Share

‘ಜೀರ್ಜಿಂಬೆ’ ತೆರೆದಿಟ್ಟ ಲೋಕದಲ್ಲಿ ಮೂರು ಗಂಟೆ
ಡಾ. ಪ್ರೇಮಲತ ಬಿ

ಬಾಲ್ಯದ ಕನಸಿನ ರೆಕ್ಕೆಗಳನ್ನು, ಉನ್ನತ ಭವಿಷ್ಯವನ್ನು ಬಾಲ್ಯ ವಿವಾಹ ಹೊಸಕಿಹಾಕುವ ಪರಿಯನ್ನು ಅನ್ವರ್ಥಕವಾಗಿ, ಸಾಂಕೇತಿಕವಾಗಿ ಬಿಂಬಿಸಲು ಈ ಚಿತ್ರಕ್ಕೆ ‘ಜೀರ್ಜಿಂಬೆ’ ಎಂಬ ಹೆಸರಿಡಲಾಗಿದೆ.

ಳೆದ ಭಾನುವಾರ ‘ಜೀರ್ಜಿಂಬೆ’ ಎಂಬ ಕನ್ನಡ ಸಿನಿಮಾವನ್ನು ನೋಡಲು ಹೋಗಿದ್ದೆ. ಇದನ್ನು ನೋಡಿದ್ದು ಕರ್ನಾಟಕದಲ್ಲಲ್ಲ. ಇಂಗ್ಲೆಂಡಿನ ಡಾನ್ಕ್ಯಾಸ್ಟರ್ ಪಟ್ಟಣದಲ್ಲಿ.

ಹೋಗುವ ಮುನ್ನ ತುಮಕೂರಿನ ನನ್ನ ಅಕ್ಕನಿಗೆ ಫೋನಾಯಿಸಿ “ಜೀರ್ಜಿಂಬೆಯಂತೆ. ನೀವೆಲ್ಲ ಹೋಗಿ ನೋಡಿ ಬಂದಿರಾ? ಈ ಸಿನಿಮಾಗೆ ಕಳೆದ ವರ್ಷವೇ ನಾಲ್ಕು ರಾಜ್ಯ ಪ್ರಶಸ್ತಿಗಳು ದೊರೆತಿವೆ ಗೊತ್ತಾ?” ಅಂತ ಕೇಳಿದೆ. “ಹೌದಾ, ಏನೋ ಗೊತ್ತಿಲ್ಲ ಕಣೆ. ಈ ಅವಾರ್ಡ್ ಬರೋ ಸಿನಿಮಾಗಳೆಲ್ಲ ಇಲ್ಲಿ ಥಿಯೇಟರಿಗೆ ಬರೋದೇ ಇಲ್ಲ” ಎಂದಳು. ಮನಸ್ಸಿಗೆ ಖೇದವಾಯ್ತು.

2017ರಲ್ಲಿ ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ಪಡೆದ ಚಿತ್ರವಿದು. ಅತ್ಯುತ್ತಮ ಮಕ್ಕಳ ಚಿತ್ರ, ಅತ್ಯುತ್ತಮ ಸಂಗೀತ (ಚರಣ ರಾಜ್) ಅತ್ಯುತ್ತಮ ಬಾಲ ಕಲಾವಿದೆ (ಸಿರಿ ವಾನಳ್ಳಿ) ಅತ್ಯುತ್ತಮ ಗೀತ ರಚನೆ (ಕಾರ್ತಿಕ್ ಸರಗೂರು) ಗಾಗಿ 4 ರಾಜ್ಯಪ್ರಶಸ್ತಿ ಗಳಿಸಿದ ಈ ಚಿತ್ರ ಬಾಲ್ಯ ವಿವಾಹವನ್ನು ಕುರಿತಾದ್ದು ಎಂದು ಕೇಳಿದ್ದೆ. ‘ಮೇಕಿಂಗ್ ಆಫ್ ವಿವೇಕಾನಂದ’, ‘ಭೀಮಸೇನ ನಳಮಹಾರಾಜ’ ಇತ್ಯಾದಿ ಚಿತ್ರಗಳ ನಿರ್ದೇಶನ ಖ್ಯಾತಿಯ ಯುವ ನಿರ್ದೇಶಕ ಕಾರ್ತಿಕ್ ಸರಗೂರರ ಈ ಚಿತ್ರವನ್ನು ನೋಡಿದ ನಂತರವೇ ಯಾಕೆ ಈ ಕನ್ನಡ ಚಿತ್ರಕ್ಕೆ ಹೀಗೆ ಪ್ರಶಸ್ತಿಗಳ ಸುರಿಮಳೆಯಾಗಿದೆಯೆಂದು ಅರ್ಥವಾದದ್ದು!

