Share

ಕೊಡು ಎನಗೆ ಬಾಲ್ಯವನು…
ಪ್ರಸಾದ್ ನಾಯ್ಕ್ ಕಾಲಂ

‘Toxic Parents’. ‘ವಿಷಕಾರಿ ಪೋಷಕರು’. ತನ್ನ ಕೃತಿಗೆ ಇಂಥದ್ದೊಂದು ವಿಲಕ್ಷಣ ಶೀರ್ಷಿಕೆಯನ್ನು ಕೊಟ್ಟವರು ಸುಸಾನ್ ಫಾರ್ವರ್ಡ್. ಅಮೆರಿಕಾ ಮೂಲದ ಸುಸಾನ್ ಖ್ಯಾತ ಮನಃಶಾಸ್ತ್ರಜ್ಞರಾಗಿರುವುದಲ್ಲದೆ, ಯಶಸ್ವಿ ಲೇಖಕಿಯೂ ಹೌದು. ಹೆತ್ತವರಿಂದ ಅಥವಾ ಪೋಷಕರಿಂದ ತಮ್ಮ ಬಾಲ್ಯದಲ್ಲಿ ನಿರಂತರವಾಗಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ದೌರ್ಜನ್ಯಕ್ಕೊಳಗಾಗಿ ಅದರ ದುಷ್ಪರಿಣಾಮವನ್ನು ನಂತರದ ವರ್ಷಗಳಲ್ಲಿ ಅನುಭವಿಸುತ್ತಾ ಖಿನ್ನತೆ, ಅಭದ್ರತೆ ಮತ್ತು ಇತರ ಗಂಭೀರ ಮನೋಸಂಬಂಧಿ ಖಾಯಿಲೆಗಳಿಂದ ನರಳುತ್ತಿರುವವರಿಗೆ ಉತ್ತಮ ಮಾರ್ಗದರ್ಶಿಯಾಗಬಲ್ಲ ಪುಸ್ತಕವಿದು. ಬರೋಬ್ಬರಿ ನಾಲ್ಕುನೂರು ಚಿಲ್ಲರೆ ಪುಟಗಳ ದೊಡ್ಡ ಕೃತಿ.

ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಸ್ವತಃ ಮನೋಸಂಬಂಧಿ ಖಾಯಿಲೆಗಳಿಂದ ನರಳುತ್ತಿರುವವರಿಗೆ ಅಥವಾ ಅಂಥಾ ಖಾಯಿಲೆಗಳನ್ನು ತಮ್ಮ ಪ್ರೀತಿಪಾತ್ರರಲ್ಲಿ ತೀರಾ ಹತ್ತಿರದಿಂದ ಕಂಡವರಿಗೆ ಈ ಬಗೆಯ ಸಾಹಿತ್ಯಗಳನ್ನು ಓದುವುದು ಕೊಂಚ ಕಷ್ಟವೇ. ಅದು ಸಾಹಿತ್ಯಕ್ಕಷ್ಟೇ ಅಲ್ಲ. ಕರಾಳ ನೆನಪನ್ನು ಮತ್ತೆ ತಾಜಾಗೊಳಿಸುವ ಒಂದು ಸಿನೆಮಾ, ಒಂದು ಹಾಡು, ಒಂದು ಘಟನೆ, ಒಂದು ವಾಸನೆ, ಒಂದು ಅನುಭವ… ಇತ್ಯಾದಿಗಳು ಒಂದು ಕಾಲದಲ್ಲಿ ಗುಣವಾಗಿ ಮರೆಯಾದಂತಿನ ಭ್ರಮೆಯನ್ನು ತರಿಸಿದ್ದ ಮನದಾಳದ ಗಾಯಗಳನ್ನು ಮತ್ತೆ ಹಸಿಯಾಗಿಸಬಲ್ಲದು. ಇದನ್ನು ಮನೋವಿಜ್ಞಾನದ ಭಾಷೆಯಲ್ಲಿ ‘Triggering’ ಅನ್ನುತ್ತಾರೆ. ಹೀಗಾಗಿ ಇವುಗಳೆಲ್ಲಾ ಒಂದು ರೀತಿಯಲ್ಲಿ ಇಂಥವರಿಗೆ ‘Trigger warning’ಗಳು. ಸಾಮಾನ್ಯವಾಗಿ ಎಲ್ಲರಿಗೂ ಆಪ್ತಸಮಾಲೋಚನೆಗಳೂ ಕೂಡ ಬಹಳ ತ್ರಾಸದಾಯಕವಾಗುವುದು ಈ ಕಾರಣಕ್ಕಾಗಿಯೇ. ಏಕೆಂದರೆ ನೋವನ್ನು ಮರೆಯುವುದಕ್ಕೋ, ಇನ್ಯಾವುದೋ ಕಾರಣಕ್ಕೂ ಕೆಲವು ಭಯಾನಕ ಅನುಭವಗಳನ್ನು, ನೆನಪುಗಳನ್ನು, ಸತ್ಯಗಳನ್ನು ನಾವು ಉದ್ದೇಶಪೂರ್ವಕವಾಗಿಯೇ ಮನದಾಳದಲ್ಲಿ ಜೀವಂತವಾಗಿ ದಫನ ಮಾಡಿರುತ್ತೇವೆ. ಹೊರಬರಲು ಒದ್ದಾಡುತ್ತಿರುವ ತೀವ್ರ ಭಾವನೆಗಳನ್ನು ನಿರ್ದಾಕ್ಷಿಣ್ಯವಾಗಿ ಹೊಸಕಿ, ಎಲ್ಲೋ ಮೂಲೆಯಲ್ಲಿ ಬಚ್ಚಿಟ್ಟು ಅವುಗಳು ಇಲ್ಲವೇ ಇಲ್ಲವೆಂದು ನಮಗೆ ನಾವೇ ಸುಳ್ಳಾಡುತ್ತಿರುತ್ತೇವೆ. ತಡೆಯಲಾಗದ ನೋವಿನಿಂದ ಕಂಗೆಟ್ಟ ಮನಸ್ಸು ನೋವಿನ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿಬಿಡುವುದರಿಂದ ಕ್ರಮೇಣ ಭಾವನಾರಹಿತ ನಿರ್ವಾತವೊಂದನ್ನು (Numbness) ಸೃಷ್ಟಿಸಿಬಿಡುತ್ತದೆ. ಮೇಲ್ನೋಟಕ್ಕೆ ಇದು ತಾತ್ಕಾಲಿಕ ಶಮನವಾದಂತೆ ಕಂಡರೂ ಶಾಶ್ವತ ಪರಿಹಾರವೇನಲ್ಲ. ಅಷ್ಟಕ್ಕೂ ಭಾವನಾರಹಿತವಾದ ಸ್ಥಿತಿಯು ನೋವಿಗಿಂತಲೂ ದಯನೀಯ.

