Share

ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

 

 

 

 

 

 

 

 

 

ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.

 

ವಿಚಾರ ಮಾಡಲೊಲ್ಲದವ
ಮತಾಂಧ
ವಿಚಾರಮಾಡಲರಿಯದವ
ಮೂರ್ಖ
ವಿಚಾರ ಮಾಡಲಂಜುವವ
ಗುಲಾಮ
(ಅಂಬೇಡ್ಕರ್ ಅವರ ಸಾಲುಗಳು)

ನಾನು ಓದಿಗಾಗಿ ಪುಸ್ತಕಗಳನ್ನು ಹೇಗೆ ಹುಡುಕಾಡುತ್ತೇನೋ ಅಷ್ಟೇ ಆಸಕ್ತಿಯಿಂದ ನ್ಯೂಸ್ ಫೊರ್ಟಲ್ ಗಳನ್ನು ಜಾಲಾಡುತ್ತಿರುತ್ತೇನೆ. ಇಂಥ ಹುಡುಕಾಟದಲ್ಲಿ Rawstory.com ಪೋರ್ಟಲ್ಲಿನಲ್ಲಿ ಜರ್ನಲ್ ನ್ಯೂರೋಸೈಕೊಲಾಜಿಯಾದಲ್ಲಿ ಪ್ರಕಟವಾದ ಒಂದು ಅಧ್ಯಯನದ ಕುತೂಹಲಕಾರಿ ವರದಿಯೊಂದು ಕಣ್ಣಿಗೆ ಬಿತ್ತು. ಈ ಸಂಶೋಧನಾ ವರದಿಯನ್ನು ಮಂಡಿಸಿದ ಬಾಬಿ ಅಜೇರಿಯನ್ ಅವರು ಫ್ರೀಲಾನ್ಸ್ ಬರಹಗಾರರಾಗಿದ್ದು ನರವಿಜ್ಞಾನದಲ್ಲಿ ಪಿಹೆಚ್ಡಿ ಪಡೆದಿದ್ದಾರೆ. ಇವರ ಈ ವರದಿಯ ಪ್ರಕಾರ, ನಾರ್ತ್ ವೆಸ್ಟ್ರನ್ ಯುನಿವರ್ಸಿಟಿಯ ಜೋರ್ಡಾನ್ ಗ್ರಾಫ್ಮನ್ ನೇತೃತ್ವದ ಸಂಶೋಧಕರ ತಂಡವು ವಿಯೆಟ್ನಾಮ್ ವಾರ್ ವೆಟರನ್ಸ್(ಯುದ್ಧಾನುಭವಿ) ಗಳನ್ನು ಇಟ್ಟುಕೊಂಡು, ಧಾರ್ಮಿಕ ಮೂಲಭೂತವಾದದಲ್ಲಿ ತೊಡಗಿರುವವರ ಅರಿವಿನ ನಮ್ಯತೆ ಮತ್ತು ನರಮಂಡಲಗಳನ್ನು ಶೋಧಿಸಲು ಅಧ್ಯಯನವನ್ನು ನಡೆಸಿತ್ತು ಎಂದು ತಿಳಿಯಿತು.

ಸರಕಾರದ ಮೂಗಿನಡಿಯಲ್ಲೇ ಧಾರ್ಮಿಕ ಮೂಲಭೂತವಾದವು ರಕ್ಕಸೋನ್ಮಾದದಲ್ಲಿ ದೈತ್ಯಾಕಾರವಾಗಿ ಬೆಳೆದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನೂ ಗಾಳಿಗೆ ತೂರಿ, ಜನಸಾಮಾನ್ಯರ ಬದುಕುಗಳು ದುಸ್ತರವಾಗಿಸುತ್ತ, ದಾರಿದೀವಿಗೆಯಾಗಬೇಕಾದ ಪ್ರಗತಿಪರ ಚಿಂತನೆಯವರ ಅಭಿವ್ಯಕ್ತಿ ಸ್ವಾತಂತ್ರ್ಯಗಳ ಹರಣವಾಗುತ್ತ, ಸ್ವತಂತ್ರ ಹಾಗೂ ವೈಜ್ಞಾನಿಕ ಮನೋಭಾವವುಳ್ಳವರನ್ನೂ ಸಂವಿಧಾನದ ಮೇಲೆ ನಂಬುಗೆ ಉಳ್ಳವರನ್ನೂ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಹಿಂಸೆಯು ದೇಶದ ಎಲ್ಲೆಡೆಯಲ್ಲೂ ತಾಂಡವವಾಡುತ್ತ ರಕ್ತಸಿಕ್ತ ಚರಿತ್ರೆಯೊಂದು ಒಬ್ಬ ರಾಜ, ಒಂದು ಧರ್ಮ, ಒಂದು ಸಂಸ್ಕೃತಿ ಇರಬೇಕೆಂದು ಬಯಸುವವರ ಒಂದು ಬಣ್ಣದ ಹಾಸಿನಡಿ ಬರೆಯಲ್ಪಡುತ್ತಿದೆ. ಈ ಎಲ್ಲವನ್ನೂ ಕಂಡರೆ ಸರಕಾರವೊಂದು ಇಂಥ ಧಾರ್ಮಿಕ ಮೂಲಭೂತವಾದವನ್ನು ಪೋಷಿಸುತ್ತ ಸರ್ವಾಧಿಕಾರಿ ನೀತಿಯತ್ತ ದಾಪುಗಾಲಿಡುವುದು ಕಣ್ಣಿಗೆ ರಾಚತೊಡಗಿದೆ. ಇಂಥ ಪರಿಸ್ಥಿತಿಯಲ್ಲಿ ಧಾರ್ಮಿಕ ಮೂಲಭೂತವಾದಿಗಳ ನರಮಂಡಲದ ಅಧ್ಯಯನದ ವರದಿಯನ್ನು ಕುರಿತು ಬರೆಯುವುದು ನನಗೆ ಅನಿವಾರ್ಯದ ಮತ್ತು ಅತ್ಯವಶ್ಯಕ ಸಂಗತಿಯಾಗಿ ಕಾಣುತ್ತಿದೆ.

