Share

ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ
ಸಂಪಾದಕ

ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.

 

ದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ಸರ್ತಿ ನಡೆಯುತ್ತದೆ. ಮತ್ತು ಇದೆಲ್ಲದರ ಹಿಂದೆ ಒಂದು ವ್ಯವಸ್ಥಿತ ಹಿತಾಸಕ್ತಿಯು ಇರುತ್ತದೆ. ಮೋದಿ ಹೇಳುವ ಸುಳ್ಳುಗಳೆಲ್ಲವೂ ಸತ್ಯವೆಂಬಂತೆ ಪ್ರಚಾರ ಪಡೆಯುತ್ತ ಅದೇ ನೆಲೆಯೂರುವುದು, ರಾಹುಲ್ ಎಷ್ಟೇ ಸತ್ಯ ಹೇಳಿದರೂ ಎಳಸು ಎಳಸಾಗಿ ಕಾಣಿಸುವುದು ಇಂಥ ಹಿಕಮತ್ತುಗಳ ಪರಿಣಾಮವೇ. ಹೇಳಿಕೆಗಳಿಗೆ ಕಮರ್ಷಿಯಲ್ ಆದ ಮುಖವನ್ನು ಕೊಡುವುದು ಹೆಚ್ಚು ಆಕರ್ಷಕವಾಗುತ್ತಿರುವ ಹೊತ್ತಿನಲ್ಲಿ ನ್ಯೂಸ್ ಚಾನೆಲ್ಲುಗಳು ತಾ ಮುಂದು ತಾ ಮುಂದು ಎಂದು ಇಂಥ ಗದ್ದಲವೆಬ್ಬಿಸುವುದು ಹೊಸದಲ್ಲ. ಇನ್ನೊಂದೆಡೆ ರಾಜಕೀಯ ಪಕ್ಷಗಳಿಗೂ ಇದು ಅಗತ್ಯವಾಗಿ ಕಾಣಿಸುತ್ತ, ಸಾಮಾಜಿಕ ಜಾಲತಾಣಗಳು ಇಂಥವುಗಳಿಗೆ ವೇದಿಕೆಯಾಗುವುದನ್ನೂ ನೋಡುತ್ತೇವೆ. ವೈರಲ್ ಆಗುವ, ಆಗಿಸುವ ಈ ಆತುರಕ್ಕೂ ಹಿಂಜರಿಕೆ, ಲಜ್ಜೆ ಇರುವುದಿಲ್ಲ. ಇಷ್ಟು ವರ್ಷ ಎಲ್ಲಿ ಮಲಗಿದ್ದೆ ಎಂದು ಕುಮಾರಸ್ವಾಮಿ ಮಹಿಳೆಯೊಬ್ಬರಿಗೆ ಕೇಳಿದರೆಂಬುದಾಗಲೀ ಯಡಿಯೂರಪ್ಪ ಆಡಿಯೋವಾಗಲೀ ಹಲವು ದಿನಗಳ ಕಾಲ ಎಳೆದಾಡಿಕೊಳ್ಳುವ ಸರಕಾಗುವುದು ಹೀಗೆ.

ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ. ಹನ್ನೆರಡು ವರ್ಷಗಳ ಹಿಂದಿನ ಏಪ್ರಿಲ್ ತಿಂಗಳಲ್ಲಿ ಕಿಡಿ ಹಚ್ಚಿದ್ದ ಅಂಥದೇ ಒಂದು ಹೇಳಿಕೆಯ ಮೆಲುಕು ಈ ಬರಹದ ಉದ್ದೇಶ.