ಯಾವ ಹೆತ್ತವರು ತಾನೇ ತಮ್ಮ ಮಕ್ಕಳನ್ನು ಅಂಥಾ ಕೂಪಕ್ಕೆ ತಳ್ಳಬಲ್ಲರು ಎಂದು ನೀವು ಕೇಳಬಹುದು. ಆದರೆ ದುರದೃಷ್ಟವಶಾತ್ ಅಂಥವರೂ ಇರುತ್ತಾರೆ. ಹೆತ್ತವರಿಂದ ಗೊತ್ತಿದ್ದೋ, ಗೊತ್ತಿಲ್ಲದೆಯೋ ತಪ್ಪುಗಳಾಗುವುದು ಸಹಜ. ಆದರೆ ಕೆಲ ತಪ್ಪುಗಳು ವರ್ಷಾನುಗಟ್ಟಲೆ ನಿರಂತರವಾಗಿ ನಡೆಯುತ್ತಿದ್ದರೆ ಅವುಗಳನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲಾಗುವುದಿಲ್ಲ. ಪದೇ ಪದೇ ಮಕ್ಕಳನ್ನು ಹಂಗಿಸುವುದರಿಂದ ಹಿಡಿದು ಶಿಸ್ತಿನ ಹೆಸರಿನಲ್ಲಿ ಮಕ್ಕಳ ಮೈಮೇಲೆ ಶಾಶ್ವತ ಕಲೆಗಳು ಉಳಿಯುವಷ್ಟು ಬರ್ಬರವಾಗಿ ಥಳಿಸುವವರು, ದುರ್ವ್ಯಸನಕ್ಕೊಳಗಾಗಿ ಮಕ್ಕಳನ್ನು ಕಡೆಗಣಿಸುವವರಿಂದ ಹಿಡಿದು ತಮ್ಮ ವೈಯಕ್ತಿಕ ಹತಾಶೆಗಳನ್ನು ಅಸಹಾಯಕ ಮಕ್ಕಳ ಮೇಲೆ ಅಮಾನುಷವಾಗಿ ಹೇರುವವರು, ಪುಟ್ಟ ಮಕ್ಕಳು ತಮ್ಮನ್ನೂ ಮನೆಯ ಇತರ ಸದಸ್ಯರನ್ನೂ ನೋಡಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯನ್ನು ಸೃಷ್ಟಿಸಿ ಅವರನ್ನು ಮಹಾಗೊಂದಲಕ್ಕೆ ದೂಡಿ ಅವರ ಅಮೂಲ್ಯ ಬಾಲ್ಯವನ್ನು ಕಸಿಯುವವರು, ಚಾಕ್ಲೇಟಿನಂತಹ ಆಮಿಷ, ಬೆದರಿಕೆಗಳ ಮೂಲಕವಾಗಿ ತಮ್ಮದೇ ಕರುಳಕುಡಿಗಳನ್ನು ತಮ್ಮ ದೈಹಿಕಕಾಮನೆಗಳಿಗಾಗಿ ಬಳಸಿಕೊಳ್ಳುವವರು… ಹೀಗೆ ತರಹೇವಾರಿ ವಿಧಗಳು. ಹತ್ತಿರದ ಸಂಬಂಧಿಕರನ್ನೊಳಗೊಂಡಂತೆ ಹೆತ್ತವರಿಂದಲೇ ಮಕ್ಕಳು ತಿಂಗಳಾನುಗಟ್ಟಲೆ ಅತ್ಯಾಚಾರಕ್ಕೊಳಗಾಗುವ ವರದಿಗಳನ್ನು ನಾವು ಆಗಾಗ ಓದುತ್ತಿರುತ್ತೇವೆ. ಇಂಥವುಗಳು ಶುದ್ಧ ಕಾಲ್ಪನಿಕ ಎಂದು ವಾದಿಸುವವರನ್ನು ಕಂಡಾಗ ನನಗೆ ಕೆಲವೊಮ್ಮೆ ಅಚ್ಚರಿಯಾಗುವುದುಂಟು. ಏಕೆಂದರೆ ಇವರುಗಳು ಒಂದೋ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊಂದಿಲ್ಲದವರು ಅಥವಾ ಸತ್ಯವನ್ನು ಅರಗಿಸಿಕೊಳ್ಳುವಷ್ಟು ಛಾತಿಯನ್ನು ಹೊಂದಿಲ್ಲದವರು.

