Share

ಪ್ರತಿಮೆ ವಿರೂಪ: ಹತಾಶ ಆಕ್ರಮಣದ ಕೀಳು ಸ್ವರೂಪ
ಸಂಪಾದಕ

ಅಂಬೇಡ್ಕರ್ ಅವರ ಹೆಸರಿನ ಮಧ್ಯೆ ‘ರಾಮ್‌ಜೀ’ ಎಂದು ಸೇರಿಸಲು ಆದಿತ್ಯನಾಥ ಸರ್ಕಾರ ಆದೇಶ ನೀಡಿದ ಬೆನ್ನಲ್ಲೇ ಅಲಹಾಬಾದಿನಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ನಡೆದಿದೆ. ಇಲ್ಲಿನ ತ್ರಿವೇಣಿಪುರಂನಲ್ಲಿನ ಅಂಬೇಡ್ಕರ್ ಉದ್ಯಾನದಲ್ಲಿದ್ದ ಪ್ರತಿಮೆಯನ್ನು ಕಿಡಿಗೇಡಿಗಳು ದ್ವಂಸಗೊಳಿಸಿದ್ದಾರೆ. ಇದೊಂದೇ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಇಂಥ ಮೂರನೇ ಪ್ರಕರಣ ಇದಾಗಿದೆ. ಅಝಮ್‍ಘಡ್ ಮತ್ತು ಮೀರತ್‍ನಲ್ಲಿಯೂ ವಿಗ್ರಹ ವಿರೂಪ ಪ್ರಕರಣಗಳು ನಡೆದಿದ್ದವು.

ತ್ರಿಪುರಾದಲ್ಲಿ ಎಡರಂಗ ಸರ್ಕಾರವನ್ನು ಸೋಲಿಸಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಲಾಯಿತು. ಮೊನ್ನೆ ಫೆಬ್ರವರಿಯಲ್ಲಿ ಇಂಥದೊಂದು ತಲೆತಗ್ಗಿಸುವ ಘಟನೆ ನಡೆಯುತ್ತಿದ್ದಂತೆಯೇ ವಿಕೃತ ಸುಖಿಗಳಿಗೆ ಅದೆಂಥದೋ ಹುಕಿ ಬಂದಂತಿದೆ. ಲೆನಿನ್ ಪ್ರತಿಮೆ ಧ್ವಂಸದ ಬಳಿಕ ತಮಿಳ್ನಾಡಿನಲ್ಲಿ ಪೆರಿಯಾರ್ ಪ್ರತಿಮೆ ವಿರೂಪ ಪ್ರಕರಣ ನಡೆಯಿತು. ನಡುವೆಯೇ ಉತ್ತರ ಪ್ರದೇಶದಲ್ಲಿ ಒಂದರ ಬೆನ್ನಿಗೊಂದರಂತೆ ನಡೆದಿರುವ ಈ ಮೂರು ಪ್ರಕರಣಗಳು.