~

ದೇಶದ ಇತಿಹಾಸದಲ್ಲೇ ಪ್ರಚಂಡ ಜಯವೆನ್ನಿಸಿದ್ದ ಫಲಿತಾಂಶವನ್ನು ದಾಖಲಿಸಿದ್ದು 1984ರ ಚುನಾವಣೆ. ಇಂದಿರಾ ಗಾಂಧಿ ಸಾವಿನ ಬಳಿಕ ಏಳೇ ವಾರಗಳ ಅಂತರದಲ್ಲಿ ನಡೆದಿದ್ದ ಆ ಚುನಾವಣೆಯಲ್ಲಿ 543 ಕ್ಷೇತ್ರಗಳಲ್ಲಿ 415 ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳುವುದರೊಂದಿಗೆ, ರಾಜೀವ್ ಗಾಂಧಿ ಪ್ರಧಾನಿ ಪಟ್ಟಕ್ಕೇರಿದ್ದರು. ಆ ಗೆಲುವಿನ ಹಿಂದೆ ಕಾಂಗ್ರೆಸ್‍ಗೆ ಆರೆಸ್ಸೆಸ್ ಬೆಂಬಲವಿತ್ತು ಎಂದು ವಾದಿಸುವುರೊಂದಿಗೆ ಪತ್ರಕರ್ತ ರಶೀದ್ ಕಿದ್ವಾಯಿ ಬರೆದಿರುವ ’24 Akbar Road: A Short History Of The People Behind The Fall And The Rise Of The Congress’ ಪುಸ್ತಕ 2011ರಲ್ಲಿ ಸುದ್ದಿಯಾಗಿತ್ತು. ಆದರೆ ವಾಸ್ತವ ಅದಲ್ಲ ಎಂಬುದನ್ನು ನಿರೂಪಿಸುವಂಥ ಸಂಗತಿಗಳೂ ಸಿಗುತ್ತವೆ, ದಶಕದ ಹಿಂದಿನ ವರದಿಗಳನ್ನು ಗಮನಿಸಿದರೆ.

ಕಿದ್ವಾಯಿ ತಮ್ಮ ಪುಸ್ತಕದಲ್ಲಿ ಇಂದಿರಾ ಹತ್ಯೆಯನ್ನು ಪ್ರಸ್ತಾಪಿಸುತ್ತ ಕೊಡುವ ವಿವರಗಳಲ್ಲಿ, ಅನಂತರದ ರಾಜಕೀಯ ಬೆಳವಣಿಗೆಗಳ ಚಿತ್ರಣವಿದೆ. ರಾಜೀವ್ ಅವರನ್ನು ರಾಜಕೀಯಕ್ಕೆ ಬರುವಂತೆ ಒಪ್ಪಿಸುವ ಕೆಲಸ ಆಗ ಸರ್ಕಾರದ ಪ್ರಿನ್ಸಿಪಲ್ ಸೆಕ್ರೆಟರಿಯಾಗಿದ್ದ ಪಿ ಸಿ ಅಲೆಕ್ಷಾಂಡರ್ ಮತ್ತಿತರ ನಿಷ್ಠರಿಂದ ಆಗುತ್ತದೆ. ರಾಜೀವ್ ರಾಜಕೀಯಕ್ಕೆ ಬರುವುದು ಕೊಂಚವೂ ಇಷ್ಟವಿರದ ಸೋನಿಯಾ ಅವರ ಅಸಮ್ಮತಿಯ ನಡುವೆಯೂ ರಾಜೀವ್ ರಾಜಕೀಯಕ್ಕಿಳಿಯುವ ನಿರ್ಧಾರಕ್ಕೆ ಬರುತ್ತಾರೆ.

1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಹತ್ಯೆಯಾದರೆ, ಚುನಾವಣೆ ನಡೆದದ್ದು ಅದೇ ಡಿಸೆಂಬರ್ 24 ಮತ್ತು 27ರಂದು. ಇದ್ದ ಅತ್ಯಲ್ಪ ಸಮಯದಲ್ಲೇ ರಾಜೀವ್ ಬಿರುಸಿನ ಪ್ರಚಾರ ಕೈಗೊಳ್ಳುತ್ತಾರೆ. 25 ದಿನಗಳಲ್ಲಿ 50 ಸಾವಿರ ಕಿಲೋ ಮೀಟರುಗಳಿಗೂ ಅಧಿಕ ದೂರವನ್ನು ಕ್ರಮಿಸಿ ಮತ ಯಾಚಿಸುತ್ತಾರೆ. ಇಂದಿರಾ ಸಾವಿನ ಅನುಕಂಪದ ಅಲೆ ರಾಜೀವ್ ಬೆನ್ನಿಗಿರುತ್ತದೆ. ಬೆಕ್ಕಸ ಬೆರಗಾಗುವಂಥ ಗೆಲುವು ಕಾಂಗ್ರೆಸ್‍ಗೆ ದಕ್ಕುತ್ತದೆ. ಅದು ಇಂದಿರಾ ಅವಧಿಯಲ್ಲಾಗಲೀ ನೆಹರೂ ಅವಧಿಯಲ್ಲಾಗಲೀ ಕಾಂಗ್ರೆಸ್‍ಗೆ ಸಾಧ್ಯವಾಗಿರದ ಗೆಲುವಾಗಿರುತ್ತದೆ.

