Share

ಲವ್ ವಿದ್ ಫಸ್ಟ್ ಬುಕ್
ಪ್ರಸಾದ್ ನಾಯ್ಕ್ ಕಾಲಂ

 

ದಿನ ಶಾಲಾ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತಡಕಾಡುತ್ತಿದ್ದ ನನಗೆ ವಿಶೇಷ ಪುಸ್ತಕವೊಂದು ಸಿಕ್ಕಿಬಿಟ್ಟಿತ್ತು.

ಹೈಸ್ಕೂಲು ದಿನಗಳವು. ಆಗ ಸಾಹಿತ್ಯದ ಓದು ಹಾಗಿರಲಿ, ಸಾಮಾನ್ಯ ಓದೂ ಕೂಡ ಅಷ್ಟೇನೂ ಗಂಭೀರವಾಗಿ ಸಾಗುತ್ತಿರಲಿಲ್ಲ. ಓದಿನ ಹವ್ಯಾಸವು ಒಂದಷ್ಟಿದ್ದರೂ ಹೊಸ ಹೊಸ ವಿಷಯಗಳ ಪುಸ್ತಕಗಳನ್ನು ಹುಡುಕಿಕೊಂಡು ಹೋಗುತ್ತಿದ್ದ, ಈ ಬಗ್ಗೆ ಮಾಹಿತಿಯಿದ್ದ, ಓದಲು ಪರಿತಪಿಸುತ್ತಿದ್ದ ದಿನಗಳೇನೂ ಅದಾಗಿರಲಿಲ್ಲ. ಹೀಗಾಗಿ ಓದಿನ ವಿಚಾರಕ್ಕೆ ಬಂದರೆ ಅವುಗಳನ್ನು ನನ್ನ ಆರಂಭದ ದಿನಗಳೆಂದೇ ಹೇಳಬೇಕು. ರಜಾದಿನಗಳಲ್ಲಿ ಕಥೆಪುಸ್ತಕಗಳನ್ನು, ಮಕ್ಕಳಿಗಾಗಿಯೇ ಹೊರಬರುತ್ತಿದ್ದ ಕೆಲ ವಿಜ್ಞಾನಿಗಳ, ಸ್ವಾತಂತ್ರ್ಯ ಹೋರಾಟಗಾರರ, ಸಾಧಕರ ಜೀವನಗಾಥೆಯನ್ನು ಓದುತ್ತಿದ್ದ ನೆನಪಿದೆ. ನನ್ನ ಬಾಲ್ಯದ ಗೆಳತಿಯೊಬ್ಬಳು ಕನ್ನಡದ ಕಾಮಿಕ್ಸ್ ಗಳನ್ನೆಲ್ಲಾ ಒಟ್ಟುಗೂಡಿಸಿ, ಅವುಗಳಿಗೆ ದಪ್ಪನೆಯ ಬೈಂಡಿಂಗ್ ಮಾಡಿಸಿ ಇಟ್ಟುಕೊಂಡಿರುತ್ತಿದ್ದಳು. ಹೊರಗಿನಿಂದ ನೋಡಲು ದಪ್ಪದ ಧರ್ಮಗ್ರಂಥಗಳಂತೆ, ಮಹಾಕಾದಂಬರಿಗಳಂತೆ ಕಾಣುತ್ತಿದ್ದ ಅವುಗಳ ಒಳಗಿದ್ದಿದ್ದು ಕನ್ನಡದ ಕಾಮಿಕ್ಸ್ ಗಳು. ಪುಸ್ತಕಗಳನ್ನು ಸ್ವತಃ ಖರೀದಿಸಲಾಗದ ಆ ದಿನಗಳಲ್ಲಿ ಓದಿನ ವಿಚಾರಕ್ಕೆ ಬಂದರೆ ನಮಗೆ ‘ಫುಲ್ ಪ್ಯಾಕೇಜ್ ಮನರಂಜನೆ’ಯ ಸರಕುಗಳಂತಿದ್ದಿದ್ದು ಇವುಗಳೇ.

