Share

ಕಾದಂಬಿನಿ ಕಾಲಂ | ಎಲ್ಲ ಕಳೆದುಕೊಂಡ ಮೇಲೂ…

 

 

 

 

 

 

 

 

 

‘ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗ್ಯಾಕೋ’ ಎಂಬ ಸಂತ ಶಿಶುನಾಳ ಶರೀಫಜ್ಜನ ಮಾತಿನಂತೆ ಈ ಮಾವನ ಮನೆಯ ಹಂಗನ್ನು ಇಷ್ಟಿಷ್ಟೇ ಕಳಚಿಕೊಳ್ಳುತ್ತಾ ಸಾಗುವುದನ್ನು ಬದುಕು ನಮ್ಮಿಂದ ಒಂದೊಂದನ್ನೇ ಕಸಿಯುತ್ತಾ ಕಲಿಸುತ್ತಾ ಹೋಗುತ್ತದೆ.

 

ಕೆಲವು ದಿನಗಳ ಹಿಂದೆ, ನಾನು ಇನ್ನಾವುದೋ ಸಂಗತಿಯಲ್ಲಿ ಮೈಮರೆತಿದ್ದ ಹೊತ್ತಿನಲ್ಲಿ ನನ್ನ ಒಂದು ಬಂಗಾರದ ನೆಕ್ಲೆಸ್ ಮತ್ತು ಒಂದು ಹವಳದ ಉಂಗುರ ನನ್ನ ಕಪಾಟಿನಿಂದ ಕಾಣೆಯಾಗಿದ್ದು ಗಮನಕ್ಕೆ ಬಂತು. ಬಾಕಿ ಚಿನ್ನದಿಂದ ಇವಿಷ್ಟೇ ಹೇಗೆ ಕಾಣೆಯಾಗಿದೆಯೆಂದು ನನಗೆ ಇವತ್ತಿಗೂ ತಿಳಿಯುತ್ತಿಲ್ಲ. ಇದು ಯಾವಾಗ ಕಾಣೆಯಾಗಿರಬಹುದು ಎನ್ನುವ ಅಂದಾಜೂ ನನಗೆ ಇಲ್ಲ. ಯಾಕೆಂದರೆ ಒಂದು ವರ್ಷದ ಕೆಳಗೆ ಒಬ್ಬರಿಗೆ ಒಂದು ಕಾರ್ಯಕ್ರಮಕ್ಕೆ ನೆಕ್ಲೆಸ್ಸನ್ನು ಹಾಕಲು ಕೊಟ್ಟಿದ್ದೆ. ಅದಾದ ನಂತರ ನನ್ನ ಕಪಾಟು ಸೇರಿದ ನೆಕ್ಲೆಸ್, ಉಂಗುರದ ಸಮೇತ ನಾಪತ್ತೆಯಾಗಿಬಿಟ್ಟಿದೆ. ನಾನು ಚಿನ್ನವನ್ನು ಧರಿಸುವುದೇ ಅಪರೂಪವಾದ್ದರಿಂದ ಅದು ಕಾಣೆಯಾದದ್ದು ನನ್ನ ಗಮನಕ್ಕೆ ಬಂದ್ದದ್ದೇ ತೀರ ಇತ್ತೀಚೆ. ನೆನಪಾದಾಗೆಲ್ಲ ಚೂರು ಹುಡುಕುವುದು ಮತ್ತೆ ಎಲ್ಲೋ ಇದ್ದೀತು, ಧರಿಸುವುದು ಅಷ್ಟರಲ್ಲೇ ಇದೆ ಅಂದಮೇಲೆ ತುರ್ತಾಗಿ ಹುಡುಕುವ ಅಗತ್ಯವೇನಿದೆ ಎಂದುಕೊಳ್ಳುವುದು. ಅದಕ್ಕಿಂತಲೂ ಪ್ರಾಣಕ್ಕಿಂತ ಹೆಚ್ಚಾಗಿದ್ದವರನ್ನೇ ಕಳೆದುಕೊಂಡಿದ್ದೇನೆ ಇದೇನು ಮಹಾ ಎಂದುಕೊಂಡು ಸುಮ್ಮನಾಗುವುದು. ಇಷ್ಟಾದರೂ ಸತ್ತವರ ನೆನಪೂ ಆಗಾಗ ಒತ್ತರಿಸಿ ಕಾಡುವಂತೆ ಕಳೆದುಕೊಂಡ ಚಿನ್ನವೂ ಮರೆಯಲೆಳಸಿದಂತೆಲ್ಲ ಮತ್ತೆ ಮತ್ತೆ ಕಣ್ಣೆದುರು ಮೂಡಿ ಅದರ ಮೌಲ್ಯವನ್ನು ನೆನಪಿಗೆ ತರುವುದು ಆಗುತ್ತಲೇ ಇತ್ತು. ಇತ್ತೀಚೆ ಒಂದು ನೋಟ್ ಪ್ಯಾಡ್ ಕೂಡ ಕಾಣೆಯಾಗಿತ್ತು. ಅದರಲ್ಲಿ ಒಂದೆರಡು ಕವಿತೆ, ಕೆಲವು ಅಗತ್ಯ ನೋಟ್ ಬರೆದಿಟ್ಟಿದ್ದಿತ್ತು. ಇಡೀ ಮನೆ ಹುಡುಕಿದರೂ ಕಾಣದೆ ಇದರ ಹುಡುಕಾಟದ ಜೊತೆಯೇ ನನ್ನ ಕಳೆದುಹೋದ ಚಿನ್ನದ ಹುಡುಕಾಟವನ್ನೂ ಶುರುವಿಟ್ಟೆ. ಇರುವ ಎಲ್ಲ ಕಪಾಟುಗಳನ್ನ ಜಾಲಾಡಿದರೂ ಯಾವ ಒಂದಾದರೂ ಸಿಕ್ಕಲೇ ಇಲ್ಲ.

