Share

ಕೆಸಿಆರ್ ರಾಜಕಾರಣ: ಮಹತ್ವಾಕಾಂಕ್ಷೆಯ ಆತುರದಲ್ಲಿನ ಗೊಂದಲ ಉದ್ದೇಶಿತವೇ?
ದ್ರವಿಡ

ಕೆಸಿಆರ್ ತೆಗೆದುಕೊಳ್ಳುತ್ತಿರುವ ಹೆಜ್ಜೆಗಳು, ಕೇಂದ್ರದಲ್ಲಿ ತಮ್ಮ ಪರವಾದ ಲಾಭಕರ ಬೆಳವಣಿಗೆಯೊಂದಕ್ಕಾಗಿ ಅವರು ನಿರೀಕ್ಷಿಸುತ್ತಿರುವ ಸುಳಿವನ್ನೂ, ಅದಕ್ಕಾಗಿ ಅವರು ಬಿಜೆಪಿಯ ಹಿತ ಕಾಯುವ ತೆರೆಮರೆಯ ಉದ್ದೇಶವನ್ನೇ ವಾಸ್ತವದಲ್ಲಿ ಪೂರೈಸಲು ತೊಡಗಿದಂತಿರುವುದನ್ನೂ ಕಾಣಿಸುತ್ತಿವೆ ಎನ್ನಿಸುವುದಿಲ್ಲವೆ?

 

15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಮಾನದಂಡವು ದಕ್ಷಿಣ ರಾಜ್ಯಗಳಿಗೆ ಮಾರಕವಾಗಲಿದೆಯೇ ಎಂಬ ಚರ್ಚೆಯೊಂದು ಮುನ್ನೆಲೆಗೆ ಬಂದ ಹೊತ್ತಲ್ಲಿ, ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಆಡುತ್ತಿರುವ ನಾಟಕ ಬೇರೆಯೇ ಆಗಿದೆ. ದಕ್ಷಿಣ ರಾಜ್ಯಗಳ ಒಕ್ಕೊರಲ ಧ್ವನಿಯನ್ನು ಕೇಂದ್ರದ ಮುಂದೆ ಮೊಳಗಿಸಬೇಕೆಂಬ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕರೆದಿದ್ದ ಸಭೆಗೆ ಗೈರುಹಾಜರಾಗುವ ಮೂಲಕ ತೆಲಂಗಾಣ ತೋರಿಸಿರುವ ಸುಳಿವು ಪಕ್ಕಾ ರಾಜಕೀಯ ರಣತಂತ್ರಕ್ಕೇ ಸಂಬಂಧಿಸಿದ್ದು ಎಂಬುದು ಸ್ಪಷ್ಟ. ದಕ್ಷಿಣ ರಾಜ್ಯಗಳು ಒಗ್ಗಟ್ಟಾಗಬೇಕೆಂಬ ಕೇರಳದ ಪ್ರತಿಪಾದನೆ ಆರ್ಥಿಕ ಉದ್ದೇಶಕ್ಕಿಂತಲೂ ರಾಜಕೀಯ ಪ್ರೇರಿತವಾದದ್ದೆಂದು ಟೀಕಿಸಿರುವ ಕೆಸಿಆರ್, ಹುಬ್ಬೇರಿಸುವಂತಿರುವ ತಮ್ಮ ನಡೆಯಲ್ಲೇ ಬೆರೆತ ರಾಜಕೀಯ ರಾಜಕೀಯ ಯಾರಿಗೂ ಕಾಣಿಸುತ್ತಿಲ್ಲವೆಂದು ಭ್ರಮಿಸುವುದು ಅಥವಾ ಹಾಗೆ ನಟಿಸುವುದು ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದಂತಿದೆ.

