Share

ಚಿಟ್ಟೆಬಣ್ಣ | ‘ಮಿಲಿಯನೇರ್’ಗಳ ಮೃಗಾಲಯ ಭೇಟಿ
ಡಾ. ಪ್ರೇಮಲತ ಬಿ

ಈಗ ನಾವು ಮೂರು ಜನ ಭಾರತ, ಕತಾರ್ ಮತ್ತು ಇಂಗ್ಲೆಂಡುಗಳಲ್ಲಿ ನೆಲೆಸಿದ್ದೇವೆ. ಆಗೀಗ ಭೇಟಿಯಾಗಿತ್ತೇವೆ. ಅಂದಿನ ದಿನಗಳ ಸವಿ ನೆನಪುಗಳಲ್ಲಿ ತೇಲುತ್ತೇವೆ.

ಕಾಲೇಜಿನಲ್ಲಿ ಓದುತ್ತಿದ್ದ ದಿನಗಳು. ಬೆಂಗಳೂರು ಮೆಡಿಕಲ್ ಕಾಲೇಜಿನ ಹಾಸ್ಟೆಲಿನಲ್ಲಿದ್ದ ಸಮಯ. ಒಂದೇ ಕೋಣೆಯಲ್ಲಿ ಹಿಂದೂ, ಮುಸಲ್ಮಾನ ಮತ್ತು ಕ್ರಿಶ್ಚಿಯನ್ ಹುಡುಗಿಯರಿದ್ದೆವು. ಕೇರಳ, ತುಮಕೂರು, ಚಿಕ್ಕಮಗಳೂರು ಮತ್ತು ಮೈಸೂರುಗಳ ಸಂಗಮ! ಮುಸಲ್ಮಾನಳು ನಮ್ಮನ್ನು ಬಾಬಾ ಬುಡನ್ ಗಿರಿಯ ದರ್ಗಾಕ್ಕೆ ಕರೆದೊಯ್ದರೆ, ನಾವವಳನ್ನು ಹಿರೇಮಗಳೂರಿನ ದೇವಾಲಯಕ್ಕೂ, ಸೇಂಟ್ ಫಿಲೋಮಿನ ಚರ್ಚಿಗೂ ಕರೆದೊಯ್ಯುತ್ತಿದ್ದೆವು. ಇವತ್ತಿಗೂ ಧರ್ಮಗಳ ಯಾವ ಹಂಗೂ ಇಲ್ಲದ ಅದೇ ಗೆಳೆತನ ಉಳಿದಿದೆ.

ಕೇರಳದವಳದು ಅಂತರ್ಮುಖಿ ಸ್ವಭಾವ. ಹಾಗಾಗಿ ಅವಳು ನಮ್ಮೊಡನೆ ಯಾವತ್ತೂ ಕೂಡಿ ನಲಿಯಲಿಲ್ಲ.

ಇನ್ನುಳಿದ ನಮ್ಮದು ಹುಡುಗಾಟದ ಬುದ್ಧಿ. ಇದ್ದಿದ್ದರಲ್ಲಿ ಶ್ರೀಮದ್ಗಾಂಭೀರ್ಯ ಮತ್ತು ಅಧೈರ್ಯ ಅಂತಿದ್ದರೆ ಎಲ್ಲರೆದುರು ಧೈರ್ಯಸ್ಥೆಯಾಗಿ ಓಡಾಡುತ್ತಿದ್ದ ನನಗೇ! ನಮ್ಮ ಮುಖ್ಯ ಹವ್ಯಾಸ 8-10 ಜನರೊಡಗೂಡಿ ಚಾರಣಗಳಿಗೆ ಹೋಗುತ್ತಿದ್ದುದು. ಆದರೆ ಅದಕ್ಕೆ ಮಳೆಗಾಲ ಮುಗಿವವರೆಗೆ ಕಾಯಬೇಕಿತ್ತು. ಪರೀಕ್ಷೆಗಳು ಮುಗಿದಾಗ, ಕಾಲೇಜಿಗೆ ರಜೆ ಇದ್ದಾಗ ಏನಾದರೂ ಮಾಡುವ ಹಂಬಲ. ಹಾಗಾಗಿ ಮೂವರೂ ಇತರರ ಊರುಗಳಿಗೆ ಭೇಟಿಕೊಟ್ಟು ಆಯಾ ಜಿಲ್ಲೆಗಳ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ನಿರ್ಧರಿಸಿದೆವು.

