Share

ಕ್ರೈಸ್ತರ ಪ್ರಾರ್ಥನಾ ಅಭಿಯಾನದ ಕರೆಯ ಸುತ್ತಮುತ್ತ
ಕಾದಂಬಿನಿ

 

 

ಪ್ರಸ್ತಾಪ

 

 

ಹುಸಿ ರಾಷ್ಟ್ರ ಭಕ್ತಿಯಲ್ಲಿ ಆರ್ಭಟಿಸುವ ಹಿಂದುತ್ವದ ಸ್ವಘೋಷಿತ ವಾರಸುದಾರರು ಮಾತೆತ್ತಿದರೆ ಕ್ರೈಸ್ತರನ್ನು ಈ ದೇಶದವರಲ್ಲ, ಅವರನ್ನು ದೇಶದಿಂದ ಒದ್ದೋಡಿಸಬೇಕು ಎನ್ನುವಂತೆ ವರ್ತಿಸುತ್ತಾರೆ. ಆದರೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಪ್ರತಿ ರಾಷ್ಟ್ರೀಯ ಹಬ್ಬಗಳನ್ನೂ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ಆಚರಿಸಿಯೇ ಧಾರ್ಮಿಕ ಚಟುವಟಿಕೆಯನ್ನು ಶುರುಮಾಡುವ ಕ್ರೈಸ್ತರಿಂದ ಕಲಿಯುವುದು ಬೇಕಾದಷ್ಟಿದೆ. ಆಸ್ಪತ್ರೆ, ಶಿಕ್ಷಣ, ಸಮಾಜ ಸುಧಾರಣೆಯ ಕಾರ್ಯಗಳಲ್ಲಿ ಕ್ರೈಸ್ತ ಸಂಸ್ಥೆಗಳು ಮಾಡುವ ಸೇವೆಯನ್ನು ಈ ದೇಶ, ಈ ಸರಕಾರಗಳು ನೆನೆಯುವುದು ಅಗತ್ಯವಿದೆ.

 

ರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ದೆಹಲಿ ವಲಯದ ಆರ್ಚ್ ಬಿಷಪ್ ಅನಿಲ್ ಕೌಟೋ ಅವರು ಕ್ರೈಸ್ತ ಧಾರ್ಮಿಕ ಸಂಸ್ಥೆಗಳಿಗೆ ಪತ್ರವನ್ನು ಬರೆದು, ‘ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದ್ದು, ಈ ಪರಿಸ್ಥಿತಿಯು ಭಾರತದ ಪ್ರಜಾಪ್ರಭುತ್ವ ತತ್ವಗಳು ಮತ್ತು ಜ್ಯಾತ್ಯತೀತ ವ್ಯವಸ್ಥೆಗೆ ಬೆದರಿಕೆಯಾಗಿದೆ. ಆದ್ದರಿಂದ ಕ್ರೈಸ್ತರು 2019ರ ಚುನಾವಣೆಗೂ ಮೊದಲು ದೇಶಕ್ಕಾಗಿ ಪ್ರತಿ ಶುಕ್ರವಾರ ಪ್ರಾರ್ಥನಾ ಅಭಿಯಾನ ನಡೆಸಬೇಕು’ ಎಂದಿದ್ದರು. ಈ ವಿಷಯಕ್ಕೆ ಸಂಬಂಧಿಸಿ ಪರ ವಿರೋಧ ಹೇಳಿಕೆಗಳು ಬಂದಿದ್ದವು. ಹಾಗೆ ನೋಡಿದರೆ ಈ ಪತ್ರದಲ್ಲಿ ಅಂಥ ವಿಶೇಷವೇನೂ ಕಾಣಿಸುವುದಿಲ್ಲ. ಯಾಕೆಂದರೆ ಇದು ಕ್ರೈಸ್ತರ ಆಂತರಿಕ ವಿಷಯವಾಗಿದೆ ಅಲ್ಲದೆ ಹಿಂದಿನಿಂದಲೂ ದೇಶದ ಮಾತ್ರವಲ್ಲ ವಿಶ್ವದ ಯಾವುದೇ ಮೂಲೆಯಲ್ಲೂ ಪ್ರಕೃತಿ ವಿಕೋಪವಿರಲಿ, ಭಯೋತ್ಪಾದನೆ ಇರಲಿ, ಯುದ್ಧವಿರಲಿ, ಖಾಯಿಲೆಗಳಿರಲಿ, ರಾಜಕೀಯ ಪ್ರಕ್ಷುಬ್ಧತೆಗಳಿರಲಿ ಯಾವುದೇ ಬಗೆಯ ಗಂಡಾಂತರಗಳು ಒದಗಿದಾಗಲೂ, ಕ್ರೈಸ್ತರಲ್ಲಿ ಇಂಥ ಸುತ್ತೋಲೆಯನ್ನು ಹೊರಡಿಸುವ ಮೂಲಕ ಪ್ರಾರ್ಥಿಸುವ ಕೋರಿಕೆ ಇಡುವುದು ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ದೇಶದಲ್ಲಿ ಸಣ್ಣ ಪುಟ್ಟ ಸಂಗತಿಗೂ ಪೂಜೆ, ಹೋಮ ಹವನ ನಡೆಸುವ ಹಿಂದೂಗಳು ಕ್ರೈಸ್ತರು ಪ್ರಾರ್ಥನಾ ಅಭಿಯಾನಕ್ಕೆ ಕರೆ ಕೊಟ್ಟಾಗ ಅದೇಕೆ ತಿರುಗಿಬೀಳಬೇಕು ಎಂದು ಅರ್ಥವಾಗುವುದಿಲ್ಲ. ಇಂಥದ್ದೊಂದು ಪತ್ರವನ್ನು ಕ್ರೈಸ್ತ ಧರ್ಮಗುರುಗಳು ಹೊರಡಿಸಿದ್ದೇ ತಡ, ಕೇಂದ್ರ ಸರಕಾರವೇ ನೇರವಾಗಿ ಇದರಲ್ಲಿ ಅನಗತ್ಯ ಮೂಗು ತೂರಿಸಿ ಇದನ್ನು ತೀವ್ರವಾಗಿ ಟೀಕಿಸಿ ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದೆಯೆನ್ನುವುದನ್ನು ಅಲ್ಲಗಳೆದಿದೆ ಮಾತ್ರವಲ್ಲ ಇದು ಆರ್ಚ್ ಬಿಷಪ್ ಅವರ ಪೂರ್ವಾಗ್ರಹ ಪೀಡಿತ ಮನಃಸ್ಥಿತಿಯನ್ನು ತೋರಿಸುತ್ತದೆ ಎಂದಿದೆ. ಕೇಂದ್ರ ಸರಕಾರದ ಅನಗತ್ಯ ಪ್ರತಿಸ್ಪಂದನೆಯೇ ಎಲ್ಲೋ ಒಂದು ಕಡೆ ಆರ್ಚ್ ಬಿಷಪ್ ಹೇಳಿರುವ ಮಾತನ್ನು ನಿಜವೆಂದು ಸಾಬೀತು ಮಾಡಹೊರಟಂತೆ ಕಂಡರೆ ಅಚ್ಚರಿಯಿಲ್ಲ.

ಇದರ ಬೆನ್ನಲ್ಲೇ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ (ಎನ್.ಸಿ.ಎಂ.) ಅಧ್ಯಕ್ಷ ಸಯ್ಯದ್ ಘಹೂರುಲ್ ಹಸನ್ ರಿಜ್ವಿಯವರು ಆರ್ಚ್ ಬಿಷಪ್ ಕೌಟೋರ ಮಾತನ್ನು ಅಲ್ಲಗಳೆದು, ‘ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇಲ್ಲ. ಆದರೆ ಆರ್ಚ್ ಬಿಷಪ್ ಅವರು ಬರೆದ ಪತ್ರವು ನಿಶ್ಚಿತವಾಗಿಯೂ ಭಯದ ವಾತಾವರಣವನ್ನು ಸೃಷ್ಟಿಸಲಿದೆ. ಕೇಂದ್ರವು ಎಲ್ಲರಿಗಾಗಿ ಕೆಲಸ ಮಾಡುತ್ತಿದೆ ಮತ್ತು ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ’ ಎಂದು ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ರಿಜ್ವಿಯವರು ಇದೇ ಕೇಂದ್ರ ಸರಕಾರವು ಹಿಂದುತ್ವದ ಅಜೆಂಡಾ ಹೊಂದಿರುವುದನ್ನೂ, ಮುಸ್ಲಿಮ್, ಕ್ರೈಸ್ತ ಹಾಗೂ ದಲಿತರ ಮೇಲಿನ ಎಲ್ಲ ದಾಳಿಗಳನ್ನೂ ಅವರ ಮೇಲಿನ ಅಸಹನೆ, ದ್ವೇಷದ ಧೋರಣೆಯನ್ನೂ ನಿಯಂತ್ರಿಸಲು ಯತ್ನಿಸದಿರುವುದನ್ನು ಮತ್ತು ಈ ಸಂಬಂಧ ಕೇಂದ್ರ ಸರಕಾರದ ಜಾಣ ಮೌನವನ್ನೂ ಅದೇಕೋ ಮುಚ್ಚಿಡಲು ಯತ್ನಿಸಿದ್ದಾರೆ ಎನಿಸುತ್ತದೆ.