ಮೇಲುನೋಟಕ್ಕೆ ಕಾಣಿಸುವ ಅಂಶ ಇದು: 15ನೇ ಹಣಕಾಸು ಆಯೋಗ 2011ರ ಜನಗಣತಿಯನ್ನೇ ಗಣನೆಗೆ ತೆಗೆದುಕೊಂಡರೂ ತೆಲಂಗಾಣಕ್ಕೆ ಬೇರೆ ಬಗೆಯಲ್ಲಿ ಲಾಭವಾಗಲಿದೆ ಎಂಬುದು ಕೆಸಿಆರ್ ಲೆಕ್ಕಾಚಾರ. ಈ ಹಿನ್ನೆಲೆಯಲ್ಲಿ, ಕಡಿಮೆ ಅನುದಾನದ ಆತಂಕದಲ್ಲಿರುವ ದಕ್ಷಿಣದ ಇತರ ರಾಜ್ಯಗಳ ಗುಂಪನ್ನು ಸೇರುವ ಅಗತ್ಯ ಅವರಿಗೆ ಕಂಡಿಲ್ಲ. ಇದಲ್ಲದೆ, ಆಯೋಗದ ವಿಚಾರದಲ್ಲಿ ರಾಜ್ಯಕ್ಕೆ ಅತೃಪ್ತಿಕರವಾಗಿದ್ದುದು ಏನಾದರೂ ಇದ್ದಲ್ಲಿ ಯಾವಾಗ ಬೇಕಾದರೂ ಅದನ್ನು ಕೇಂದ್ರದ ಬಳಿ ಹೇಳಿಕೊಳ್ಳುವ ಬಹಳಷ್ಟು ಅವಕಾಶಗಳು ಇವೆಯೆಂಬುದು ಕೆಸಿಆರ್ ಭಾವನೆ. ಈ ಕಾರಣದಿಂದಲೂ ದಕ್ಷಿಣ ರಾಜ್ಯಗಳ ಸಮಾವೇಶದಲ್ಲಿ ಪಾಲ್ಗೊಳ್ಳದಿರಲು ಕೆಸಿಆರ್ ತೀರ್ಮಾನಿಸಿದರೆನ್ನಲಾಗಿದೆ. ಆದರೂ, ಕೆಸಿಆರ್ ನಿರ್ಧಾರದ ಹಿಂದಿನ ನಿಜ ಬೇರೆಯೇ ಇದೆಯೆಂಬುದು ಮಹಾ ರಹಸ್ಯವೇನೂ ಅಲ್ಲ.

ಕಾಂಗ್ರೆಸ್ಸೇತರ ತೃತೀಯ ರಂಗದ ಸೂತ್ರಧಾರಿಯಾಗಲು ಹೊರಟಿರುವ ಅವರಿಗೆ, 15ನೇ ಹಣಕಾಸು ಆಯೋಗದ ವಿರುದ್ಧದ ದಕ್ಷಿಣ ರಾಜ್ಯಗಳ ಒಗ್ಗಟ್ಟಿನ ಇಂಗಿತ ಬಿಜೆಪಿ ವಿರೋಧಿ ಇರಾದೆಯದ್ದಾಗಿಯೇ ಕಂಡಿದೆ. 15ನೇ ಹಣಕಾಸು ಆಯೋಗದ ವಿರುದ್ಧ ದಕ್ಷಿಣ ರಾಜ್ಯಗಳು ಒಂದಾಗುವುದೆಂದರೆ ಅದು ಕಾಂಗ್ರೆಸ್ ಕೈಯನ್ನು ಬಲಪಡಿಸುವುದೇ ಆಗಿದೆ ಎಂಬುದು ಕೆಸಿಆರ್ ಭಯ. ತೆಲಂಗಾಣದಲ್ಲಿ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್ ವಿಚಾರದಲ್ಲಿ ಬೆಂಬಲವಾಗುವಂಥ ನಡೆಯೊಂದಕ್ಕೆ ಜೊತೆಯಾಗುವುದು ಅವರಿಗೆ ಬೇಕಿಲ್ಲ.