ಮೈಸೂರಿನ ಗೆಳತಿಯದು ತುಂಬು ಹೃದಯ. ಧಾರಾಳವಾಗಿ ತಿನ್ನಿಸಿ, ನಗಿಸಿ, ನಕಾರಾತ್ಮಕ ಯೋಚನೆಗಳನ್ನು ಹಗುರವಾಗಿಸುತ್ತಿದ್ದವಳು ಅವಳು. ನಮಗಾಗಿ ಯಾವ ಹಿಂಜರಿಕೆಯೂ ಇಲ್ಲದೆ ತೊಂದರೆಗಳನ್ನು ತೆಗೆದುಕೊಳ್ಳುವ ಜಾಯಮಾನ. ಅತ್ಯಂತ ಸುಂದರಿ ಕೂಡ. ಅವಳ ಊರಿಗೆ ಹೋದಾಗ, ಅರಮನೆ, ಬೃಂದಾವನ, ಚಾಮುಂಡೇಶ್ವರಿ ಬೆಟ್ಟ, ಮೈಸೂರು ಮೃಗಾಲಯ ಅಂತ ಓಡಾಡದಿರಲು ಸಾಧ್ಯವೇ? ಇದ್ದ 3-4 ದಿನಗಳಲ್ಲಿ ತಿರುಗಿದ್ದೇ ತಿರುಗಿದ್ದು, ನಕ್ಕಿದ್ದೇ ನಕ್ಕಿದ್ದು. ನನ್ನ ಇನ್ನೊಬ್ಬ ಗೆಳತಿಯೂ ಸುಂದರಿಯೇ ಆಗಿದ್ದಳು.

ಅವತ್ತು ಮೃಗಾಲಯ ನೋಡಲು ಹೋದೆವು. ಇವತ್ತಿನಂತೆ ಆಗಿನ ದಿನಗಳಲ್ಲಿ ಮೈಸೂರು ಮೃಗಾಲಯ ಜನರಿಂದ ಗಿಜಿಗುಡುತ್ತಿರಲಿಲ್ಲ. ಆರಾಮವಾಗಿ ಓಡಾಡಿಕೊಂಡು ಸಾವಕಾಶವಾಗಿ ಹಿಂತಿರುಗಬಹುದಿತ್ತು. ಸುಂದರವಾದ ಎಳೆಬಿಸಿಲಿನ ದಿನಗಳವು. ಮೃಗಾಲಯದಲ್ಲಿ ನಾವು ಕಾಲಿಟ್ಟದ್ದೇ ತಡ ಪಂಜರಗಳು, ಗೇಟುಗಳು ತೆರೆದುಕೊಂಡು ಹೆಬ್ಬಾವು ಮೈಮೇಲೆ ಬೀಳಬಹುದೆಂದೂ, ಆನೆಯ ಸೊಂಡಿಲಲ್ಲಿ ಕೂತು ತೂಗಬಹುದೆಂದೂ, ಚಿರತೆಯ ಮರಿಗಳನ್ನು ಮುದ್ದಿಸಬಹುದೆಂದು ನಾವು ಅಂದುಕೊಂಡಿರಲೇ ಇಲ್ಲ. ಅದೆಲ್ಲ ಮಿಲಿಯನ್ನೇರುಗಳ, ಸೆಲೆಬ್ರಿಟಿಗಳ ಭೇಟಿಯಲ್ಲಿ ಮಾತ್ರ ಸಾಧ್ಯವಾಗಬಹುದಿತ್ತೇನೋ. ಆದರೆ ಆ ದಿನಗಳಲ್ಲಿ ನಮಗದು ಅನಿರೀಕ್ಷಿತವಾಗಿ ಒದಗಿಬಿಟ್ಟಿತು.

ಆದದ್ದಿಷ್ಟೆ. ಹರೆಯದ ಮೂವರು ಹುಡುಗಿಯರು ಬಂದದ್ದೇ ತಡ ಮೃಗಾಲಯದಲ್ಲಿ ವಿದ್ಯುತ್ಸಂಚಾರವಾಗಿತ್ತು. ಅಲ್ಲಿನ ಇಬ್ಬರು ತರುಣ ಇಂಜಿನಿಯರುಗಳು ಖುದ್ದಾಗಿ ನಮ್ಮ ಸೇವೆಗೆ ನಿಂತಿದ್ದರು. ಅವರೊಡನೆ ಪ್ರಾಣಿಗಳನ್ನು ನೋಡಿಕೊಳ್ಳಲು ಇದ್ದ ಜೂ ಕೀಪರುಗಳಿಗೆಲ್ಲ ನಮಗೆ ಪ್ರಾಣಿ-ಪಕ್ಷಿಗಳನ್ನು ತೋರಿಸುವ ಕಾತುರ ಮೂಡಿಬಿಟ್ಟಿತ್ತು. ಅವರಿಗಿದ್ದ ಲಾಭವೆಂದರೆ ನಮ್ಮೊಡನೆ ನಡೆದಾಡುವ ಸೌಭಾಗ್ಯವಷ್ಟೆ. ನಮಗೆ ಮಾತ್ರ, ಪ್ರತಿ ಪ್ರಾಣಿಯೊಡನೆ ಒಡನಾಡುವ ಅವಕಾಶ. ಇಬ್ಬರಿಗೂ ಅವರವರ ಲಾಭಗಳು ಸಾಕಾಗಿತ್ತು ಎನಿಸುತ್ತದೆ!