ಹೇಳಬೇಕೆಂದರೆ ಈ ಚಿನ್ನವನ್ನು ನಾನು ಆಭರಣ ಎನ್ನುವುದಕ್ಕಿಂತ, ಕಷ್ಟಕ್ಕಾಲಕ್ಕೊದಗಬಹುದಾದ ಆಪ್ತ ಬಂಧು ಎಂದು ಭಾವಿಸಿದ್ದೇ ಹೆಚ್ಚು. ಈ ದಿನಗಳಲ್ಲಿ ಇಬ್ಬರು ಕೆಲಸದವರು ಬಂದು ಕೆಲಕಾಲ ಕೆಲಸ ಮಾಡಿ ಬಿಟ್ಟು ಹೋದರೂ ಅವರ ಮೇಲೆ ಈ ಗುರುತರ ಆಪಾದನೆಯ ಅನುಮಾನವನ್ನು ಹೊರಿಸಲೂ ಸಾಧ್ಯವಾಗುತ್ತಿಲ್ಲ. ಹಾಗೆಂದು ನನ್ನ ಬೆಡ್ ರೂಮಿಗೆ ಯಾರೂ ಕಾಲು ಹಾಕುವುದೂ ಇಲ್ಲ. ಎಲ್ಲಿ ಹೋಯಿತು ಚಿನ್ನ? ಯೋಚಿಸುತ್ತಾ ಹುಡುಕಾಡುತ್ತಿದ್ದೆ. ನಂತರ ಅದರ ಬೆಲೆ ಎಷ್ಟಾಗಬಹುದು ಎಂದು ಲೆಕ್ಕಾಚಾರ ಹಾಕಿ ಅಷ್ಟು ಹಣ ಸಂಪಾದಿಸಲು ಎಷ್ಟು ದುಡಿಯಬೇಕು ಎಂದು ಯೋಚಿಸಿದೆ. ಇಷ್ಟು ಹಣ ಇಲ್ಲದಿದ್ದರೆ ಬದುಕಲಾರೆನೇ ಎನಿಸಿತು. ನೋಟ್ ಪ್ಯಾಡಿನಲ್ಲಿ ಏನೇನು ಬರೆದಿಟ್ಟಿದ್ದೆ ಎಂದೊಮ್ಮೆ ನೆನಪಿಸಿಕೊಳ್ಳಲು ಯತ್ನಿಸಿದೆ. ಆ ಕವಿತೆ ಅಷ್ಟು ಮಹತ್ವದ್ದೇ? ಆ ಮಾಹಿತಿ ಇಲ್ಲದೆ ಎಷ್ಟು ಪ್ರಮಾಣದಲ್ಲಿ ನನಗೆ ನಷ್ಟ ಉಂಟಾಗಬಹುದು ಎಂದೆಲ್ಲ ಲೆಕ್ಕಾಚಾರ ಹಾಕಿದೆ. ಆಮೇಲೆ ಈ ದಿನಗಳಲ್ಲಿ ನಾನು ಕಳೆದುಕೊಂಡ ಆ ಎಲ್ಲರಿಗಿಂತ ಈ ವಸ್ತುಗಳು ಮಹತ್ವದ್ದೇನಲ್ಲ, ಸಿಕ್ಕುವುದಿದ್ದರೆ ಎಂದಾದರೂ ಸಿಗುತ್ತದೆ ಎಂದುಕೊಂಡು ಸುಮ್ಮನಾದೆ. ಸಂಜೆ ಸಮಯ ಏನೋ ಬರೆಯುತ್ತ ಕೂತ ಹೊತ್ತು ಯಾರೋ ಬಂದರು. ನಾನು ಮೂರ್ನಾಲ್ಕು ದಿನಗಳ ಹಿಂದೆ ಬ್ಯಾಂಕಿನಲ್ಲಿ ಬಿಟ್ಟುಬಂದಿದ್ದ ನೋಟ್ ಪ್ಯಾಡನ್ನು ತಂದು ಕೊಟ್ಟುಹೋದರು! ನೋಟ್ ಪ್ಯಾಡ್ ಏನೋ ಸಿಕ್ಕಿತು. ಚಿನ್ನ?