ವಿರೂಪಗೊಳಿಸುವಿಕೆ ಎಂಬುದು ಒಂದು ವಿಕೃತಿ. ಇದು ಅಸ್ವಸ್ಥ ಮನಃಸ್ಥಿತಿಯ ಕೆಲಸ. ಸಮಾಜದ ನೆಮ್ಮದಿಯನ್ನು ಭಂಗಗೊಳಿಸುವ ಮೂಲಕ ವಿಲಕ್ಷಣ ಸಂಭ್ರಮವನ್ನು ಕಾಣುವ ಈ ಬಗೆ ಶತಮಾನಗಳಿಂದಲೂ ನಡೆದುಬಂದದ್ದೇ ಆಗಿದೆ. ಅಸಹಿಷ್ಣತೆಯನ್ನು ವ್ಯಕ್ತಗೊಳಿಸುವ ಅತ್ಯಂತ ಕೀಳು ಸ್ವರೂಪದ ಭಾಗವಾಗಿ ಪ್ರತಿಮೆ ವಿರೂಪದಂಥ ಕೃತ್ಯಗಳು ನಡೆಯುತ್ತವೆ. ಪ್ರಾಸಂಗಿಕವಾಗಿ ಹೇಳಬೇಕೆಂದರೆ, ಈಜಿಪ್ತಿನ ಪ್ರತಿಮೆಗಳಲ್ಲಿ ಕಾಣುವ ಮೂಗಿಲ್ಲದ ವಿರೂಪಕ್ಕೆ ಕಾರಣ, ಪ್ರಾಚೀನ ಈಜಿಪ್ತಿನದ್ದು ಆಫ್ರಿಕನ್ ಸಂಸ್ಕೃತಿಯಾಗಿತ್ತೆಂಬ ಸತ್ಯವನ್ನು ಮರೆಮಾಚುವುದೇ ಆಗಿದೆ ಎನ್ನುತ್ತಾರೆ ವಿದ್ವಾಂಸರು. ಈಜಿಪ್ತಿನ ಎಲ್ಲ ಪ್ರಸಿದ್ಧ ಸ್ಮಾರಕಗಳ ಮುಖ ಚಹರೆಯಲ್ಲಿ ಅವುಗಳ ಆಫ್ರಿಕನ್ ಮೂಲವೇ ಕಾಣಿಸುತ್ತಿದ್ದುದನ್ನು ಪ್ರಾಕ್ತನಶಾಸ್ತ್ರಜ್ಞರು ಗುರುತಿಸುತ್ತಾರೆ.

ನಮ್ಮ ಸಂದರ್ಭಕ್ಕೆ ಸಂಬಂಧಿಸಿದಂತೆ, ಇಂಥ ವಿಕೃತಿಗಳು ಈ ಸಮಾಜವನ್ನು ನೋಯಿಸುತ್ತಲೇ ಇರುವ ಕೆಲವು ಆರದ ಗಾಯಗಳ ಮೇಲೆ ಮತ್ತೆ ಉಪ್ಪು ಚೆಲ್ಲುತ್ತ ತಮಾಷೆ ನೋಡುವ ರೀತಿಯವಾಗಿವೆ. ಒಂದೆಡೆಯಿಂದ ಇವು ವೈಚಾರಿಕತೆಯ ಮೇಲಿನ ದಾಳಿ ಎಂದು ಕಂಡರೂ, ತೀರಾ ಆಳದಲ್ಲಿ ಈ ನೆಲದ ಅಬಲ ವರ್ಗವನ್ನು ಕೆಣಕುವ ಕುಟಿಲಗಳೇ ಆಗಿವೆ. ಒಂದು ಸ್ಫೂರ್ತಿಯನ್ನೇ ಕೆಡವಿಹಾಕಿಬಿಡುತ್ತೇನೆಂಬಂತೆ ಹೊರಡುವ ಇಂಥ ಹುಂಬತನ ತನ್ನಷ್ಟಕ್ಕೆ ತಾನು ಹೇಡಿಯೂ ಆಗಿರುವುದನ್ನು, ನೋವುಣ್ಣುತ್ತಿರುವ ಈ ಸಮಾಜದ ಭಾಗ ಅತ್ಯಂತ ಸಂಯಮದಿಂದ ಗಮನಿಸಬೇಕು. ಸ್ಫೂರ್ತಿಯನ್ನು ಒಳಗಿನಿಂದಲೇ ಪ್ರತಿಮೆಯಾಗಿಸುವುದು ಆಗ ಸಾಧ್ಯ. ಮತ್ತು ಅದು ಇಂಥ ಹತಾಶ ಆಕ್ರಮಣಗಳ ವಿರುದ್ಧದ ಸಾತ್ವಿಕ ಪ್ರತಿಕ್ರಮ.