ಧಾರ್ಮಿಕ ಮೂಲಭೂತವಾದದ ಕಬಂಧ ಬಾಹುಗಳಲ್ಲಿ ಸಿಲುಕಿದ ಯುವ ಜನತೆ ಯಾವ ಪ್ರಮಾಣದಲ್ಲಿ ತನ್ನ ವೈಜ್ಞಾನಿಕ ಮನೋಭಾವವನ್ನೂ ವೈಚಾರಿಕತೆಯನ್ನೂ ದೇಶದ ಉದ್ದಗಲಕ್ಕೂ ಏಕಪ್ರಕಾರವಾಗಿ ಕಳೆದುಕೊಂಡಿದೆಯಲ್ಲಾ ಎಂದು ಅಚ್ಚರಿಯೂ ದುಃಖವೂ ಉಂಟಾಗುತ್ತದೆ. ಫೇಸ್ಬುಕ್ಕಿನಂತಹ ಜಾಲತಾಣಗಳಲ್ಲಿ ಯಾರೋ ಯಾವುದೋ ಚರ್ಚೆ ನಡೆಸುವಾಗ ನಡುವೆ ನುಗ್ಗಿ ಅಸಂಬದ್ಧ ಕಮೆಂಟು ಬರೆಯುವುದು, ನಕಲಿ ಸುದ್ಧಿ/ ವೀಡಿಯೋ/ ಫೋಟೋ ಶೇರ್ ಮಾಡುವುದು, ವಿತಂಡ ವಾದ ಹೂಡುವುದು, ಉತ್ತರಿಸಲು ಆಗದಿದ್ದಾಗ ಕೆಟ್ಟಾಕೊಳಕಾ ಭಾಷೆಯಲ್ಲಿ ನಿಂದಿಸತೊಡಗುವುದು ಇದು ಸರ್ವೇಸಾಮಾನ್ಯವಾಗಿಬಿಟ್ಟಿದೆ.

