Share

ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್
ಡಾ. ಪ್ರೇಮಲತ ಬಿ

 

 

ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.

 

 

 

 

“ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ!

ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ತೊರೆಗಳು, ಜರಿಗಳು, ಜಲಪಾತಗಳನ್ನು ಒಳಗೊಂಡ ಸ್ವಚ್ಛ ದೇಶ ಯಾರಿಗೆ ತಾನೆ ಇಷ್ಟವಾಗುವುದಿಲ್ಲ? ಜೊತೆಗೆ ಸಿನಿಮಾಗಳಲ್ಲಿ, ದೂರದರ್ಶನದಲ್ಲಿ ಪದೇ ಪದೇ ಕಾಣಬರುವ ಈ ಚೆಲುವ ಗಣಿಯ ನೆಲಕ್ಕೆ ಕಾಲಿಡುವ ಕಚಗುಳಿಗಾಗಿ ಎಲ್ಲರಲ್ಲೂ ಸಂತಸ.

ಮರುದಿನ ರಸ್ತೆಯ ಇಕ್ಕೆಲಗಳಲ್ಲಿ ಮೈಲುಗಟ್ಟಳೆ ಹಾಸಿ ಹಬ್ಬಿದ ಸ್ವಿಟ್ಜರ್ಲ್ಯಾಂಡಿನ ಚೆಲುವನ್ನು ಕಣ್ಣುಗಳಲ್ಲಿ, ಮನದಲ್ಲಿ ತುಂಬಿಕೊಳ್ಳುತ್ತ ನಾವು ಮೊದಲು ಬಂದಿಳಿದ ಜಾಗ ಲ್ಯೂಸರ್ನ್ ಎನ್ನುವ ಪಟ್ಟಣ.

ಲ್ಯೂಸರ್ನ್ ನದಿ ಮತ್ತು ಸುತ್ತಲಿನ ಪರ್ವತ ಶ್ರೇಣಿಗಳು

 

ಲ್ಯೂಸರ್ನ್ ಅನ್ನುವುದು ಸ್ವಿಟ್ಜರ್ಲ್ಯಾಂಡಿನ ಪುಟ್ಟ ನಕ್ಷೆಯಲ್ಲಿ ಕೇಳಿಬರುವ ದೊಡ್ಡ ಹೆಸರು. ಸ್ವಿಟ್ಜರ್ಲ್ಯಾಂಡಿಗೆ ಹೋಗಿ ಬರುವವರೆಲ್ಲ ಸಾಧರಣವಾಗಿ ಮಧ್ಯಯುಗದಲ್ಲಿ ಅಸ್ಥಿತ್ವಕ್ಕೆ ಬಂದು, ಇಂದಿನ ಆಧುನಿಕ ಪುಟ್ಟ ನಗರವಾಗಿ ಬೆಳೆದಿರುವ ಈ ಜಾಗಕ್ಕೆ ಹೋಗಿಯೇ ಬರುತ್ತಾರೆ. ಸ್ವಿಟ್ಜರ್ಲ್ಯಾಂಡಿನ ಹೆಸರನ್ನು ಕೇಳಿದ ಕೂಡಲೇ ನೈಸರ್ಗಿಕ ಸೌಂದರ್ಯದ ಭೂಬಾಗದ ಕಲ್ಪನೆ ಈಗಾಗಲೇ ಈ ನಾಡನ್ನು ನೋಡಿದವರಿಗೂ, ನೋಡದವರಿಗೂ ಒಟ್ಟಿಗೇ ಆಗುತ್ತದೆ ತಾನೆ? ಲ್ಯೂಸರ್ನ್ ಅದಕ್ಕೆ ಪುಟವಿಟ್ಟಂತ ನಗರ. ಚೆಲುವು, ಆಧುನಿಕ ಸವಲತ್ತುಗಳು, ಚರಿತ್ರೆ ಎಲ್ಲವೂ ಒತ್ತಟ್ಟಿಗೆ ಇರುವ ಜಾಗ. ಜೊತೆಗೆ ಹಿಮಚ್ಛಾದಿತ ಪರ್ವತಗಳ ನಡುವೆ ಹರಿವ ಲ್ಯೂಸರ್ನ್ ಎನ್ನುವ ನದಿಯ ದಂಡೆಯ ಮೇಲೆ ಬೆಳೆದಿರುವ ಈ ನಗರಕ್ಕೆ ಅದೇ ನದಿಯ ಹೆಸರಿದೆ.

