Share

ಹೊಸ ಕಾಲದ ಹರಕೆಯ ಕುರಿಗಳು!
ಸಂಪಾದಕ

 

ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.

 

 

ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ಅದೆಷ್ಟು ಕಷ್ಟದ್ದು ಎಂದು ಗೊತ್ತಾಗುವುದು. ಯಾಕೆಂದರೆ, ಇಷ್ಟಪಡುವುದು ತೀರಾ ನಮ್ಮ ಮನಸ್ಸಿಗೆ ಸಂಬಂಧಿಸಿದ್ದು. ಅದನ್ನು ವಿವರಿಸಬೇಕಾಗಿ ಬಂದಾಗ ಅದು ವ್ಯಾವಹಾರಿಕವಾಗಬೇಕಾಗುವ ಅಗತ್ಯ ಬೀಳುವುದರಿಂದ ಅಂಥದೊಂದು ವಿವರಣೆಯೇ ಇಡಿಯಾಗಿ ನಾಟಕೀಯವಾಗಲೂಬಹುದು ಎಂಬುದು ನನ್ನ ಭಯ.

ಹೀಗೆ ಯೋಚಿಸಿದವನು ಆ ಗೆಳೆಯರಿಗೆ ಉತ್ತರಿಸುವುದಕ್ಕೂ ಹೋಗದೆ ಸುಮ್ಮನಾದೆ.

ಮೇಲೆ ಹೇಳಿದ್ದನ್ನೇ ತುಸು ಎಳೆದು ಹೇಳುವುದಾದರೆ, ವಿವರಣೆಯು ಯಾವಾಗಲೂ ಹೊರ ಜಗತ್ತಿಗೆ ಬೇಕಾದುದಾಗಿರುವುದರಿಂದ ಎದುರಾಗುವ ಬಿಕ್ಕಟ್ಟು ಇದು. ಯಾವುದರ ಕುರಿತೇ ಆದ ಇಷ್ಟವನ್ನು ಕುರಿತ ಮಾತು ಸ್ವಗತದಂತಿರುವವರೆಗೂ ಅದಕ್ಕೊಂದು ಚಂದವಿರುತ್ತದೆ. ಎದುರಿನವರನ್ನು ಉದ್ದೇಶಿಸಿ ವಿವರಿಸತೊಡಗುತ್ತಿದ್ದಂತೆ ಅದಕ್ಕೊಂದು ಛಂದದ ಕಟ್ಟುಪಾಡನ್ನು ನಾವೇ ನಮಗೆ ಗೊತ್ತಿಲ್ಲದಂತೆ ಹಾಕುತ್ತಿರುತ್ತೇವೆ. ನಮ್ಮ ಇಷ್ಟವನ್ನು ನಾಲ್ಕು ಜನಕ್ಕೆ ಮೆಚ್ಚುಗೆಯಾಗುವಂತೆ ಹೇಳುವ ಮಾರ್ಕೆಟಿಂಗ್ ಅನಿವಾರ್ಯತೆಯೊಂದು ನಮ್ಮನ್ನು ಮೀರಿ ಕೆಲಸ ಮಾಡುವುದಕ್ಕೆ ಮುಂದಾಗಿರುತ್ತದೆ ಅಲ್ಲಿ. ಮನಸ್ಸಿನ ಮಾತೇ ಬೇರೆ; ಮಾರುಕಟ್ಟೆಯನ್ನು ಜೋಡಿಸುವ ಮಾತೇ ಬೇರೆ.