ಹಿಂದೊಮ್ಮೆ ಕೆಲ ದಾಖಲೆಗಳಿದ್ದ ಪೆನ್ ಡ್ರೈವನ್ನು ಕಳೆದುಕೊಂಡಿದ್ದೆ. ಆಗ ಅದರಿಂದುಂಟಾಗುವ ನಷ್ಟ ಎಷ್ಟು ಅನ್ನುವುದಕ್ಕಿಂತ ಅದರಲ್ಲಿದ್ದ ದಾಖಲೆಗಳ ದುರುಪಯೋಗವಾದರೆ ಏನು ಗತಿ ಎಂದು ನಡುಗಿಹೋಗಿದ್ದೆ. ಅದರ ಮೇಲೆ ಒಂದು ಕವಿತೆ ಬರೆದು ಫೇಸ್ಬುಕ್ಕಲ್ಲಿ ಪೋಸ್ಟ್ ಮಾಡಿ ರಾಶಿ ರಾಶಿ ಮೆಚ್ಚುಗೆಯ ಕಮೆಂಟು ಸಿಗುತ್ತಿದ್ದ ಹೊತ್ತಿಗೇ ಪೆನ್ ಡ್ರೈವ್ ಸಿಕ್ಕುಬಿಟ್ಟಿತ್ತು.

ಮೆದುಳು ಗಪ್ಪೆಂದು ಮುಚ್ಚಿಕೊಂಡಂತಾಗಿ
ಇನ್ನೇನು ಸಿಡಿದೇ ಬಿಡುವುದು ಎನಿಸಿ,
ಮೈ ಬೆವರಿ ಕೈಕಾಲು ನಡುಗಿ, ಕಣ್ಣು ಕತ್ತಲಿಟ್ಟು
ಕೊಂಚ ಸಮಯದ ಬಳಿಕ
ಮನವನುದ್ದೇಶಿಸಿ ಕೇಳಿದೆ,
‘ನನ್ನ ಕೆಲ ದಾಖಲೆಗಳಿದ್ದ
ಪೆನ್ ಡ್ರೈವ್ ಕಳೆದುಕೊಂಡಿದ್ದೇನೆ ನಾನು
ಅದಿಲ್ಲದೆ ಬದುಕು ದೂಡಬಲ್ಲೆನೇನು?’

ಮನ ಕ್ಷಣ ಮೌನದಾಳಿ
‘ಬಾಲ್ಯದಲ್ಲಿ ಪರ್ಸು ಸಹಿತ ಭರ್ತಿ ಆರೂವರೆ ರೂಪಾಯಿ
ಕಳೆದುಕೊಂಡಿದ್ದೆಯಲ್ಲ ನೀನು
ಬಸ್ಸು ಚಾಲಕನ ದಯೆ ನಿನ್ನ
ಟಿಕೆಟಿಲ್ಲದೆಯೂ ಮನೆ ತಲುಪಿಸಿರಲಿಲ್ಲವೇನು?’

‘ಮತ್ತೆ…
ಪ್ರಿಯಕರನಿತ್ತ ಪ್ರಿಯವಾದ ಕರವಸ್ತ್ರ
ನಡುಬೀದಿಯಲ್ಲೆಲ್ಲೋ ಕಳೆಯಲಿಲ್ಲವೇನು?’

‘ಅಷ್ಟೇ ಯಾಕೆ ಅದಕ್ಕೂ ಮೊದಲೇನಾಯಿತು?’
ಎಂದು ಶುರುವಿಟ್ಟ ಮನ
ಬೇಡ ಬೇಡವೆಂದು ಗೋಗರೆದರೂ
ಮೊರೆ ಕೇಳದೆ ಮುಂದುವರಿದು…
‘ಮತ್ತೆ ಆ ದಿನ ನಿನ್ನ ಆ ಪ್ರಿಯಕರನನ್ನೇ
ಕಳೆದುಕೊಂಡಿದ್ದ ಮರೆತೇಬಿಟ್ಟೆಯೇನು?
ಎಲ್ಲಕ್ಕೂ ಮಿಗಿಲು ಹೆತ್ತವರನ್ನೂ….!’
ಮನವೀಗ ಗಪ್ಪನೆ ಬಾಯಿಮುಚ್ಚಿಕೊಂಡು..
ನನ್ನ ಕಣ್ಣಲ್ಲಿ ಧಾರೆ ಧಾರೆ ನೀರು
ಸುರಿ ಸುರಿದು ತುಸು ತಣಿದ ಗಳಿಗೆ
ಕೆನ್ನೆಯೊರೆಸಿ ತೊದಲಿದೆ..
‘ಹೌದು
ಎಲ್ಲ ಕಳೆದುಕೊಂಡ ಮೇಲೂ
ದಿನ ದೂಡಲಿಲ್ಲವೇನು ನಾನು?’

ಹೌದು, ಈ ದಿನಗಳಲ್ಲಿ ಏನೇನನ್ನು ಮತ್ತು ಯಾರ್ಯಾರನ್ನು ಕಳೆದುಕೊಳ್ಳುತ್ತಾ ಬಂದಿದ್ದೇನೆ ಎನ್ನುವುದನ್ನು ನೆನಪಿಸಿಕೊಂಡಂತೆಲ್ಲ ದುಃಖವೂ, ಅಚ್ಚರಿಯೂ ಆಗುತ್ತವೆ. ಕಳೆದುಕೊಂಡದ್ದೆಲ್ಲ ಮತ್ತೆ ಸಿಕ್ಕಬಹುದಾ? ಕಳೆದುಕೊಂಡದ್ದನ್ನು ಪಡೆದುಕೊಳ್ಳಲು ಹುಡುಕಾಟ ನಡೆಸಬೇಕಾ? ಎನಿಸುವಾಗ ವಿಷಾದದ ಛಾಯೆ ಆವರಿಸುತ್ತದೆ. ಬೈಬಲ್ಲಿನಲ್ಲಿ ಕಳೆದುಹೋದ ಕುರಿಮರಿ ಸಿಕ್ಕ ಸಂಭ್ರಮ, ‘ಹುಡುಕಿರಿ ಸಿಕ್ಕುವುದು’ ಎಂದ ಕ್ರಿಸ್ತನ ಮಾತು ಎಲ್ಲವೂ ಅಲ್ಲಲ್ಲೇ ಗಿರಕಿಹೊಡೆಯುತ್ತವೆ.

ಏರ್ಪೋರ್ಟಿನಲ್ಲಿ ನಮ್ಮ ಕೈಯಿಂದಲೇ ಯಾರೋ ಮೊಬಾಯಿಲ್ ಫೋನನ್ನು ಕಿತ್ತುಕೊಂಡು ಹೋಗುತ್ತಾರೆ, ಮನೆಯಲ್ಲಿ ಮಲಗಿದ್ದಂತೆಯೇ ಮನೆಯನ್ನು ದೋಚಿಕೊಂಡಿರುತ್ತಾರೆ, ಜನ ಜಂಗುಳಿಯಲ್ಲೇ ಕತ್ತಿನ ಸರವನ್ನು ಹರಿದೊಯ್ಯುತ್ತಾರೆ, ತುಂಬಿದ ಬಸ್ಸಲ್ಲಿ ಪರ್ಸು ಕಿತ್ತುಕೊಂಡೋಡುತ್ತಾರೆ, ಗಿಜಿಗುಡುವ ಪೇಟೆಯಲ್ಲಿ ದಾಖಲೆ ಪತ್ರಗಳಿರುವ ಫೈಲನ್ನೇ ಕಳೆದುಕೊಂಡಿರುತ್ತೇವೆ, ಬ್ಯಾಂಕಿನಲ್ಲಿ ಆಗಷ್ಟೇ ಡ್ರಾ ಮಾಡಿದ ಹಣದ ಕಂತೆಗಳನ್ನು ಬ್ಯಾಂಕಿನೆದುರೇ ಯಾರೋ ಎಗರಿಸಿಬಿಡುತ್ತಾರೆ. ಎಷ್ಟಿರಬಹುದು ನಷ್ಟದ ಪ್ರಮಾಣ? ಇಂದು ಕಳೆದುಕೊಳ್ಳುವ ಒಂದು ಫೋನಿನಲ್ಲಿ, ಪರ್ಸಿನಲ್ಲಿ, ಮನೆಯಿಂದ ದೋಚಲ್ಪಟ್ಟ ವಸ್ತುಗಳಲ್ಲಿ, ಕಳೆದುಕೊಂಡ ದಾಖಲೆ ಪತ್ರಗಳಲ್ಲಿ ಏನೇನಿದ್ದೀತು, ಅದು ನಮಗೆಷ್ಟು ಮುಖ್ಯವಾಗಿದ್ದಿರಬಹುದು, ಯಾವ ಪ್ರಮಾಣದ ನಷ್ಟ ಉಂಟಾಗಬಹುದೆನ್ನುವುದು ಊಹೆಗೂ ನಿಲುಕದ್ದು. ಪ್ರತಿಯೊಬ್ಬರೂ ಒಂದಲ್ಲ ಒಂದು ಸನ್ನಿವೇಶದಲ್ಲಿ ಈ ಕಳೆದುಕೊಳ್ಳುವಿಕೆಗೆ ಒಳಗಾಗಿಯೇ ಆಗುತ್ತಾರೆ. ಈ ಕಳೆದುಕೊಳ್ಳುವಿಕೆ ಎಂಥ ಸಂದರ್ಭದಲ್ಲಿ ಸಂಭವಿಸಬಹುದು, ಕಳೆದುಕೊಂಡದ್ದು ನಮ್ಮ ಪ್ರಾಣಕ್ಕಿಂತ ಮಿಗಿಲಾದುದೇ?, ಅದು ನಮ್ಮ ಮೇಲೆ ಉಂಟುಮಾಡುವ ತಕ್ಷಣದ ಮತ್ತು ನಿಧಾನಗತಿಯ ಪರಿಣಾಮ ಎಂಥದ್ದು ಮತ್ತು ಇಂಥ ಸನ್ನಿವೇಶಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ ಎನ್ನುವುದನ್ನು ಆಲೋಚಿಸುವುದು ತುಂಬ ಮುಖ್ಯವೆನಿಸುತ್ತದೆ. ಕಳೆದುಕೊಂಡದ್ದೆಲ್ಲವೂ ಸಿಕ್ಕಲೇಬೇಕೆಂದೇನೂ ಇಲ್ಲ. ಹುಡುಕಾಟ ನಡೆಸಬಾರದು ಎಂದೂ ಅಲ್ಲ. ಆದರೆ ಕಳೆದುಕೊಳ್ಳುವ ಈ ಎಲ್ಲಕ್ಕಿಂತಲೂ ಬದುಕು ಮುಖ್ಯವಾಗಬೇಕು ನಮಗೆ.