ಅಮೆರಿಕಾದಿಂದ ಈ ಚಿತ್ರವನ್ನು ಇಂಗ್ಲೆಂಡಿನ ಕನ್ನಡ ಕೂಟ ‘ಕನ್ನಡಿಗರು, ಯು.ಕೆ’ಯವರ ಯುಗಾದಿ ಆಮಂತ್ರಣ ಮನ್ನಿಸಿ ಬಂದಿದ್ದ ಸುಮನ್ ನಗರ್ಕರ್ ದಂಪತಿಗಳು ತಂದಿದ್ದರು. ಕಳೆದ 15 ವರ್ಷಗಳಿಂದ ಕ್ಯಾಲಿಫೋರ್ನಿಯಾದ ಫೋಲ್ಸಾಮ್ ನಗರದಲ್ಲಿ ನೆಲೆನಿಂತಿರುವ ಕನ್ನಡದ ‘ಬೆಳದಿಂಗಳ ಬಾಲೆ’ ಸುಮನ್ ನಗರ್ಕರ್ ಮತ್ತೆ ಪತಿ ಗುರುದೇವ್ ನಾಗರಾಜ್ ಇಂಗ್ಲೆಂಡಿನ ಮೂರು ನಗರಗಳಲ್ಲಿ ‘ಜೀರ್ಜಿಂಬೆ’ಯ ಪ್ರದರ್ಶನವನ್ನು ಏರ್ಪಡಿಸಿದ್ದರು. ಅವರನ್ನು ಭೇಟಿ ಮಾಡಿದ ನಂತರವೇ ‘ಜೀರ್ಜಿಂಬೆ’ ಚಿತ್ರ ಇನ್ನೂ ಕರ್ನಾಟಕದಲ್ಲಿ ವಾಣಿಜ್ಯ ಮಟ್ಟದಲ್ಲಿ ಬಿಡುಗಡೆಯಾಗಿಲ್ಲ ಎಂದು ತಿಳಿದದ್ದು. ಆಶ್ಚರ್ಯವಾದರೂ ‘ಜೀರ್ಜಿಂಬೆ’ ಕರ್ನಾಟಕದ ಜನತೆಗೆ ಮೆಚ್ಚುಗೆಯಾಗಲು ಇನ್ನೂ ಸಮಯವಿದೆ ಅಂತ ಸಮಾಧಾನವೂ ಆಯ್ತು. ಈ ಚಿತ್ರದಲ್ಲಿ ಸುಮನ್ ಅವರಿಗೆ ಒಂದು ಪಾತ್ರವೂ ಇದೆ. ಸುಮನ್ ಅವರೊಂದಿಗೆ ಸಂದರ್ಶನವನ್ನು ಮುಗಿಸಿ, ಒಟ್ಟಿಗೆ ಊಟ ಮಾಡಿ, ಸಿನಿಮಾಕ್ಕೆ ತೆರಳಿದೆವು.