ಇದನ್ನು ಈಗ ಇನ್ನೂ ಒಂದು ದಿಕ್ಕಿನಿಂದ ನೋಡಬೇಕು. ಇಷ್ಟವು ಆಂತರಂಗಿಕವಾಗಿ ನಮ್ಮದೇ ಆದರೂ, ನಮ್ಮಿಂದ ಏನನ್ನೋ ನಿರೀಕ್ಷಿಸುವ ಮತ್ತು ಬೇರೆ ಬೇರೆ ಕಾರಣಗಳಿಗಾಗಿ ನಾವು ಯಾವುದಕ್ಕೆ ಉತ್ತರದಾಯಿಗಳಾಗಿರಬೇಕಾಗುತ್ತದೋ ಆ ವಲಯದ ಬೇಡಿಕೆಗೆ ಅನುಗುಣವಾಗಿ ನಮ್ಮ ಇಷ್ಟವು ಅಂತಿಮವಾಗಿ ಯಾವ ಸ್ವರೂಪದಲ್ಲಿರಬೇಕು ಎಂಬುದನ್ನು ಮರೆಯಲ್ಲಿದ್ದುಕೊಂಡೇ ತೀರ್ಮಾನಿಸುವ ಹಲವು ಸಂಗತಿಗಳು ಮತ್ತು ಶಕ್ತಿಗಳು ಇವೆ. ಅಂದರೆ ಯಾವುದೋ ಒಂದು ಹಂತದಿಂದ ನಾವು ನಮ್ಮ ಇಷ್ಟವೆಂದು ಇನ್ನಾರೋ ನಿರೂಪಿಸಿಕೊಟ್ಟ ಅವರ ಇಷ್ಟದ ಬಗ್ಗೆ ಮಾತನಾಡತೊಡಗಿರುತ್ತೇವೆ; ಬರೆದುಕೊಟ್ಟ ಭಾಷಣವನ್ನು ಓದಿದ ಹಾಗೆ.

ಒಂದು ಪುಟ್ಟ ಊರಿಗೆ ರಸ್ತೆಯೊ, ಬಸ್ಸೊ ಬೇಕಾಗಿದೆಯೆಂದುಕೊಳ್ಳಿ. ಆ ಊರಿನ ಜನರೆಲ್ಲರ ಆಸೆ, ಅದೆಷ್ಟೋ ದಿನಗಳ ನಿರೀಕ್ಷೆ ಅದಾಗಿರುತ್ತದೆ. ಆದರೆ, ಊರೊಳಗೆ ರಾಜಕಾರಣದ ಬಲದಿಂದ ಅವರೆಲ್ಲರನ್ನೂ ಮಣಿಸಬಲ್ಲವನೊಬ್ಬ ತನಗೆ ಏನು ಬೇಕಾಗಿದೆಯೋ ಅದನ್ನು ಅವರಿಗೂ ಬೇಕಾಗಿದೆಯೆಂಬಂತೆ ಬಿಂಬಿಸಿ ಅವರೆಲ್ಲ ಅವನ ಇಷ್ಟಕ್ಕೆ ಹೌದೆನ್ನುವಂತೆ ಮಾಡಿಬಿಡಬಲ್ಲ. ಅಲ್ಲಿಗೆ ಊರಿನ ಆ ಒಂದಿಡೀ ಸಮೂಹದ ಅಂತಃಸತ್ವ ಸತ್ತುಹೋಗಿರುತ್ತದೆ. ಅದರ ಜಾಗದಲ್ಲಿ ಕರಾಳವೊಂದು ಗಹಗಹಿಸುತ್ತ, ತನಗಾಗಿ ಹೌದೆಂದವರನ್ನೇ ಸರ್ವನಾಶಗೊಳಿಸಲು ಸಂಚು ರೂಪಿಸುತ್ತದೆ. ಇವತ್ತು ನಮ್ಮ ಅದೆಷ್ಟೋ ಮತದಾರರ ಒಂದೊಂದೂ ಅಮೂಲ್ಯ ಮತ ಒಂದಿಷ್ಟು ಹೆಂಡದ ನಶೆಯ ಆಸೆಯಲ್ಲಿ, ಮೂಲಭೂತವಾದದ ಮಂಕಿನಲ್ಲಿ, ನಾಳೆಯನ್ನು ಗ್ರಹಿಸಲಾರದ ವಿವೇಕರಹಿತ ದುಡುಕಿನಲ್ಲಿ ಕಾಲಕಸದಂತಾಗುವುದು ಹೀಗೆ.

