Share

ಬಾನುಲಿ ಹಿಂದಿನ ಮನಸ್ಸು
ಅರ್ಚನಾ ಎ ಪಿ

 

 

ಏನೇ ಅನ್ನಿ, ಬಾನುಲಿ ಅನ್ನೋದರ ಇಂಪೇ ಬೇರೆ. ಅದು ನಮ್ಮ ಮನಸ್ಸಿನಿಂದ ದೂರವಾಗಿದೆ ಎನ್ನಿಸಿದರೂ ಹಾಗಲ್ಲ. ಇದು ಒಂದೆಡೆಗಾದರೆ, ಅಂಥ ಬಾನುಲಿಯಲ್ಲಿ ಕೆಲಸ ಮಾಡುವ ಇಂಪು ದನಿಯವರ ಧನ್ಯತಾ ಭಾವ ಹೇಗಿರುತ್ತದೆ ಎಂಬುದು ಕೂಡ ಕುತೂಹಲ. ಆ ಲೋಕದ ಬಗ್ಗೆ ಇಲ್ಲಿ ಹೇಳಿದ್ದಾರೆ ಲೇಖಕಿ.

 

 

 

‘ಆಕಾಶವಾಣಿ’ಯು ನೀನು… ನಿನ್ನ ‘ಕೇಳಿ’ದಾಗ ಸಂತೋಷವೇನು…

ಇದು ಆ ಕಾಲದ ಮಾತು. ಆಗ ಮಹಾಭಾರತ, ರಾಮಾಯಣ ಧಾರಾವಾಹಿಗಳು ಟಿವಿಯಲ್ಲಿ ಪ್ರಸಾರವಾಗೋ ಸಮಯದಲ್ಲಿ ರಸ್ತೆಗಳೆಲ್ಲಾ ಖಾಲಿ ಇರ್ತಿದ್ವು. ಅತ್ಯಂತ ಭಕ್ತಿಯಿಂದ ಟಿವಿಗೂ ಪೂಜೆ ಮಾಡಿ ಧಾರಾವಾಹಿ ನೋಡ್ತಿದ್ರಂತೆ. ಈ ಮಾತು ನಮ್ಮ ಹಿರಿಯರ ನಡೆನುಡಿ ತಿಳಿಸತ್ತೆ. ಇರೋದ್ರಲ್ಲೇ ತೃಪ್ತಿಯಿಂದಿರೋದು, ಹಾಸಿಗೆ ಇದ್ದಷ್ಟು ಕಾಲುಚಾಚೋದು, ಒಂದು ಚೌಕಟ್ಟು ಹಾಕ್ಕೊಂಡು ಬದುಕು ನಡೆಸೋದು ಎಲ್ಲಾ ಎಲ್ಲಿ ಹೋದ್ವೊ ಏನೊ.

ಅಯ್ಯೋ ಹೇಳೋದನ್ನೇ ಮರೆತಿದ್ದೆ. ಇದು ಟಿವಿ ವಿಷಯ ಆಯ್ತು. ಇನ್ನೊಂದು ಇಂಥದೇ ಆಪ್ತ ಸಂಗಾತಿ ಇತ್ತು ಅವರಿಗೆಲ್ಲಾ. ಅದರಲ್ಲಿ ಪ್ರಸಾರ ಕಾರ್ಯ ಶುರುವಾಗುವಾಗ ಬರ್ತಿದ್ದ ಟೋನ್‍ನ್ನು ಈಗಲೂ ಕೆಲವು ಯುವಕರು ತಮ್ಮ ಮೊಬೈಲ್‍ನ ರಿಂಗ್ ಟೋನ್ ಆಗಿ ಇಟ್ಟುಕೊಂಡಿರುವುದನ್ನು ಮೊನ್ನೆ ಮೆಟ್ರೋದಲ್ಲಿ ಬರ್ತಾ ಕೇಳಿದಾಗಂತೂ ಹೆಮ್ಮೆ ಅನ್ನಿಸ್ತು.