ಇಷ್ಟಕ್ಕೂ ನಾನು ಹೇಳಲು ಹೊರಟಿದ್ದೇನೆಂದರೆ ಸುಸಾನ್ ತನ್ನ ಕೃತಿಯಲ್ಲಿ ಪರಿಚಯಿಸಿರುವ ಒಂದು ಮಿತಿಯ ಬಗ್ಗೆ. ಅದು Enough is enough ಅನ್ನುವ ಒಂದು ಮಿತಿ. ‘ಈವರೆಗೆ ನಡೆದಿದ್ದು ಆಗಿಹೋಯಿತು, ಇನ್ನು ಮುಂದೆ ಹೀಗಾಗೋದಿಲ್ಲ’ ಎಂದು, ಖಡಾಖಂಡಿತವಾಗಿ ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳು ಎಳೆಯಬೇಕಾಗಿರುವ ಲಕ್ಷ್ಮಣರೇಖೆ. ಇತರರಂತೆ ಆರೋಗ್ಯವಂತ ಜೀವನವನ್ನು, ಮನೋಭಾವವನ್ನು ಪಡೆಯಲು ಇವರುಗಳು ತೆರಬೇಕಾಗಿರುವ ಬೆಲೆಯಿದು. ಇದು ಚಿಕಿತ್ಸೆಯ ನಿರ್ಣಾಯಕ ಹಂತವೂ ಹೌದು. ಸಾಮಾನ್ಯವಾಗಿ ಹೆತ್ತವರಿಂದ ದೌರ್ಜನ್ಯಕ್ಕೊಳಗಾದ ಮಕ್ಕಳು ತಮ್ಮ ವಯಸ್ಕಜೀವನದಲ್ಲಿ ಒಂದು ಕೀಳರಿಮೆ, ಅಭದ್ರತೆ, ಭಯ, ಆತಂಕ ಇತ್ಯಾದಿಗಳ ಹೆಣಭಾರಗಳನ್ನು ಹೊತ್ತುಕೊಂಡೇ ತ್ರಾಸದಾಯಕವಾಗಿ ಬದುಕುತ್ತಿರುತ್ತಾರೆ. ಈ ಹಿನ್ನೆಲೆಗಳಿಂದಾಗಿ ಅವರ ಕುಸಿದ ಕೌಟುಂಬಿಕ ಜೀವನ, ಆತ್ಮವಿಶ್ವಾಸ, ನಿರ್ಧಾರಗಳನ್ನು ತೆಗೆದುಕೊಳ್ಳಲಾಗದಿರುವ ಸ್ಥಿತಿ ಇತ್ಯಾದಿಗಳು ಅವರನ್ನು ಸದಾ ಡೋಲಾಯಮಾನ ಸ್ಥಿತಿಯಲ್ಲೇ ಇಟ್ಟಿರುತ್ತವೆ. ವಿಪರ್ಯಾಸವೆಂದರೆ ಬಾಲ್ಯದ ಹಂತವನ್ನು ತೊರೆದು ವಯಸ್ಕರಾದ ಮೇಲೂ ಈ ಹೆಣಭಾರವನ್ನು ಇವರು ಹೊತ್ತುಕೊಳ್ಳುವುದು ಮತ್ತು ಪೋಷಕರು ಬಾಲ್ಯದಲ್ಲಿದ್ದಷ್ಟೇ ಹಿಡಿತವನ್ನು ಇವರ ಮೇಲೆ ನಂತರವೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇಟ್ಟುಕೊಳ್ಳುತ್ತಾ ಮುಂದುವರಿಯುವುದು. ಹಲವು ಬಾರಿ ಪೋಷಕರ ಸಾವಿನ ನಂತರವೂ ಇವುಗಳು ಪಶ್ಚಾತ್ತಾಪದ ರೀತಿಯಲ್ಲಿ ಇವರಲ್ಲಿ ಮುಂದುವರಿಯುವುದುಂಟು. “ಸಾಕು, ನಿಲ್ಲಿಸಿಬಿಡಿ, ನಿಮ್ಮ ಜೀವನದ ಸ್ಟೇರಿಂಗ್ ವ್ಹೀಲ್ ಇನ್ನು ನಿಮ್ಮ ಕೈಯಲ್ಲಿರಲಿ” ಎನ್ನುತ್ತಾರೆ ಸುಸಾನ್. ಇದು ಹೇಳುವಷ್ಟು ಸುಲಭವಲ್ಲ ಎನ್ನುವುದು ನಿಜ. ಆದರೆ ಅದೃಷ್ಟವಶಾತ್ ಇದು ಅಸಾಧ್ಯವೂ ಅಲ್ಲ.