ಕೃಷಿ ಆಧಾರಿತವಾಗಿ ಶುರುವಾದಾಗ ಈ ನಗರದಲ್ಲಿ ಕೆಲವೇ ಸಾವಿರ ಮಂದಿ ಜನರಿದ್ದರಂತೆ. ನಗರದ ಕೈಗಾರಿಕೀಕರಣದ ನಂತರ ಲ್ಯೂಸರ್ನ್ ಮಧ್ಯ ಸ್ವಿಟ್ಜರ್ಲ್ಯಾಂಡಿಲ್ಲೇ ಅತಿ ಹೆಚ್ಚಿನ ಜನರಿರುವ ನಗರವಾಗಿ ಬೆಳೆದಿದೆ. ಬರೀ ಲ್ಯೂಸರ್ನ್ ಒಂದನ್ನೇ ತಗೊಂಡರೆ ಕೇವಲ 81,000 ಜನರಿರುವ ಈ ನಗರ, ಸುತ್ತಮುತ್ತಲಿನ ಎಲ್ಲ ಹಳ್ಳಿಗಳ ಜನರನ್ನೂ ಸೇರಿಸಿದರೆ 2,50,000 ಜನರಿರುವ ನಗರವಾಗಿದೆ.

ಲಯನ್ ಮಾನ್ಯುಮೆಂಟ್

 

ಲ್ಯೂಸರ್ನ್ ನಗರ ಪ್ರವಾಸೀ ತಾಣವಾಗಲು ಹಲವು ಕಾರಣಗಳಿವೆ. ನಗರದ ಹಳೆಯ ಭಾಗದಲ್ಲಿ 14ನೇ ಶತಮಾನದಲ್ಲಿ ನಗರದ ರಕ್ಷಣೆಗಾಗಿ ಕಟ್ಟಿದ 14ನೇ ಶತಮಾನದ 870 ಮೀಟರು ಉದ್ದದ ಗೋಡೆಯ ಅವಶೇಷವಿದೆ. ಇದನ್ನು ಕೆಡವದೆ ಚರಿತ್ರೆಯ ಭಾಗವಾಗಿ ಜೋಪಾನವಾಗಿ ಕಾಪಾಡಿಕೊಂಡಿದ್ದಾರೆ. ಇದೇ ಸುಮಾರಿನ 1333ನೇ ಇಸವಿಯಲ್ಲಿ ಕಟ್ಟಿದ ಮರದ ಸೇತುವೆ ಲ್ಯೂಸರ್ನ್ ನದಿಯ ಒಂದು ಪುಟ್ಟ ಭಾಗದ ಮೇಲೆ ಹಾದುಹೋಗಿದೆ. ಮೇಲ್ಛಾವಣಿ ಇರುವ ಸೇತುವೆಗಳಲ್ಲಿ ಇದು ಇಡೀ ಯೂರೋಪಿನಲ್ಲೇ ಪುರಾತನವಾದ ಸೇತುವೆಯಾಗಿದೆ. ಲ್ಯೂಸರ್ನ್ ನದಿ ಈ ನಗರವನ್ನು ಬಿಟ್ಟು ಮುಂದೆ ಹರಿದು ರಿಯುಸ್ ನದಿಯಾಗುತ್ತದೆ. ಪಿಲಾಟಸ್ ಮತ್ತು ರಿಗಿ ಸ್ವಿಸ್ ಪರ್ವತ ಶ್ರೇಣಿಯ ನಡುವೆ ನೀಲಿ ನದಿಯಾಗಿ ಕೋರೈಸುತ್ತದೆ.