ಅದ್ರಲ್ಲಿ ಬರ್ತಿದ್ದ ಆಕಾಶವಾಣಿ ಬೆಂಗಳೂರು, ರಸವಾರ್ತೆ, ಓದುತ್ತಿರುವವರು ಕೃಷ್ಣಕಾಂತ್ ಅನ್ನೋದು ಈಗಲೂ ಕಿವಿಯಲ್ಲಿ ರಿಂಗಣಿಸ್ತಿದೆ. ನಾನೋದಬೇಕಾದ್ರೆ ನನ್ನ ಕನ್ನಡ ಟೀಚರ್ ಪ್ರೇಮಲತಾ ಮೇಡಂ ವೀರಗಲ್ಲು, ಮಾಸ್ತಿಕಲ್ಲು ಕುರಿತು ನಾಟಕ ಮಾಡಿಸಿದ್ದು ಇನ್ನೂ ನೆನ್ನೆ ಮೊನ್ನೆ ನಡೆದಂತಿದೆ. ಹೀಗಂದುಕೊಳ್ತಾ ಈ ದನಿಗಳೊಂದಿಗೆ ನಾನೂ ದನಿಯಾಗಿ ಕೆಲಸ ಮಾಡ್ತಾ ಎಂಟು ವರ್ಷಗಳೇ ಕಳೆದುಹೋದವು.

ಈಗಿನ ಖಾಸಗಿ ಎಫ್‍ಎಂ ವಾಹಿನಿಗಳ ಭರಾಟೆಯ ನಡುವೆಯೂ ಕೊಂಚವೂ ತನ್ನತನವನ್ನು ಬಿಟ್ಟುಕೊಡದೆ ಮೂಲ ಉದ್ದೇಶವಾದ `ಬಹುಜನ ಹಿತಾಯ – ಬಹುಜನ ಸುಖಾಯ’ ಅಂತ ಇನ್ಫೋಟೈನ್‍ಮೆಂಟ್ (ಮಾಹಿತಿ ಮನರಂಜನೆ) ಕಾರ್ಯಕ್ರಮಗಳನ್ನು ಬಿತ್ತರಿಸ್ತಾನೇ ಇದೆ. ಆ ಕಾರ್ಯಕ್ರಮಗಳನ್ನು ತಲುಪಿಸೋ ಕೆಲಸದ ಮಧ್ಯವರ್ತಿಯಾಗಿ, ಮಾಧ್ಯಮವಾಗಿ ವಿವಿಧ ಭಾರತಿಯ ಸವಿಸವಿ ಉಲಿಯಾಗಿ ಅಂತ ಬೆಳ್ಳಂಬೆಳಗ್ಗೆ ನಿಮ್ಮೆಲ್ಲರ ದಿನ ಶುಭವಾಗಿರಲಿ ಅಂತ ಹಾರೈಸೋ ಅದೃಷ್ಟ ಎಂಥದು ಅಲ್ವಾ? ಕಂಪ್ಯೂಟರ್‍ನಲ್ಲಿರೋ ಹಾಡುಗಳ ಸಂಗ್ರಹದಿಂದ ಇದು ಅವರಿಗಿಷ್ಟವಾಗಬಹುದು, ಬೆಳಗ್ಗೆ ಈ ಹಾಡಿಂದ ದಿನ ಶುರುವಾದ್ರೆ ಇಡೀ ದಿನ ಚೆನ್ನಾಗಿ ಹೋಗನಹುದು, ತಿಂಡಿ ತಿಂತಾ ಈ ಹಾಡು ಕೇಳ್ತಿದ್ರೆ ಪತಿಗೆ ತನ್ನ ಪತ್ನಿಯ ಕಣ್ಣಲ್ಲಿ ಕಾಣೋ ಪ್ರೀತಿಯ ಮಿಂಚು ಅವಳ ಬಗೆಗಿನ ಗೌರವ ಹೆಚ್ಚಿಬಹುದು, ಬಸ್ಸಲ್ಲಿ ಕಿಟಕಿ ಪಕ್ಕ ಕೂತ ಆ ಚೆಲುವೆಯನ್ನು ಕಂಡು ಸಿಗ್ನಲ್‍ನಲ್ಲಿ ನಿಂತಿರೋ ಯುವಕನ ಹೃದಯಬಡಿತದ ಮಿಡಿತ ಅವಳಿಗೆ ತಲುಪಿಸೋ ಮಾಧ್ಯಮವಾಗಬಹುದಾ ಅಂತ ಏನೇನೋ ಆಲೋಚನೆಗಳಿಗೆ ಉತ್ತರವಾಗಿ ಗಂಟೆಗೆ 8ರಿಂದ 10 ಹಾಡುಗಳನ್ನು ಹೆಕ್ಕಿ ತೆಗೆದು ನಿಮಗಾಗಿ ಪ್ರಸಾರಿಸೋ ಖುಷಿ ಇದೆಯಲ್ಲ, ಮಾತಲ್ಲಿ ಹೇಳೋಕ್ಕಾಗೋದೇ ಇಲ್ಲ.

