Share

ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…
ಮುದ್ದು ತೀರ್ಥಹಳ್ಳಿ

 

 

 

ಪ್ರಸ್ತಾಪ

 

 

 

 

 

ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.

 

ತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ಜವಾಬ್ದಾರಿ ಹೊತ್ತ National Council for Educational Research and Training (NCERT) ಸರ್ಕಾರಿ ಸಂಸ್ಥೆಯು ಒಂಭತ್ತನೇ ತರಗತಿಯ ಪಠ್ಯ ಪುಸ್ತಕದಿಂದ ಮೂರು ಅಧ್ಯಾಯಗಳನ್ನು ತೆಗೆದು ಹಾಕಿದೆ. ಪಠ್ಯ ಪುಸ್ತಕದ ಪುನರ್ ರಚನೆಯ ಸಂದರ್ಭದಲ್ಲಿ ಸಮಾಜ ವಿಜ್ಞಾನ ವಿಷಯ “ಭಾರತ ಮತ್ತು ಸಮಕಾಲೀನ ಸಮಾಜ” ಎಂಬ ವಿಭಾಗದ “ವಸ್ತ್ರ: ಒಂದು ಸಾಮಾಜಿಕ ಇತಿಹಾಸ”, “ಇತಿಹಾಸ ಮತ್ತು ಕ್ರೀಡೆ”, ಹಾಗೂ “ರೈತ ಮತ್ತು ಹಿಡುವಳಿದಾರ” ಎಂಬುವ ಸುಮಾರು ಎಪ್ಪತ್ತು ಪುಟಗಳ ಮೂರು ಅಧ್ಯಾಯಗಳನ್ನು ಕೈಬಿಡಲು ನಿರ್ಧರಿಸಿದೆ. ಮುಂದಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಲಭ್ಯವಾಗುವ ನಿಟ್ಟಿನಲ್ಲಿ ಈ ತಿಂಗಳಿನಲ್ಲೇ ಮರುಪರಿಶೀಲನೆ ಮಾಡಿದ ಪುಸ್ತಕಗಳು ಮುದ್ರಣಗೊಳ್ಳಲು ತಯಾರಾಗಿವೆ.

ಚಿಂತಿಸಬೇಕಾದ ಸಂಗತಿಯೆಂದರೆ ಈ ಮೂರೂ ಅಧ್ಯಾಯಗಳು ಇತಿಹಾಸದಲ್ಲಿ ನಡೆದ ಜಾತಿ ಸಂಘರ್ಷ, ವಸಾಹತುಶಾಹಿ ಆಡಳಿತ ಹಾಗೂ ಲಿಂಗಭೇದದಂತಹ ಸಾಮಾಜಿಕ ಪಿಡುಗುಗಳ ಕುರಿತು ವಿವರವನ್ನು ಹೊಂದಿದ್ದವು. ಈ ಮೂರು ಅಧ್ಯಾಯಗಳನ್ನು ತೆಗೆದು ಹಾಕಬೇಕೆಂದು 2016ರಲ್ಲೇ ಚಿಂತನೆ ನಡೆಸಲಾಗಿತ್ತು ಹಾಗೂ ಇದೇ ಕಾರಣದಿಂದಾಗಿ Central Board of Secondary Education (CBSE)ಯು ಈ ಅಧ್ಯಾಯಗಳಿಂದ ಯಾವುದೇ ರೀತಿಯ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಕೇಳಕೂಡದೆಂದು ಎಲ್ಲಾ ಶಾಲೆಗಳಿಗೆ ಆದೇಶವನ್ನು ಹೊರಡಿಸಿತ್ತು. ಆದರೆ ಮತ್ತೊಮ್ಮೆ ಮರುಪರಿಶೀಲನೆ ನಡೆಸುವ ವರೆಗೂ ಈ ಅಧ್ಯಾಯಗಳೂ ಪಠ್ಯಪುಸ್ತಕದಲ್ಲಿದ್ದವು. ವಿಜ್ಞಾನ, ಗಣಿತ ಹಾಗೂ ಇನ್ನಿತರ ವಿಷಯಗಳ ಪಠ್ಯಪುಸ್ತಕಗಳನ್ನು ಮರುಪರಿಶೀಲಿಸದೇ ಕೇವಲ ಸಮಾಜ ವಿಜ್ಞಾನದಲ್ಲಿನ ಅಧ್ಯಾಯಗಳನ್ನೇ ಕೈಬಿಡಲು ಕಾರಣವೇನು? ವಿದ್ಯಾರ್ಥಿಗಳ ಹೊರೆಯನ್ನು ಕಡಿಮೆಗೊಳಿಸಲು ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿನ ಕಠಿಣ ಅಧ್ಯಾಯಗಳನ್ನು ತೆಗೆದು ಹಾಕದೇ ಸಮಾಜ ವಿಜ್ಞಾನದಲ್ಲಿನ ಸುಲಭದ ಅಧ್ಯಾಯಗಳನ್ನು ಬಿಟ್ಟು ಹಾಕಿದ್ದೇಕೆ? ಹೀಗೆ ಪ್ರಮುಖ ಸಾಮಾಜಿಕ ವಿಚಾರಗಳನ್ನೊಳಗೊಂಡ ಅಧ್ಯಾಯಗಳನ್ನು ಕೈಬಿಡುವ ಮೂಲಕ ಸರ್ಕಾರ ಉದ್ದೇಶಪೂರ್ವಕವಾಗಿ ಇತಿಹಾಸವನ್ನು ಮುಚ್ಚಿಡುವ ಕೆಲಸ ಮಾಡುತ್ತಿದೆಯೇ?