ಯೂರೋಪಿನ ಅತ್ಯಂತ ಪುರಾತನವಾದ ಮೇಲ್ಛಾವಣಿ ಇರುವ ಮರದ ಚಾಪೆಲ್ ಸೇತುವೆ

 

ಹದಿನಾಲ್ಕನೇ ಶತಮಾನದ ಮರದ ಸೇತುವೆ ಲ್ಯೂಸರ್ನ್ ನಗರದ ನಡುವೆಯೇ ಹಲವು ಆಧುನಿಕ ಕಟ್ಟಡಗಳ ನಡುವೆ ಹಾದು ಹೋಗುತ್ತದೆ. ಈ ಸೇತುವೆಗೆ 1586ರಲ್ಲಿ ಒಂದು ಪ್ರಾರ್ಥನಾ ಮಂದಿರವನ್ನು ಜೋಡಿಸಿದರಂತೆ. ಅಂದಿನಿಂದ ಇದನ್ನು ಚಾಪೆಲ್ ಬ್ರಿಡ್ಜ್ ಎಂತಲೂ ಕರೆಯುತ್ತಾರೆ. ಒಂದೆರೆಡು ಸಣ್ಣ ಅಂಗಡಿಗಳೂ ಇವೆ. ಸೇತುವೆಯ ಎರಡೂ ಭಾಗದಲ್ಲಿ ಸಾಲು ಸಾಲಾಗಿ ಬಳ್ಳಿಗಳನ್ನೂ ಹೂ ಗಿಡಗಳನ್ನೂ ಕುಂಡಗಳಲ್ಲಿ ಬೆಳೆಸಿದ್ದಾರೆ. ಮೇಲ್ಛಾವಣಿಯ ಪ್ರತಿ ಹಂತದ ತ್ರಿಕೋನದಲ್ಲೂ ಹದಿನಾಲ್ಕನೇ ಶತಮಾನದ ಚಿತ್ರಕಲೆಗಳಿವೆ. ಲ್ಯೂಸರ್ನ್ ನಗರ ಶುರುವಾದಾಗಿಂದಲೂ ಅದರ ಚರಿತ್ರೆಯನ್ನೆಲ್ಲ ಈ ಚಿತ್ರಗಳಲ್ಲಿ ಸೆರೆಹಿಡಿದಿದ್ದಾರೆ. ಯಾರೋ ಮೈಮರೆತು ಎಸೆದ ಸಿಗರೇಟು ಮೋಟಿನಿಂದ ನಡೆದ ಬೆಂಕಿ ಅಪಘಾತದಲ್ಲಿ ಈ ಸೇತುವೆಗೆ 1993ರಲ್ಲಿ ಬೆಂಕಿ ತಗುಲಿ ಬಹುಭಾಗ ನಾಶವಾಯ್ತಂತೆ. ಹಲವು ಚಿತ್ರಗಳು ಅದರಲ್ಲಿ ದಹಿಸಿ ಹೋದವಂತೆ. ಬಹುತೇಕ ಚಿತ್ರಗಳನ್ನು ಮತ್ತೆ ನಕಲು ಮಾಡಿದ್ದಾರಾದರೂ ಹಲವು ತ್ರಿಕೋನಗಳನ್ನು ಖಾಲಿ ಬಿಡಲಾಗಿದೆ. 870 ಮೀಟರು ಉದ್ದದ ಸೇತುವೆಯ ಮೇಲೆ ಪ್ರವಾಸಿಗರು ನಡೆದಾಡಿ ಬಂದು ಚರಿತ್ರೆಯ ಭಾಗವಾಗಿ ಆನಂದಿಸುತ್ತಾರೆ.

ಪ್ರಸಿದ್ಧ ಸ್ವಿಸ್ ಚಾಕೋಲೇಟು ಅಂಗಡಿಗಳು- ಗೋಡೆಯಿಡೀ ಚಾಕಲೇಟು ಜಲಪಾತ

 