ಕಾಲಿಗೆ ಬೂಟಿಲ್ಲವೆಂದು ಅಳುತ್ತ ಕೂತವನು ಕಾಲಿಲ್ಲದವನನ್ನು ನೋಡಿ ಸಂತೈಸಿಕೊಳ್ಳುವಂತೆ ಎಷ್ಟೋ ಸಲ ನಾವು ನಮಗಿಂತಲೂ ಹೆಚ್ಚಿನದನ್ನು ಕಳೆದುಕೊಂಡವರನ್ನು ಕಂಡು ಸಮಾಧಾನಪಟ್ಟುಕೊಳ್ಳಬೇಕಾಗುತ್ತದೆ. ಮೊಬೈಲ್ ನಲ್ಲಿದ್ದ ಕಾಂಟ್ಯಾಕ್ಟ್ ನಂಬರು ಕಳೆದುಕೊಂಡವನು ಆ ಕಾಂಟ್ಯಾಕ್ಟ್ ನಂಬರ್ ನ ವ್ಯಕ್ತಿಯನ್ನೇ ಕಳೆದುಕೊಳ್ಳುವುದಕ್ಕಿಂತ ಎಷ್ಟೋ ಮೇಲು. ಕತ್ತಿನಲ್ಲಿದ್ದ ಚೈನು ಕಳೆದುಕೊಂಡವಳು ಚೈನಿಗಾಗಿ ಕತ್ತನ್ನೇ ಕತ್ತರಿಸಲ್ಪಟ್ಟವಳಿಗಿಂತ ಮೇಲು, ಮಗಳ ಮದುವೆಗೆಂದು ಬ್ಯಾಂಕಿನಿಂದ ಡ್ರಾ ಮಾಡಿದ ಹಣ ಕಳೆದುಕೊಂಡವನು ಮಗಳನ್ನೇ ಕಳೆದುಕೊಂಡವನಿಗಿಂತ ಮೇಲು, ಪ್ರಿಯತಮನ ಪ್ರೇಮದೋಲೆಗಳನ್ನು ಕಳೆದುಕೊಂಡವಳು ಪ್ರಿಯತಮನನ್ನೇ ಕಳೆದುಕೊಂಡವಳಿಗಿಂತ ಮೇಲು, ಅಮೂಲ್ಯ ವಸ್ತುಗಳನ್ನು, ಪ್ರೀತಿಸುವ ಜೀವಿಗಳನ್ನು, ಹೆತ್ತ ಮಕ್ಕಳನ್ನು, ತಂದೆಯನ್ನು, ತಾಯಿಯನ್ನು ಹೀಗೆ ಇವರಿಲ್ಲದೆ ಬದುಕಲು ಸಾಧ್ಯವೇ ಇಲ್ಲ ಎನ್ನುವಂಥ ಬಂಧಗಳನ್ನೂ ಕಳೆದುಕೊಂಡವರಿಗಿಂತ ನಾವು ಎಷ್ಟೋ ಮೇಲು ಎಂದು ಯೋಚಿಸುತ್ತ ಸಮಾಧಾನಪಟ್ಟುಕೊಳ್ಳಬೇಕಾಗುತ್ತದೆ. ಕಾಲನೊಂದಿಗೆ ಸ್ವಲ್ಪ ದೂರ ಚಲಿಸಿ ಗಾಯ ಮಾಯ್ದಂತೆಲ್ಲ ನಮ್ಮಲ್ಲಿ ನಡೆದ ಹೊಯ್ದಾಟಗಳು ನಮಗೇ ಕ್ಷುಲ್ಲಕ ಎನಿಸಿಬಿಡುತ್ತದೆ.