ಒಂದು ಕಾಲಕ್ಕೆ ಧಾರ್ಮಿಕ ಮೂಲಭೂತವಾದಿಗಳ ಜೊತೆ ನೇರಾನೇರ ಸಂಪರ್ಕವೇರ್ಪಡುವ ಸನ್ನಿವೇಶಗಳು ತುಂಬ ಕಡಿಮೆಯಿದ್ದವು. ಆದರೆ ಈ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೇರ ಅವರ ಸಂಪರ್ಕಕ್ಕೆ ಸಿಲುಕಿ ಗಡುಸಾಗಿ ಒಂದೇ ವಿಚಾರಕ್ಕೆ ಅಂಟಿಕೊಂಡಿರುವ ಅವರೊಡನೆ ಚರ್ಚಿಸಲೂ ಆಗದ, ಅವರ ಮೊಂಡುತನವನ್ನು ತಿದ್ದಲೂ ಆಗದ ವಿಚಿತ್ರ ಅನುಭವಕ್ಕೆ ಪ್ರಗತಿಪರ ಚಿಂತನೆಯುಳ್ಳ ಪ್ರತಿಯೊಬ್ಬರೂ ಗುರಿಯಾಗುವುದಿದೆ. ಒಂದು ಹಂತದವರೆಗೆ ಇವರ ನಡೆಯನ್ನು ಕಂಡು ನಕ್ಕು ಸುಮ್ಮನಾಗುತ್ತೇವೆಂದುಕೊಂಡರೂ ಸುಮ್ಮನಾಗದ ಅವರು ತಾವಾಗಿ ಆಕ್ರಮಣಕಾರಿಯಾಗಿ ಎರಗಿ ಭಯಾನಕ ಸನ್ನಿವೇಶವೊಂದನ್ನು ಚಿತ್ರಿಸದೆ ಬಿಡುವವರಲ್ಲ. ಒಮ್ಮೆ ಒಬ್ಬರು ಫೇಸ್ಬುಕ್ಕಿನಲ್ಲಿ ತಮಾಷೆ ನೋಡೋಣವೆಂದು ತಮ್ಮದೇ ಊರಿನ ಒಂದು ಫೋಟೋ ಹಾಕಿಕೊಂಡು ‘ಈ ಫೋಟೋ ಗುಜರಾತಿನದು ಅಲ್ಲವೇ ಅಲ್ಲ’ ಎಂದು ಬರೆದುಕೊಂಡಿದ್ದರು. ಅಷ್ಟರಲ್ಲಿ ಯಾವ ಯಾವುದೋ ದೇಶಗಳ ಚಿತ್ರಗಳನ್ನು ‘ಗುಜರಾತ್ ಮಾಡೆಲ್’ ಎಂದು ಪ್ರಚುರಪಡಿಸುತ್ತಿದ್ದ ಮೂಲಭೂತವಾದಿಯೊಬ್ಬ ಇಲ್ಲ ಇದು ಗುಜರಾತಿನದೇ ಚಿತ್ರ ಎಂದು ಪಟ್ಟುಹಿಡಿದ. ಇಷ್ಟಾದರೆ ನಕ್ಕು ಸುಮ್ಮನಾಗಬಹುದು. ಹೀಗೆ ಪಟ್ಟು ಹಿಡಿಯುವ ವ್ಯಕ್ತಿ ಮುಂದುವರೆದು ಅಶ್ಲೀಲ ಮಾತುಗಳಿಂದ ವೈಯಕ್ತಿಕ ತೇಜೋವಧೆಗಿಳಿದರೆ, ವಿನಾಶಕಾರಿ ಸುಳ್ಳುಗಳನ್ನು ಹರಡುತ್ತಾ ಕೊಲೆ, ಅತ್ಯಾಚಾರ, ಅನ್ಯಾಯಗಳನ್ನು ಸಮರ್ಥಿಸತೊಡಗಿದರೆ, ಕೊಲ್ಲುವ, ಅತ್ಯಾಚಾರವೆಸಗುವ ಬೆದರಿಕೆ ಹಾಕಿದರೆ ಹೇಗೆ ಸಹಿಸುವುದು?

ಜರ್ನಲ್ ನ್ಯೂರೋಸೈಕೊಲಾಜಿಯಾದ ವರದಿಯ ಪ್ರಕಾರ ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ ಎಂದು ತೋರಿಸುತ್ತದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆ (Cognitive flexibility and Openness) ಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ. ಪ್ರಿಫ್ರಂಟಲ್ ಕಾರ್ಟೆಕ್ಸ್ ಎನ್ನುವುದು- ಕುತೂಹಲ, ಸೃಜನಶೀಲತೆ ಮತ್ತು ತೆರೆದ-ಮನಸ್ಸಿನಂತಹ ಆಯಾಮಗಳನ್ನು ಒಳಗೊಂಡಿರುವ ವ್ಯಕ್ತಿತ್ವ ಲಕ್ಷಣವನ್ನು ವಿವರಿಸುವ ಮನೋವಿಜ್ಞಾನ ಪದವಾಗಿದೆ. ಇದನ್ನು ವಿವರಿಸುವ ಸಂದರ್ಭದಲ್ಲಿ ನನಗೆ, ಖ್ಯಾತ ಮನೋವೈದ್ಯ ಡಾ.ಅಶೋಕ ಪೈ ಅವರು ‘ದೈಹಿಕ ಅಂಗವಿಕಲತೆ ಹೇಗೋ ಹಾಗೆಯೇ ಮಾನಸಿಕ ಅಂಗವಿಕಲತೆಯೂ ಇದೆ. ಕುತೂಹಲ, ಸೃಜನಶೀಲತೆ, ವಿವೇಕ, ತರ್ಕಶಕ್ತಿ, ಕಲ್ಪನಾಶಕ್ತಿ, ನೆನಪು, ಮರೆವು ಇತ್ಯಾದಿ ಆಯಾಮಗಳಿಗೆ ಹಾನಿ ಮಾಡಿಕೊಳ್ಳುವುದು ಅಥವಾ ಅವುಗಳನ್ನು ಸಮರ್ಪಕವಾಗಿ ಬೆಳೆಯಗೊಡದಿರುವುದು ಮಾನಸಿಕ ಅಂಗವೈಕಲ್ಯಕ್ಕೆ ಕಾರಣವಾಗುತ್ತದೆ’ ಎಂದು ಬರೆದದ್ದು ನೆನಪಾಗುತ್ತದೆ.