ಮಿಕ್ಕಿದ್ದನ್ನೆಲ್ಲ ಪೋಟೋಗಳಲ್ಲಿ ಸೆರೆಹಿಡಿದೆವು.

ಚಿರತೆಯ ಮರಿಗಳನ್ನು ಹಿಡಿದು ಮುದ್ದಿಸಿದೆವು. ಆನೆಗಳ ದಂತದ ಮೇಲೆ ಕುಳಿತು ತೂಗಿದೆವು. ಎಂಭತ್ತು ಕೆ.ಜಿ. ತೂಕದ ಹೆಬ್ಬಾವುಗಳನ್ನು ಹೆಗಲ ಮೇಲೆ ಹೇರಿಕೊಂಡು ನಲಿದೆವು. ಚಿಂಪಾಂಜಿಗಳನ್ನು ಕಂಕುಳಲ್ಲಿ ಎತ್ತಿಕೊಂಡು ನಡೆದಾಡಿದೆವು. ಮೊಸಳೆಯ ಮರಿಗಳನ್ನು ಹಿಡಿದು ಆಡಿದೆವು. ಉದ್ದ ಕತ್ತಿನ ಹಕ್ಕಿಗಳ ಜೊತೆ ನಿಂತು ಆನಂದಿಸಿದೆವು. ಜಿಂಕೆಗಳಿಗೆ ಸೊಪ್ಪು ತಿನ್ನಿಸಿ, ನವಿಲುಗಳ ಜೊತೆ ಒಡನಾಡಿದೆವು. ಜನಸಾಮಾನ್ಯರಿಗೆ ದೊರಕದ ಮಿಲಿಯನ್ ಡಾಲರ್ ಅನುಭವವಿದು.

ಮೊದಲೇ ಕಾಡುಗಳಲ್ಲಿ ಸುತ್ತುವ ಅಭ್ಯಾಸವಿದ್ದ ನಮಗೆ ಈಗ ಪ್ರಾಣಿಗಳನ್ನು ಮುಟ್ಟುವ ಅವಕಾಶ. ಪ್ರತಿಯೊಂದು ಕ್ಷಣವನ್ನೂ ಸೆರೆ ಹಿಡಿದೆವು. ಆಗೆಲ್ಲ ನಮ್ಮ ಬಳಿ ಮೊಬೈಲು ಫೋನುಗಳಾಗಲೀ, ಸಾಮಾಜಿಕ ಜಾಲ ತಾಣಗಳ ಬಗ್ಗೆ ಅರಿವಾಗಲೀ ಇರಲಿಲ್ಲ. ನಮ್ಮ ಬಳಿ ಅವತ್ತು ಕೆಲವೇ ನೂರು ರುಪಾಯಿಗಳಿದ್ದವಷ್ಟೆ. ಆ ದಿನಗಳಲ್ಲಿ ನನ್ನ ಬಳಿಯಷ್ಟೇ ಒಂದು ಸುಮಾರಾದ ಕ್ಯಾಮೆರಾವಿದ್ದದ್ದು.

ಇವತ್ತಿನಂತೆ ಆವತ್ತು ಸರಿ-ತಪ್ಪುಗಳನ್ನು ತೂಗುವ ತರ್ಕವೂ ಇರಲಿಲ್ಲ, ಸಂತೋಷವೇ ಪ್ರಧಾನವಾಗಿದ್ದ ದಿನಗಳವು.

ಈಗ ನಾವು ಮೂರು ಜನ ಭಾರತ, ಕತಾರ್ ಮತ್ತು ಇಂಗ್ಲೆಂಡುಗಳಲ್ಲಿ ನೆಲೆಸಿದ್ದೇವೆ. ಆಗೀಗ ಭೇಟಿಯಾಗಿತ್ತೇವೆ. ಅಂದಿನ ದಿನಗಳ ಸವಿ ನೆನಪುಗಳಲ್ಲಿ ತೇಲುತ್ತೇವೆ.