ಅಷ್ಟಕ್ಕೂ ಈ ಕೈಬಿಡಲಾದ ಅಧ್ಯಾಯಗಳಲ್ಲಿ ಏನಿತ್ತೆಂದು ನೋಡುವುದಾದರೆ, ಮೊದಲ ಅಧ್ಯಾಯ, “ವಸ್ತ್ರ: ಒಂದು ಸಾಮಾಜಿಕ ಇತಿಹಾಸ”ವು ಜಾತಿ ಸಂಘರ್ಷ ಮತ್ತು ವಸ್ತ್ರ ಸಂಸ್ಕೃತಿಯ ಇತಿಹಾಸವನ್ನು ಬಿಚ್ಚಿಡುತ್ತದೆ. ಎಲ್ಲಾ ವರ್ಗದ ಜನರು ಉಡುಪುಗಳನ್ನು ಧರಿಸಲು ಸಾಮಾಜಿಕ ಚಳುವಳಿಗಳು ಯಾವ ರೀತಿ ಪ್ರಭಾವ ಬೀರಿವೆ ಎಂದು ವಿವರಿಸುವಾಗ ಸ್ತನಗಳ ಸುಂಕವನ್ನು ವಿರೋಧಿಸಿ ಕೇರಳ ಹಾಗೂ ತಮಿಳುನಾಡಿನ ಕೆಲ ಭಾಗಗಳು ಸೇರಿದಂತೆ ದಕ್ಷಿಣ ಭಾರತದಲ್ಲಾದ ಚಳುವಳಿಯ ಕುರಿತು ಈ ಅಧ್ಯಾಯವು ಹೇಳುತ್ತದೆ. ನಿರ್ದಿಷ್ಟ ಜಾತಿಯ ಜನರು ನಿರ್ದಿಷ್ಟವಾದ ವಸ್ತ್ರಗಳನ್ನೇ ಧರಿಸಬೇಕೆಂಬ ನಿಯಮವಿದ್ದ ಆ ಕಾಲದಲ್ಲಿ ನಾದಾರ್ ಎಂಬ ಕೆಳವರ್ಗಕ್ಕೆ ಸೇರಿದ ಪುರುಷರು ಹಾಗೂ ಮಹಿಳೆಯರು ತಮ್ಮ ಎದೆಯ ಮೇಲೆ ಬಟ್ಟೆಯನ್ನು ಧರಿಸಕೂಡದೆಂದು ನಾಯರ್ ಎಂಬ ಮೇಲ್ಜಾತಿಯ ಪಂಗಡದವರು 1800 ಇಸವಿಯ ಆಸುಪಾಸಿನಲ್ಲಿ ಕಾನೂನನ್ನು ತಂದರು. ಯಾರಾದರೂ ಎದೆಯ ಮೇಲೆ ವಸ್ತ್ರಗಳನ್ನು ಧರಿಸಬೇಕೆಂದಿದ್ದರೆ ಅವರು “ಸ್ತನಗಳ ತೆರಿಗೆ”ಯನ್ನು (ಮುಲಕ್ಕರಂ) ಭರಿಸಬೇಕಿತ್ತು. ಮಹಿಳೆಯರ ಸ್ತನಗಳ ಗಾತ್ರದ ಮೇಲೆ ಈ ತೆರಿಗೆಯ ದರವು ನಿರ್ಧಾರವಾಗುತ್ತಿತ್ತು. 1822 ಇಸವಿಯಲ್ಲಿ ಇದರ ವಿರುದ್ಧ “ಚನ್ನಾರ್ ದಂಗೆ” ಪ್ರಾರಂಭವಾಯಿತಲ್ಲದೇ ನಾದಾರ್ ಹಾಗೂ ಎಜವ ಪಂಗಡಕ್ಕೆ ಸೇರಿದ ಮಹಿಳೆಯರು ಮೇಲ್ಜಾತಿಯ ಸ್ರ್ತೀಯರಿಗಿರುವ ಉಡುಪಿನ ಹಕ್ಕು ತಮಗೂ ಬೇಕೆಂದು ದನಿಯೆತ್ತಿದರು. ಈ ಘಟನೆಯು ಮಹಿಳೆಯರ ಸಮಾನತೆ ಹಾಗೂ ಹಕ್ಕುಗಳ ವಿಷಯದಲ್ಲಿ ಮಾತ್ರವಲ್ಲದೇ ಹಿಂದಿನ ಜಾತಿವ್ಯವಸ್ಥೆ ಹಾಗೂ ಮೇಲ್ಜಾತಿ ಮತ್ತು ಬ್ರಿಟೀಷರೊಂದಿಗಿನ ಕೆಳಜಾತಿಯವರ ಸಂಗರ್ಷದ ಕುರಿತು ಮಾಹಿತಿ ನೀಡುತ್ತದೆ. ಸಮಾಜದಲ್ಲಿದ್ದ ವರ್ಣಾಶ್ರಮ ವ್ಯವಸ್ಥೆಯ ಚಿತ್ರಣವನ್ನು ಕಟ್ಟಿಕೊಡುವಂತಹ ಅಧ್ಯಾಯವೊಂದನ್ನು ತೆಗೆದುಹಾಕುವ ಮೂಲಕ ಇತಿಹಾಸದಲ್ಲಿ ವರ್ಗ ಸಂಗರ್ಷಗಳೇ ನಡೆದಿರಲಿಲ್ಲವೆಂದು ಬಿಂಬಿಸಹೊರಟಿದೆಯೇ ಸರ್ಕಾರ?