Share

Leave a comment

Your email address will not be published. Required fields are marked *

Recent Posts More

  • 1 day ago No comment

    ವಿಶಿಷ್ಟ ಚೈತನ್ಯದ ಕಾದಂಬಿನಿ ಕಾವ್ಯ

    ಕಾದಂಬಿನಿ ಅವರ ಎರಡನೇ ಕವನ ಸಂಕಲನ ‘ಕಲ್ಲೆದೆಯ ಮೆಲೆ ಕೂತ ಹಕ್ಕಿ’. 100 ಕವಿತೆಗಳ ಈ ಸಂಕಲನ ಕಾದಂಬಿನಿ ಅವರ ಕಾವ್ಯಕ್ಕೇ ವಿಶಿಷ್ಟವಾದ ಗುಣಗಳನ್ನು ಕಾಣಿಸುತ್ತದೆ. ಈ ಸಂಕಲನಕ್ಕೆ ಕವಿ, ವಿಮರ್ಶಕ, ರಂಗಕರ್ಮಿ ವಸಂತ ಬನ್ನಾಡಿ ಮುನ್ನುಡಿ ಬರೆದಿದ್ದಾರೆ. ಕಾದಂಬಿನಿ ಕವಿತೆಗಳ ವಿಶಿಷ್ಟತೆಯನ್ನು ಅವರಿಲ್ಲಿ ಕಾಣಿಸಿದ್ದಾರೆ. * ನನಗೆ ಕಾದಂಬಿನಿಯ ಕಾವ್ಯಲೋಕದ ಪರಿಚಯವಾದುದು ಮೂರು ವರ್ಷಗಳ ಹಿಂದೆ. ಆಕೆಯ ‘ಕತೆ ಹೇಳುವ ಆಟ’ ಓದಿದಾಗ. ಈ ಕವನ ಆಕೆಯ ‘ಹಲಗೆ ...

  • 1 week ago No comment

    ಕಾದಂಬಿನಿ ಕವಿತೆಗಳ ಇನ್ನೊಂದು ಕಟ್ಟು: ಫಸ್ಟ್ ಲುಕ್

    ಹೊಸ ಪುಸ್ತಕ       ಕಾದಂಬಿನಿ ಅವರ ಎರಡನೇ ಕಾವ್ಯ ಸಂಕಲನ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಪ್ರಕಟಗೊಂಡಿದೆ. 100 ಕವಿತೆಗಳಿವೆ ಈ ಸಂಕಲನದಲ್ಲಿ. ಸಂಕಲನಕ್ಕೆ ವಿಮರ್ಶಕ, ರಂಗಕರ್ಮಿ ವಸಂತ ಬನ್ನಾಡಿ ಅವರ ಮುನ್ನುಡಿ, ಕವಿ ಹೆಚ್ ಎಸ್ ಶಿವಪ್ರಕಾಶ್ ಅವರ ಬೆನ್ನುಡಿ ಇದೆ. “ಜನಸಾಮಾನ್ಯರ ಸಂಕಟಗಳಿಗೆ ಮಾತು ಕೊಡಬೇಕು ಎಂಬುದು ಕಾದಂಬಿನಿ ಕಾವ್ಯದ ಕೇಂದ್ರಪ್ರಜ್ಞೆ. ಸಾಮಾಜಿಕ ಹಾಗೂ ರಾಜಕೀಯ ವಿಷಯಗಳನ್ನು ಮುಟ್ಟಿದರೆ ಮನಸ್ಸು ಕೊಳಕಾಗುವುದೆಂಬ ಮನೋಭಾವ ...