ನಿಜಕ್ಕೂ ಕೇಂದ್ರ ಸರಕಾರವು ಮತ್ತು ಅದರ ಬೆನ್ನ ಮರೆಯಲ್ಲೇ ಕಾರ್ಯಾಚರಿಸುವ ಹಿಂದುತ್ವವಾದಿಗಳು ಎಷ್ಟರ ಮಟ್ಟಿಗೆ ಅಲ್ಪಸಂಖ್ಯಾತರನ್ನೂ, ಈ ನೆಲದ ಬಹುಸಂಖ್ಯಾತ ದಲಿತರನ್ನೂ ಸೈರಣೆಯಿಂದ ತರತಮವಿಲ್ಲದೆ ಕಂಡಿದೆ? ಎಷ್ಟರ ಮಟ್ಟಿದ ಸಂವಿಧಾನದ ಆಶಯದಂತೆ ಜ್ಯಾತ್ಯತೀತ ನಿಲುವನ್ನು ಪೋಷಿಸಿದೆ? ಸಂವಿಧಾನವನ್ನೇ ಬದಲಿಸಬೇಕು ಎನ್ನುವ ಹೇಳಿಕೆಗಳು ಕೇಂದ್ರ ಸರಕಾರದ ಕುರ್ಚಿಯ ಬುಡದಿಂದಲೇ ತೂರಿಬರುವಾಗ, ರಾಷ್ಟ್ರವನ್ನು ಹಿಂದೂ ರಾಷ್ಟ್ರವಾಗಿ ಮಾಡಲು ಪಣತೊಟ್ಟಂತೆ ಕಾಣುವಾಗ, ಈ ದೇಶದ ಅಲ್ಪಸಂಖ್ಯಾತರ ಆಹಾರದ ತಟ್ಟೆಯಲ್ಲಿ ಇಣುಕಿ ನೋಡುವ, ಅತ್ಯಾಚಾರ, ಹಲ್ಲೆಗಳಿಂದ ಬದುಕಿನ ಹಕ್ಕು, ಅವರ ಧಾರ್ಮಿಕ ಹಕ್ಕುಗಳ ಮೇಲೆಯೇ ಮೇಲೆಯೇ ಪ್ರಹಾರಗಳು ನಡೆಯುವಾಗ, ಅವರ ಪ್ರಾರ್ಥನಾ ಮಂದಿರಗಳನ್ನು, ಶಾಲೆಗಳನ್ನು ಕೆಡವುವಾಗ, ಮತಾಂತರ, ಲವ್ ಜಿಹಾದ್, ಭಯೋತ್ಪಾದನೆಯ ಮಿಥ್ಯಾರೋಪಗಳನ್ನು ಅವರ ಮೇಲೆ ಹೊರಿಸುವಾಗ, ಘರ್ ವಾಪಸಿಯಂಥದ್ದನ್ನು ಮಾಡುವ ಮೂಲಕ ಹಿಂದೂವಾಗಿ ಪರಿವರ್ತಿಸುವ ವಿಕೃತಿಗಿಳಿದಾಗ, ಕ್ರೈಸ್ತ ಅಥವಾ ಮುಸ್ಲಿಮ್ ಎಂದು ತಿಳಿಯುತ್ತಿದ್ದಂತೆ ಅವರಿಗೆ ಸೈಟು ಕೊಳ್ಳದಂತೆ, ಮನೆ ಕಟ್ಟದಂತೆ, ಅವರೊಂದಿಗೆ ವ್ಯಾಪಾರ ವಹಿವಾಟು ನಡೆಸದಂತೆ, ಅವರಿಗೆ ಉದ್ಯೋಗಗಳಲ್ಲಿ ಅವಕಾಶ ವಂಚಿತರನ್ನಾಗಿಸುವಂತೆ, ಭಯೋತ್ಪಾದಕರಂತೆ, ಅಪರಾಧಿಗಳಂತೆ, ವೈರಿಗಳಂತೆ ಕಾಣುವಂತೆ ಸಮಾಜದಲ್ಲಿ ವಾತಾವರಣ ಸೃಷ್ಟಿ ಮಾಡಿರುವಾಗ, ಅವರ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಚಟುವಟಿಕೆಗಳು ನಡೆಯುತ್ತಿರುವಾಗಲೂ ಅದನ್ನು ತಡೆಯುವ ಬದಲು ಪ್ರೋತ್ಸಾಹಿಸುವಂತೆ ಹೇಳಿಕೆಗಳು ಸರಕಾರದ ಒಳಗಿನಿಂದಲೇ ತೂರಿ ಬರುವಾಗ, ಹಿಂದುತ್ವದ ವಾರಸುದಾರರು ಎಂದು ಹೇಳಿಕೊಳ್ಳುವವರು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕೊಳಕು ಭಾಷೆಯಲ್ಲಿ ಬೆದರಿಕೆಗಳನ್ನೊಡ್ಡುವುದನ್ನು ಕಂಡೂ ಕಾಣದಂತಿರುವ ಸರಕಾರವೊಂದು ನಮ್ಮನ್ನಾಳುವಾಗ ಧರ್ಮಗುರುವೊಬ್ಬರು ಇಂಥ ಪತ್ರ ಬರೆದುದರಲ್ಲಿ ಯಾವ ಅಚ್ಚರಿ ಕಾಣಿಸುವುದಿಲ್ಲ. ಬಹು ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದ ಜ್ಯಾತ್ಯತೀತ ರಾಷ್ಟ್ರವೊಂದನ್ನು ಒಂದು ದೇಶ, ಒಂದು ಧರ್ಮ, ಒಂದು ಬಣ್ಣ, ಒಂದು ಸಂಸ್ಕೃತಿ ಎನ್ನುವ ಪ್ರಾಸಿಸ್ಟ್ ಧೋರಣೆಯ ಕಾಲುಗಳಡಿ ಹೊಸಕುವ ಸ್ಪಷ್ಟ ಚಿತ್ರಗಳು ಕಣ್ಣಿಗೆ ಗೋಚರವಾಗುತ್ತಿರುವಾಗ ಧಾರ್ಮಿಕ ಮುಖಂಡರೊಬ್ಬರು ತಮ್ಮ ಸಮುದಾಯದವರಿಗೆ ಹೀಗೆ ಪತ್ರ ಬರೆದುದರಲ್ಲಿ ತಪ್ಪೇನಿದೆ?