ಕಿದ್ವಾಯಿ ಎತ್ತುವ ವಿಚಾರ, ಆ ಅತ್ಯಲ್ಪ ಅವಧಿಯಲ್ಲಿ ಚುನಾವಣೆಗೆ ಸಿದ್ಧಗೊಳ್ಳುತ್ತಿದ್ದ ಹಂತದಲ್ಲೇ ಆದದ್ದೆನ್ನಲಾಗುವ ಒಂದು ಬೆಳವಣಿಗೆಯ ಕುರಿತದ್ದು. ಕಾಂಗ್ರೆಸ್‍ಗೆ ಅಂಟಿದ್ದ ಹಿಂದುತ್ವ ಧೋರಣೆಯಿಂದ ದೂರವೆಂಬ ಹಣೆಪಟ್ಟಿಯನ್ನು ತೆಗೆಯಬೇಕು ಮತ್ತು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಹಿಂದುತ್ವ ಪರ ನೆಲೆಯಲ್ಲಿ ಲಾಭ ಪಡೆಯಬೇಕು ಎಂದು ಯೋಚಿಸುವ ರಾಜೀವ್, ಆರೆಸ್ಸೆಸ್ ಬೆಂಬಲ ಕೇಳುವುದಕ್ಕೆ ಮುಂದಾಗುತ್ತಾರೆ ಎಂಬುದು ಆ ವಿಚಾರ. ಆಗ ಆರೆಸ್ಸೆಸ್ ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್ ದೇವರಸ್ ಅವರೊಂದಿಗೆ ರಾಜೀವ್ ಮಾತುಕತೆ ನಡೆಸಿದರು ಮಾತ್ರವಲ್ಲ, ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಲು ಆರೆಸ್ಸೆಸ್ ಕೂಡ ಸಮ್ಮತಿಸಿತು ಎಂಬ ವದಂತಿಗಳು ಹರಡಿದ್ದರ ಬಗ್ಗೆ ಬರೆಯುವ ಕಿದ್ವಾಯಿ, ಅಂಥ ವದಂತಿಗಳನ್ನು ಬಿಜೆಪಿ ನಿರಾಕರಿಸಿತ್ತು ಎಂತಲೂ ಹೇಳುತ್ತಾರೆ.

ಇಲ್ಲಿ ಬರುವ ಎರಡು ಪ್ರಸ್ತಾಪಗಳು ಗಮನೀಯ. ಒಂದು, 1970ರ ಉಪಚುನಾವಣೆಯೊಂದರ ಉಲ್ಲೇಖ. ಮುಂಬೈ ಉಪವಲಯದ ಕಮ್ಯುನಿಸ್ಟ್ ಪಕ್ಷದ ಶಾಸಕರಾಗಿದ್ದ ಕೃಷ್ಣ ದೇಸಾಯಿ ಕೊಲೆ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಮೃತ ದೇಸಾಯಿ ಪತ್ನಿ ಸರೋಜಿನಿಯವರನ್ನೇ ಕಮ್ಯುನಿಸ್ಟ್ ಪಕ್ಷ ಕಣಕ್ಕಿಳಿಸುತ್ತದೆ. ಕಾಂಗ್ರೆಸ್ ಸೇರಿದಂತೆ 9 ಪಕ್ಷಗಳು ಅವರನ್ನು ಬೆಂಬಲಿಸುತ್ತವೆ. ಆದರೆ ಆರೆಸ್ಸೆಸ್ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಶಿವಸೇನೆ ಆ ಸ್ಥಾನ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಆರೆಸ್ಸೆಸ್ ನಾಯಕ ಮೊರೊಪಂಥ್ ಪಿಂಗಳೆ, ಶಿವಸೇನೆ ಪರವಾಗಿ ಮತ ಯಾಚಿಸಿರುತ್ತಾರೆ. ಈ ಸಂಗತಿ ಆರೆಸ್ಸೆಸ್ ಬೆಂಬಲದ ಅಗತ್ಯವನ್ನು ರಾಜೀವ್ ಭಾವಿಸಿದ್ದಕ್ಕೆ ಪ್ರೇರಣೆ ಎಂಬಂತಿದೆ.