“ಅವಾರ್ಡ್ ಸಿನಿಮಾ ಎಂದರೆ ಅಳುವ ಸಿನಿಮಾ ಎನ್ನು ಕಾಲ ಮುಗಿದಿದೆ” ಎಂದು ಸುಮನ್ ಸಂದರ್ಶನದಲ್ಲಿ ಹೇಳಿದ್ದು ನೆನಪಿದ್ದರೂ ಮನಸ್ಸಿನ ಮೂಲೆಯಲ್ಲೆಲ್ಲೋ ಬಾಲ್ಯ ವಿವಾಹದ ಈ ಸಿನಿಮಾ ತಿಳಿಯಾಗಿರಲು ಸಾಧ್ಯವೇ? ಎಂಬ ಪ್ರಶ್ನೆ ಕುಟುಕುತ್ತಿತ್ತು. ಮುಂದಿನ ಮೂರು ಗಂಟೆಗಳಲ್ಲಿ ನಾನು ಅಪ್ಪಟ ಗ್ರಾಮೀಣ ಪರಿಸರದ, ಸುಂದರ, ನೈಜ ಚಿತ್ರಣಗಳ ಮಿಡಿತಗಳಲ್ಲಿ ಕಳೆದುಹೋದೆ.

ಹೊಸ ಮುಖಗಳು, ನೈಜ ಪರಿಸರ, ಉತ್ಕೃಷ್ಟ ಅಭಿನಯ, ಉತ್ತಮ ಸಂಭಾಷಣೆ, ಗ್ರಾಮ್ಯ ಬದುಕಿನ ನವಿರು ಹಾಸ್ಯಗಳು, ವಿಡಂಬನೆ, ಮೌಢ್ಯತೆ, ಮುಗ್ದತೆ, ಕಾಮಣ್ಣ, ಮಗುವಿನಂಥ ವಯಸ್ಕರು, ವಯಸ್ಸಾದ ಮಿಟುಕಲಾಡಿಗಳು, ಶಾಲೆಗಳಲ್ಲಿನ ರಾಜಕೀಯ, ಆಕಾಶಕ್ಕೆ ಏಣಿ ಹಾಕಬಲ್ಲ ಬಾಲ್ಯದ ಕನಸುಗಳು, ನಂಬಿಕೆಗಳು, ಶಾಲೆಯ ಮಕ್ಕಳ ಜಗಳಗಳು, ಮನುಷ್ಯರ ಮನಸ್ಸಿನ ಒತ್ತಡಗಳು -ಅದೆಷ್ಟು ವಿಚಾರಗಳು ನಿಮ್ಮ ಎದೆ ಬಗೆಯುತ್ತಲೇ ತುಟಿಗಳಲ್ಲಿ ನಗುವನ್ನೂ, ಮನಸ್ಸಿನಲ್ಲಿ ತಲ್ಲಣಗಳನ್ನೂ ಮೂಡಿಸಬಲ್ಲ ಈ ಸಿನಿಮಾ ಕಾರ್ತಿಕ್ ಸರಗೂರರ ಸಂಕೀರ್ಣ ಪ್ರತಿಭೆಯ, ಸುಂದರ ಕಲಾಕೃತಿ.

ಪ್ರಶಸ್ತಿ ಬಂದಿದೆಯೆಂದು ಚಿತ್ರ ನೋಡುವ ಅಗತ್ಯವಿಲ್ಲ. ಮಕ್ಕಳ ಚಿತ್ರವೆಂದು ಮೂಗು ಮುರಿಯುವ ಅಗತ್ಯವೇ ಇಲ್ಲ. ಮನರಂಜನೆಯೂ ಹೇರಳವಾಗಿರುವ ಈ ಚಿತ್ರದಲ್ಲಿ ಸಕಾರಾತ್ಮಕ ಸಂದೇಶಗಳು, ಪ್ರಚೋದನೆ, ನವಿರು ಹಾಸ್ಯ, ನೈಜ ಘಟನೆಗಳ ದಾಖಲಾತಿ ಎಲ್ಲವೂ ಇವೆ.