ಆ ಒಂದು ದಿನದ ಮೃಗಾಲಯ ಭೇಟಿಯ ಫೋಟೋಗಳನ್ನು ನೋಡಿದರೆ ಇವತ್ತಿಗೂ ಧುತ್ತನೆ ನಗು ಉಕ್ಕಿ ಬರುತ್ತದೆ. ಮುಂದಿನ ವರ್ಷಗಳಲ್ಲಿ ಲಂಡನ್ನಿನ, ಸ್ಕಾಟ್ಲ್ಯಾಂಡಿನ, ಸ್ಪೇನಿನ, ಕ್ಯಾಲಿಫೋರ್ನಿಯಾದ ಮೃಗಾಲಯಗಳಿಗೆ ಭೇಟಿಕೊಟ್ಟಿದ್ದೇನೆ. ಅದೇ ಮೈಸೂರು ಮೃಗಾಲಯಕ್ಕೆ ಮಕ್ಕಳನ್ನು ಬಹುಬಾರಿ ಕರೆದುಕೊಂಡು ಹೋಗಿದ್ದೇನೆ. ಯಾವ ಭೇಟಿಯೂ ಆ ಒಂದು ದಿನದ ವೈಭವದ ಭೇಟಿಗೆ ಸರಿ ಸಮನಾಗಿ ಇಂದಿಗೂ ತೂಗಿಲ್ಲ.

ಹರೆಯಕ್ಕೆ ಮಿಲಿಯನೇರ್ ಗಳ ಗಮ್ಮತ್ತಿರುತ್ತದೆ ಎನ್ನುವುದು ಸುಳ್ಳಲ್ಲ!

ಡಾ. ಪ್ರೇಮಲತ ಬಿ

ದಂತವೈದ್ಯೆ. ಕಳೆದ 15 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ಹಲವಾರು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ. ಕಥೆ, ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನಿತರು.

Share

2 Comments For "ಚಿಟ್ಟೆಬಣ್ಣ | ‘ಮಿಲಿಯನೇರ್’ಗಳ ಮೃಗಾಲಯ ಭೇಟಿ
ಡಾ. ಪ್ರೇಮಲತ ಬಿ
"

 1. ಪುನರ್ವಸು
  26th April 2018

  ಸುಂದರವಾದ ಆಪ್ತ ಬರಹ.
  ಕೊನೆಯ ಸಾಲು ಎಷ್ಟೊಂದು ನಿಜ..

  Reply
 2. Aravind Kulkarni
  26th April 2018

  Excellent article Premalatha.A true friendship. I have been so lucky to meet my childhood friends during my annual visit to Dharwad for the past 46 years.
  I am not a doctor,others too don’t talk about their profession when we a meet. We just enjoy those few hours of meeting . Nowly few of us are alive .We are determined to carry this tradition till the last wicket falls.
  Aravind

  Reply

Leave a comment

Your email address will not be published. Required fields are marked *

Recent Posts More

 • 1 month ago No comment

  ಪಂಡಿತರ ಹಳ್ಳಿಯ ‘ಮಂದರಗಿರಿ’

                ಇದು ಪ್ರವಾಸಿಗಳ ಯುಗ. ಹೊಸ ತಲೆಮಾರಿನ ಜನರಿಗೀಗ ಮನೆಯಲ್ಲಿ ಕೂರುವುದೆಂದರೆ ಬಹಳ ಬೇಜಾರಿನ ಸಂಗತಿ. ಆಗೀಗಲಾದರೂ ದೊಡ್ಡ ಅಥವಾ ಸಣ್ಣ ಪ್ರವಾಸಗಳಿಗೆ ಹೋದರೆ ಮನಸ್ಸಿಗೂ ಸುಖ ಎನ್ನುವ ತಲೆಮಾರಿನವರು ಈಗ ಹೆಚ್ಚು ಕಾಣಸಿಗುತ್ತಾರೆ. ಹೆಸರುವಾಸಿ ತಾಣಗಳಲ್ಲಿ ಸದಾ ಜನಜಂಗುಳಿಯಿರುತ್ತದೆ. ದೂರದ ಊರುಗಳೆಂದರೆ ಅದಕ್ಕೆ ತಯಾರಿ ಬೇಕು. ಹಲವು ದಿನಗಳ ಸಿದ್ಧತೆ, ಪ್ರಯಾಣ, ವಿಪರೀತ ಖರ್ಚು ಎಲ್ಲವೂ ಹೌದು. ವಯಸ್ಸಾದವರಿಗೆ ...