ಹೀಗಿರುವಾಗಲೇ ಆ ಇಂಗ್ಲಿಷ್ ಕಾದಂಬರಿಯು ನನಗೆ ಅಚಾನಕ್ಕಾಗಿ ಸಿಕ್ಕಿಬಿಟ್ಟಿತ್ತು. ಗುಜರಿಗೆ ಹೋಗುವಂತಿದ್ದ ಕೆಲ ಪುಸ್ತಕಗಳ ಮತ್ತು ಹಳೆಯ ದಿನಪತ್ರಿಕೆಗಳ ರಾಶಿಯ ನಡುವೆ ಅನಾಥವಾಗಿ ಬಿದ್ದಿತ್ತು ಈ ಪುಸ್ತಕ. ಏನಪ್ಪಾ ಇದು ಎಂದು ನೋಡಿದರೆ ಭಯಾನಕ ಮುಸ್ಸಂಜೆಯ ಹಿನ್ನೆಲೆಯಲ್ಲಿ ಕಾಗೆಯೊಂದು ಹಾರುತ್ತಿರುವ ಮುಖಪುಟವುಳ್ಳ ಪುಸ್ತಕ. ಇನ್ನು ಕೃತಿಯ ಹೆಸರೂ ಕೂಡ ಮುಖಪುಟದಲ್ಲಿ ವಿಚಿತ್ರ ಶೈಲಿಯಲ್ಲಿ ಮೂಡಿಬಂದಿದ್ದು ಅದೊಂದು ಹಾರರ್ ಕಥಾಹಂದರವನ್ನು ಹೊಂದಿರುವ ಕಾದಂಬರಿಯೆಂದು ಮೊದಲ ನೋಟದಲ್ಲೇ ಹೇಳಬಹುದಾಗಿತ್ತು. ಹೀಗೆ ಅಂದು ನನಗೆ ಆಕಸ್ಮಿಕವಾಗಿ ಸಿಕ್ಕಿದ್ದು ಜೋಸೆಫ್ ಹೋವಾರ್ಡ್ ಎಂಬ ಕಾದಂಬರಿಕಾರನೊಬ್ಬ ಬರೆದಿದ್ದ ‘ಡೆಮಿನ್ ಒಮೆನ್’ ಕೃತಿಯ ಎರಡನೇ ಭಾಗ.

ಮೊದಲಿನಿಂದಲೂ ಸಿನೆಮಾಗಳನ್ನು ವಿಪರೀತವೆಂಬಷ್ಟು ನೋಡುವ ನನಗೆ ತಕ್ಷಣ ನೆನಪಾಗಿದ್ದು ಹಾರರ್ ಚಿತ್ರಗಳೇ. ಪುಸ್ತಕವನ್ನು ಮೆಲ್ಲಗೆ ಎತ್ತಿಕೊಂಡು ಕಣ್ಣಾಡಿಸಿದೆ. ಅದರ ಪುಟಗಳು ಕಂದುಮಿಶ್ರಿತ ಹಳದಿ ಬಣ್ಣಕ್ಕೆ ತಿರುಗಿದ್ದವು. ಮೇಲ್ಹೊದಿಕೆ ತೀರಾ ಶಿಥಿಲವಾಗಿದ್ದು ಇನ್ನೇನು ಉದುರಿಬೀಳಲಿದೆ ಎನ್ನುವಂತಿತ್ತು. ಹಾಗೆಯೇ ಕೊನೆಯ ಕೆಲ ಪುಟಗಳೂ ಕೂಡ. ಮಧ್ಯದ ಪುಟಗಳು ಪಕ್ಷದೊಳಗೇ ಬಣರಾಜಕೀಯ ಮಾಡುವವರಂತೆ, ತನ್ನಷ್ಟಕ್ಕೇ ಒಂದೊಂದು ಭಾಗವಾಗಿ ಬೇರ್ಪಡುವ ಅವಸರದಲ್ಲಿದ್ದು ‘ಹ್ಯಾಂಡಲ್ ವಿದ್ ಕೇರ್’ ಎನ್ನುವಂತೆ ನನ್ನನ್ನು ಎಚ್ಚರಿಸುವಂತಿದ್ದವು. ನೀವು ಹಾರರ್ ಚಿತ್ರಗಳನ್ನು ಹೆಚ್ಚಾಗಿ ನೋಡುವವರಾಗಿದ್ದರೆ ಇಂಥಾ ದೃಶ್ಯಗಳು ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ಸಾಮಾನ್ಯವಾಗಿ ಸಿಗುತ್ತವೆ. ಕಥೆಯ ಮುಖ್ಯಪಾತ್ರವೊಂದು ಯಾವುದೋ ತಲಾಶೆಯಲ್ಲಿ ಹೊರಡುವುದು, ನಂತರ ಭೂತಬಂಗಲೆಯಲ್ಲೋ ಸ್ಮಶಾನದಲ್ಲೋ ಹಾಳುಬಾವಿಯಲ್ಲೋ ಧೂಳುಹಿಡಿದ ವಿಚಿತ್ರ ಪುಸ್ತಕವೊಂದು ಸಿಕ್ಕುವುದು, ಅದರಲ್ಲಿರುವ ವಿಲಕ್ಷಣ ಚಿತ್ರಗಳು-ಸಂಕೇತಗಳು, ಬೆನ್ನಿಗೇ ಸಿಗುವ ನಿಗೂಢ ಸುಳಿವುಗಳು… ಇತ್ಯಾದಿ ಇತ್ಯಾದಿ. ಅಂದು ಈ ಪುಸ್ತಕವು ಕೈಸಿಕ್ಕಾಗಲೂ ಸ್ವತಃ ಹಾರರ್ ಚಿತ್ರವೊಂದರ ಮುಖ್ಯಪಾತ್ರದಂತೆ, ಈ ಜಗತ್ತಿನ ಮಹಾರಹಸ್ಯವೊಂದನ್ನು ಬಿಡಿಸುವ ತವಕದಲ್ಲಿರುವ ಕುತೂಹಲಿಯಂತೆ ನಾನು ರೋಮಾಂಚನಕ್ಕೊಳಗಾಗಿದ್ದೆ.

ಕೃತಿಯು ಡೆಮೀನ್ ಒಮೆನ್ ಸರಣಿಯ ಎರಡನೇ ಭಾಗವಾದ್ದರಿಂದ ‘ಮೊದಲ ಭಾಗವು ಒಂದು ಎಚ್ಚರಿಕೆಯಾಗಿತ್ತಷ್ಟೇ’ ಎಂಬ ಬೆದರಿಕೆಯ ಧಾಟಿಯ ಒಕ್ಕಣೆಯು ನನ್ನನ್ನು ಆಕರ್ಷಿಸಿತು. ಮೊದಲನೇ ಭಾಗವನ್ನು ನಾನು ಓದುವುದು ಹಾಗಿರಲಿ, ಅಂಥದ್ದೊಂದು ಪುಸ್ತಕವು ಅಸ್ತಿತ್ವದಲ್ಲಿದೆ ಎಂಬುದೇ ಅಲ್ಲಿಯವರೆಗೆ ನನಗೆ ತಿಳಿದಿರಲಿಲ್ಲವಲ್ಲಾ. ಇನ್ನು ಕೃತಿಯ ಕೊನೆಯ ಪುಟಗಳಲ್ಲಿ ಈ ಕಥೆಯನ್ನಾಧರಿಸಿದ ಸಿನೆಮಾದ ದೃಶ್ಯಗಳೂ ಕಪ್ಪುಬಿಳುಪಿನಲ್ಲಿ ಅಚ್ಚಾಗಿದ್ದವು. ಒಟ್ಟಾರೆಯಾಗಿ ಸೂಪರ್ ಅನ್ನಿಸಿತು. ಮೆಲ್ಲನೆ ಅದರ ಮೇಲಿದ್ದ ಧೂಳನ್ನು ಕೊಡವಿ ಪುಟಗಳು ಚದುರಿಹೋಗದಂತೆ ಇತರ ಪಠ್ಯಪುಸ್ತಕಗಳೊಂದಿಗೆ ಎತ್ತಿಟ್ಟೆ. ನಂತರ ಗ್ರಂಥಪಾಲಕಿಯೊಂದಿಗೆ ಮಾತಾಡಿ ಪುಸ್ತಕವನ್ನು ನೊಂದಾಯಿಸಿ ಮನೆಗೆ ಕೊಂಡೊಯ್ಯುವುದೆಂಬ ಲೆಕ್ಕಾಚಾರ ನನ್ನದಾಗಿತ್ತು. ತರಗತಿಯ ಇತರ ಮಕ್ಕಳು ಆಡುವುದರಲ್ಲೇ ವ್ಯಸ್ತರಾಗಿದ್ದಾಗ ನಾನು ಪುಸ್ತಕಗಳಲ್ಲಿ ಮುಳುಗಿರುವುದನ್ನು ಕಂಡಾಗ ಆಕೆಗೆ ಅದೇನನ್ನಿಸುತ್ತಿತ್ತೋ. ಒಟ್ಟಾರೆಯಾಗಿ ನನ್ನ ಮೇಲೊಂದು ಆಕೆಯ ಅನುಕಂಪದ ನೋಟ ಇದ್ದೇ ಇತ್ತು.

ಹಾಗೆಯೇ ಈ ಇಂಗ್ಲಿಷ್ ಕಾದಂಬರಿಯನ್ನು ಓದಲು ಎಷ್ಟು ತಿಂಗಳುಗಳು ಹಿಡಿಯಬಹುದು ಎಂದು ತಲೆಕೆರೆದುಕೊಂಡಿದ್ದೂ ಆಯಿತು. ಏಕೆಂದರೆ ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದ ನಾನು ಇಂಗ್ಲಿಷ್ ಸಾಹಿತ್ಯದತ್ತ ತಪ್ಪಿಯೂ ಹೊರಳಿರಲಿಲ್ಲ. ಇಂಗ್ಲಿಷ್ ಪಠ್ಯಗಳಿಂದಾಗಿ ಚಿನುವಾ ಅಚಿಬೆ, ವರ್ಡ್ಸ್ ವರ್ತ್ ರಂತಹ ದಿಗ್ಗಜರ ಪರಿಚಯವಾಗಿದ್ದರೂ ಸ್ವತಂತ್ರವಾಗಿ ಕೃತಿಗಳನ್ನು ಓದುವುದು ಆ ದಿನಗಳಲ್ಲಿ ಕಲ್ಪನೆಗೂ ಮೀರಿದ್ದಾಗಿತ್ತು. ಮೇಲಾಗಿ ನಮ್ಮ ಮನೆಯಲ್ಲೂ ಯಾರೂ ಗಂಭೀರ ಓದುಗರಿಲ್ಲದ ಪರಿಣಾಮವಾಗಿ ಇವುಗಳೆಲ್ಲಾ ದೂರವೇ ಇದ್ದವು. ಇಷ್ಟಿದ್ದರೂ ಆದದ್ದಾಗಲಿ ಎಂಬ ಭಂಡಧೈರ್ಯದಿಂದ ಓದುವ ನಿರ್ಧಾರ ಮಾಡಿಯಾಗಿತ್ತು. ಕನ್ನಡ-ಇಂಗ್ಲಿಷ್ ಶಬ್ದಕೋಶವೊಂದು ಮನೆಯಲ್ಲಿದ್ದಿದ್ದರಿಂದಾಗಿ ಸಿಕ್ಕ ಧೈರ್ಯವದು. ಹಾಗೆಂದು ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದರೂ ಇಂಗ್ಲಿಷ್ ಬಗ್ಗೆ ಭಯವೇನೂ ಇರಲಿಲ್ಲ. ಆದರೆ ಹೀಗೆ ದಪ್ಪನೆಯ ಇಂಗ್ಲಿಷ್ ಕಾದಂಬರಿಯನ್ನು ಓದುವುದು ಮಾತ್ರ ಆ ದಿನಗಳಲ್ಲಿ ನನ್ನ ಪರಿಸರದ, ವಯಸ್ಸಿನ ಮಕ್ಕಳಲ್ಲಿ ತೀರಾ ಅಸಹಜವಾಗಿತ್ತು. ನಮ್ಮ ಗ್ರಂಥಪಾಲಕಿ ಇದಕ್ಕೆ ಹೇಗೆ ಪ್ರತಿಕ್ರಿಯಿಸಬಹುದು, ನನ್ನ ಬಗ್ಗೆ ಇತರರೊಂದಿಗೆ ಹೇಗೆ ನಗೆಯಾಡಬಹುದು ಎಂದೆಲ್ಲಾ ಯೋಚಿಸಿ ಕೊಂಚ ಗಾಬರಿಯಾಗಿದ್ದಂತೂ ಸತ್ಯ.

ಮುಂದೇನಾಯಿತು ನೆನಪಿಲ್ಲ. ಶಾಲೆಯಿಂದ ಮನೆಗೆ ಬಂದಿದ್ದಾಯಿತು. ಎರಡು-ಮೂರು ದಿನಗಳೂ ಕಳೆದವು. ಇತರ ಕೆಲಸಗಳ ಮಧ್ಯೆ ಈ ಕಾದಂಬರಿಯು ಮರೆತೇಹೋಗಿತ್ತು. ನಂತರ ಅಚಾನಕ್ಕಾಗಿ ಇದರ ನೆನಪಾಗಿದ್ದು ನನ್ನ ಪಠ್ಯಪುಸ್ತಕಗಳ ರಾಶಿಯ ಮಧ್ಯೆ ಇದೂ ಕೂಡ ಸಿಕ್ಕಾಗ. ಆದರೆ ಖುಷಿಯಾಗುವುದಕ್ಕಿಂತ ಹೆಚ್ಚಾಗಿ ಬೆಚ್ಚಿಬಿದ್ದಿದ್ದೇ ಆಯಿತು. ನಂತರ ನೋಂದಾಯಿಸಿ ತೆಗೆದುಕೊಳ್ಳೋಣವೆಂದು ಜೋಪಾನವಾಗಿ ಪಠ್ಯಪುಸ್ತಕಗಳ ನಡುವಿನಲ್ಲಿಟ್ಟಿದ್ದ ಈ ಕಾದಂಬರಿಯು ಇತರ ಪುಸ್ತಕಗಳೊಂದಿಗೆ ನೇರವಾಗಿ ಮನೆಗೇ ಬಂದಿತ್ತು. ಗ್ರಂಥಾಲಯಕ್ಕೆ ಹಿಂತಿರುಗಿಸೋಣವೆಂದರೆ ಮೂರು ದಿನಗಳು ಬೇರೆ ಕಳೆದಿದ್ದವು. ಹೀಗಾಗಿ ವಾಪಾಸು ಹಿಡಿದುಕೊಂಡು ಹೋದರೆ ಬೈಸಿಕೊಳ್ಳುವುದು ಗ್ಯಾರಂಟಿ. ಒಳ್ಳೆಯ ಅಂಕಗಳನ್ನು ಪಡೆಯುತ್ತಾ, ತನ್ನ ಚಿತ್ರಗಳಿಂದ ಶಾಲೆಯ ನೋಟೀಸ್ ಬೋರ್ಡನ್ನು ತುಂಬಿಸುತ್ತಾ ‘ದೊಡ್ಡ ಜನ’ ಆಗಿದ್ದ ನನಗೆ ಈ ‘ಸೆಲೆಬ್ರಿಟಿ ಸ್ಟೇಟಸ್’ ಅನ್ನು ಕಳೆದುಕೊಳ್ಳುವುದು ಇಷ್ಟವಿರಲಿಲ್ಲ. ಮನೆಯಲ್ಲಿ ಈ ಬಗ್ಗೆ ಹೇಳೋಣವೆಂದರೆ ಇಲ್ಲೂ ಒದೆಬೀಳುವುದು ಖಚಿತ. ವಟ್ರಾಸಿ ವಿಚಿತ್ರ ಧರ್ಮಸಂಕಟ!