ಧಾರ್ಮಿಕ ನಂಬಿಕೆಗಳೆಂದರೆ ಅತೀಂದ್ರಿಯ ವಿದ್ಯಮಾನಗಳನ್ನು ಸಾಮಾಜಿಕವಾಗಿ ಚಾಲ್ತಿಯಲ್ಲಿರುವ ಮಾನಸಿಕ ನಿರೂಪಣೆಗಳನ್ನು ನೈಜವಾದುದೆಂದೇ ಭಾವಿಸುವುದಾಗಿರುತ್ತದೆ. ಆದರೆ ಈ ಧಾರ್ಮಿಕ ನಂಬಿಕೆಗಳು ಪ್ರಾಯೋಗಿಕ ನಂಬಿಕೆಗಳಿಗಿಂತ ಭಿನ್ನವಾಗಿರುತ್ತವೆ ಮತ್ತು ಈ ನಂಬಿಕೆಗಳನ್ನು ಸಮೂಹವು ಹೇಗೆ ನೋಡುತ್ತದೆ, ಇದಕ್ಕೆ ಹೊಸ ಹೊಸ ಪುರಾವೆಗಳು ಹೇಗೆಲ್ಲ ಸಂಗ್ರಹಗೊಳ್ಳುತ್ತ ಹೋಗುತ್ತವೆ ಮತ್ತು ಭವಿಷ್ಯಸೂಚಕ ಶಕ್ತಿಯೊಂದಿಗೆ ಹೊಸ ಸಿದ್ಧಾಂತಗಳು ಹೊರಹೊಮ್ಮಿದಾಗ ಹೇಗೆ ನವೀಕರಿಸಲ್ಪಡುತ್ತದೆ ಎನ್ನುವುದರ ಮೇಲೆ ಆಧಾರಿತವಾಗಿರುತ್ತದೆ. ಸಮುದ್ರದಡಿಯಲ್ಲಿ ದೇವರ ಮೂರ್ತಿ ಸಿಕ್ಕಿದೆ, ಯಾವುದೋ ಯುಗದ ಬೃಹತ್ ಗದೆ ಸಿಕ್ಕಿದೆ ಎನ್ನುವುದನ್ನೆಲ್ಲ ಇಲ್ಲಿ ನೆನಪಿಸಿಕೊಳ್ಳಬಹುದು. ಮತ್ತೊಂದೆಡೆಯಲ್ಲಿ, ಧಾರ್ಮಿಕ ನಂಬಿಕೆಗಳು ವೈಜ್ಞಾನಿಕ ವಿವರಣೆಗಳಿಗೆ ಪ್ರತಿಕ್ರಿಯೆಯಾಗಿ ನವೀಕರಿಸಲ್ಪಡುವುದಿಲ್ಲ ಆದ್ದರಿಂದ ಧಾರ್ಮಿಕ ನಂಬಿಕೆಗಳು ಸ್ಥಿರ ಮತ್ತು ಕಠಿಣವಾಗಿದ್ದು ಸಂಪ್ರದಾಯವಾದಿಗಳೊಂದಿಗೆ ಆಳವಾದ ಸಂಬಂಧ ಹೊಂದಿರುತ್ತವೆ. ಉದಾಹರಣೆಗೆ ನಮ್ಮ ಒಳ್ಳೆಯ ಗೆಳೆಯನೊಬ್ಬ ಆಕಸ್ಮಾತ್ ಯಾವುದೋ ಕೆಟ್ಟ ಕೆಲಸ ಮಾಡಿದ್ದು ನಮಗೆ ತಿಳಿದುಬಂದರೆ ಅವನ ಬಣ್ಣ ಬಯಲಾಯಿತೆಂದು ಗ್ರಸುತ್ತೇವೆ. ಆದರೆ ಧಾರ್ಮಿಕ ಮೂಲಭೂತವಾದಿಗಳ ಸಮಸ್ಯೆ ಎಂದರೆ ಅವರು ತಾವು ನಂಬಿಕೆ ಇಟ್ಟಿರುವ ವ್ಯಕ್ತಿ ಅಥವಾ ಸಿದ್ಧಾಂತದಲ್ಲಿ ಕಣ್ಣೆದುರೇ ಘಟಿಸಿದರೂ ಅವರು ನಂಬಲಾರರು. ಬದಲಿಗೆ ಇದು ಯಾರದೋ ಕುತಂತ್ರ, ತಾವು ನಂಬುಗೆಯಿಟ್ಟ ವ್ಯಕ್ತಿ ಹಾಗೆ ಮಾಡುವುದು ಸಾಧ್ಯವೇ ಇಲ್ಲ. ಇದ್ದರೂ ಇದೂ ತಾವು ನಂಬಿದ ಸಿದ್ಧಾಂತಕ್ಕೆ ತುಂಬ ಅವಶ್ಯಕ ಎಂದು ಭಾವಿಸಿ ಸಮರ್ಥನೆಗಿಳಿಯುತ್ತಾರೆ. ಧಾರ್ಮಿಕ ನಂಬಿಕೆ ಎನ್ನುವುದು ಒಂದು ಸಮಾಜದ ನಿಯಮಗಳಿಗೆ ಒಂದು ಸಮೂಹದೊಳಗಿನ ವ್ಯಕ್ತಿಯಲ್ಲಿ ಊಹಾತ್ಮಕ ಸುಸಂಬದ್ಧತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಊಹಾತ್ಮಕ ಸುಸಂಬದ್ಧತೆಯೆಂಬುದು ಪ್ರಾಯೋಗಿಕವಾಗಿ ಹೊರಹೊಮ್ಮಲು ಸಾಧ್ಯವೋ ಅಲ್ಲವೋ ಎನ್ನುವುದನ್ನು ವಿವೇಚಿಸುವ ಶಕ್ತಿಯೇ ಇಲ್ಲವಾಗಿರುವುದೇ ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಹಾನಿಗೊಳಗಾಗುವುದರಿಂದ ಎನ್ನುವುದಾದರೆ ಇಂಥ ಧಾರ್ಮಿಕ ಮೂಲಭೂತವಾದಿಗಳು ಸಮಾಜಕ್ಕೆ ಅದೆಷ್ಟು ಅಪಾಯಕಾರಿ ಎಂದು ಊಹಿಸಬಹುದು.