ಹೀಗೆ ಎಲ್ಲವನೂ ಕಳೆದುಕೊಂಡ ಮೇಲೂ ಬದುಕಬಹುದು ಎನ್ನುವ ಭಾವ ನಮ್ಮನ್ನು ವ್ಯಾಕುಲತೆಯಿಂದ ಅದೆಷ್ಟೋ ದೂರವಿರಿಸೀತು. ಇಲ್ಲಿ ನಾವು ಎರಡು ತರಹದ ಮನಃಸ್ಥಿತಿಗಳನ್ನು ನೋಡುತ್ತೇವೆ. ಏನನ್ನಾದರೂ ಕಳೆದುಕೊಂಡೇವೆಂದು ಅತಿಯಾಗಿ ಜಾಗ್ರತೆ ಮಾಡುತ್ತ ಭಯದಿಂದಲೇ ಬದುಕುವವರು ಕೆಲವರು. ಮತ್ತೆ ಕೆಲವರು ಏನಾಗುವುದಿಲ್ಲ ಬಿಡು ಎನ್ನುವ ಉದಾಸೀನದಲ್ಲಿ ಏನೆಲ್ಲವನ್ನೂ ಕಳೆದುಕೊಂಡು ಪರಿತಪಿಸುವವರು. ಇವರಿಬ್ಬರ ನಡುವೆ ಕಳೆದುಕೊಳ್ಳಕೂಡದೆಂದು ಜಾಗ್ರತೆ ಮಾಡುತ್ತಲೇ ಕಳೆದುಕೊಳ್ಳುವವರೂ ಇದ್ದಾರೆ. ಒಟ್ಟಿನಲ್ಲಿ ಈ ಬದುಕಿನ ಓಟವು ಏನೆಲ್ಲವನ್ನೂ ಸಂಪಾದಿಸಿಬಿಡುತ್ತೇನೆ ಎನ್ನುವುದರೊಂದಿಗೆ ಶುರುವಿಟ್ಟು ಒಂದೊಂದಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತಾ ಹೋಗುವುದರಲ್ಲಿ ಮುಗಿಯುತ್ತದೆ ಎನಿಸುತ್ತದೆ.

ಆದರೆ ಇಲ್ಲೊಂದು ಸೂಕ್ಷ್ಮವಿದೆ. ಕಳೆದುಕೊಳ್ಳುವುದಕ್ಕೂ ಕಳಚಿಕೊಳ್ಳುವುದಕ್ಕೂ ಇರುವ ಅಂತರವನ್ನು ಕಂಡುಕೊಳ್ಳುವುದೇ ಆ ಸೂಕ್ಷ್ಮ. ಕಳೆದುಕೊಳ್ಳುವುದರಲ್ಲಿ ಮೋಹ ಅಡಗಿದೆ. ಕಳಚಿಕೊಳ್ಳುವುದೆಂದರೆ ಮೋಹವನ್ನೇ ಕಳಚಿಕೊಳ್ಳುವುದೇ ಆಗಿದೆ. ಕಳೆದುಕೊಳ್ಳುವುದಕ್ಕೆ ತಯಾರಿರುವುದು ಮತ್ತು ಕಳೆದುಕೊಂಡದ್ದನ್ನು ಅರಗಿಸಿಕೊಳ್ಳುವುದು ನಮಗೆ ಸಿದ್ಧಿಸಿದರೆ ದುಃಖವೆಂಬುದೇ ಇರಲಿಕ್ಕಿಲ್ಲ. ಬದುಕೆಂದ ಮೇಲೆ ಕಳೆದುಕೊಳ್ಳುವುದು ಘಟಿಸುತ್ತದೆ ಎಂದು ಎಲ್ಲಿಯವರೆಗೆ ಒಪ್ಪಿಕೊಳ್ಳಲಾರೆವೋ ಮತ್ತು ಎಲ್ಲಿಯತನಕ ಕಳೆದುಕೊಂಡದ್ದನ್ನು ನಾವು ಅರಗಿಸಿಕೊಳ್ಳಲಾರೆವೋ ಅಲ್ಲಿಯ ತನಕ ಶಾಂತಿ ನಮ್ಮ ಬದುಕಿನ ಸಮೀಪವೂ ಸುಳಿಯುವುದು ಸಾಧ್ಯವಾಗುವುದಿಲ್ಲ. ಕಳೆದುಕೊಂಡದ್ದನ್ನು ನಾವು ಅರಗಿಸಿಕೊಳ್ಳುವ ತನಕವೂ ತಳಮಳ, ವ್ಯಾಕುಲತೆ ನಮ್ಮನ್ನು ಇರಿದಿರಿದು ಹಿಂಸಿಸದೆ ಬಿಡುವುದಿಲ್ಲ.