ಕಿದ್ವಾಯಿ ಪುಸ್ತಕದಲ್ಲಿನ ಮತ್ತೊಂದು ಪ್ರಸ್ತಾಪ, ರಾಜೀವ್ ಮತ್ತು ಆರೆಸ್ಸೆಸ್ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್ ಮಧ್ಯದ ಮಾತುಕತೆಗೆ ಸೇತುವೆಯಾಗಿದ್ದರ ಬಗ್ಗೆ ಕಾಂಗ್ರೆಸ್ ಮಾಜಿ ನಾಯಕ ಮತ್ತು ಸಂಸದರಾಗಿದ್ದ ಬನ್ವಾರಿಲಾಲ್ ಪುರೋಹಿತ್ 2007ರಲ್ಲಿ ನೀಡಿದ್ದ ಹೇಳಿಕೆ. ವಿವಾದಿತ ಸ್ಥಳದಲ್ಲಿ ರಾಮಂದಿರ ಶಿಲಾನ್ಯಾಸ ಸಮಾರಂಭ ವಿಚಾರವಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಆರೆಸ್ಸೆಸ್ ಮಧ್ಯೆ ರಹಸ್ಯ ಒಪ್ಪಂದ ನಡೆದಿತ್ತು ಎಂದು ಪುರೋಹಿತ್ ನೀಡಿದ್ದ ಹೇಳಿಕೆಯನ್ನು ಕಣಜದ ಗೂಡಿಗೆ ಕಲ್ಲೆಸೆದಿರುವಂಥ ಬೆಳವಣಿಗೆ ಎಂದೇ ಪತ್ರಿಕೆಗಳು ಬಣ್ಣಿಸಿದ್ದಿತ್ತು. ಗಾಂಧಿ ಮನೆತನದವರೊಬ್ಬರು ಆಳ್ವಿಕೆ ನಡೆಸುತ್ತಿದ್ದುದೇ ಆಗಿದ್ದಲ್ಲಿ ಬಾಬ್ರಿ ಮಸೀದಿ ಧ್ವಂಸ ಆಗುತ್ತಿರಲಿಲ್ಲ ಎಂದು ರಾಹುಲ್ ಗಾಂಧಿ 1993ರಲ್ಲಿ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಪುರೋಹಿತ್ ಅಂಥದೊಂದು ಹೇಳಿಕೆ ಕೊಟ್ಟುಬಿಟ್ಟಿದ್ದರು. ದೇಶದ ಹಿತಾಸಕ್ತಿಯ ಕಾರಣದಿಂದ ಬಯಲು ಮಾಡದೇ ಇರುವ ಅನೇಕ ವಿಚಾರಗಳು ರಾಹುಲ್ ಅವರಿಗೆ ಗೊತ್ತಿಲ್ಲ ಎಂದೂ ಹೇಳಿದ್ದರು.