ಕೊನೆಗೂ ಅದನ್ನು ಶಾಲೆಗೆ ತೆಗೆದುಕೊಂಡು ಹೋಗುವ ಧೈರ್ಯವನ್ನೇ ನಾನು ಮಾಡಲಿಲ್ಲ. ಹಾಗೆ ಮಾಡುವ ಮನಸ್ಸೂ ಇರಲಿಲ್ಲ ಅನ್ನುವುದು ಬೇರೆ ವಿಷಯ. ಇನ್ನು ಓದಲು ಕುಳಿತರೆ ಪುಸ್ತಕವನ್ನು ಕೆಳಗಿಡಲೂ ಆಗದಂತೆ ನಿರೀಕ್ಷೆಗೂ ಮೀರಿದ ವೇಗದಲ್ಲಿ ಕೃತಿಯು ಓದಿಸಿಕೊಳ್ಳುತ್ತಾ ಹೋಯಿತು. ಆಗೊಮ್ಮೆ ಈಗೊಮ್ಮೆ ಕ್ಲಿಷ್ಟ ಪದಗಳು ಬಂದಾಗ ಪದಕೋಶವು ಜೊತೆಯಾಯಿತು. ಇಂಗ್ಲಿಷ್ ಕಾದಂಬರಿಯೊಂದನ್ನು ಓದುವ ಮೊದಲ ಸಾಹಸವೇ ಯಶಸ್ವಿಯಾಗಿ ಇದು ನನ್ನಲ್ಲಿ ಮೂಡಿಸಿದ ಆತ್ಮವಿಶ್ವಾಸವು ಅಷ್ಟಿಷ್ಟಲ್ಲ. ಈ ಕೃತಿಯ ನಂತರ ಹೈ-ಜಂಪ್ ಹೊಡೆದಿದ್ದು ನೇರವಾಗಿ ಸಿಡ್ನಿ ಶೆಲ್ಡನ್ ಕೃತಿಗಳತ್ತ. ಇದಕ್ಕೂ ಯಾವ ಯೋಜನೆಗಳೂ, ಲೆಕ್ಕಾಚಾರಗಳೂ ಇರಲಿಲ್ಲ. ಶೆಲ್ಡನ್ ಸಾಹೇಬರು ದಕ್ಕಿದ್ದು ಕೂಡ ಆಕಸ್ಮಿಕವೇ. ವಿಚಿತ್ರವೆಂದರೆ ಆ ದಿನಗಳಲ್ಲಿ ಭಾರೀ ಸುದ್ದಿಯಲ್ಲಿದ್ದ ಹ್ಯಾರಿ ಪಾಟರ್ ಸರಣಿ, ಲಾರ್ಡ್ ಆಫ್ ದ ರಿಂಗ್ಸ್ ನಂತಹ ಕೃತಿಗಳು ಮಾತ್ರ ನನ್ನನ್ನು ಆಕರ್ಷಿಸಲೇ ಇಲ್ಲ. ಕಾಲೇಜಿನ ದಿನಗಳಲ್ಲಿ ಓದಿನ ಹವ್ಯಾಸವಿದ್ದ ಉತ್ತರ ಭಾರತದ ಸಹಪಾಠಿಗಳು ಹ್ಯಾರಿ ಪಾಟರ್ ಬಗ್ಗೆಯೇ ಚರ್ಚಿಸುತ್ತಿದ್ದರೆ ಎಲ್ಲೋ ಕಳೆದುಹೋದವನಂತೆ ನಾನು ಬೆಪ್ಪಾಗಿ ಪಿಳಿಪಿಳಿ ಕಣ್ಣುಬಿಡುತ್ತಿದ್ದೆ.