ಹರೆಯಕ್ಕೆ ಬರುವ ‘ಜೀರ್ಜಿಂಬೆ’ಗಳು ಅತ್ಯಂತ ಸುಂದರವಾದ ಬಣ್ಣದ ರೆಕ್ಕೆಗಳನ್ನು ಪಡೆಯುತ್ತವೆ. ಈ ರೆಕ್ಕೆಗಳನ್ನು ಮನುಷ್ಯ ತನ್ನ ಅನುಕೂಲಕ್ಕೆ, ನಂಬಿಕೆಗಳಿಗೆ ದುಂಬಾಲುಬಿದ್ದು ಕತ್ತರಿಸಿ ತೆಗೆದು ಒಡವೆಗಳಲ್ಲಿ ಬಳಸುತ್ತಾನೆ. ‘ಜೀರ್ಜಿಂಬೆ’ಗಳನ್ನು ಅಮಾನುಷವಾಗಿ ಸಾಯಲು ಬಿಡುತ್ತಾನೆ. ಬಾಲ್ಯದ ಕನಸಿನ ರೆಕ್ಕೆಗಳನ್ನು ಉನ್ನತ ಭವಿಷ್ಯವನ್ನು, ಬಾಲ್ಯ ವಿವಾಹ ಹೊಸಕಿಹಾಕುವ ಪರಿಯನ್ನು ಅನ್ವರ್ಥಕವಾಗಿ, ಸಾಂಕೇತಿಕವಾಗಿ ಬಿಂಬಿಸಲು ಈ ಚಿತ್ರಕ್ಕೆ ‘ಜೀರ್ಜಿಂಬೆ’ ಎಂಬ ಹೆಸರಿಡಲಾಗಿದೆ.

ಭಾರತದಲ್ಲಿ ಈಗ ನಡೆಯುತ್ತಿರುವ ಎಲೆಕ್ಷನ್ ಗಲಾಟೆ, ಐ.ಪಿ.ಎಲ್. ಭರಾಟೆ ಎಲ್ಲ ಮುಗಿಯಲಿ ಎಂದು ಸೂಕ್ತ ಸಮಯದ ಬಿಡುಗಡೆಯನ್ನು ಎದುರು ನೋಡುತ್ತಿರುವ ಈ ಚಿತ್ರ ಈಗಾಗಲೇ ಅಮೆರಿಕಾ, ಇಂಗ್ಲೆಂಡಿನ ಕನ್ನಡಿಗರ ಮನಗೆದ್ದಿದೆ. ಬದುಕಿನ ಮಜಲುಗಳ ನಾಜೂಕಾದ ನಿರೂಪಣೆ ಎಷ್ಟು ಸುಂದರವಾಗಿದೆಯೆಂದರೆ ಚಿತ್ರದ ಮುಕ್ಕಾಲು ಭಾಗ ವೀಕ್ಷಕ ನಕ್ಕು, ನಕ್ಕು ಖುಷಿಪಡುತ್ತಿರುವಂತೆಯೇ ವಾಸ್ತವದ ಕರಾಳತೆ ಅವರನ್ನು ಕಬಳಿಸುತ್ತದೆ. ಹಿಂದೆಯೇ ನಿಜ ಘಟನೆಗಳು ಮನಸ್ಸಿಗೆ ಚೈತನ್ಯವನ್ನು ನೀಡುತ್ತವೆ. ಚಿಂತನೆಗೆ ತಳ್ಳುತ್ತವೆ. ಚಿತ್ರ ಮುಗಿದಾಗ ಈ ಸಿನಿಮಾ ನೀಡುವ ವಿಶಿಷ್ಟ ಮಾಂತ್ರಿಕತೆಯ ಅನುಭವಕ್ಕೆ ತುತ್ತಾದ ನಾವೆಲ್ಲ ಒಟ್ಟಿಗೆ ಎದ್ದು ನಿಂತು ಕರತಾಡನ ಮಾಡಿದ್ದೇ ಮಾಡಿದ್ದು!