ಇದರ ಮೊದಲ ಹೆಜ್ಜೆಯಾಗಿ ಬರುವುದೇ ತಮ್ಮ ಈ ನಿರ್ಧಾರವನ್ನು ಹೆತ್ತವರ ಬಳಿ ಧೈರ್ಯವಾಗಿ ಹೇಳಿಕೊಳ್ಳುವುದು. ಇಲ್ಲಿ ಹೇಳಿಕೊಳ್ಳುವುದೆಂದರೆ ಕಿತ್ತಾಡುವುದಲ್ಲ, ಕೈ-ಕೈ ಮಿಲಾಯಿಸುವುದಲ್ಲ. ಅದರಿಂದ ಪ್ರಯೋಜನವೂ ಇಲ್ಲ. “ನಾನು ನಿಮ್ಮ ಮಗ/ಮಗಳಾಗಿರುವುದು ಎಷ್ಟು ಸತ್ಯವೋ, ಓರ್ವ ವ್ಯಕ್ತಿಯಾಗಿರುವುದೂ ಅಷ್ಟೇ ಸತ್ಯ. ಹೀಗಾಗಿ ವ್ಯಕ್ತಿಸ್ವಾತಂತ್ರ್ಯ, ಪರಸ್ಪರ ಗೌರವ, ಖಾಸಗಿತನಗಳಂತಹ ಅಂಶಗಳು ನಮ್ಮಿಬ್ಬರ ನಡುವೆ ಇನ್ನಾದರೂ ಆರೋಗ್ಯಕರವಾಗಿರಲಿ” ಎಂಬ ಒಂದು ಒಪ್ಪಂದವನ್ನು ಸೌಹಾರ್ದವಾಗಿ ಮಾಡಿಕೊಳ್ಳುವುದು. ಇಂಥಾ ಪ್ರಕರಣಗಳಲ್ಲಿ ಇವರನ್ನು ಈ ಕೆಲಸಕ್ಕೆ ಒಪ್ಪಿಸುವುದೇ ಬಹಳ ಮುಖ್ಯ ಅಂಶ ಎನ್ನುತ್ತಾರೆ ಲೇಖಕಿ. ಏಕೆಂದರೆ ಮೊದಲಿನಿಂದಲೇ ನಮ್ಮ ಸಮಾಜ, ಧರ್ಮ, ಸಂಪ್ರದಾಯಗಳು ಹೆತ್ತವರನ್ನು ದೇವರ ಸ್ಥಾನದಲ್ಲಿ ಕೂರಿಸಿವೆ. ಹೀಗಾಗಿ ಧಿಕ್ಕರಿಸುವುದೆಂದರೆ ಅಪರಾಧವೇ. ಇನ್ನು ಇಂಥಾ ಪ್ರಕರಣಗಳಲ್ಲಿ ಪೋಷಕರು ಹಲವು ವರ್ಷಗಳಿಂದ ತಮ್ಮ ಮಕ್ಕಳನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುತ್ತಾ ಬಂದು ತಮ್ಮ ಮೇಲೆಯೇ ಅವರಿಗೆ ರೇಜಿಗೆ ಮೂಡುವಂತೆ ಮಾಡಿರುತ್ತಾರೆ. ಉದಾಹರಣೆಗೆ ತಂದೆಯಿಂದ ನಿರಂತರ ಅತ್ಯಾಚಾರಕ್ಕೊಳಗಾಗುವ ಹೆಣ್ಣುಮಕ್ಕಳು ಜೀವನದುದ್ದಕ್ಕೂ ತಮ್ಮನ್ನು ತಾವು ಕಲುಷಿತರೆಂದು ಭಾವಿಸಿಕೊಂಡರೆ, ಮಾನಸಿಕ/ಭಾವನಾತ್ಮಕವಾಗಿ ದೌರ್ಜನ್ಯಕ್ಕೊಳಗಾದ ಮಕ್ಕಳು ತಾವು ಇದಕ್ಕೇ ಲಾಯಕ್ಕೆಂದು ಭಾವಿಸಿರುತ್ತಾರೆ. ಹೀಗಾಗಿ “ಇನ್ನಾದರೂ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ” ಎಂದು ವಿಧೇಯತೆಯ ಸಂಕೋಲೆಯನ್ನು ಮುರಿದು ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವುದು ಒಂದು ಕಡೆ. ಅಂತೆಯೇ ತಾನು ಹಲವು ವರ್ಷಗಳಿಂದ ಪೋಷಿಸುತ್ತಾ ಬಂದಿರುವ ತಳಹದಿಯಿಲ್ಲದ ನಂಬಿಕೆಗಳಿಗೆ ಎಳ್ಳುನೀರು ಬಿಟ್ಟು ‘ಪಶ್ಚಾತ್ತಾಪ ಪಡಬೇಕಾದವರು ಅವರೇ ಹೊರತು ನಾನಲ್ಲ’ ಎಂಬುದನ್ನು ಒಪ್ಪಿಕೊಳ್ಳುವುದು ಇನ್ನೊಂದು. ಇಂಥದ್ದೊಂದು ನಿರ್ಣಾಯಕ ಸಂಭಾಷಣೆಯನ್ನು ಮೌಖಿಕವಾಗಿ ಅಥವಾ ಪತ್ರಮೂಲಕವಾಗಿ ಮಾಡಬೇಕಾದ ಅವಶ್ಯಕತೆಯ ಬಗ್ಗೆ, ವಿವಿಧ ಹಂತಗಳ ಬಗ್ಗೆ ಮತ್ತು ವಿಧಾನಗಳ ಬಗ್ಗೆ ವೈಜ್ಞಾನಿಕ ಒಳನೋಟಗಳು ಇಲ್ಲಿ ಧಾರಾಳವಾಗಿವೆ.