ಧಾರ್ಮಿಕ ಮೂಲಭೂತವಾದವು ಸಾಂಪ್ರದಾಯಿಕ ಧಾರ್ಮಿಕ ಗ್ರಂಥಗಳು ಮತ್ತು ಆಚರಣೆಗಳಿಗೆ ಮಹತ್ವ ನೀಡುವ ಸಿದ್ಧಾಂತವನ್ನು ಉಲ್ಲೇಖಿಸುತ್ತದೆ. ಮೂಲಭೂತವಾದಿ ಗುಂಪುಗಳು ಸಾಮಾನ್ಯವಾಗಿ ತಮ್ಮ ನಂಬಿಕೆಗಳನ್ನು ಅಥವಾ ಜೀವನವಿಧಾನವನ್ನು ಪ್ರಶ್ನಿಸುವ ಅಥವಾ ಸವಾಲು ಮಾಡುವ ಯಾವುದೇ ವಿಷಯವನ್ನು ವಿರೋಧಿಸುತ್ತವೆ. ಇಂಥ ಸವಾಲುಗಳನ್ನು ಎದುರಿಸಲು ಬಯಸದ ಧಾರ್ಮಿಕ ಮೂಲಭೂತವಾದಿಗಳು ತಮ್ಮ ನಿರ್ದಿಷ್ಟವಾದ ಅಲೌಕಿಕ ನಂಬಿಕೆಗಳನ್ನು ಹಂಚಿಕೊಳ್ಳುವುದಿಲ್ಲ ಮತ್ತು ವೈಜ್ಞಾನಿಕ ದೃಷ್ಟಿಕೋನಕ್ಕೆ ವಿರುದ್ಧವಾಗಿದೆ ಎನ್ನುವವರ ಅಸ್ತಿತ್ವವಾದವನ್ನು ಬೆದರಿಕೆಗಳೆಂದು ಪರಿಗಣಿಸಿ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಾರೆ.

ಪ್ರಪಂಚದಾದ್ಯಂತ ಧಾರ್ಮಿಕ ನಂಬಿಕೆಗಳು ಮಾನವ ನಡವಳಿಕೆಯನ್ನು ಪ್ರೇರೇಪಿಸುವಲ್ಲಿ ಮತ್ತು ಪ್ರಭಾವ ಬೀರುವಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತವೆಯಾದ್ದರಿಂದ, ಮಾನಸಿಕ ಮತ್ತು ನರವೈಜ್ಞಾನಿಕ ದೃಷ್ಟಿಕೋನದಿಂದ ಧಾರ್ಮಿಕ ಮೂಲಭೂತವಾದದ ವಿದ್ಯಮಾನವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಭಾರತದಲ್ಲಿ ಮೂಲಭೂತವಾದವು ಅನೇಕ ಆಯಾಮಗಳಲ್ಲಿ ತನ್ನ ವಿರಾಟ್ ಸ್ವರೂಪವನ್ನು ಪ್ರದರ್ಶಿಸುತ್ತಿರುವ ಇವತ್ತಿನ ಸಂದರ್ಭದಲ್ಲಂತೂ ಇದನ್ನು ಅರಿಯುವುದು ಅತ್ಯಂತ ಅಗತ್ಯ ಮಾತ್ರವಲ್ಲ ಅನಿವಾರ್ಯ ಕೂಡ ಆಗಿದೆ.
ಜೋರ್ಡಾನ್ ಗ್ರಾಫ್ಮನ್ ಮತ್ತವರ ತಂಡವು, ಧಾರ್ಮಿಕ ಮೂಲಭೂತವಾದಕ್ಕೆ ಸಂಬಂಧಿಸಿ ಸಂಶೋಧನೆಗಾಗಿ ವಿಯೆಟ್ನಾಮ್ ಯುದ್ಧಾನುಭವಿಗಳನ್ನೇ (ವೆಟರನ್ಸ್) ಆಯ್ಕೆಮಾಡಿಕೊಳ್ಳಲೂ ಕಾರಣವಿತ್ತು. ಇವರಲ್ಲಿ ಬಹುತೇಕರ ಮೆದುಳಿನ ಪ್ರಿಫ್ರಂಟಲ್ ಎಂಬ ಭಾಗಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಗಿದ್ದು ಕಂಡುಬಂದಿತ್ತು. ಹೀಗೆ ಹಾನಿಗೊಳಗಾದ 119 ಮಂದಿ ವೆಟ್ನೋಗಳನ್ನೂ 30 ಆರೋಗ್ಯವಂತೆ ವೆಟ್ನೋಗಳೊಂದಿಗೆ ಮೆದುಳಿಗೆ ಹಾನಿಯಾಗದಂತೆ ಸಿ.ಟಿ. ಸ್ಕ್ಯಾನ್ ಮೂಲಕ ಹೋಲಿಸಿ ವಿಶ್ಲೇಷಣೆ ಮಾಡಿ ಧಾರ್ಮಿಕ ಮೂಲಭೂತವಾದವನ್ನು ನಿರ್ಣಯಿಸುವ ಸಮೀಕ್ಷೆ ನಡೆಸಲಾಯಿತು.

