Share

ಚುನಾವಣೆ ಸದ್ದು: ಯಾರನ್ನೂ ಕಾಡದ ನೈಜ ಸಮಸ್ಯೆಗಳು!
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

 

 

 

 

 

ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಕರ್ನಾಟಕ ವಿದಾನಸಭೆಯ ಚುನಾವಣಾ ಪ್ರಚಾರ ತೀವ್ರಗೊಂಡು ಎಲ್ಲ ಪಕ್ಷಗಳೂ ಒಂದೊಂದು ಹೆಸರಿನ ಯಾತ್ರೆಗಳನ್ನು ಮುಗಿಸಿ ಕೂತಿವೆ. ಬಾಷಣ, ರೋಡ್ ಶೋ, ಮಠ, ಮಂದಿರ, ಇಗರ್ಜಿಳಿಗೆ ತೀರ್ಥಯಾತ್ರೆ ನಡೆದೇ ಇವೆ. ಟೀಕೆ-ಪ್ರತಿಟೀಕೆ, ಆರೋಪ-ಪ್ರತ್ಯಾರೋಪಗಳ ಸಂತೆಯೊಳಗೆ ರಾಜ್ಯದ ನೈಜ ಸಮಸ್ಯೆಗಳ ಬಗ್ಗೆ ವಸ್ತುನಿಷ್ಠವಾದ ಚರ್ಚೆ ನಡೆಯದೆ ಜನ ಪಕ್ಷಗಳ ಅಬ್ಬರಗಳನ್ನು ಬಿಟ್ಟಕಣ್ಣು ಬಿಟ್ಟ ಹಾಗೆ ನೋಡುತ್ತಾ ಕೂತಿದ್ದಾರೆ.

ರೈತರ ಸರಣಿ ಆತ್ಮಹತ್ಯೆಗಳು:
ರೈತರ ಆತ್ಮಹತ್ಯೆಗಳನ್ನು ಸಂಖ್ಯೆಗಳ ದೃಷ್ಟಿಯಿಂದ ನೋಡಿದರೆ ಮಹಾರಾಷ್ಟ್ರ, ಮಧ್ಯಪ್ರದೇಶದ ನಂತರದ ಸ್ಥಾನದಲ್ಲಿ ನಿಲ್ಲುತ್ತದೆ ಕರ್ನಾಟಕ. ರೈತರ ಆತ್ಮಹತ್ಯೆಗಳಿಗೆ ಆಡಳಿತಾರೂಢ ಪಕ್ಷದ ಸರಕಾರವೇ ಕಾರಣವೆಂದು ವಿರೋಧ ಪಕ್ಷಗಳು ಆರೋಪಿಸುವುದು ಮಾಮೂಲಿಯಾಗಿಬಿಟ್ಟಿದೆ. ಆದರೆ ನಿಜಕ್ಕೂ ರೈತರ ಆತ್ಮಹತ್ಯೆ ಹಿಂದಿರಬಹುದಾದ ಕಾರಣಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿಲ್ಲ.

ತೊಂಭತ್ತರ ದಶಕದಲ್ಲಿ ನಾವು ಒಪ್ಪಿಕೊಂಡ ಮುಕ್ತ ಆರ್ಥಿಕ ನೀತಿಯ ದುಷ್ಪರಿಣಾಮ ಮೊದಲು ಆಗಿದ್ದೇ ರೈತ ಸಮುದಾಯದ ಮೇಲೆ. ಜಾಗತೀಕರಣದ ವ್ಯಾಮೋಹಕ್ಕೆ ಒಳಗಾದ ಅಧಿಕಾರಸ್ಥರು ಕೃಷಿ ಕ್ಷೇತ್ರವನ್ನು ಸತತವಾಗಿ ನಿರ್ಲಕ್ಷಿಸುತ್ತ ಬಂದಿದ್ದೇ ಇವತ್ತಿನ ಬಹುತೇಕ ದುರಂತಗಳಿಗೆ ಕಾರಣ. ಮುಕ್ತ ಆರ್ಥಿಕ ನೀತಿಯ ಫಲವಾಗಿ ನಮ್ಮ ಗ್ರಾಮೀಣ ಭಾಗದ ಸಣ್ಣ ಕೈಗಾರಿಕೆಗಳು ಮತ್ತು ಕೃಷಿಕ್ಷೇತ್ರಗಳು ಬಸವಳಿಯುತ್ತ ಹೋದವು. ಕಣ್ನಿಗೆ ರಾಚುವ ಈ ಸತ್ಯವನ್ನು ಮನಗಂಡರೂ ಯಾವುದೇ ಪಕ್ಷಗಳು ಕೃಷಿಕ್ಷೇತ್ರದ ಪುನಶ್ಚೇತನಕ್ಕೆ ಮುಂದಾಗಲಿಲ್ಲ. ಹೀಗಾಗಿ ಆಡಳಿತಾರೂಢ ಪಕ್ಷ ಯಾವುದೇ ಇದ್ದರೂ ರೈತರ ಆತ್ಮಹತ್ಯೆಗಳು ಮುಂದುವರೆಯುತ್ತಲೇ ಇವೆ.