ಇಂಥಾ ಪ್ರಕರಣಗಳನ್ನು ನೋಡುವಾಗಲೆಲ್ಲಾ ನನಗೆ ಥಟ್ಟನೆ ನೆನಪಾಗುವುದು ಓಶೋ ರಜನೀಶರ ಮಾತು. “ಪೋಷಕರಿಂದ ದೌರ್ಜನ್ಯಕ್ಕೊಳಗಾದ ಮಕ್ಕಳು ನಂತರದ ದಿನಗಳಲ್ಲಿ ನಾಸ್ತಿಕರಾಗುವುದು ಸಹಜ. ಏಕೆಂದರೆ ಮಕ್ಕಳ ಜೀವನದ ಮೊದಲ ದೇವರಾಗಿರುವುದು ತಮ್ಮ ಹೆತ್ತವರೇ ಹೊರತು ಇನ್ಯಾರೂ ಅಲ್ಲ. ತಮ್ಮ ಮೊದಲ ದೇವರುಗಳಿಂದಲೇ ಮಗುವೊಂದು ಭ್ರಮನಿರಸನಕ್ಕೊಳಗಾಗಿ ಮತ್ತೆ ಎದ್ದೇಳಲಾರದಷ್ಟು ನೆಲಕಚ್ಚಿಹೋದರೆ ಮುಂದೆ ಬೇರ್ಯಾವ ದೇವರುಗಳನ್ನೂ ಅದು ತನ್ನದಾಗಿಸಿಕೊಳ್ಳಲಾರದು” ಎನ್ನುತ್ತಾರೆ ಓಶೋ. ಅಂದಹಾಗೆ ಇದು ಆಸ್ತಿಕತೆಯ ವಿಷಯದಲ್ಲಷ್ಟೇ ಅಲ್ಲದೆ ಸಾಮಾನ್ಯ ಸಂಬಂಧಗಳಲ್ಲೂ ಸತ್ಯವೇ. ಸಾಮಾನ್ಯವಾಗಿ ಇಂಥಾ ಹಿನ್ನೆಲೆಯಿರುವ ವಯಸ್ಕರು ತಮ್ಮ ಎಲ್ಲವನ್ನೂ ಪಣಕ್ಕಿಟ್ಟು ಪ್ರೀತಿಯ ತಲಾಶೆಯಲ್ಲಿ ಆಗಾಗ ಹೊರಡುವುದು, ಯಾರನ್ನೂ ಅಷ್ಟು ಸುಲಭವಾಗಿ ತನ್ನ ಅತ್ಯಾಪ್ತ ವಲಯದಲ್ಲಿ ಸೇರಿಸಕೊಳ್ಳದಿರುವುದು, ತನ್ನ ಬಾಳಸಂಗಾತಿಯೊಂದಿಗೂ ಭಾವನಾತ್ಮಕವಾಗಿ ಒಂದಾಗಲು ಸಂಪೂರ್ಣವಾಗಿ ಸಾಧ್ಯವಾಗದಿರುವುದು, ಪ್ರೀತಿಸಿದವರನ್ನು ಕಳೆದುಕೊಳ್ಳುವ ಬಗೆಗಿನ ತೀವ್ರ ಭಯ ಇತ್ಯಾದಿಗಳು ಸಾಮಾನ್ಯ. ತನ್ನ ಹೆತ್ತವರ ಮೇಲೆಯೇ ನಂಬಿಕೆಯನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಬೇರೆ ಯಾರನ್ನಾದರೂ ನಿರ್ಭಯವಾಗಿ ಹೇಗೆ ನಂಬಬಲ್ಲ, ಮನಃಪೂರ್ವಕವಾಗಿ ಒಪ್ಪಿಕೊಳ್ಳುವಷ್ಟು ಧೈರ್ಯಮಾಡಬಲ್ಲ? ಅದೇನೇ ಇರಲಿ. ವಿಶ್ವದಾದ್ಯಂತ ಸುಸಾನ್ ರಂತಹ ತಜ್ಞರು ಈ ನಿಟ್ಟಿನಲ್ಲಿ ಭರವಸೆಯ ದೀಪವನ್ನು ಹಚ್ಚುತ್ತಿದ್ದಾರೆ ಎಂಬುದೇ ಸಂತಸದ ಸಂಗತಿ.