ನಾವು ನಿಮಿತ್ತ ಮಾತ್ರರಾಗಿ, ದಾಳವನ್ನು ತಮಗೆ ಬೇಕಾದ ಹಾಗೆ ನಡೆಸುವ ಇಂಥ ಹಿಕಮತ್ತು ಲಾಗಾಯ್ತಿನಿಂದಲೂ ನಡೆದೇಬಂದಿರುವಂಥದ್ದು. ಈಗ ಇದು ಔದ್ಯೋಗೀಕರಣ, ಜಾಗತೀಕರಣ, ಉದಾರೀಕರಣ ಇತ್ಯಾದಿ ಸೊಗಸಿನ ವೇಷಗಳನ್ನು ಕುಣಿಸುವ ಮಾರುಕಟ್ಟೆ ಎಂಬ ಬೃಹತ್ ಆಡುಂಬೊಲದ ರೂಪದಲ್ಲಿದೆ. ಅದರ ವಿರಾಟ್ ಸ್ವರೂಪ ಎಂಥದೆಂದರೆ ಅದು ನಮ್ಮ ಗ್ರಹಿಕೆಗೇ ಸಿಗಲಾರದ ಹಾಗೆ ನಾವೆಲ್ಲ ಅದರೊಳಗೇ ಸೇರಿಹೋಗಿ ಹೊರಬರಲಾರದೆ, ಒಳಗೂ ಉಳಿಯಲಾರದೆ ಒದ್ದಾಡುತ್ತಿದ್ದೇವೆ ಅಥವಾ ಆಹಾ ಎಂಥ ಸುಖ ಎಂದುಕೊಳ್ಳುತ್ತಾ ಮೈಮರೆತು ತುಂಬಾ ಹಿಂದೆಯೇ ಸತ್ತುಹೋಗಿದ್ದೇವೆ. ಶತಮೂರ್ಖ ಮಾತುಗಳನ್ನು ಫಿಲಾಸಫಿಕಲ್ ಚಹರೆಯ, ಆದರೆ ಅತ್ಯಂತ ಹೊಲಸಿನ ಮುಖದಿಂದ ಉದುರಿಸುತ್ತಿರುವವರೆಲ್ಲ ಈ ಮಾರುಕಟ್ಟೆಯೆಂಬ ವಿರಾಟ್ ಶಕ್ತಿಯ ದಲ್ಲಾಳಿಗಳೇ ಆಗಿದ್ದು. ಲಕ್ಷಾಂತರ, ಕೋಟ್ಯಂತರ ಅಭಿಮಾನಿಗಳನ್ನೊ ಆರಾಧಕರನ್ನೊ ಹೊಂದಿದ್ದಾರೆ. ಮತ್ತು ಈ ಅಭಿಮಾನಿಗಳು, ಆರಾಧಕರೆಲ್ಲ ಶಸ್ತ್ರಸನ್ನದ್ಧರೂ ಹೌದು. ನಿನ್ನ ಕೆಲಸವನ್ನಷ್ಟೇ ನೀನು ಮಾಡು, ಅದರ ಫಲದ ಬಗ್ಗೆ ಚಿಂತಿಸಬೇಡ ಎಂಬ ಚಾಣಾಕ್ಷ ರಾಜಕಾರಣ, ‘ಉಳುವಾ ಯೋಗಿಯ ನೋಡಲ್ಲಿ’ ಎಂಬ ಕವಿಯ ಕಣ್ಣೀರನ್ನು ತನ್ನದೇ ಕಣ್ಣೀರೆಂದು ಬಿಂಬಿಸಿ ಗೆಲ್ಲುತ್ತಲೇ ಇದೆ. ರೈತರು, ದುಡಿಯುವವರು, ಮನೆಯೊಳಗೆ ಎಲ್ಲರಿಗಿಂತ ಮೊದಲು ಎದ್ದು ಎಲ್ಲರಿಗಿಂತ ಕಡೆಗೆ ಮಲಗುವವರೆಗೂ ದುಡಿಯುತ್ತ ಜೀವ ತೇಯ್ದೂ ಈ ಜಗತ್ತಿನ ಆರ್ಥಿಕತೆಯ ಲೆಕ್ಕಾಚಾರದಲ್ಲಿ ಅನರ್ಹರಾಗಿಯೇ ಇರುವ ಮಹಿಳೆಯರು ಸಾಯುತ್ತಲೇ ಇದ್ದಾರೆ. ಇವರೆಲ್ಲರ ಅಂತಃಕರಣದೊಳಗೆ ಬೆಂದುಹೋಗುತ್ತಿರುವ ಇವರ ಇಷ್ಟವನ್ನು ಕೇಳಿಸಿಕೊಳ್ಳುವ ಮನಸ್ಸುಗಳು ಇರುವುದು ಸಾಧ್ಯವೇ?