ರೈತರ ದೀರ್ಘಾವಧಿ ಸಮಸ್ಯೆಗಳ ಬಗ್ಗೆ ಅದ್ಯಯನ ಮಾಡಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಿದ್ದ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ನಿರತವಾಗಿವೆ. ಸತ್ತ ರೈತರಿಗೆ ಪರಿಹಾರದ ಚೆಕ್ ವಿತರಿಸುವಲ್ಲಿಯೂ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವವರಿಂದ ಮತದಾರ ನಿರೀಕ್ಷಿಸುತ್ತಿರುವುದು ಕೃಷಿ ಕ್ಷೇತ್ರದಲ್ಲಿ ತರಬಹುದಾದ ಮತ್ತು ತರಬೇಕಾದ ಆಮೂಲಾಗ್ರ ಬದಲಾವಣೆಗಳ ಬಗೆಗಿನ ಒಂದು ಆರೋಗ್ಯಕರ ಚರ್ಚೆಯನ್ನು. ಅದಕ್ಕೆಲ್ಲಿದೆ ಜಾಗ ಈ ಗದ್ದಲದಲ್ಲಿ?

ನಿರುದ್ಯೋಗ ಸಮಸ್ಯೆ:
ಇವತ್ತು ನಿರುದ್ಯೋಗವೆಂಬುದು ಪೆಡಂಭೂತವಾಗಿ ಬೆಳೆದು ನಿಂತಿದೆ. ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ನಿರುದ್ಯೋಗ ನಿವಾರಣೆಗೆ ಗಂಭೀರವಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಮಾತನಾಡಿದ್ದ ಕೇಂದ್ರ ಕನಿಷ್ಠ ಇಪ್ಪತ್ತು ಲಕ್ಷ ಉದ್ಯೋಗಗಳನ್ನು ಸೃಷ್ಠಿಸಲು ವಿಫಲವಾಗಿದೆ. ಅದೇ ರೀತಿಯಲ್ಲಿ ರಾಜ್ಯ ಸರಕಾರವು ಸಹ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಿರಲಿ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಿಫಲವಾಗಿದೆ. ಈಗೇನು ಎರಡೂ ಸರಕಾರಗಳು ಅಂಕಿ ಅಂಶಗಳನ್ನು ನೀಡುತ್ತಿವೆಯೊ ಅವೆಲ್ಲ ಅರೆಕಾಲಿಕ, ಗುತ್ತಿಗೆ ನೌಕರಿಯನ್ನೊಳಗೊಂಡ ಅಂಕಿಅಂಶಗಳಷ್ಟೆ. ಜೊತೆಗೆ ಖಾಸಗೀಕರಣದ ನಂತರ ಸರಕಾರಿ ಉದ್ಯೋಗಗಳು ಬಹಳಷ್ಟು ಕಡಿತಗೊಂಡಿವೆ. ಇನ್ನು ಖಾಸಗಿ ಕ್ಷೇತ್ರದಲ್ಲೂ ಹಲವು ಅಂತರರಾಷ್ಟ್ರೀಯ ಏರುಪೇರುಗಳಿಂದಾಗಿ ಹೊಸ ಉದ್ಯೋಗಗಳು ಸೃಷ್ಠಿಯಾಗುತ್ತಿಲ್ಲ. ಅದರಲ್ಲೂ ನಮ್ಮ ಗ್ರಾಮೀಣ ಭಾಗದ ಅರೆಶಿಕ್ಷಿತ ಯುವಕರುಗಳಂತೂ ಇತ್ತ ಸರಕಾರಿ ಉದ್ಯೋಗಳು ಇಲ್ಲದೆ ಅತ್ತ ಖಾಸಗಿ ಕ್ಷೇತ್ರದಲ್ಲಿಯೂ ಅವಕಾಶವಿರದೆ, ಹಳ್ಳಿಯಲ್ಲಿ ಕೃಷಿಯನ್ನೂ ಮಾಡಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇವತ್ತಿನ ಶೇಕಡಾ ಐವತ್ತರಷ್ಟು ಮತದಾರರು ಯುವಕರೇ ಆಗಿದ್ದರೂ, ಪಕ್ಷಗಳು ಅವರನ್ನು ಭಾವನಾತ್ಮಕ ವಿಷಯಗಳ ಕಡೆಗೆ ಸೆಳೆದು ವಾಸ್ತವಾಂಶಗಳನ್ನು ಮರೆಮಾಚಿ ಮತ ಹಾಕಿಸಿಕೊಳ್ಳುವ ಕ್ರಿಯೆಯಲ್ಲಿ ನಿರತವಾಗಿವೆಯೇ ಹೊರತು ಬೇರೇನನ್ನೂ ಮಾಡುತ್ತಿಲ್ಲ.