ಇನ್ನೊಂದು ಅಧ್ಯಾಯ ಬಂಡವಾಳಶಾಹಿ ಮತ್ತು ವಸಾಹತುಶಾಹಿ ವ್ಯವಸ್ಥೆಯ ಪರಿಣಾಮ ರೈತರು ಮತ್ತು ಹಿಡುವಳಿದಾರರ ಮೇಲೆ ಯಾವ ರೀತಿ ಬಿದ್ದಿತ್ತೆಂಬುದರ ಇತಿಹಾಸವನ್ನು ಕುರಿತು ಹೇಳುತ್ತದೆ. ಮೂರನೆಯ ಅಧ್ಯಾಯದಲ್ಲಿ ಕ್ರಿಕೆಟ್ ಆಟದ ಉಗಮ, ಭಾರತದ ವರ್ಗ ಸಂಘರ್ಷಗಳ ನಡುವೆ ಅದು ಬೆಳೆದು ಬಂದ ರೀತಿ ಮತ್ತದರ ಸಾಮಾಜಿಕ ಹಾಗೂ ರಾಜಕೀಯ ಪರಿಣಾಮಗಳ ಕುರಿತ ಸವಿವರ ಚರ್ಚೆಯಿದೆ. ಒಟ್ಟಾರೆಯಾಗಿ ಈ ಮೂರೂ ಅಧ್ಯಾಯಗಳೂ ಭಾರತದಲ್ಲಿನ ವರ್ಗ ವ್ಯವಸ್ಥೆ ಮತ್ತು ಬ್ರಿಟೀಷರ ಆಡಳಿತದ ಪ್ರಭಾವವನ್ನು ಕುರಿತು ವಿವರಿಸುತ್ತವೆ. ಇದೇ ಕಾರಣದಿಂದಾಗಿ ಇವು ಪಠ್ಯಪುಸ್ತಕದಿಂದ ಹೊರಗುಳಿದಿವೆ. ಇವೆಲ್ಲಾ ಪಠ್ಯದಿಂದ ತೆಗೆದುಹಾಕಿದ ವಿಚಾರಗಳಾದರೆ ಇನ್ನು ಕೆಲವು ವಿಚಾರಗಳನ್ನು ಪಠ್ಯಪುಸ್ತಕದೊಳಗೆ ಸೇರಿಸಲಾಗಿದೆ. ಹನ್ನೆರಡನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ “ಗುಜರಾತ್ ದಂಗೆ” ಎಂಬ ವಿಷಯವನ್ನು ಬದಲಾಯಿಸಿ “ಗುಜರಾತ್ ಮುಸಲ್ಮಾನ್ ದಂಗೆ” ಎಂದು ಸೇರಿಸಿರುವುದಲ್ಲದೇ ಆ ಅಧ್ಯಾಯವನ್ನೋದುವಾಗ ಅನ್ಯ ಧರ್ಮದ ಕುರಿತು ಕೆಟ್ಟ ಅಭಿಪ್ರಾಯ ಬರುವಂತೆ ಬಿಂಬಿಸಲಾಗಿದೆ. ಇಷ್ಟೇ ಅಲ್ಲದೇ ಪಠ್ಯದಲ್ಲಿ ಮೋದಿ ಸರ್ಕಾರವನ್ನು ಬಣ್ಣಿಸಿರುವ ಉದಾಹರಣೆಗಳನ್ನೂ ಕಾಣಬಹುದಾಗಿದೆ. 2017ನೇ ಇಸವಿಯಲ್ಲಿ ರಾಜಸ್ಥಾನದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪಠ್ಯದಲ್ಲಿ ಅಪನಗದೀಕರಣ, ಮೇಕ್ ಇನ್ ಇಂಡಿಯಾ, ಮಾಂಸ ತಿನ್ನುವುದರಿಂದ ಆಗುವ ದುಷ್ಪರಿಣಾಮಗಳು, ಮೋದಿಯ ವಿದೇಶ ಪ್ರವಾಸ, ಸ್ವಚ್ಛ ಭಾರತ್ ಮಿಷನ್, ನೀತಿ ಆಯೋಗ, ನಗದು ರಹಿತ ವ್ಯವಹಾರ, ಹದಿನಾರನೇ ಲೋಕಸಭಾ ಚುನಾವಣೆ.. ಇಂತಹ ವಿಷಯಗಳನ್ನು ಅಳವಡಿಸಲಾಗಿದೆ.

ಪಠ್ಯಪುಸ್ತಕ ಕೇಸರೀಕರಣವೆಂಬುದು ಇಂದು ನಿನ್ನೆಯ ಸಂಗತಿಯಲ್ಲ. SIO ಎಂಬ ಸಂಘಟನೆಯೊಂದರ ಅಧ್ಯಯನದ ಪ್ರಕಾರ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಪಠ್ಯಪುಸ್ತಕ ಕೇಸರೀಕರಣ ನಡೆದುಕೊಂಂಡೇ ಬಂದಿದೆ. ಸುಮಾರು 2001 ಇಸವಿಯಿಂದಲೇ ಪಠ್ಯಪುಸ್ತಕ ಕೇಸರೀಕರಣವೆಂಬ ಭೂತ ಕರ್ನಾಟಕಕ್ಕಂಟಿದೆ. ಅದರಲ್ಲೂ ನಾಲ್ಕು ವರುಷಗಳಿಂದೀಚೆ ಕೇಸರೀಕರಣದ ಪ್ರಮಾಣ ಹೆಚ್ಚಿದೆ ಎನ್ನಲಾಗಿದೆ. ಪಠ್ಯಪುಸ್ತಕ ಕೇಸರೀಕರಣಕ್ಕೆ ರಾಷ್ಟ್ರಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಾ ಬಂದಿದ್ದು ಹೊಸದಾದ National Curriculum Framework (NCF) ಅನ್ನು ರೂಪಿಸಬೇಕೆಂದು ಒತ್ತಾಯ ನಡೆಸಲಾಗುತ್ತಿದೆ. ಆದರೆ NCERT ಯಾಗಲೀ ಅಥವಾ Human Resource Ministry ಯಾಗಲೀ ಪುನರ್ ಪರಿಶೀಲಿಸಿದ National Curriculum Framework (NCF) ಅನ್ನು ತರಲು ತಯಾರಿಲ್ಲ. ಪಠ್ಯಪುಸ್ತಕದಲ್ಲಿ ಈಗಾಗಲೇ ಇರುವ ಕೇಸರೀತನವನ್ನು ನಿರ್ಮೂಲನೆ ಮಾಡುವುದಿರಲಿ ಅದರಲ್ಲಿ ಬಾಕಿ ಉಳಿದಿರುವ ಸ್ವಲ್ಪವಾದರೂ ಜ್ಯಾತ್ಯತೀತತೆಯನ್ನೂ ಅಳಿಸಿಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇವತ್ತಿನ ಮಕ್ಕಳು ನಾಳೆ ದೇಶವನ್ನಾಳುವವರು.. ಅಂಥವರಲ್ಲಿ ತಿರುಚಿದ ಇತಿಹಾಸವನ್ನು ಕೊಡುವ ಮೂಲಕ ವಿಷಬೀಜವನ್ನು ಬಿತ್ತಿದರೆ ನಾಳೆಗಳ ಕಥೆಯೇನು?