ಕಾರ್ತಿಕ್ ಸರಗೂರು

ಅತಿ ಹೆಚ್ಚು ಬಾಲ್ಯವಿವಾಹ ನಡೆಯುತ್ತಿರುವ ಭಾರತದ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ ಎಂದು ಕೇಳಿ ನಾವೆಲ್ಲ ಗರಬಡಿದು ಹೋದೆವು. ಈ ಕಾರಣ, ಈ ಸಿನಿಮಾವನ್ನು ಎಲ್ಲ ಗ್ರಾಮಾಂತರ ಶಾಲೆಗಳಿಗೂ ಕೊಂಡೊಯ್ದು ಪ್ರದರ್ಶಿಸಬೇಕೆನ್ನುವ ಯೋಜನೆಗಳೂ ಇವೆ. ಇದಕ್ಕೆ ಸಿನಿಮಾ ತಂಡ ಪ್ರಾಯೋಜಕರ ಹುಡುಕಾಟವನ್ನೂ ನಡೆಸಿದೆ. ಒಂದು ಸಣ್ಣ ಅರಿವು, ಒಂದು ದರ್ಶನ, ಒಂದು ಅವಕಾಶ ಬದುಕುಗಳನ್ನು ಹೇಗೆ ರೂಪಿಸಬಲ್ಲದು, ಪ್ರೇರೇಪಿಸಬಲ್ಲದು ಎನ್ನುವುದನ್ನೂ ಈ ಚಿತ್ರ ನಿರೂಪಿಸುವ ಕಾರಣ ಇದು ನಡೆಯಲೇಬೇಕಾದ ಕೆಲಸ ಅನ್ನಿಸದಿರಲಿಲ್ಲ. ಬಿಗಿಯಾದ ಎಡಿಟಿಂಗ್, ಸಂಭಾಷಣೆಯಿಂದಾಗಿ ಕೂಡ ‘ಜೀರ್ಜಿಂಬೆ’ ಮನಸೆಳೆಯುತ್ತದೆ.

ಮೊದಲರ್ಧದಲ್ಲಿ ತುಸು ಹೆಚ್ಚಾಯಿತೇನೋ ಎನ್ನಿಸುವ ಸೈಕಲ್ ಪ್ರಸಂಗಗಳ ಮಹತ್ವ ಎರಡನೇ ಭಾಗದಲ್ಲಿ ತಿಳಿಯುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಇದು ನಿಜವಾದ ಘಟನೆಗಳನ್ನು ಆಧರಿಸಿ ಮಾಡಿದ ಚಿತ್ರ. ‘ಕೂಲ್ ರನ್ನಿಂಗ್ಸ್’ ಎಂಬ ಜಮೈಕಾ ಕ್ರೀಡಾಳುಗಳನ್ನು ಆಧರಿಸಿ ಮಾಡಿದ ಹಾಲಿವುಡ್ ಚಿತ್ರದ ಶೈಲಿಯನ್ನು ಹೋಲುತ್ತದೆ. ದೇಶೀ ಭಾಷೆ ಮತ್ತು ಸಮಸ್ಯೆಗಳನ್ನು ನವಿರಾಗಿ ನಿಮ್ಮ ಮುಂದೆ ಹರಡುತ್ತಲೇ ಒಂದು ಯೋಜನೆಯನ್ನು ಜಾರಿಗೆ ತಂದ ನಂತರ ನಮ್ಮ ಸರ್ಕಾರ ಹೇಗೆ ಅದರ ಮುಂದಿನ ಭಾಗದ ನಿಭಾವಣೆಗೆ ಇನ್ನೂ ಸನ್ನದ್ದವಾಗಿಲ್ಲ ಎನ್ನುವ ಮೊನಚನ್ನು ಕಣ್ಣಿಗೆ ತಾಗಿಸುತ್ತದೆ. ಆದರೆ, ಶಾಲೆಯಲ್ಲಿ ಓದುವ ಒಂದು ಸಣ್ಣ ಅವಕಾಶ ಆಕಾಶಕ್ಕೆ ಹಾಕುವ ಏಣಿಯೂ ಆಗಬಲ್ಲುದು ಎಂದು ತಿಳಿಸುತ್ತದೆ. ಎರಡು ಚಕ್ರಗಳು, ಎರಡು ರೆಕ್ಕೆಗಳು, ಮುಗ್ಧ ನಂಬಿಕೆಗಳು ಸಾಗರದಂಥ ಕಷ್ಟವನ್ನು ದಾಟಿಸಲು ಅನುವಾಗುವ ಮನುಷ್ಯನ ಧ್ಯೇಯ ಶಕ್ತಿಗೆ ನಿದರ್ಶನವಾಗುತ್ತದೆ. ಮನರಂಜನೆಗೆ ಯಾವ ಕೊರತೆಯೂ ಇಲ್ಲದಂತೆ ಕಲಾತ್ಮಕ ಚಿತ್ರಗಳನ್ನು ಹೇಗೆ ಮಾಡಬಹುದೆನ್ನುವುದಕ್ಕೆ ಈ ಚಿತ್ರ ಒಳ್ಳೆಯ ಉದಾಹರಣೆ.