ನೀರಾವರಿ ಸಮಸ್ಯೆ:
ಇಡೀ ದೇಶದಲ್ಲಿ ರಾಜಾಸ್ಥಾನವನ್ನು ಹೊರತುಪಡಿಸಿದರೆ ಅತಿ ಹೆಚ್ಚು ಒಣ ಬೇಸಾಯದ ಭೂಮಿ ಇರುವುದು ಕರ್ನಾಟಕದಲ್ಲಿಯೇ. ಇಂತಹ ನೆಲದಲ್ಲಿ ನೀರಾವರಿ ನಮ್ಮ ಮೊದಲ ಆದ್ಯತೆಯಾಗಬೇಕಿತ್ತು. ಆದರೆ ಇವತ್ತಿಗೂ ಶಾಶ್ವತ ನೀರಾವರಿ ವ್ಯವಸ್ಥೆ ಇರದ ನಮ್ಮ ರೈತರು ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡಬೇಕಾದ ಸ್ಥಿತಿ ಇದೆ. ಕೃಷ್ಣಾ ಕಣಿವೆ ಸೇರಿದಂತೆ ಹಲವಾರು ನೀರಾವರಿ ಯೋಜನೆಗಳು ಇವತ್ತಿಗೂ ನೆನೆಗುದಿಗೆ ಬಿದ್ದಿವೆ. ಕಳಸಾ ಬಂಡೂರಿ ಯೋಜನೆಯ ಬಗ್ಗೆ ಮಾತಿನ ರಾಜಕೀಯ ನಡೆಯುತ್ತಿದೆಯೇ ಹೊರತು ಕೆಲಸಗಳಾಗುತ್ತಿಲ್ಲ. ಇನ್ನು ಈಗಿರುವ ನೀರಾವರಿ ಯೋಜನೆಗಳ ನಿರ್ವಹಣೆ ನೋಡಿದರೆ ಗುತ್ತಿಗೆದಾರ ಮತ್ತು ರಾಜಕಾರಣಿಯ ನಂಟಿನ ಒಳಸುಳಿಗಳು ಅರ್ಥವಾಗುತ್ತವೆ. ಕೆರೆಗಳ ಕಾಯಕಲ್ಪದ ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ನುಂಗಿ ಹಾಕಲಾಗಿದೆ. ಏತ ನೀರಾವರಿ ಹನಿ ನೀರಾವರಿ ಅಂತಹ ಆಕರ್ಷಕ ಹೆಸರುಗಳನ್ನು ನಂಬಿದ ರೈತ ವಿಷ ಕುಡಿಯುವ ಸ್ಥಿತಿಗೆ ಬಂದಿದ್ದಾನೆ.