ಅದೃಶ್ಯ ಪ್ರಹಾರಗಳು, ಅಶರೀರ ವಾಣಿಗಳ ಮೂಲಕವೇ ತನಗೆ ಬೇಕಾಗಿರುವಂತೆ ಎಲ್ಲವನ್ನೂ ನಿಭಾಯಿಸಬಲ್ಲ ಮಾರುಕಟ್ಟೆಯು, ತನಗೆ ಅಗತ್ಯವಿರುವವರ ಮೇಲೆ ಇಟ್ಟುಕೊಂಡಿರುವ ಹಿಡಿತ ಎಂಥದೆಂದರೆ, ಯಾರು ಯಾರನ್ನು ಮದುವೆಯಾಗಬೇಕು ಎಂಬಲ್ಲಿಯವರೆಗೆ ಅವರ ಖಾಸಗಿ ಬದುಕಿನ ನಿರ್ಧಾರಗಳನ್ನೂ ಅದು ತಾನೇ ತೆಗೆದುಕೊಳ್ಳಬಲುದು; ತೆಗೆದುಕೊಳ್ಳುತ್ತಿದೆ. ನಾಳೆ ಅವರ ಸಂತಾನವನ್ನೂ ತಾನೇ ತೀರ್ಮಾನಿಸುವ ಮಟ್ಟಕ್ಕೆ ಆಕ್ರಮಣಕಾರಿಯಾದರೂ ಅಚ್ಚರಿಪಡುವಂಥದ್ದೇನಿಲ್ಲ. ಆದರೆ, ಮಾರುಕಟ್ಟೆಯ ಬೇಡಿಕೆಗಳನ್ನು ಅನುಸರಿಸಿ ನಡೆದುಕೊಳ್ಳುತ್ತ ತಮ್ಮದೇ ಆದ ಐಷಾರಾಮಿ ಬದುಕನ್ನು ಅಷ್ಟೇ ದೊಡ್ಡ ಪ್ರಮಾಣದ ಅವಕಾಶದಲ್ಲಿ ಅನುಭವಿಸುತ್ತಿರುವ ಈ ಸೆಲೆಬ್ರಿಟಿ ವರ್ಗಕ್ಕೂ, ಈ ಮೊದಲು ನಾನು ಹೇಳಿದ ರೈತರು, ಶ್ರಮಿಕರು ಮತ್ತು ಮಹಿಳೆಯರ ಹೀನಾಯ ಸ್ಥಿತಿಗೂ ಇರುವ ಅಂತರ ತನ್ನ ಗಾತ್ರದಿಂದ ಮಾತ್ರವಲ್ಲ, ಭಾವನಾತ್ಮಕತೆಯ ಕಾರಣದಿಂದಲೂ ಅಗಾಧವಾದುದು. ಉನ್ನತ ಸಮಾಜ ಅಥವಾ ಸೆಲೆಬ್ರಿಟಿ ವರ್ಗಕ್ಕೆ ಇಷ್ಟವೆಂಬುದೂ ವ್ಯವಹಾರದ ಭಾಗವೇ ಆಗಿರುವುದರಿಂದ ಭಾವನೆ ಕೂಡ ಅಲ್ಲಿ ವ್ಯವಹಾರವೇ. ಆದರೆ ಭಾವನೆಯೇ ಬದುಕಿನ ನೆಲವೂ ನೆಲೆಯೂ ಆಗಿ ಯಾರ ಪಾಲಿಗಿದೆಯೋ ಆ ಬಡವರು ಮತ್ತು ನಿಜವಾದ ಅರ್ಥದಲ್ಲಿ ಬೆನ್ನೆಲುಬಾಗಿ ದುಡಿಯುವವರನ್ನು ಕಾಯುವ ಮೃದುತ್ವವಾಗಲೀ ಆರ್ದ್ರತೆಯಾಗಲೀ ಮಾರುಕಟ್ಟೆಯ ಕರಾಳ ಬಾಹುಗಳಲ್ಲಿ ಇಲ್ಲವೇ ಇಲ್ಲ. ದುರಂತ ಎಂಥದೆಂದರೆ ಮಾರುಕಟ್ಟೆಯ ಆಚೆಗೊಂದು ಪ್ರಪಂಚವೂ ಇಲ್ಲವಾಗುತ್ತಿರುವುದು.