*

ಇತ್ತೀಚೆಗಷ್ಟೇ ರಮೇಶ್ ಅರವಿಂದ್ ಮತ್ತು ಅನು ಪ್ರಭಾಕರ್ ಮುಖ್ಯಭೂಮಿಕೆಯಲ್ಲಿರುವ ‘ಶಾಪ’ ಚಿತ್ರವನ್ನು ನೋಡುವ ಅವಕಾಶವು ಆಕಸ್ಮಿಕವಾಗಿ ಸಿಕ್ಕಾಗ ಈ ಎಲ್ಲಾ ನೆನಪುಗಳು ಒಟ್ಟೊಟ್ಟಿಗೇ ಹರಿದುಬಂದಿದ್ದವು. “ನೀನು ಕೈಲಾಗದವನು, ಯಾವುದಕ್ಕೂ ನಾಲಾಯಕ್ಕು” ಎಂಬುದನ್ನು ತನ್ನ ತಂದೆಯಿಂದ ಬಾಲ್ಯದಿಂದಲೇ ಕೇಳುತ್ತಿರುವ ಅಂತರ್ಮುಖಿಯಾದ ಕಥಾನಾಯಕನಿಗೆ ಅಪ್ಪನ ಈ ಹಂಗಿಸುವ ಮಾತು ತನ್ನ ಪುಟ್ಟ ಪುಟ್ಟ ಹೆಜ್ಜೆಯಲ್ಲೂ ದೊಡ್ಡ ಅಡಚಣೆಯೆಂಬಂತೆ ನಿಂತು ಹೆದರಿಸುತ್ತಿರುತ್ತದೆ. ಎಷ್ಟರ ಮಟ್ಟಿಗೆಂದರೆ ಹೀಗೆ ಬೈಯ್ಯುತ್ತಿರುವ ತಂದೆಯ ಚಿತ್ರವೇ ಆಗಾಗ ಕಣ್ಣಮುಂದೆ ಮೂಡುವಷ್ಟು. ತಾನು ಜೀವನದಲ್ಲಿ ತಕ್ಕಮಟ್ಟಿನ ಯಶಸ್ಸನ್ನು ಸಾಧಿಸಿದ ಹೊರತಾಗಿಯೂ ತಂದೆಯ ಕೆಲಸಕ್ಕೆ ಬಾರದ ಈ ಮಾತು ಆತನಿಗೆ ಪದೇ ಪದೇ ದುಃಸ್ವಪ್ನದಂತೆ ಕಾಡುವುದು ಮತ್ತು ಆತನ ತಂದೆಯು ಭೌತಿಕವಾಗಿ ಈ ಜಗತ್ತಿನಲ್ಲಿಲ್ಲದಿದ್ದರೂ ಕಳೆದುಹೋದ ದಿನಗಳ ಕರಾಳ ನೆನಪುಗಳು ಅವನ ಅಸ್ತಿತ್ವಕ್ಕೆ ಮಾರಣಾಂತಿಕ ಹೊಡೆತಗಳನ್ನು ನೀಡುವ ಅಂಶಗಳು ಈ ಕಥೆಯ ಗಟ್ಟಿತನಕ್ಕೆ ಸಾಕ್ಷಿ.