ಒಟ್ಟಿನಲ್ಲಿ ಟಿವಿಗಿಂತ ರೇಡಿಯೋ – ಬಾನುಲಿನೇ ನಿಜವಾದ ಸಂಗಾತಿ. ನಮ್ಮ ನಮ್ಮ ದಿನನಿತ್ಯದ ಕೆಲಸಗಳು, ಆಲೋಚನೆಗಳು, ಓಡಾಟ, ಪ್ರಯಾಣ, ಕಾಯುವಿಕೆ, ಕೋಪ, ಹುಸಿಮುನಿಸು, ಕಾಲೆಳೆಯುವುದು… ಅಬ್ಬಬ್ಬಾ! ಪಟ್ಟಿ ಮಾಡ್ತಾ ಹೋದ್ರೆ ಎಷ್ಟು ಸಂದರ್ಭ, ಸಂಗತಿಗಳು! ಇವೆಲ್ಲಕ್ಕೂ ಹೊಂದೋಂಥ ಚಿತ್ರಗೀತೆಗಳ ಪ್ರಪಂಚದಲ್ಲಿ ಮಿಂದೇಳೋ ಹಾಗೆ ಮಾಡತ್ತೆ ಈ ರೇಡಿಯೋ. ಈಗಲೂ ಪಕ್ಕದಲ್ಲೇ ಇರೋ ಬಾನುಲಿಯಲ್ಲಿ ಬರ್ತಿರೋ ಬಡೇ ಅಚ್ಛೇ ಲಗತೇ ಹೈ… ಯೇ ಧರತಿ, ಯೇ ದುನಿಯಾ, ಯೇ ರೈನಾ ಔರ್ ಔರ್ ತುಮ್ ಅನ್ನೋ ಹಾಡು ಆಲಿಸ್ತಿದೀನಿ…

 

——

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

One Comment For "ಬಾನುಲಿ ಹಿಂದಿನ ಮನಸ್ಸು
ಅರ್ಚನಾ ಎ ಪಿ
"

  1. ಬಾಲಾಜಿ
    13th November 2017

    ಬಹಳ ಸೊಗಸಾದ ಬರಹ

    Reply

Leave a comment

Your email address will not be published. Required fields are marked *

Recent Posts More

  • 1 week ago No comment

    ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

            ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

  • 2 weeks ago No comment

    ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

          ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

  • 2 weeks ago No comment

    ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

    ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

  • 2 weeks ago No comment

    ಉಷಾ ಚಿತ್ತ | ಮೊಲದ ಮರಿ ಗಿಫ್ಟ್

          ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

  • 3 weeks ago No comment

    ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

    ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

  • 14 April 2019
    1 week ago No comment

    ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

            ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

  • 04 April 2019
    3 weeks ago No comment

    ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

    ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

  • 29 March 2019
    4 weeks ago One Comment

    ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                      ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

  • 26 March 2019
    4 weeks ago No comment

    ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

    ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

  • 12 March 2019
    1 month ago No comment

    ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

    ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...