 • 3 months ago No comment

  ಬಿಜೆಪಿ ವಿರೋಧಿ ರಂಗ: ಪ್ರತಿಪಕ್ಷ ಸಭೆಯಲ್ಲಿ 20 ಪಕ್ಷಗಳು

  ಆರ್ಬಿಐ ,ಸಿಬಿಐ, ಚುನಾವಣಾ ಆಯೋಗದಂಥ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ನಾಯಕರು ಕಟುವಾಗಿ ಟೀಕಿಸಿದರು.   ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಪ್ರತಿಶಕ್ತಿಯನ್ನು ಕಟ್ಟುವ ಯತ್ನವಾಗಿ ನಡೆದ ಪ್ರತಿಪಕ್ಷ ಸಭೆಗೆ 20 ಪಕ್ಷಗಳ ನಾಯಕರು ಹಾಜರಾಗಿದ್ದರು. ಅಷ್ಟೇ ಅಚ್ಚರಿಯ ವಿಚಾರವೆಂದರೆ, ಈ ಸಭೆಗೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದಿಂದ ಯಾವುದೇ ಮುಖಂಡರು ಆಗಮಿಸಿರಲಿಲ್ಲ. ಡಿ.10ರಂದು, ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ...

 • 3 months ago No comment

  ಅರ್ಧನಾರಿ ಕಥೆಯ ಮತ್ತೆರಡು ಭಾಗಗಳು

  ‘ಮಧೋರುಬಗನ್’ (ಅರ್ಧನಾರಿ) ಎಂಬ ಕಾದಂಬರಿ ಬರೆವ ಮೂಲಕ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ಈಗ ಆ ಕಾದಂಬರಿಯ ಮತ್ತೆರಡು ಭಾಗಗಳ ಪ್ರಕಟಣೆಯೊಂದಿಗೆ ಸುದ್ದಿಯಾಗಿದ್ದಾರೆ. ಆ ಕಾದಂಬರಿಯ ಕೆಲವು ಭಾಗಗಳು ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿವೆ ಎಂದು ಆರೋಪಿಸಿದ್ದ ಬಲಪಂಥೀಯ ಕಾರ್ಯಕರ್ತರು ಹಲ್ಲೆಯೆಸಗಿದಾಗ, ತಮ್ಮ ಬರವಣಿಗೆ ಮೇಲೆ ಸ್ವಯಂ ನಿಷೇಧ ಹೇರಿಕೊಂಡಿದ್ದ ಮುರುಗನ್, ಇದೀಗ ಆ ಕಾದಂಬರಿ ಮುಗಿದಲ್ಲಿಂದಲೇ ಆರಂಭಿಸಿ ಮತ್ತೆರಡು ಭಾಗಗಳನ್ನು ಹೊರತಂದಿದ್ದಾರೆ. ಮೊದಲ ...

 • 3 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 3 months ago No comment

  ಅಲೆಗಳಾಗುವ ಹಾಡು

      ಕವಿಸಾಲು         ಕನಸುಗಳ ಜಾತ್ರೆ, ಮನಸುಗಳ ಹಬ್ಬ ಎಲ್ಲ ನಿಶ್ಯಬ್ದ, ಮೌನದಲಿ ಮನ ಬಿಡಿಸಿದ ಮೂರ್ತ ರೂಪಕ್ಕೆ ತದ್ರೂಪು ನಿನ್ನದೇ ಸೊಬಗು ಸುರಿವ ಮಳೆ, ಬೀಸೋ ಗಾಳಿ ಒದ್ದೆಯಾದ ಒಡಲಿನಲಿ ಉರಿವ ನನ್ನೆದೆಯ ಮೇಲೆ ಚಿತ್ತಾರ ಬಿಡಿಸುತ್ತವೆ ನಿನ್ನ ಬೆರಳು ಕರಿಕಪ್ಪು ಚಳಿ ರಾತ್ರಿಯಲಿ ಒಂದಪ್ಪುಗೆಯ ಧ್ಯಾನದಲಿ ಬೆನ್ನ ಸುಳಿ ಸೀಳಿ ಮೇಲೇರುವ ನಡುಕದಲಿ ನಿನ್ನೆದೆಯ ಹರವು ಯಾರೋ, ಯಾವತ್ತೋ ಮರಳ ...


Editor's Wall

 • 08 December 2018
  3 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 30 November 2018
  3 months ago No comment

  ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ

  ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...

 • 29 November 2018
  3 months ago No comment

  ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?

    ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.     ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ...

 • 09 November 2018
  4 months ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

 • 28 October 2018
  4 months ago No comment

  ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

    ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...