ಈ ಸಂಶೋಧನೆಯ ಆಧಾರದ ಮೇಲೆ, ಪೂರ್ವಭಾವಿ ಕಾರ್ಟೆಕ್ಸ್ ಧಾರ್ಮಿಕ ಮೂಲಭೂತವಾದದಲ್ಲಿ ಪಾತ್ರವಹಿಸುತ್ತದೆ ಎಂದು ಪ್ರಯೋಗಕಾರರು ಅಭಿಪ್ರಾಯಪಟ್ಟರು. ಏಕೆಂದರೆ ಈ ಪ್ರದೇಶವು ‘ಅರಿವಿನ ನಮ್ಯತೆ’ ಎಂದು ಕರೆಯಲ್ಪಡುವ ಸಂಗತಿಗೆ ಸಂಬಂಧಪಟ್ಟಿದೆ. ಮೆದುಳಿನ ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಅರಿವಿನ ನಮ್ಯತೆಯ ಸಾಮರ್ಥ್ಯದಿಂದ ಒಂದು ಚಿಂತನೆಯಿಂದ ಇನ್ನೊಂದು ಚಿಂತನೆಗೆ ದಾಟಲು, ಏಕಕಾಲಕ್ಕೆ ಅನೇಕ ವಿಷಯಗಳನ್ನು ಯೋಚಿಸಲು ಸಾಧ್ಯವಾಗಲು ಮತ್ತು ಹೊಸ ಸಾಕ್ಷಿಯ ಬೆಳಕಿನಲ್ಲಿ ನಂಬಿಕೆಗಳನ್ನು ನವೀಕರಿಸುವುದಕ್ಕೆ ಅನುಮತಿಸುತ್ತದೆ. ಅಷ್ಟೇ ಅಲ್ಲ, ಈ ಕೌಶಲ್ಯವು ಸ್ಪಷ್ಟವಾಗಿ ನಮ್ಮ ಬದುಕಿನ ಉಳಿವಿಗಾಗಿ ಹೊರಹೊಮ್ಮುತ್ತದೆ. ಹೊಸ ಪರಿಸರಕ್ಕೆ, ಹೊಸ ಸಂಗತಿಗಳಿಗೆ ಹೊಂದಿಕೊಳ್ಳಲು ಬದಲಾಗುವ ಪರಿಸ್ಥಿತಿಗಳ ಅಡಿಯಲ್ಲಿ ಪ್ರಪಂಚವನ್ನು ನಿಖರವಾಗಿ ಅರಿತುಕೊಳ್ಳಲು, ಮತ್ತು ಅಭಿವ್ಯಕ್ತಪಡಿಸಲು ಮನುಷ್ಯರಿಗೆ ಅವಕಾಶ ಕಲ್ಪಿಸುವ ಮಾನಸಿಕ ಗುಣಲಕ್ಷಣವಾಗಿದೆ.