ಪ್ರಾಥಮಿಕ ಶಿಕ್ಷಣ:
ದಿನೇ ದಿನೇ ಸರಕಾರ ತನ್ನ ಜವಾಬ್ದಾರಿಗಳನ್ನು ಒಂದೊಂದಾಗಿ ಕಡಿಮೆ ಮಾಡಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದೆ. ಪ್ರಾಥಮಿಕ ಶಿಕ್ಷಣವನ್ನು ಅದು ನಿರ್ಲಕ್ಷಿಸಿದ್ದರ ಪರಿಣಾಮವಾಗಿ ಖಾಸಗಿಯವರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜನತೆ ತಮ್ಮ ಮಕ್ಕಳನ್ನು ಅನಿವಾರ್ಯವಾಗಿ ಖಾಸಗಿ ಸಂಸ್ಥೆಗಳಿಗೆ ಕಳಿಸಲೇಬೇಕಾಗಿದ್ದು, ಶಿಕ್ಷಣ ವೆಚ್ಚ ದುಬಾರಿಯಾಗುತ್ತಿದೆ. ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಿ ಸುಧಾರಿಸಬೇಕಾಗಿದ್ದ ಸರ್ಕಾರ ಖಾಸಗಿ ಶಿಕ್ಷಣಕ್ಷೇತ್ರದ ಏಜೆಂಟ್ ರೀತಿ ವರ್ತಿಸುತ್ತಿದೆ.

ಆರೋಗ್ಯ ಕ್ಷೇತ್ರ:
ಶಿಕ್ಷಣದಂತೆಯೇ ಆರೋಗ್ಯ ಕ್ಷೇತ್ರವನ್ನೂ ಹಂತಹಂತವಾಗಿ ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರಗಳು ಕೆಲಸಮಾಡುತ್ತಿವೆ.

ಹೀಗೆ ಚುನಾವಣಾ ಸಮಯದಲ್ಲಿ ಮುಖ್ಯವಾಗಿ ಚರ್ಚೆಯಾಗಬೇಕಿದ್ದ ಹಲವು ವಿಚಾರಗಳಿವೆಯಾದರೂ, ಪ್ರಸ್ತಾಪಿಸಬಹುದಾದರೂ, ತೀರಾ ಮಹತ್ವದ್ದೆನಿಸಿದ ಕೆಲವು ಅಂಶಗಳನ್ನು ಮಾತ್ರ ನಾನಿಲ್ಲಿ ಪ್ರಸ್ತಾಪಿಸಿದ್ದೇನೆ. ಜನರ ಅಗತ್ಯಗಳನ್ನು, ಅಭಿಪ್ರಾಯಗಳನ್ನು ಆಲಿಸಿ, ಅದಕ್ಕನುಗುಣವಾಗಿ ತಮ್ಮ ಪ್ರಣಾಳಿಕೆಗಳನ್ನು ಸಿದ್ಧಪಡಿಸಿ, ಬಹಿರಂಗ ಚರ್ಚೆ ನಡೆಸಬೇಕಿದ್ದ ರಾಜಕೀಯ ಪಕ್ಷಗಳು ಜಾತಿಗಳ ಹೆಸರಿನಲ್ಲಿ, ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ವಿಭಜಿಸುತ್ತ, ಮತದಾರರನ್ನು ಖರೀಧಿಸುವ ಅಡ್ಡ ದಾರಿ ಹಿಡಿದಿವೆ. ಜನತೆ ಸಹ ರಾಜಕೀಯ ಪಕ್ಷಗಳ ಸಭೆಗಳಿಗೆ ಹೋಗಿ ಜೈಕಾರ ಕೂಗುತ್ತಾ ತಮ್ಮ ಹಕ್ಕುಗಳ ಬಗ್ಗೆ ಪ್ರಶ್ನೆ ಮಾಡುವುದನ್ನೇ ಮರೆತೇಬಿಟ್ಟಿದ್ದಾರೆ. ಇನ್ನು ಉದ್ಯೋಗ ಕೇಳಬೇಕಾಗಿದ್ದ ಯುವ ಜನತೆ ಸಹ ರಾಜಕೀಯ ಪಕ್ಷಗಳ ತಾತ್ಕಾಲಿಕ ಉದ್ಯೋಗಿಗಳಾಗಿದ್ದಾರೆ.

ನಮ್ಮ ಚುನಾವಣೆಗಳಲ್ಲಿ ಬಾಗವಹಿಸುವ ರಾಜಕೀಯ ಪಕ್ಷಗಳ ಮತ್ತು ಮತದಾರರ ಈ ಹೊಣೆಗೇಡಿತನವನ್ನು ನಾವು ಪ್ರಜಾಸತ್ತೆಯ ಸೌಂದರ್ಯವೆಂದು ಬಣ್ಣಿಸುತ್ತ, ನಮ್ಮನ್ನು ನಾವೇ ಮೊಸಗೊಳಿಸಿಕೊಳ್ಳುವ ಸ್ವನಾಶದ ಹಾದಿಯಲ್ಲಿದ್ದೇವೆ ಅನಿಸುತ್ತದೆ!

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...