ರಾಮಮಂದಿರ ಶಿಲಾನ್ಯಾಸ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಆರೆಸ್ಸೆಸ್ ನಡುವೆ ನಡೆದ ಮಾತುಕತೆಗೆ ತಾವೇ ಮಧ್ಯವರ್ತಿಯಾಗಿದ್ದುದನ್ನು ಪುರೋಹಿತ್ ಬಹಿರಂಗಪಡಿಸಿದ್ದರು. ಪುರೋಹಿತ್ ಅವತ್ತು ನೀಡಿದ್ದ ಹೇಳಿಕೆ ಪ್ರಕಾರ, ಅವರನ್ನು ಕರೆಯಿಸಿಕೊಂಡಿದ್ದ ರಾಜೀವ್ ಗಾಂಧಿಯವರು, ನಾಗ್‍ಪುರಕ್ಕೆ ಸೇರಿದವರಾಗಿದ್ದರಿಂದ ಅವರಿಗೆ ಆರೆಸ್ಸೆಸ್ ಮುಖ್ಯಸ್ಥ ಬಾಳಾಸಾಹೇಬ್ ದೇವರಸ್ ಗೊತ್ತಿರಬಹುದಲ್ಲವೇ ಎಂದು ಕೇಳಿದ್ದರು. ತುಂಬ ಚೆನ್ನಾಗಿ ಗೊತ್ತು ಎಂದಿದ್ದಕ್ಕೆ ರಾಮಜನ್ಮಭೂಮಿ ಶಿಲಾನ್ಯಾಸಕ್ಕೆ ಅನುಮತಿ ಕೊಟ್ಟರೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಆರೆಸ್ಸೆಸ್ ಬೆಂಬಲ ನೀಡೀತೇ ಎಂದು ತಿಳಿದುಕೊಳ್ಳಲಿಚ್ಛಿಸಿದ್ದರು. ಇದಾದ ಬಳಿಕ ಆರೆಸ್ಸೆಸ್ ನಾಯಕರೊಂದಿಗೆ ಚರ್ಚಿಸಿದ್ದ ಪುರೋಹಿತ್, ಅಂತಿಮವಾಗಿ ರಾಜೀವ್ ಮತ್ತು ಬಾಳಾಸಾಹೇಬ್ ದೇವರಸ್ ನಡುವೆ ರಹಸ್ಯ ಮಾತುಕತೆ ನಿಗದಿಗೊಳಿಸಿದ್ದರು. ಕಾಂಗ್ರೆಸ್ ಪ್ರಸ್ತಾಪಕ್ಕೆ ಆರೆಸ್ಸೆಸ್ ಒಪ್ಪಿಯೂಬಿಟ್ಟಿತ್ತು.

ತಮ್ಮ ಪುಸ್ತಕದಲ್ಲಿ ಕಿದ್ವಾಯಿ ಉಲ್ಲೇಖಿಸುವ ಪುರೋಹಿತ್ ಅವರ 2007ರ ಹೇಳಿಕೆಯಲ್ಲೇ ಮತ್ತೂ ಒಂದು ವಿಚಾರವಿದೆ. ಅದರ ಪ್ರಕಾರ, ರಹಸ್ಯ ಒಪ್ಪಂದದ ಬಳಿಕ ವಿವಾದಿತ ಜಾಗದಲ್ಲಿ ಶಿಲಾನ್ಯಾಸ ನೆರವೇರುತ್ತಿದ್ದಂತೆ ಮತ್ತೊಂದು ಮಹತ್ವದ ಬೆಳವಣಿಗೆ ಆಯಿತು. ರಾಜೀವ್ ಗಾಂಧಿಯನ್ನು ತಕ್ಷಣವೇ ಭೇಟಿಯಾದ ಮುಸ್ಲಿಂ ನಾಯಕರ ಗುಂಪು, ಈ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಮುಸ್ಲಿಂ ಮತದಾರರು ಕಾಂಗ್ರಸ್‍ಗೆ ವಿಮುಖರಾಗುವಂತೆ ಮಾಡುವ ಬೆದರಿಕೆಯನ್ನೂ ಒಡ್ಡಿದರು. ಇದರ ಪರಿಣಾಮವಾಗಿ ಇಡೀ ಸಂದರ್ಭವೇ ಬದಲಾಯಿತು. ವಿವಾದಿತ ಸ್ಥಳದಲ್ಲಿನ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ರಾಜೀವ್ ಆದೇಶಿಸಿದರು. ರಾಜೀವ್ ತಾವು ನೀಡಿದ್ದ ಭರವಸೆ ಉಳಿಸಿಕೊಳ್ಳದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಆರೆಸ್ಸೆಸ್ ಬೆಂಬಲಿಸಲಿಲ್ಲ ಎಂಬುದನ್ನೂ ಅದೇ ಪುರೋಹಿತ್ ಹೇಳಿದ್ದರೆಂಬುದು ಆಗಿನ ವರದಿಗಳಲ್ಲಿದೆ.