ಮುದ್ದು ತೀರ್ಥಹಳ್ಳಿ

ಕಾನೂನು ವಿದ್ಯಾರ್ಥಿನಿ. ಕನ್ನಡ, ಕೊಂಕಣಿ ಭಾಷೆಗಳಲ್ಲಿ ಬರೆಯುತ್ತಾರೆ. ಕಾಡ ಹಾದಿಯ ಹೂಗಳು, ಒಂದು ಚಂದ್ರನ ತುಂಡು, ಕಾನನ ಕಲರವ, ಎಷ್ಟು ಬಣ್ಣದ ಇರುಳು, ಹೂ ಗೊಂಚಲು, ಕ್ಷಮಿಸಲಾಗುವುದಿಲ್ಲ ಕ್ಷಮಿಸಿ ಇವರ ಕನ್ನಡ ಕೃತಿಗಳು. ‘ಕಾಡ ಹಾದಿಯ ಹೂಗಳು’ ಕಾದಂಬರಿ ಅದೇ ಹೆಸರಲ್ಲಿ ಚಲನಚಿತ್ರವಾಗಿದೆ. ಕೊಂಕಣಿಯ ನಮಾನ್ ಬಾಳೋಕ್ ಜೆಜು ಪತ್ರಿಕೆಗೆ ಕಳೆದ ನಾಲ್ಕು ವರ್ಷಗಳಿಂದ ಅಂಕಣ ಬರೆಯುತ್ತಿದ್ದಾರೆ. ‘ಮಂದಾನಿಲ’ ಎಂಬ ಪತ್ರಿಕೆಯನ್ನು ಐದು ವರ್ಷ ನಡೆಸಿದವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಲಬುರ್ಗಿ ಹತ್ಯೆ ಖಂಡಿಸಿ ಈ ಪ್ರಶಸ್ತಿಯನ್ನು ಮರಳಿಸಿದ್ದಾರೆ), ಕಾವ್ಯಾನಂದ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ, ಜ್ಯೋತಿ ಪುರಸ್ಕಾರ ಹಾಗೂ ಶಾರದಾ ಆರ್ ರಾವ್ ಮತ್ತು ಕರಿಯಣ್ಣ ದತ್ತಿ ಪ್ರಶಸ್ತಿಗಳು, ಬೇಂದ್ರೆ ಗ್ರಂಥ ಬಹುಮಾನ, ಅರಳು ಮೊಗ್ಗು ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ಅಡ್ವೈಸರ್ ಪ್ರಶಸ್ತಿ ಬಂದಿವೆ.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...