ಇದನ್ನೂ ಓದಿ: ಇಂಗ್ಲೆಂಡಿನಲ್ಲಿ ಕಂಡ ‘ಬೆಳದಿಂಗಳ ಬಾಲೆ’

ಡಾ. ಪ್ರೇಮಲತ ಬಿ

ದಂತವೈದ್ಯೆ. ಕಳೆದ 15 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ಹಲವಾರು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ. ಕಥೆ, ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನಿತರು.

Share

Leave a comment

Your email address will not be published. Required fields are marked *

Recent Posts More

 • 1 month ago No comment

  ಪಂಡಿತರ ಹಳ್ಳಿಯ ‘ಮಂದರಗಿರಿ’

                ಇದು ಪ್ರವಾಸಿಗಳ ಯುಗ. ಹೊಸ ತಲೆಮಾರಿನ ಜನರಿಗೀಗ ಮನೆಯಲ್ಲಿ ಕೂರುವುದೆಂದರೆ ಬಹಳ ಬೇಜಾರಿನ ಸಂಗತಿ. ಆಗೀಗಲಾದರೂ ದೊಡ್ಡ ಅಥವಾ ಸಣ್ಣ ಪ್ರವಾಸಗಳಿಗೆ ಹೋದರೆ ಮನಸ್ಸಿಗೂ ಸುಖ ಎನ್ನುವ ತಲೆಮಾರಿನವರು ಈಗ ಹೆಚ್ಚು ಕಾಣಸಿಗುತ್ತಾರೆ. ಹೆಸರುವಾಸಿ ತಾಣಗಳಲ್ಲಿ ಸದಾ ಜನಜಂಗುಳಿಯಿರುತ್ತದೆ. ದೂರದ ಊರುಗಳೆಂದರೆ ಅದಕ್ಕೆ ತಯಾರಿ ಬೇಕು. ಹಲವು ದಿನಗಳ ಸಿದ್ಧತೆ, ಪ್ರಯಾಣ, ವಿಪರೀತ ಖರ್ಚು ಎಲ್ಲವೂ ಹೌದು. ವಯಸ್ಸಾದವರಿಗೆ ...