ಹಾಗೆಯೇ ಬಯಸೀ ಬಯಸಿ ಕಳೆದುಕೊಳ್ಳುವುದರಲ್ಲಿ ಎರಡು ವಿಧವಿದೆ. ಒಂದರ ಹೆಸರು ಮೋಸ ಮಾಡುವುದು ಎಂದಾದರೆ, ಇನ್ನೊಂದರ ಹೆಸರು ಮೋಹವನ್ನೇ ಕಳಚಿಕೊಳ್ಳುವುದು. ನಿರ್ವಾಣದತ್ತ ಸಾಗುವುದು. ಈ ಮೋಸ ಮಾಡುವವನು ಒಂದರ್ಥದಲ್ಲಿ ಕಸಿಯುವವನಿಗೆ ಸಮಾನನಾದರೆ, ಮೋಹವನ್ನು ಕಳಚಿಕೊಳ್ಳುವವನು ಸಂತ ಸಮಾನನೆನಿಸುತ್ತಾನೆ. ‘ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗ್ಯಾಕೋ’ ಎಂಬ ಸಂತ ಶಿಶುನಾಳ ಶರೀಫಜ್ಜನ ಮಾತಿನಂತೆ ಈ ಮಾವನ ಮನೆಯ ಹಂಗನ್ನು ಇಷ್ಟಿಷ್ಟೇ ಕಳಚಿಕೊಳ್ಳುತ್ತಾ ಸಾಗುವುದನ್ನು ಬದುಕು ನಮ್ಮಿಂದ ಒಂದೊಂದನ್ನೇ ಕಸಿಯುತ್ತಾ ಕಲಿಸುತ್ತಾ ಹೋಗುತ್ತದೆ. ಒಟ್ಟಿನಲ್ಲಿ ಕಸಿದವನೂ, ಕಳೆದುಕೊಂಡವನೂ ಯಾರೂ ಸುಖಿಗಳಿಲ್ಲವಿಲ್ಲಿ. ಆದರೆ ಮೋಹವನ್ನು ಕಳಚಿಕೊಳ್ಳುತ್ತಾ ಸಾಗುವವನಷ್ಟೇ ಸುಶಾಂತ ಸರೋವರದಂತೆ ಇರಬಲ್ಲ. ಎಲ್ಲ ಕಳೆದುಕೊಂಡ ಮೇಲೂ ಬದುಕಬಲ್ಲ.

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 1 day ago No comment

  ವಿಶಿಷ್ಟ ಚೈತನ್ಯದ ಕಾದಂಬಿನಿ ಕಾವ್ಯ

  ಕಾದಂಬಿನಿ ಅವರ ಎರಡನೇ ಕವನ ಸಂಕಲನ ‘ಕಲ್ಲೆದೆಯ ಮೆಲೆ ಕೂತ ಹಕ್ಕಿ’. 100 ಕವಿತೆಗಳ ಈ ಸಂಕಲನ ಕಾದಂಬಿನಿ ಅವರ ಕಾವ್ಯಕ್ಕೇ ವಿಶಿಷ್ಟವಾದ ಗುಣಗಳನ್ನು ಕಾಣಿಸುತ್ತದೆ. ಈ ಸಂಕಲನಕ್ಕೆ ಕವಿ, ವಿಮರ್ಶಕ, ರಂಗಕರ್ಮಿ ವಸಂತ ಬನ್ನಾಡಿ ಮುನ್ನುಡಿ ಬರೆದಿದ್ದಾರೆ. ಕಾದಂಬಿನಿ ಕವಿತೆಗಳ ವಿಶಿಷ್ಟತೆಯನ್ನು ಅವರಿಲ್ಲಿ ಕಾಣಿಸಿದ್ದಾರೆ. * ನನಗೆ ಕಾದಂಬಿನಿಯ ಕಾವ್ಯಲೋಕದ ಪರಿಚಯವಾದುದು ಮೂರು ವರ್ಷಗಳ ಹಿಂದೆ. ಆಕೆಯ ‘ಕತೆ ಹೇಳುವ ಆಟ’ ಓದಿದಾಗ. ಈ ಕವನ ಆಕೆಯ ‘ಹಲಗೆ ...