  • 2 weeks ago One Comment

    ಕಾಲದ ಬೆವರಿನ ಬಡಿತಗಳು

    ಕವಿಸಾಲು   ಹುಲ್ಲಿನೆಳೆಗಳಲಿ ಬಿದಿರ ಕೊಂಬಿಗೆ ಆತುಗೊಂಡ ಜೋಪಡಿಯೊಳಗ ಚುಕ್ಕಿಗಳ ದಿಂಬಾಗಿಸಿದ ಹೊಂಗೆಯ ನೆರಳಿನ ಗುರುತುಗಳು ಸಗಣಿಯಿಂದ ಸಾರಿಸಿದ ಪಡಸಾಲಿ ಮದುವಣಗಿತ್ತಿಯಂತೆ ವಳ್ಳು ಬೀಸುಕಲ್ಲುಗಳ ಹೊಕ್ಕಳಲಿ ದಕ್ಕಿಸಿಕೊಂಡ ಅವಳು ನಡುಮನೆಯ ಮೈದಾನದಾಗ ನಡುಗಂಬದ ನೆಲೆ ಬಿರುಕ ಕಿಂಡಿಗಳಲಿ ಮುರಿದ ಟೊಂಗೆಗಳೆಲ್ಲಾ ಬೆಸೆದು ಗುಡಿಸಲ ಕಣ್ಣಾಗಿ ಚಂದಿರನ ಜೋಗುಳ ಕಟ್ಯಾವು ಗಾಯದ ಬೆನ್ನು ನಿದ್ರಿಸಲು ಮಳೆಯ ರಭಸದಲಿ ಕೆರೆಯಂತಾಗುವ ಜೋಪಡಿಯೊಳಗ ಎಳೆಯ ರೆಕ್ಕೆಗಳನು ಪಕ್ಕೆಲುಬಲಿ ಅವಿತುಕೊಂಡು ಬೆಚ್ಚನೆಯ ಭರವಸೆ ತುಂಬ್ಯಾಳೊ ...

  • 2 weeks ago No comment

    ಕಾಲ ಮತ್ತು ನಾನು

          ಕವಿಸಾಲು       ಅಂತರಂಗದ ಅನಿಸಿಕೆಗಳ ಅದ್ಭುತ ರಮ್ಯ ಕನಸುಗಳ ಜತನವಾಗಿಟ್ಟುಕೊಂಡ ರಹಸ್ಯಗಳ ದುಂಡಗೆ ಬರೆದು ದಾಖಲಿಸಿ ಸಾವಿರ ಮಡಿಕೆಗಳಲಿ ಒಪ್ಪವಾಗಿ ಮಡಚಿ ಮೃದು ತುಟಿಗಳಲಿ ಮುತ್ತಿಟ್ಟು ಬೆವರ ಕೈಗಳಲಿ ಬಚ್ಚಿಟ್ಟು ಯಾರೂ ಕಾಣದಾಗ ಕದ್ದು ಹಿತ್ತಲಿನ ತೋಟಕ್ಕೆ ಒಯ್ದು ನನ್ನ ನಾಲ್ಕರಷ್ಟೆತ್ತರದ ಮರ ದಟ್ಟಕ್ಕೆ ಹರಡಿದ ಎಲೆಗಳ ನಡುವೆ ಟೊಂಗೆಗಳ ಸೀಳಿನಲಿ ಮುಚ್ಚಿಟ್ಟೆ ಅಲ್ಲಿಂದ ಮುಂದೆ ಮರ ಮರವಾಗಿ ಉಳಿಯಲಿಲ್ಲ ರಹಸ್ಯಗಳನ್ನೆಲ್ಲ ...

  • 2 weeks ago No comment

    ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

    ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...


Editor's Wall

  • 12 March 2019
    2 weeks ago No comment

    ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

    ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...

  • 08 December 2018
    4 months ago No comment

    170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

    ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

  • 30 November 2018
    4 months ago No comment

    ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ

    ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...

  • 29 November 2018
    4 months ago No comment

    ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?

      ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.     ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ...

  • 09 November 2018
    5 months ago No comment

    ಹೊಸ ಕಾಲದ ಹರಕೆಯ ಕುರಿಗಳು!

      ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...