ಇಲ್ಲಿ ನಾವು ಗಮನಿಸಬಹುದಾದ ಬಹುಮುಖ್ಯ ಅಂಶವೆಂದರೆ ಆರ್ಚ್ ಬಿಷಪ್ ಅನಿಲ್ ಕೌಟೋ ಅವರು ದೇಶದ ಪರಿಸ್ಥಿತಿಯ ಕುರಿತು ಪ್ರಾರ್ಥಿಸಲು ಕರೆ ಕೊಟ್ಟಿದ್ದಾರೆಯೇ ಹೊರತು, ಯಾವುದೇ ಹಿಂಸಾತ್ಮಕ ಅಥವಾ ಅಹಿಂಸಾತ್ಮಕ ಪ್ರತಿಭಟನೆಗೂ ಅಲ್ಲ ಎನ್ನುವುದು.

ಭಾರತದಲ್ಲಿ ಕ್ರೈಸ್ತರ ಮೇಲೆ ನಿರಂತರ ಮೇಲೆ ದೌರ್ಜನ್ಯ ನಡೆದುಕೊಂಡೇ ಬಂದಿದೆ. ಕೇವಲ 2.3% ಜನಸಂಖ್ಯೆಯುಳ್ಳ ಕ್ರೈಸ್ತರು ಮುಸ್ಲಿಮ್ ಅಥವಾ ದಲಿತರಂತೆ ದೇಶದ ರಾಜಕೀಯ/ ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರವಹಿಸಲಾರರು ಎನ್ನುವುದು ಈ ದೌರ್ಜನ್ಯಕ್ಕೆ ಇನ್ನೊಂದು ಕುಮ್ಮಕ್ಕು. ಗ್ರಹಾಂ ಸ್ಟೇನ್ಸ್ ಮತ್ತು ಮಕ್ಕಳನ್ನು ಜೀವಂತ ಸುಟ್ಟು ಹಾಕಿದ್ದು, ಅದರ ಅಪರಾಧಿಗಳನ್ನು ಪ್ರಕರಣದಿಂದ ಖುಲಾಸೆಗೊಳೊಸಿದ್ದು, ಕನ್ಯಾಸ್ತೀಯರ ಮೇಲಿನ ಅತ್ಯಾಚಾರ ಪ್ರಕರಣಗಳು, ಚರ್ಚ್ ಮೇಲಿನ ದಾಳಿಗಳು, ಮತಾಂತರದ ಹೆಸರಿನಲ್ಲಿ ಮದರ್ ತೆರೆಸಾ ಸೇರಿದಂತೆ ಕ್ರೈಸ್ತ ಸನ್ಯಾಸಿನಿಯರ ಸೇವೆಯನ್ನೂ ಕಡೆಗಣಿಸಿ ಅವರನ್ನು ಕಿವಿ ಮುಚ್ಚಿಕೊಳ್ಳುವಷ್ಟು ಹೀನಾಯವಾಗಿ ಅವಹೇಳನ ಮಾಡುತ್ತಿರುವುದು, ಕ್ರೈಸ್ತ ಮೇಲಿನ ಹಲ್ಲೆಗಳು ಹೀಗೆ ನಿರಂತರವಾಗಿ ನಡೆದರೂ ಸರಕಾರಗಳು ಕ್ರೈಸ್ತರ ನೆರವಿಗೆ ಬರುವುದಿಲ್ಲ ಮತ್ತು ಸೂಕ್ತ ಭದ್ರತೆ ಒದಗಿಸುವುದಿಲ್ಲ. ಕ್ರೈಸ್ತ ಮತದಾದರರ ಸಂಖ್ಯೆಯೂ ಸರಕಾರಗಳನ್ನು ರಚಿಸುವಲ್ಲಿ ನಿರ್ಣಾಯಕ ಪಾತ್ರವಹಿಸುವಷ್ಟು ಇದ್ದಿದ್ದರೆ ಹೀಗಾಗುತ್ತಿರಲಿಲ್ಲವೆಂಬುದು ಕ್ರೈಸ್ತರಿಗೆ ತಿಳಿಯದ್ದೇನಲ್ಲ.

ಇಷ್ಟಾದರೂ ಕ್ರೈಸ್ತರು ಶಾಂತಿಪ್ರಿಯರು, ಕ್ಷಮಾದಾನಿಗಳು. ತಮ್ಮ ಹಾಗೂ ತಮ್ಮ ಧರ್ಮದ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆದಾಗಲೂ ಅವರು ಬಂಡೆದ್ದು ತಿರುಗಿ ಬಿದ್ದದ್ದು, ಬೀದಿಗಿಳಿದು ಪ್ರತಿಭಟಿಸಿದ್ದು, ಆಯುಧ ಹಿಡಿದದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮೇಲಿನ ದೌರ್ಜನ್ಯವನ್ನು ಎತ್ತಿಹಿಡಿದು ದೇಶದ ಮಾನ ಕಳೆದದ್ದು ಇಲ್ಲವೇ ಇಲ್ಲ. ಕ್ರೈಸ್ತರ ಧಾರ್ಮಿಕ ಮುಖಂಡರು ಇಂಥದ್ದಕ್ಕೆ ಎಂದೂ ಕರೆ ಕೊಡುವುದಿಲ್ಲ ಮತ್ತು ಧಾರ್ಮಿಕ ಮುಖಂಡರ ಮಾತು ಮೀರಿ ಆ ಜನತೆ ಎಂದೂ ಹೋಗಿದ್ದಿಲ್ಲ.ಅವರದ್ದೇನಿದ್ದರೂ ಮೌನ ಪ್ರತಿಭಟನೆ ಮತ್ತು ‘ಸಬ್ ಕೋ ಸನ್ಮತಿ ದೇ ಭಗವಾನ್’ ಎಂಬಂಥ ಪ್ರಾರ್ಥನೆ ಮಾತ್ರ.

ರಾಜಕೀಯ ಕ್ಷೇತ್ರ ಮತ್ತು ಕ್ರೈಸ್ತರು: ಕ್ರೈಸ್ತ ಜನಸಂಖ್ಯೆ ಮೇಲೆ ಹೇಳಿದಂತೆ ದೇಶದಲ್ಲಿ ಇರುವುದೇ 2%. ಇವರೂ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಧುಮುಕುವುದು ತೀರಾ ಕಡಿಮೆ. ಹಾಗೆ ಧುಮುಕುವ ಆಸಕ್ತಿ ಇದ್ದರೂ ಕ್ರೈಸ್ತ ಮತದಾರರ ಸಂಖ್ಯೆ ಕಡಿಮೆ ