿಪಾಟ್ಟ್ ಮತ್ತು ಅಮ್ಮಾಯಿಪಾಟ್ ಮುಂದಕ್ಕೆ ಜನಪ್ರಿಯ ಮಾಪಿಳ ಹಾಡುಗಳಾಗಿ ಬೆಳೆಯುತ್ತವೆ. ಇವುಗಳಿಲ್ಲದೆ ಮಲಬಾರಿನಲ್ಲಿ ಮದುವೆಗಳೇ ಇಲ್ಲ ಎಂಬಂತಾಗುತ್ತದೆ. ಈ ಹಾಡುಗಳು ಮನರಂಜನೆಯ ಉದ್ದೇಶವನ್ನು ಹೊತ್ತಿದ್ದರೂ ಕೂಡ ಒಪ್ಪನ ಮತ್ತು ಮೈಲಾಂಜಿ ಹಾಡುಗಳು ಹೇಳುತ್ತಿದ್ದದ್ದು ಪ್ರವಾದಿ ಮತ್ತು ಮಡದಿ ಖತೀಜಾರ ನಡುವಿನ ಪ್ರೇಮ ಪ್ರಸಂಗಗಳನ್ನು. ಅಮ್ಮಾಯಿಪಾಟ್ಟ್ ಅತ್ತೆ ತನ್ನ ಅಳಿಯನನ್ನು ಸತ್ಕರಿಸುವುದನ್ನು ವರ್ಣಿಸುತ್ತದೆ.

ಮಾಪಿಳ ಹಾಡುಗಳು ಹೇಗೆ ಜನಮನವನ್ನು ಪ್ರತಿನಿಧಿಸುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಕತ್ತ್ ಪಾಟ್ ನಿಲ್ಲುತ್ತದೆ. ಎಂಭತ್ತರ ದಶಕದಲ್ಲಿ ಶುರುವಾದ ಗಲ್ಫ್ ವಲಸೆ ಕೇರಳದಲ್ಲಿ ಆರ್ಥಿಕ-ಸಾಮಾಜಿಕ ಪಲ್ಲಟಕ್ಕೆ ಕಾರಣವಾಗುತ್ತದೆ. ಅದೆಷ್ಟೋ ಯುವಕರು ಗಲ್ಫ್ ದೇಶಕಳಿಗೆ ಕನಸುಗಳ ಹೊತ್ತು ಹೊರಡುತ್ತಾರೆ. ಅವರಲ್ಲಿ ಬಹುಪಾಲು ಇನ್ನೂ ಮಧುಚಂದ್ರದ ಸವಿಯಿಂದ ಹೊರಬಾರದವರು. ಮದುವೆಯಾಗಿ ತಿಂಗಳೋ ನಲವತ್ತು ದಿನಗಳೋ ಕಳೆಯುತ್ತಿದ್ದಂತೆ ಗಲ್ಫ್ ವೀಸಾ ಬಂದು ಅನ್ಯದೇಶದಲ್ಲಿ ದುಡಿಯತೊಡಗಿರುತ್ತಾರೆ. ವಿರಹದ ಉರಿ ಹೊತ್ತ ಪತ್ರಗಳು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹರಿದಾಡುತ್ತವೆ. ಆಗಲೇ ಕತ್ತ್ ಪಾಟ್ ಜನ್ಮ ತಾಳುತ್ತದೆ. ಸಾಮಾನ್ಯ ಪ್ರತಿಯೊಬ್ಬ ಅನಿವಾಸಿ ಮಾಪಿಳೆಯ ಮತ್ತು ಊರಲ್ಲಿರುವ ಪತ್ನಿಯರ ಅಂತರಂಗವನ್ನು ಪ್ರತಿನಿಧಿಸುವ ‘ಪತ್ರದ ಹಾಡುಗಳು’ ರಚಿತವಾಗುತ್ತವೆ. ಜೊತೆಗೆ ಆ ಪತ್ರಗಳಿಗೆ ಉತ್ತರಗಳೂ ಹಾಡುಗಳಾಗುತ್ತವೆ. ಕತ್ತ್ ಪಾಟ್ಟ್ ಅನಿವಾಸಿ ಕಾರ್ಮಿಕರಿಗೆ ಕೊಂಚ ನೆಮ್ಮದಿಯನ್ನು ತಂದುಕೊಟ್ಟಿದ್ದು ಸುಳ್ಳಲ್ಲ.

ಹೀಗೆ, ಮಾಪಿಳ ಸಮುದಾಯದ ಹಲವು ಐತಿಹಾಸಿಕ ಘಟನಾವಳಿಗಳ ಮೂಟೆಯನ್ನೇ ಹೊತ್ತ ಮಾಪಿಳ ಹಾಡುಗಳು ಈಗ ಹೊಸ ಹಾಡುಗಾರರಿಂದ ತುಂಬಿದೆ. ಇವುಗಳಲ್ಲಿ ಪ್ರೇಮ-ವಿರಹಗಳನ್ನು ಮಾತ್ರ ಕಾಣಬಹುದು. ಅತಿಯಾದ ಸಂಗೀತದ ಆರ್ಭಟವೂ ಮಾಪಿಳ ಹಾಡು ಪ್ರಿಯರ ಅತೃಪ್ತಿಗೆ ಕಾರಣವಾಗುತ್ತಿವೆ. ಬಹುಶಃ ಇದೂ ಕೂಡ ಕಾಲದ ಬೇಡಿಕೆಯಿರಬಹುದು. ಕಾದು ನೋಡೋಣ…

(ಫೀಚರ್ ಚಿತ್ರ: ಮಾಪಿಳ ಸಂಸ್ಕೃತಿ ಬಿಂಬಕ ಸಾಂದರ್ಭಿಕ ಚಿತ್ರ)

Share

Leave a comment

Your email address will not be published. Required fields are marked *

Recent Posts More

 • 6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 7 days ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 7 days ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 1 week ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  3 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  3 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...