“ನನ್ನನ್ನು ಯಾರೋ ಸದಾ ಕಾಲ ಗಮನಿಸುತ್ತಿದ್ದಾರೆ ಅಂತನ್ನಿಸುತ್ತದೆ. ಏನಾದರೂ ಒಳ್ಳೆಯದಾಗುತ್ತಿದೆ ಅನ್ನುವಷ್ಟರಲ್ಲಿ ಭಾರೀ ಎಡವಟ್ಟಾಗುವುದು, ಯಾರೊಂದಿಗಾದರೂ ತನ್ನ ಪ್ರೀತಿಯನ್ನು ಹೇಳಿಕೊಂಡ ಕೂಡಲೇ ಅವರು ನನ್ನನ್ನು ಕೈಬಿಟ್ಟುಹೋಗುವುದು ಇತ್ಯಾದಿಗಳು ನಡೆಯುತ್ತಲೇ ಬಂದಿವೆ. ಎಂಥದ್ದೋ ಒಂದು ಬಗೆಯ ನಿಗೂಢ ಶಾಪವು ಸದಾ ನನ್ನ ಮೇಲಿದೆಯೆಂಬಂತೆ ಭಾಸವಾಗುತ್ತದೆ” ಎಂದು ತನ್ನ ಮನೋವೈದ್ಯನ ಬಳಿ ಹೇಳುವ ಕಥಾನಾಯಕನು ಮತ್ತೆ ನನಗೆ ನೆನಪಿಸಿದ್ದು ಸುಸಾನ್ ಫಾರ್ವರ್ಡ್ ದಾಖಲಿಸಿದ್ದ ನೂರಾರು ಸತ್ಯಕಥೆಗಳನ್ನೇ!

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 2 days ago No comment

  ಪಂಡಿತರ ಹಳ್ಳಿಯ ‘ಮಂದರಗಿರಿ’

                ಇದು ಪ್ರವಾಸಿಗಳ ಯುಗ. ಹೊಸ ತಲೆಮಾರಿನ ಜನರಿಗೀಗ ಮನೆಯಲ್ಲಿ ಕೂರುವುದೆಂದರೆ ಬಹಳ ಬೇಜಾರಿನ ಸಂಗತಿ. ಆಗೀಗಲಾದರೂ ದೊಡ್ಡ ಅಥವಾ ಸಣ್ಣ ಪ್ರವಾಸಗಳಿಗೆ ಹೋದರೆ ಮನಸ್ಸಿಗೂ ಸುಖ ಎನ್ನುವ ತಲೆಮಾರಿನವರು ಈಗ ಹೆಚ್ಚು ಕಾಣಸಿಗುತ್ತಾರೆ. ಹೆಸರುವಾಸಿ ತಾಣಗಳಲ್ಲಿ ಸದಾ ಜನಜಂಗುಳಿಯಿರುತ್ತದೆ. ದೂರದ ಊರುಗಳೆಂದರೆ ಅದಕ್ಕೆ ತಯಾರಿ ಬೇಕು. ಹಲವು ದಿನಗಳ ಸಿದ್ಧತೆ, ಪ್ರಯಾಣ, ವಿಪರೀತ ಖರ್ಚು ಎಲ್ಲವೂ ಹೌದು. ವಯಸ್ಸಾದವರಿಗೆ ...