ನಾನು ಆರಂಭದಲ್ಲಿ ಪ್ರಸ್ತಾಪಿಸಿದ, ನಮ್ಮ ಇಷ್ಟವನ್ನು ಹೇಳಿಕೊಳ್ಳಲು ಅಡ್ಡಿಯಾಗುತ್ತಿರುವ ಭಯವು ಹೀಗೆ ಮಾರುಕಟ್ಟೆಯ ಆಚೆಗೊಂದು ಪ್ರಪಂಚ ಇಲ್ಲವಾಗುತ್ತಿರುವ ಸನ್ನಿವೇಶದ ಹಿನ್ನೆಲೆಯಲ್ಲಿ ಹುಟ್ಟಿಕೊಳ್ಳುತ್ತಿರುವುದಾಗಿದೆ. ಕಲೆ, ಸಂಸ್ಕೃತಿ, ಕಾಳಜಿ ಇವೆಲ್ಲವೂ ಸ್ಲೋಗನ್ನುಗಳಿಗೆ ಸೀಮಿತವಾಗಿಬಿಡುತ್ತಿರುವ ಕಾಲದಲ್ಲಿ. ರಾಶಿ ರಾಶಿ ಕೊಳಕು ಮತ್ತು ಕೊರತೆಯನ್ನು ಮರೆಮಾಚುವ ಹಾಗೆ ಎತ್ತರದ ಪ್ರತಿಮೆಗಳನ್ನು ಕಟ್ಟಿ ಗಮನ ಸೆಳೆಯುವ ರಾಜಕಾರಣವು ತನ್ನದೇ ಮಾರುಕಟ್ಟೆಯನ್ನು ಕಂಡುಕೊಳ್ಳುತ್ತಿರುವ ಕಾಲದಲ್ಲಿ ಪ್ರಾಮಾಣಿಕವಾದದ್ದು ಮುಜುಗರದಿಂದ ಮುಗ್ಗರಿಸುತ್ತ, ಸಂಕೋಚದಲ್ಲೇ ಸಾಯುತ್ತ ದನಿ ಕಳೆದುಕೊಳ್ಳುತ್ತದೆ.

ಇಷ್ಟವಾದುದನ್ನು ಅಷ್ಟೇ ಪ್ರಾಮಾಣಿಕವಾಗಿ ಹೇಳುವಾಗಿನ ಕಷ್ಟಕ್ಕೆ ಇನ್ನೂ ಒಂದು ಮುಖವಿದೆ. ನಿಷ್ಠುರ ಮಾತಿಗೆ ಪ್ರತಿರೋಧ ಬಂದಾಗ ಅದಕ್ಕೆ ಉತ್ತರಿಸುವಾಗಲೂ ಇನ್ನಷ್ಟು ನಿಷ್ಠುರತೆ ತೋರಿಸುವುದು ಕಷ್ಟವಲ್ಲ. ಆದರೆ ನಮ್ಮ ಇಷ್ಟಕ್ಕೆ ಅಪಸ್ವರ ವ್ಯಕ್ತವಾದಾಗ ನಮ್ಮ ಇಷ್ಟವನ್ನು ಸಮರ್ಥಿಸಿಕೊಳ್ಳಲು ನಿಷ್ಠುರವಾಗಬೇಕಾಗಿ ಬಂದರೆ, ದಾಕ್ಷಿಣ್ಯವನ್ನು ದಾಟುವಂಥ ಸಂದರ್ಭ ತಲೆದೋರಿದರೆ ಎದುರಿಸಬೇಕಾದ ತಳಮಳದ ಮುಖ ಅದು. ಮಾರುಕಟ್ಟೆಯ ಅನಿವಾರ್ಯತೆಯಲ್ಲಿ ನಮ್ಮ ಕೈಮೀರುವ ಮಾತಿಗಿಂತಲೂ, ನಮ್ಮ ಇಷ್ಟಕ್ಕಿರುವ ಅರ್ಹತೆಯನ್ನು ಮನದಟ್ಟು ಮಾಡಲು ಪುರಾವೆಗಳನ್ನು ಲಗತ್ತಿಸಬೇಕಾಗುವ ಇಂಥ ಭಾವನಾತ್ಮಕ ತೊಳಲಾಟದ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುವುದು ವಿನಾಕಾರಣ ಸಂಕಟವಾಗಿ ಬಾಧಿಸುತ್ತದೆ.