 • 1 week ago No comment

  ಕಾದಂಬಿನಿ ಕವಿತೆಗಳ ಇನ್ನೊಂದು ಕಟ್ಟು: ಫಸ್ಟ್ ಲುಕ್

  ಹೊಸ ಪುಸ್ತಕ       ಕಾದಂಬಿನಿ ಅವರ ಎರಡನೇ ಕಾವ್ಯ ಸಂಕಲನ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಪ್ರಕಟಗೊಂಡಿದೆ. 100 ಕವಿತೆಗಳಿವೆ ಈ ಸಂಕಲನದಲ್ಲಿ. ಸಂಕಲನಕ್ಕೆ ವಿಮರ್ಶಕ, ರಂಗಕರ್ಮಿ ವಸಂತ ಬನ್ನಾಡಿ ಅವರ ಮುನ್ನುಡಿ, ಕವಿ ಹೆಚ್ ಎಸ್ ಶಿವಪ್ರಕಾಶ್ ಅವರ ಬೆನ್ನುಡಿ ಇದೆ. “ಜನಸಾಮಾನ್ಯರ ಸಂಕಟಗಳಿಗೆ ಮಾತು ಕೊಡಬೇಕು ಎಂಬುದು ಕಾದಂಬಿನಿ ಕಾವ್ಯದ ಕೇಂದ್ರಪ್ರಜ್ಞೆ. ಸಾಮಾಜಿಕ ಹಾಗೂ ರಾಜಕೀಯ ವಿಷಯಗಳನ್ನು ಮುಟ್ಟಿದರೆ ಮನಸ್ಸು ಕೊಳಕಾಗುವುದೆಂಬ ಮನೋಭಾವ ...

 • 2 weeks ago One Comment

  ಕಾಲದ ಬೆವರಿನ ಬಡಿತಗಳು

  ಕವಿಸಾಲು   ಹುಲ್ಲಿನೆಳೆಗಳಲಿ ಬಿದಿರ ಕೊಂಬಿಗೆ ಆತುಗೊಂಡ ಜೋಪಡಿಯೊಳಗ ಚುಕ್ಕಿಗಳ ದಿಂಬಾಗಿಸಿದ ಹೊಂಗೆಯ ನೆರಳಿನ ಗುರುತುಗಳು ಸಗಣಿಯಿಂದ ಸಾರಿಸಿದ ಪಡಸಾಲಿ ಮದುವಣಗಿತ್ತಿಯಂತೆ ವಳ್ಳು ಬೀಸುಕಲ್ಲುಗಳ ಹೊಕ್ಕಳಲಿ ದಕ್ಕಿಸಿಕೊಂಡ ಅವಳು ನಡುಮನೆಯ ಮೈದಾನದಾಗ ನಡುಗಂಬದ ನೆಲೆ ಬಿರುಕ ಕಿಂಡಿಗಳಲಿ ಮುರಿದ ಟೊಂಗೆಗಳೆಲ್ಲಾ ಬೆಸೆದು ಗುಡಿಸಲ ಕಣ್ಣಾಗಿ ಚಂದಿರನ ಜೋಗುಳ ಕಟ್ಯಾವು ಗಾಯದ ಬೆನ್ನು ನಿದ್ರಿಸಲು ಮಳೆಯ ರಭಸದಲಿ ಕೆರೆಯಂತಾಗುವ ಜೋಪಡಿಯೊಳಗ ಎಳೆಯ ರೆಕ್ಕೆಗಳನು ಪಕ್ಕೆಲುಬಲಿ ಅವಿತುಕೊಂಡು ಬೆಚ್ಚನೆಯ ಭರವಸೆ ತುಂಬ್ಯಾಳೊ ...

 • 2 weeks ago No comment

  ಕಾಲ ಮತ್ತು ನಾನು

        ಕವಿಸಾಲು       ಅಂತರಂಗದ ಅನಿಸಿಕೆಗಳ ಅದ್ಭುತ ರಮ್ಯ ಕನಸುಗಳ ಜತನವಾಗಿಟ್ಟುಕೊಂಡ ರಹಸ್ಯಗಳ ದುಂಡಗೆ ಬರೆದು ದಾಖಲಿಸಿ ಸಾವಿರ ಮಡಿಕೆಗಳಲಿ ಒಪ್ಪವಾಗಿ ಮಡಚಿ ಮೃದು ತುಟಿಗಳಲಿ ಮುತ್ತಿಟ್ಟು ಬೆವರ ಕೈಗಳಲಿ ಬಚ್ಚಿಟ್ಟು ಯಾರೂ ಕಾಣದಾಗ ಕದ್ದು ಹಿತ್ತಲಿನ ತೋಟಕ್ಕೆ ಒಯ್ದು ನನ್ನ ನಾಲ್ಕರಷ್ಟೆತ್ತರದ ಮರ ದಟ್ಟಕ್ಕೆ ಹರಡಿದ ಎಲೆಗಳ ನಡುವೆ ಟೊಂಗೆಗಳ ಸೀಳಿನಲಿ ಮುಚ್ಚಿಟ್ಟೆ ಅಲ್ಲಿಂದ ಮುಂದೆ ಮರ ಮರವಾಗಿ ಉಳಿಯಲಿಲ್ಲ ರಹಸ್ಯಗಳನ್ನೆಲ್ಲ ...

 • 2 weeks ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...


Editor's Wall

 • 12 March 2019
  2 weeks ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...

 • 08 December 2018
  4 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 30 November 2018
  4 months ago No comment

  ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ

  ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...

 • 29 November 2018
  4 months ago No comment

  ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?

    ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.     ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ...

 • 09 November 2018
  5 months ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...