ಮೊದಲ ಪ್ರೀತಿಯನ್ನು ಮರೆಯುವುದು ಕಷ್ಟವಂತೆ. ಜೀವನದ ಮೊದಲ ಬಹುತೇಕ ಅನುಭವಗಳು ಹೀಗೆಯೇ ಅನ್ನಿ. ಹೀಗಿರುವಾಗ ಪುಸ್ತಕಗಳೂ ಹೊರತಲ್ಲ. ಈ ಕೃತಿಯು ನನ್ನ ಮಟ್ಟಿಗೆ ಒಂದೊಳ್ಳೆಯ ಆರಂಭವಾಗಿತ್ತಷ್ಟೇ. ನಂತರ ಅದೆಷ್ಟೋ ಕೃತಿಗಳು ಬಂದುಹೋದವು. ವಿಶೇಷವೆಂದರೆ ಇಂದಿಗೂ ಆ ಕೃತಿಯನ್ನು ಅಷ್ಟೇ ಖುಷಿಯಿಂದ ಓದಬಲ್ಲೆ ಅನ್ನುವುದೇ ನನಗೆ ಲವಲವಿಕೆಯನ್ನು ತರುವಂಥಾ ಸಂಗತಿ. ಇತ್ತ ಓದಿನ ಹವ್ಯಾಸವು ಕಮ್ಮಿಯಾಗುತ್ತಿದೆ ಎಂಬ ಮಾತುಗಳ ಮಧ್ಯೆಯೂ ವಾಟ್ಸಾಪ್, ಸೋಷಿಯಲ್ ಮೀಡಿಯಾಗಳಂತಹ ವೇದಿಕೆಗಳಲ್ಲಿ ಆಸಕ್ತರು ತಾವೂ ಓದಿ, ಇತರರಿಗೂ ಓದಿಸಿ, ಪುಸ್ತಕಪ್ರೀತಿಯನ್ನು ಹುಟ್ಟುಹಾಕುತ್ತಿರುವುದು ನಿಜಕ್ಕೂ ಸಂತಸದ ವಿಷಯ.

ಶಿಥಿಲವಾಗಿದ್ದ ‘ಡೆಮೀನ್ ಒಮೆನ್ – 2’ ಕೃತಿಗೆ ಕೆಲ ವರ್ಷಗಳ ನಂತರ ‘ಬೈಂಡಿಂಗ್ ಭಾಗ್ಯ’ ದೊರಕಿತು. ಮುಂದೆ ನೂರಾರು ಪುಸ್ತಕಗಳು ಬಂದು ನನ್ನ ಸಂಗ್ರಹವನ್ನು ತುಂಬಿಸಿದ್ದರೂ ಇದರ ಖದರ್ರೇ ಬೇರೆ. ಅಂದಹಾಗೆ ಇವೆಲ್ಲಾ ನೆನಪಾಗಿದ್ದು ವಿಶ್ವ ಪುಸ್ತಕ ದಿನಾಚರಣೆಯ ಗುಂಗಿನಲ್ಲಿ. ಓದ್ತಾ ಓದ್ತಾ ನಾವು ಕಳೆದುಹೋಗುವುದು ಎಷ್ಟು ಸತ್ಯವೋ ನಮ್ಮನ್ನು ನಾವು ಕಂಡುಕೊಳ್ಳುವುದೂ ಕೂಡ ಅಷ್ಟೇ ಸತ್ಯ. ಪುಸ್ತಕಪ್ರೀತಿ ಮತ್ತಷ್ಟು ಬೆಳೆಯಲಿ.

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 1 week ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 1 week ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  3 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...