ಇಷ್ಟವು ಆಳದ್ದಾಗಿರುವಷ್ಟೂ ಲಜ್ಜೆಯಲ್ಲಿ ಮುಳುಗೇಳುವುದೂ ಇದೆ. ಒಮ್ಮೆ ಹಳ್ಳಿಯಲ್ಲಿ ಎಲ್ಲರೂ ಊಟಕ್ಕೆ ಕುಳಿತಿದ್ದಾಗ ಹೋಳಿಗೆ ಬಡಿಸಿದರು. ಹೋಳಿಗೆ ತುಂಬಾ ಚೆನ್ನಾಗಿಯೇ ಇತ್ತು. ಬಡವರೇ ಆಗಿದ್ದ ಅವರೆಲ್ಲರ ನಡುವೆ ಅವರಗಿಂತಲೂ ಸ್ವಲ್ಪ ಜಾಸ್ತಿಯೇ ಬಡತನವಿದ್ದ ಕುಟುಂಬದ ನಡುವಯಸ್ಸಿನ ಒಬ್ಬಳು ಹೋಳಿಗೆ ಇಷ್ಟವಾಯಿತೆಂಬುದನ್ನು ಬಾಯ್ಬಿಟ್ಟು ಹೇಳಿದಾಗ, ಆ ಮನೆಯ ಸಣ್ಣ ವಯಸ್ಸಿನ ಸೊಸೆಯಂದಿರು ಒಂದೆರಡು ಹೋಳಿಗೆ ಜಾಸ್ತಿಯೇ ಬಡಿಸಿದರು ಆಕೆಗೆ, ಬೇಡಬೇಡವೆಂದು ಆಕೆ ಕೈಕಟ್ಟಿದರೂ. ಆ ಕ್ಷಣ ಆಕೆಯ ಪಾಲಿಗೆ ತಂದಿಟ್ಟ ಮುಜುಗರ ಮೊದಲೇ ಸಂಕೋಚದ ಮುದ್ದೆಯಂತಿದ್ದವಳನ್ನು ಇನ್ನಷ್ಟು ಸಂಕೋಚಕ್ಕೆ ತಳ್ಳಿತ್ತು.

ಇನ್ನೊಂದು ಸಂದರ್ಭ. ಮೇಲ್ನೋಟಕ್ಕೆ ಇದು ಆ ಹಳ್ಳಿಯ ಹೆಂಗಸಿನ ಸಂದರ್ಭದಲ್ಲಿ ನಡೆದ ಸಂಗತಿಯಂತೆಯೇ ಕಾಣಿಸಿದರೂ, ವಾಸ್ತವದಲ್ಲಿ ಬೇರೆ. ಅವನೊಬ್ಬ ದೊಡ್ಡ ವ್ಯಕ್ತಿಯ ಜೊತೆ ಮಾತಾಡುತ್ತ ನಿಂತಿದ್ದಾಗ ಅದಾಯಿತು. ಮಾತಾಡುತ್ತ ಆ ದೊಡ್ಡ ವ್ಯಕ್ತಿಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಮೆಚ್ಚಿ ಮಾತಾಡಿದ. ತಕ್ಷಣವೇ ಆ ದೊಡ್ಡ ಮನುಷ್ಯ ಅದನ್ನು ಬಿಚ್ಚಿ ಇವನ ಕೊರಳಿಗೆ ಹಾಕಿಬಿಟ್ಟ. ಆತ ಹಾಗೆ ಚಿನ್ನದ ಸರ ಬಿಚ್ಚಿಕೊಟ್ಟದ್ದು ಊಹೆಗೂ ನಿಲುಕದ ಸಂಗತಿಯೇ ಆದರೂ, ಇವನು ಇಷ್ಟವನ್ನು ವ್ಯಕ್ತಪಡಿಸಿದ ಬಗೆ ಮುಗ್ಧವಾದದ್ದಾಗಿರಲಿಲ್ಲ ಎಂಬುದನ್ನು ಗಮನಿಸಬೇಕು. ಎಲ್ಲಿ ಮುಗ್ಧತೆ ಇರುವುದಿಲ್ಲವೋ ಅಲ್ಲಿ ಪ್ರಾಮಾಣಿಕತೆಯೂ ಇರುವುದು ಸಾಧ್ಯವಿಲ್ಲ. ಹಾಗಾಗಿ ಆ ಹಳ್ಳಿಯ ಹೆಂಗಸು ಅನುಭವಿಸಿದ್ದ ತೀವ್ರ ಸಂಕೋಚದ ಸ್ಥಿತಿ ಇವನಂಥವನನ್ನು ಕಾಡುವುದೂ ಇಲ್ಲ.

ಇಷ್ಟ ವ್ಯಕ್ತವಾಗುತ್ತಿದ್ದಂತೆಯೇ ಅದರ ಹಿಂದಿನ ಒತ್ತಾಯಗಳೇನು ಎಂಬುದರ ಕುರಿತ ನೂರೆಂಟು ಕುತೂಹಲಗಳು ಎದ್ದುಕೊಳ್ಳುತ್ತವೆ. ಇಷ್ಟವಾದುದಕ್ಕೂ ನಮಗೂ ಇರುವ ಭೌತಿಕ ಸಂಬಂಧದ ಕುರಿತ ಕಲ್ಪನೆಗಳು ಮೂಡಿಕೊಳ್ಳುತ್ತ, ಹೃದಯದ ಜೊತೆಗಿನ ಅದರ ಕರುಳಬಳ್ಳಿಯನ್ನು ಕತ್ತರಿಸಲು ನಿಲ್ಲುತ್ತವೆ. ಬಹುಮುಖ್ಯವಾದುದೊಂದನ್ನು ನಾವು ಕಳೆದುಕೊಂಡುಬಿಡುತ್ತೇವೆ ನಮ್ಮೊಳಗೇ. ಇಲ್ಲವೇ ದೊಡ್ಡ ವ್ಯಕ್ತಿಯ ಮುಂದೆ ನಿಂತು ಆತನ ಚಿನ್ನದ ಸರವನ್ನು ಹೊಗಳಿದವನಂತೆ, ವ್ಯಾವಹಾರಿಕ ಮನಃಸ್ಥಿತಿಗೆ ಒಗ್ಗಿಕೊಂಡು ಹೊರಗಿನ ಯಾವುದಕ್ಕೋ ಅಪೇಕ್ಷಿಸುತ್ತೇವೆ. ನಮ್ಮನ್ನು ನಾವೇ ಹರಕೆಯ ಕುರಿಗಳಾಗುವಂತೆ ಮಾಡುತ್ತಿರುವ ಧೂರ್ತ ಶಕ್ತಿಯ ಬಗ್ಗೆ ಯೋಚಿಸಲಿಕ್ಕೂ ಆಗದ ಭ್ರಾಮಕತೆಯೊಂದು ನಮ್ಮನ್ನು ಕವಿದಿರುತ್ತದೆ.

ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಸನ್ನಿವೇಶವಿರುವಂತೆಯೇ, ಮೌನವನ್ನೇ ರಾಜಕೀಯವಾಗಿ ಗೆಲ್ಲುವ ಅಸ್ತ್ರವಾಗಿಸಿಕೊಳ್ಳುವ ಹುನ್ನಾರಗಳೂ ಮತ್ತೊಂದೆಡೆಗಿವೆ. ಇಷ್ಟೆಲ್ಲ ಬಿಕ್ಕಟ್ಟುಗಳ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ. ಹಾಗಾಗಿ, ಇಷ್ಟದ ಕಥೆಗಳನ್ನು ಸೂಚಿಸಲು ಹೇಳಿದ ಮಿತ್ರರಿಗೆ ಉತ್ತರಿಸದೆ ಸುಮ್ಮನಾದ ನನ್ನ ನಿಲುವಿಗೆ ನನ್ನಲ್ಲೂ ಸಮರ್ಥನೆಯಿಲ್ಲ. ಇದು ಇನ್ನೂ ದೊಡ್ಡ ಬಿಕ್ಕಟ್ಟು.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 1 week ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 1 week ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  3 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...