ಪ್ರವಾಸಿಗರು ನೋಡುವ ಮತ್ತೊಂದು ಜಾಗ ಬೃಹದಾಕಾರದ ಬಂಡೆಯಲ್ಲಿ ಕೊರೆದ ಬಾಣ ಮೆಟ್ಟು ನೋವಿನಲ್ಲಿ ಸಾಯುತ್ತಿರುವ ಸಿಂಹ. 1792ರಲ್ಲಿ ಫ್ರೆಂಚ್ ದೊರೆಯೊಬ್ಬ ತನ್ನ ಅರಮನೆಯ ಸುತ್ತ ಸುಮಾರು 800 ಸ್ವಿಸ್ ಸೈನಿಕರನ್ನು ನೇಮಿಸಿಕೊಂಡಿದ್ದನಂತೆ. ಆ ದೊರೆಯ ಸೋಮಾರಿತನವನ್ನು ಸಹಿಸದ ರಿಪಬ್ಲಿಕ್ ಆರ್ಮಿ ಮತ್ತು ಜನರು ದಂಗೆಯೆದ್ದು ಅರಮನೆಗೆ ದಾಳಿಯಿಟ್ಟ ಸಂಧರ್ಭದಲ್ಲೇ ಸ್ವಿಸ್ ಸೈನಿಕರ ಬಳಿ ಯಾವುದೇ ರೀತಿಯ ಬಂದೂಕು, ತುಪಾಕಿಗಳೂ ಇಲ್ಲವಾಗಿದ್ದವು. ಆದರೆ ಶೌರ್ಯಕ್ಕೆ ಹೆಸರಾದ ಸ್ವಿಸ್ ಸೈನಿಕರು ಬರಿಗೈಯಲ್ಲೆ ಅವರನ್ನು ದಿನವಿಡೀ ಎದುರಿಸಿದರಂತೆ. ಸಂಜೆಯ ವೇಳೆಗೆ 650 ಜನ ಸೈನಿಕರ ಮಾರಣಹೋಮವಾಗಿ, ಇನ್ನಿತರರು ಕೈದಿಗಳಾಗಿ ಅಪಾರ ಯಾತನೆಯನ್ನು ಅನಿಭವಿಸಿ ನಂತರದ ತಿಂಗಳಲ್ಲಿ ಹತ್ಯೆಗೊಳಗಾದರಂತೆ. ಅವರ ಸ್ವಾಮಿನಿಷ್ಠೆಯನ್ನು, ಜೊತೆಗೆ ಸ್ವಿಸ್ ಸೈನಿಕರ ವೀರಾವೇಶವನ್ನೂ ಹಿಡಿದಿಟ್ಟ ಕೆತ್ತನೆಯಿದು. ಸಂಜೆಯ ವೇಳೆಯಲ್ಲಿ ನಾನಾ ರೀತಿಯ ನೆರಳು, ಬೆಳಕಿನಾಟ, ಬಣ್ಣದ ಲೈಟುಗಳ ಮೂಲಕ ಈ ಕಥೆಯನ್ನು ಹೇಳಲಾಗುತ್ತದೆ.

ಲ್ಯೂಸರ್ನ್ ಸರೋವರದಲ್ಲಿ ದೋಣಿ ಯಾನ, ಪಿಲಾಟಸ್ ಪರ್ವತಾರೋಣ, ಗ್ಲೇಸಿಯರ್ ಗಾರ್ಡನ್, ಟ್ರಾನ್ಸಪೋರ್ಟ್ ಮ್ಯೂಸಿಯಂ ಹೀಗೆ ನಾನಾ ಆಕರ್ಷಣೆಗಳಿರುವ ಈ ಸುಂದರ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಭಾರೀ ಪ್ರಸಿದ್ದ ಸ್ವಿಟ್ಜರ್ಲ್ಯಾಂಡಿನ ಚಾಕಲೇಟುಗಳು, ವಾಚುಗಳು, ದಿರಿಸುಗಳನ್ನು ಮಾರುವ ಹಲವು ಮಳಿಗೆಗಳಿದ್ದರೂ ಭಾರೀ ದುಬಾರಿ ಬೆಲೆ ಎನ್ನಿಸಿತು. ಇಲ್ಲಿಗೆ ಎರಡೆರಡು ಬಾರಿ ಹೋಗಿಬಂದಿದ್ದೇನಾದರೂ ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರವಿದು.

ಡಾ. ಪ್ರೇಮಲತ ಬಿ

ದಂತವೈದ್ಯೆ. ಕಳೆದ 15 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ಹಲವಾರು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ. ಕಥೆ, ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನಿತರು.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 1 week ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 1 week ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  3 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...