ಆದರೆ, ಗೊಂದಲದಿಂದ ಕೂಡಿರುವ ಕೆಸಿಆರ್ ನಡೆಗಳು ಕಾಂಗ್ರೆಸ್ ವಿರೋಧಿಯಾಗುವುದರ ಜೊತೆಜೊತೆಗೇ ಇತರ ಪ್ರಾದೇಶಿಕ ಪಕ್ಷಗಳ ವಿಶ್ವಾಸವನ್ನೂ ಕಳೆದುಕೊಳ್ಳುವಂಥ ನಿಟ್ಟಿನಲ್ಲೇ ಇವೆ. ಇತ್ತೀಚೆಗೆ ತೆಲಂಗಾಣ ಅಸೆಂಬ್ಲಿಯಲ್ಲಿ ಮಾತನಾಡುತ್ತ ಉತ್ತರ-ದಕ್ಷಿಣ ಭೇದಭಾವದ ಬಗ್ಗೆ ಕೆಸಿಆರ್ ತಕರಾರೆತ್ತಿದ್ದರು. “ಉತ್ತರ ದಕ್ಷಿಣದ ಹೆಸರಲ್ಲಿ ಇಬ್ಭಾಗವಾಗುವ ಮಾತನ್ನು ಕೆಲ ರಾಜ್ಯಗಳು ಆಡುತ್ತಿವೆ. ಕೇಂದ್ರವು ದಕ್ಷಿಣ ರಾಕ್ಯಗಳ ವಿಷಯವಾಗಿ ತಾರತಮ್ಯ ಮಾಡುತ್ತಿದೆ ಎಂಬ ಆಕ್ಷೇಪ ಅವುಗಳದ್ದು. ಇಂಥದೊಂದು ನಿಲುವನ್ನು ನಾನಂತೂ ಬೆಂಬಲಿಸಲಾರೆ. ದೇಶದ ಒಗ್ಗಟ್ಟು ಮತ್ತು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಕೇಂದ್ರ ಸರ್ಕಾರ ಈ ಥರದ ಸನ್ನಿವೇಶ ಭವಿಷ್ಯದಲ್ಲಿ ಎದುರಾಗದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು” ಎಂದಿದ್ದರು.

ಲೋಕಸಭೆಯಲ್ಲಿ ವೈಎಸ್ಆರ್ ಕಾಂಗ್ರೆಸ್, ತೆಲುಗು ದೇಶಂ ಪಕ್ಷಗಳ ವಿರುದ್ಧದ ನಿಲುವು ತೆಗೆದುಕೊಳ್ಳುತ್ತಿರುವ ತೆಲಂಗಾಣ ರಾಷ್ಟ್ರ ಸಮಿತಿ ಅದರಿಂದ ಬಿಜೆಪಿಗೆ ಲಾಭ ಮಾಡಿಕೊಡುವ ದಾರಿ ತೆರೆಯುವುದು ನೋಡಿದರೆ, ಅದಕ್ಕೆ ಒಂದು ಸ್ಪಷ್ಟತೆಯೇ ಇಲ್ಲವೆಂಬ ಅನುಮಾನ ಬರುವುದು ಸಹಜ. ಆದರೆ, ಬಿಜೆಪಿಗೆ ಲಾಭ ಮಾಡಿಕೊಡುವ ಉದ್ದೇಶವೇ ಕೆಸಿಆರ್ ಅವರದಾಗಿದ್ದು, ಎಲ್ಲವೂ ಆ ಹಿನ್ನೆಲೆಯಲ್ಲಿ ನಿಯೋಜಿತವಾದದ್ದೇ ಎಂಬ ಅನುಮಾನವನ್ನೂ ಇದರೊಂದಿಗೇ ಎತ್ತುವುದರ ಅಗತ್ಯವೂ ಸದ್ಯದ ಸ್ಥಿತಿಯಲ್ಲಿ ಕಾಣದೇ ಇರುವುದಿಲ್ಲ.

