‘ಸೂಳೆ’ ಅಂದರೆ ‘ಅಮ್ಮಾ’ ಎಂದೇ ಕೇಳಿಸುತ್ತದೆ!
ಚೇತನಾ ತೀರ್ಥಹಳ್ಳಿ ಕಾಲಂ
ಪ್ರಸ್ತಾಪ| prastapa ಸೂಳೆ! ಮೊದಲ ಸಲ ಬೈಸಿಕೊಂಡಾಗ ಮುಡಿ ತುಂಬ ಹೂವಿತ್ತು. ವಯಸ್ಸು ಹೆಚ್ಚೆಂದರೆ ಹತ್ತು. ಬಳೆ ಸದ್ದಿಗೆ, ಗೆಜ್ಜೆಗೆ, ಹೂ ಘಮಲಿಗೆಲ್ಲ ಅಪ್ಪ “ಸೂಳೇರ ಥರ” ಅನ್ನುತ್ತಿದ್ದರು. “ಹೆಣ್ಣುಸಂಭ್ರಮ ಸಹಿಸದ ಮನಸ್ಸುಗಳು ಹಾಗೆ ಬೈತವೆ” ...