ಅರಿವಿನ ನಮ್ಯತೆಗೆ ಸಂಬಂಧಿಸಿದ ಒಂದು ಪ್ರಮುಖ ನರವ್ಯೂಹವು, ಪ್ರಿಫ್ರಂಟಲ್ ಕಾರ್ಟೆಕ್ಸ್-ನಿರ್ದಿಷ್ಟವಾಗಿ ಡೋರ್ಸೊಲೇಟರಲ್ ಪ್ರಿಫ್ರಂಟಲ್ ಕಾರ್ಟೆಕ್ಸ್ (dlPFC) ಮತ್ತು ವೆಂಟೊಮಿಡಿಯಲ್ ಪ್ರಿಫ್ರಂಟಲ್ ಕಾರ್ಟೆಕ್ಸ್ (vmPFC) ಎಂದು ಕರೆಯಲ್ಪಡುವ ಎರಡು ಪ್ರದೇಶಗಳಾಗಿವೆ ಎಂದು ಬ್ರೈನ್ ಇಮೇಜಿಂಗ್ ಸಂಶೋಧನೆ ತೋರಿಸಿದೆ. ಇವೆರಡರಲ್ಲಿ ವಿಶೇಷವಾಗಿ vmPFC ಸಂಶೋಧಕರಿಗೆ ಆಸಕ್ತಿಯನ್ನು ಉಂಟುಮಾಡಿತ್ತು. ಕಾರಣವೇನೆಂದರೆ, dlPFC ಪ್ರದೇಶದಲ್ಲಿ ಹಾನಿಗೊಳಗಾದವರನ್ನೂ vmPFC ಪ್ರದೇಶದಲ್ಲಿ ಹಾನಿಗೊಳಗಾದವರನ್ನೂ ಸಂಶೋಧನೆಗೆ ಒಳಪಡಿಸಿ, ಧಾರ್ಮಿಕ ಮೂಲಭೂತವಾದಿ ಪ್ರಶ್ನಾವಳಿಗಳ ಪ್ರತಿಕ್ರಿಯೆಗಳನ್ನು ಗಮನಿಸುತ್ತಾ ಹೋದಂತೆ ಅದ್ಯಯನವು vmPFC ಪ್ರದೇಶಕ್ಕೆ ಹಾನಿಗೊಳಗಾದವರು ನೇರವಾಗಿ ಧಾರ್ಮಿಕ ಮೂಲಭೂತವಾದಿ ನಂಬಿಕೆಗಳಿಗೆ ಸಂಪರ್ಕ ಹೊಂದಿರುವುದನ್ನು ಬಹಿರಂಗಪಡಿಸಿತು. ಧಾರ್ಮಿಕ ಮೂಲಭೂತವಾದಿ ನಂಬಿಕೆಯ ವ್ಯಕ್ತಿಗಳು ಅರಿವಿನ ನಮ್ಯತೆ ಮತ್ತು ತೆರೆದ ಮನಸ್ಸಿನ ಚಿಂತನೆಯ ಪರೀಕ್ಷೆಯಲ್ಲಿ dlPFC ಹಾನಿಗೊಳಗಾದವರಿಗಿಂತ ಕಡಿಮೆ ಸ್ಕೋರ್ ಮಾಡುವುದು ಕಂಡುಬಂತು. ಇದರ ಫಲಿತಾಂಶವು ನಿರೀಕ್ಷಿಸಿದಂತೆಯೇ ಎಷ್ಟು ಪ್ರಮಾಣದಲ್ಲಿ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಅರಿವಿನ ನಮ್ಯತೆ ಮತ್ತು ಮುಕ್ತತೆ ಕಡಿಮೆಯಾಗುತ್ತದೋ ಅಷ್ಟು ಧಾರ್ಮಿಕ ಮೂಲಭೂತವಾದದ ಏರಿಕೆ ಉಂಟಾಗುತ್ತದೆಂದು ಪರೀಕ್ಷೆಗಳು ಬಹಿರಂಗಪಡಿಸಿದವು.