ಬನ್ವಾರಿಲಾಲ್ ಪುರೋಹಿತ್ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾಗಿದ್ದವರು. ರಾಮಮಂದಿರ ನಿರ್ಮಾಣದ ಪರವಾಗಿದ್ದ ಅವರು ಅದೇ ಕಾರಣಕ್ಕಾಗಿಯೇ ಕಾಂಗ್ರೆಸ್ ತ್ಯಜಿಸಿ 1991ರಲ್ಲಿ ಬಿಜೆಪಿ ಸೇರಿದರು. 1996ರಲ್ಲಿ ಬಿಜೆಪಿ ಸಂಸದರಾಗಿದ್ದ ಅವರು, ಪ್ರಮೋದ್ ಮಹಾಜನ್ ಜೊತೆಗಿನ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ 1998ರಲ್ಲಿ ಬಿಜೆಪಿಯನ್ನೂ ಬಿಟ್ಟರು. ಅವರು 2007ರ ಏಪ್ರಿಲ್‍ನಲ್ಲಿ ಅಂದರೆ ಹನ್ನೆರಡು ವರ್ಷಗಳ ಹಿಂದೆ ಪುರೋಹಿತ್ ನೀಡಿದ್ದ ಹೇಳಿಕೆಯು ಕಿದ್ವಾಯಿ ಪುಸ್ತಕದ ಕಾರಣದಿಂದಾಗಿ ಸುದ್ದಿಯಾಗುವಾಗ, ಆರೆಸ್ಸೆಸ್ ಜೊತೆಗಿನ ರಾಜೀವ್ ಮಾತುಕತೆ ವಿಚಾರವಷ್ಟೇ ಮುನ್ನೆಲೆಗೆ ಬಂದು ಪ್ರಚಾರಗೊಳ್ಳುತ್ತದೆ. ಕಾಂಗ್ರೆಸ್ ಬೆಂಬಲಕ್ಕೆ ಆರೆಸ್ಸೆಸ್ ಇದ್ದಿರಲಿಲ್ಲ ಎಂಬ ಸತ್ಯ ಗೌಣವಾಗುಳಿಯುತ್ತದೆ.

ಅರ್ಧಸತ್ಯವನ್ನಷ್ಟೇ ಕಾಣಿಸುವ ಮೂಲಕ ಗಮನ ಸೆಳೆಯುವ ಅನಪೇಕ್ಷಿತ ನಡವಳಿಕೆಯೊಂದು ಹೀಗೆ ಮಾಧ್ಯಮದ ಭಾಗವಾಗಿ ಬಹಳ ಕಾಲವೇ ಆಗಿಬಿಟ್ಟಿದೆ. ಸತ್ಯವು ಗ್ರಹಿಕೆಗೆ ಬಂದಿದ್ದರೂ ಅನೈತಿಕವಾದುದರ ಕಡೆಗಿನ ದುಷ್ಟ ಕುತೂಹಲವನ್ನು ಮಾರುಕಟ್ಟೆ ಮಾಡಿಕೊಳ್ಳುವ ಅವಸರದಲ್ಲಿ ಇಂದು ಮಾಧ್ಯಮಗಳು ಇನ್ನಷ್ಟು ಕುಲಗೆಡುತ್ತಿರುವುದನ್ನು ಎಲ್ಲರೂ ನೋಡುತ್ತಿದ್ದೇವೆ.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...