 • 3 months ago No comment

  ಬಿಜೆಪಿ ವಿರೋಧಿ ರಂಗ: ಪ್ರತಿಪಕ್ಷ ಸಭೆಯಲ್ಲಿ 20 ಪಕ್ಷಗಳು

  ಆರ್ಬಿಐ ,ಸಿಬಿಐ, ಚುನಾವಣಾ ಆಯೋಗದಂಥ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ನಾಯಕರು ಕಟುವಾಗಿ ಟೀಕಿಸಿದರು.   ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಪ್ರತಿಶಕ್ತಿಯನ್ನು ಕಟ್ಟುವ ಯತ್ನವಾಗಿ ನಡೆದ ಪ್ರತಿಪಕ್ಷ ಸಭೆಗೆ 20 ಪಕ್ಷಗಳ ನಾಯಕರು ಹಾಜರಾಗಿದ್ದರು. ಅಷ್ಟೇ ಅಚ್ಚರಿಯ ವಿಚಾರವೆಂದರೆ, ಈ ಸಭೆಗೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದಿಂದ ಯಾವುದೇ ಮುಖಂಡರು ಆಗಮಿಸಿರಲಿಲ್ಲ. ಡಿ.10ರಂದು, ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ...

 • 3 months ago No comment

  ಅರ್ಧನಾರಿ ಕಥೆಯ ಮತ್ತೆರಡು ಭಾಗಗಳು

  ‘ಮಧೋರುಬಗನ್’ (ಅರ್ಧನಾರಿ) ಎಂಬ ಕಾದಂಬರಿ ಬರೆವ ಮೂಲಕ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ಈಗ ಆ ಕಾದಂಬರಿಯ ಮತ್ತೆರಡು ಭಾಗಗಳ ಪ್ರಕಟಣೆಯೊಂದಿಗೆ ಸುದ್ದಿಯಾಗಿದ್ದಾರೆ. ಆ ಕಾದಂಬರಿಯ ಕೆಲವು ಭಾಗಗಳು ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿವೆ ಎಂದು ಆರೋಪಿಸಿದ್ದ ಬಲಪಂಥೀಯ ಕಾರ್ಯಕರ್ತರು ಹಲ್ಲೆಯೆಸಗಿದಾಗ, ತಮ್ಮ ಬರವಣಿಗೆ ಮೇಲೆ ಸ್ವಯಂ ನಿಷೇಧ ಹೇರಿಕೊಂಡಿದ್ದ ಮುರುಗನ್, ಇದೀಗ ಆ ಕಾದಂಬರಿ ಮುಗಿದಲ್ಲಿಂದಲೇ ಆರಂಭಿಸಿ ಮತ್ತೆರಡು ಭಾಗಗಳನ್ನು ಹೊರತಂದಿದ್ದಾರೆ. ಮೊದಲ ...

 • 3 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 3 months ago No comment

  ಅಲೆಗಳಾಗುವ ಹಾಡು

      ಕವಿಸಾಲು         ಕನಸುಗಳ ಜಾತ್ರೆ, ಮನಸುಗಳ ಹಬ್ಬ ಎಲ್ಲ ನಿಶ್ಯಬ್ದ, ಮೌನದಲಿ ಮನ ಬಿಡಿಸಿದ ಮೂರ್ತ ರೂಪಕ್ಕೆ ತದ್ರೂಪು ನಿನ್ನದೇ ಸೊಬಗು ಸುರಿವ ಮಳೆ, ಬೀಸೋ ಗಾಳಿ ಒದ್ದೆಯಾದ ಒಡಲಿನಲಿ ಉರಿವ ನನ್ನೆದೆಯ ಮೇಲೆ ಚಿತ್ತಾರ ಬಿಡಿಸುತ್ತವೆ ನಿನ್ನ ಬೆರಳು ಕರಿಕಪ್ಪು ಚಳಿ ರಾತ್ರಿಯಲಿ ಒಂದಪ್ಪುಗೆಯ ಧ್ಯಾನದಲಿ ಬೆನ್ನ ಸುಳಿ ಸೀಳಿ ಮೇಲೇರುವ ನಡುಕದಲಿ ನಿನ್ನೆದೆಯ ಹರವು ಯಾರೋ, ಯಾವತ್ತೋ ಮರಳ ...


Editor's Wall

 • 08 December 2018
  3 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 30 November 2018
  3 months ago No comment

  ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ

  ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...

 • 29 November 2018
  3 months ago No comment

  ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?

    ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.     ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ...

 • 09 November 2018
  4 months ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

 • 28 October 2018
  4 months ago No comment

  ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

    ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...