ಇನ್ನೂ ಒಂದು ಸೂಕ್ಷ್ಮವಿದೆ. ರಾಜ್ಯಕ್ಕೆ ಹಣಕಾಸು ನೆರವು ಕೊಡುವ ಕೇಂದ್ರ ಅದರೊಂದಿಗೆ ನೂರೆಂಟು ಷರತ್ತುಗಳನ್ನೂ ಹೊರಿಸುತ್ತಿದೆ. ಹಣವನ್ನು ಹೇಗೆ ವ್ಯಯಿಸಬೇಕು ಎಂಬುದನ್ನು ತೀರ್ಮಾನಿಸುವುದು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಗೆದ್ದ ರಾಜ್ಯ ಸರ್ಕಾರವೇ ಹೊರತು ಅದು ದೆಹಲಿ ದರ್ಬಾರಿನ ಮೂಗಿನ ನೇರಕ್ಕೆ ಆಗಬೇಕಾದ್ದಲ್ಲ ಎಂಬ ಅಸಮಾಧಾನ ತೆಲಂಗಾಣವನ್ನು ಕಾಡಿರಲೇಬೇಕಲ್ಲವೇ? ಇಂಥ ಸ್ಥಿತಿಯಲ್ಲಿ ಇತರ ರಾಜ್ಯಗಳೊಂದಿಗಿನ ತಿಕ್ಕಾಟ ತೆಲಂಗಾಣಕ್ಕೆ ಅಪೇಕ್ಷಿತ ನಡೆ ಖಂಡಿತ ಆಗದು. ಹೀಗಿರುವಾಗಲೂ ಕೆಸಿಆರ್ ತೆಗೆದುಕೊಳ್ಳುತ್ತಿರುವ ಹೆಜ್ಜೆಗಳು, ಕೇಂದ್ರದಲ್ಲಿ ತಮ್ಮ ಪರವಾದ ಲಾಭಕರ ಬೆಳವಣಿಗೆಯೊಂದಕ್ಕಾಗಿ ಅವರು ನಿರೀಕ್ಷಿಸುತ್ತಿರುವ ಸುಳಿವನ್ನೂ, ಅದಕ್ಕಾಗಿ ಅವರು ಬಿಜೆಪಿಯ ಹಿತ ಕಾಯುವ ತೆರೆಮರೆಯ ಉದ್ದೇಶವನ್ನೇ ವಾಸ್ತವದಲ್ಲಿ ಪೂರೈಸಲು ತೊಡಗಿದಂತಿರುವುದನ್ನೂ ಕಾಣಿಸುತ್ತಿವೆ ಎನ್ನಿಸುವುದಿಲ್ಲವೆ? ತಮ್ಮ ಸಂಬಂಧಿ ಜೋಗಿನಪಲ್ಲಿ ಸಂತೋಷ್ ಕುಮಾರ್ ಅವರನ್ನು ರಾಜ್ಯಸಭೆಗೆ ಕಳಿಸಿರುವ ಕೆಸಿಆರ್ ತೀರ್ಮಾನವೂ ರಾಷ್ಟ್ರ ರಾಜಕಾರಣದ ಮೇಲೆ ತೆಲಂಗಾಣದಿಂದಲೇ ಹಿಡಿತ ಸಾಧಿಸುವ ಮಹತ್ವಾಕಾಂಕ್ಷೆಯದ್ದೆಂಬುದನ್ನು ಬೇರೆ ಹೇಳಬೇಕಿಲ್ಲವಲ್ಲವೆ?

Share

Leave a comment

Your email address will not be published. Required fields are marked *

Recent Posts More

  • 1 week ago No comment

    ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

            ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

  • 2 weeks ago No comment

    ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

          ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

  • 2 weeks ago No comment

    ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

    ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

  • 2 weeks ago No comment

    ಉಷಾ ಚಿತ್ತ | ಮೊಲದ ಮರಿ ಗಿಫ್ಟ್

          ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

  • 3 weeks ago No comment

    ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

    ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

  • 14 April 2019
    1 week ago No comment

    ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

            ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

  • 04 April 2019
    3 weeks ago No comment

    ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

    ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

  • 29 March 2019
    4 weeks ago One Comment

    ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                      ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

  • 26 March 2019
    4 weeks ago No comment

    ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

    ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

  • 12 March 2019
    1 month ago No comment

    ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

    ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...