 • 1 month ago No comment

  ಬಿಜೆಪಿ ವಿರೋಧಿ ರಂಗ: ಪ್ರತಿಪಕ್ಷ ಸಭೆಯಲ್ಲಿ 20 ಪಕ್ಷಗಳು

  ಆರ್ಬಿಐ ,ಸಿಬಿಐ, ಚುನಾವಣಾ ಆಯೋಗದಂಥ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ನಾಯಕರು ಕಟುವಾಗಿ ಟೀಕಿಸಿದರು.   ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಪ್ರತಿಶಕ್ತಿಯನ್ನು ಕಟ್ಟುವ ಯತ್ನವಾಗಿ ನಡೆದ ಪ್ರತಿಪಕ್ಷ ಸಭೆಗೆ 20 ಪಕ್ಷಗಳ ನಾಯಕರು ಹಾಜರಾಗಿದ್ದರು. ಅಷ್ಟೇ ಅಚ್ಚರಿಯ ವಿಚಾರವೆಂದರೆ, ಈ ಸಭೆಗೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದಿಂದ ಯಾವುದೇ ಮುಖಂಡರು ಆಗಮಿಸಿರಲಿಲ್ಲ. ಡಿ.10ರಂದು, ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ...

 • 1 month ago No comment

  ಅರ್ಧನಾರಿ ಕಥೆಯ ಮತ್ತೆರಡು ಭಾಗಗಳು

  ‘ಮಧೋರುಬಗನ್’ (ಅರ್ಧನಾರಿ) ಎಂಬ ಕಾದಂಬರಿ ಬರೆವ ಮೂಲಕ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ಈಗ ಆ ಕಾದಂಬರಿಯ ಮತ್ತೆರಡು ಭಾಗಗಳ ಪ್ರಕಟಣೆಯೊಂದಿಗೆ ಸುದ್ದಿಯಾಗಿದ್ದಾರೆ. ಆ ಕಾದಂಬರಿಯ ಕೆಲವು ಭಾಗಗಳು ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿವೆ ಎಂದು ಆರೋಪಿಸಿದ್ದ ಬಲಪಂಥೀಯ ಕಾರ್ಯಕರ್ತರು ಹಲ್ಲೆಯೆಸಗಿದಾಗ, ತಮ್ಮ ಬರವಣಿಗೆ ಮೇಲೆ ಸ್ವಯಂ ನಿಷೇಧ ಹೇರಿಕೊಂಡಿದ್ದ ಮುರುಗನ್, ಇದೀಗ ಆ ಕಾದಂಬರಿ ಮುಗಿದಲ್ಲಿಂದಲೇ ಆರಂಭಿಸಿ ಮತ್ತೆರಡು ಭಾಗಗಳನ್ನು ಹೊರತಂದಿದ್ದಾರೆ. ಮೊದಲ ...

 • 1 month ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 1 month ago No comment

  ಅಲೆಗಳಾಗುವ ಹಾಡು

      ಕವಿಸಾಲು         ಕನಸುಗಳ ಜಾತ್ರೆ, ಮನಸುಗಳ ಹಬ್ಬ ಎಲ್ಲ ನಿಶ್ಯಬ್ದ, ಮೌನದಲಿ ಮನ ಬಿಡಿಸಿದ ಮೂರ್ತ ರೂಪಕ್ಕೆ ತದ್ರೂಪು ನಿನ್ನದೇ ಸೊಬಗು ಸುರಿವ ಮಳೆ, ಬೀಸೋ ಗಾಳಿ ಒದ್ದೆಯಾದ ಒಡಲಿನಲಿ ಉರಿವ ನನ್ನೆದೆಯ ಮೇಲೆ ಚಿತ್ತಾರ ಬಿಡಿಸುತ್ತವೆ ನಿನ್ನ ಬೆರಳು ಕರಿಕಪ್ಪು ಚಳಿ ರಾತ್ರಿಯಲಿ ಒಂದಪ್ಪುಗೆಯ ಧ್ಯಾನದಲಿ ಬೆನ್ನ ಸುಳಿ ಸೀಳಿ ಮೇಲೇರುವ ನಡುಕದಲಿ ನಿನ್ನೆದೆಯ ಹರವು ಯಾರೋ, ಯಾವತ್ತೋ ಮರಳ ...


Editor's Wall

 • 08 December 2018
  1 month ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 30 November 2018
  2 months ago No comment

  ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ

  ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...

 • 29 November 2018
  2 months ago No comment

  ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?

    ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.     ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ...

 • 09 November 2018
  2 months ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

 • 28 October 2018
  3 months ago No comment

  ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

    ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...