ಈ ಬಹುಮುಖ್ಯ ಆವಿಷ್ಕಾರಗಳ ಮುಖೇನ ಸಂಶೋಧಕರು, ಮೆದುಳಿನ ಆಘಾತದಿಂದ, ಮಾನಸಿಕ ಅಸ್ವಸ್ಥತೆ, ಡ್ರಗ್ಸ್ ಅಥವಾ ಆಲ್ಕೊಹಾಲ್ ವ್ಯಸನದಿಂದ ಅಥವಾ ನಿರ್ದಿಷ್ಟವಾದ ಆನುವಂಶಿಕ ಕಾರಣಗಳಿಂದ – ಪ್ರಿಫ್ರಂಟಲ್ ಕಾರ್ಟೆಕ್ಸ್ ನಲ್ಲಿ ದುರ್ಬಲಗೊಂಡ ಕಾರ್ಯನಿರ್ವಹಣೆಯು ವ್ಯಕ್ತಿಯನ್ನು ಧಾರ್ಮಿಕ ಮೂಲಭೂತವಾದಕ್ಕೆ ಒಳಗಾಗುವಂತೆ ಮಾಡುತ್ತದೆ ಎಂದು ಅವರು ಸೂಚಿಸುತ್ತಾರೆ. ಇದಲ್ಲದೆ, ತೀವ್ರ ಧಾರ್ಮಿಕ ಉಪದೇಶವು ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಬೆಳವಣಿಗೆ ಮತ್ತು ಸರಿಯಾದ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡುವ ರೀತಿಯಲ್ಲಿ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಹಾನಿಗೊಳಿಸುತ್ತದೆ. ಧಾರ್ಮಿಕ ಮೂಲಭೂತವಾದಿಯು ಧರ್ಮವನ್ನು ಪ್ರಶ್ನಾತೀತ ಎಂದು ಭಾವಿಸಿ ಒಪ್ಪಿಕೊಳ್ಳುತ್ತ ತನ್ನದೇ ಚಿಂತನಶೀಲತೆ, ಕುತೂಹಲ, ತರ್ಕಶಕ್ತಿ, ವಿವೇಕ, ವಿವೇಚನೆಗಳನ್ನು ಬೆಳೆಸಿಕೊಳ್ಳದೆ ತನ್ನದೇ ಮೆದುಳಿನ ಹಾನಿಗೆ ತಾನೇ ಕಾರಣನಾಗುತ್ತಿದ್ದಾನೆ. ಇನ್ನೊಂದೆಡೆ ಸರಿಯಾದ ಓದು, ಉದ್ಯೋಗವಿಲ್ಲದ ಯುವ ಜನರನ್ನು ಆಲ್ಕೋಹಾಲ್, ಡ್ರಗ್ಸ್ ಇತ್ಯಾದಿ ಚಟಗಳಿಗೆ ತಳ್ಳಿ ಅವರ ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಅನ್ನು ದುರ್ಬಲಗೊಳಿಸಲಾಗುತ್ತಿದೆ. ಒಟ್ಟಿನಲ್ಲಿ ಧಾರ್ಮಿಕ ಮೂಲಭೂತವಾದವು ಇಂದು ಅದೆಷ್ಟು ವ್ಯಾಪಕವಾಗಿದೆಯೆಂದರೆ ಇದರ ಕುರಿತು ಅಧ್ಯಯನ ಇನ್ನಷ್ಟು ವರ್ಷಗಳ ಕಾಲ ನಡೆಯಬೇಕಿದೆಯೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ ಎಂದು ಬಾಬಿ ಅಜೇರಿಯನ್ ಬರೆಯುತ್ತಾರೆ.

ಈ ಧಾರ್ಮಿಕ ಮೂಲಭೂತವಾದದ ನಂಬಿಕೆಗೆ ಬಲಿಯಾಗಿ ಪ್ರಿಫ್ರಂಟಲ್ ಕಾರ್ಟೆಕ್ಸ್ ದುರ್ಬಲಗೊಂಡವರು ಇಡೀ ವ್ಯವಸ್ಥೆಗೆ ಸೋಂಕು ತಗುಲಿಸಬಹುದು ಎನ್ನುವುದನ್ನು ಊಹಿಸಿದರೆ ಭಯವಾಗುತ್ತದೆ. ನಿರಂಕುಶಮತಿಗಳಾಗಲು ಕರೆ ಕೊಟ್ಟ ಕುವೆಂಪು ಅವರಂತಹ ಮೇರು ಸಾಹಿತಿಗಳು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಕರೆ ನೀಡಿದ್ದರು. ಧಾರ್ಮಿಕ ಮೂಲಭೂತವಾದಕ್ಕೆ ಬಲಿಯಾದ ಯುವ ಜನತೆಯನ್ನು ಅದರಿಂದ ಮುಕ್ತಗೊಳಿಸಿ ನಿರಂಕುಶಮತಿಗಳನ್ನಾಗಿಸಲು ಏನು ಮಾಡಬೇಕೋ ಉತ್ತರವು ತಿಳಿಯದಾಗಿದೆ.

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

One Comment For "ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?"

 1. Lingaraj
  18th April 2018

  1.ದಾರ್ಮಿಕ ಮೂಲಾಬೂತವಾದಿತನ ಅನ್ನೋದು ಒಂದು ಮದ್ದಿಲ್ಲದ ಸಾಂಕ್ರಾಮಿಕ ವೈರಸ್
  ನಾವೇ ದೂರ ಸರಿದು ಬದುಕಬೇಕೆ ವಿನಃ ಮಾನಸಿಕ ಅಂಗವಿಕಲತೆಯನ್ನು ಬುರುಡೆಗೆ ಬರಮಾಡಿಕೊಳ್ಳಬಾರದು
  ಸಂಶೋದನೆ ಅನ್ನೋದು ಒಂದು ನಿರ್ದಿಷ್ಟಕ್ಕೆ ಸೀಮಿತ ಆದುದರಿಂದ ಈ ಮಾನಸಿಕ ಅಂಗವಿಯಳತೆಯನ್ನು ಅಳೆಯುವ ಮಾಪನಗಳು (ಪ್ಯಾರಮೀಟರ್) ಇಲ್ಲ

  Reply

Leave a comment

Your email address will not be published. Required fields are marked *

Recent Posts More

 • 6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 7 days ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 7 days ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 1 week ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  3 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  3 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...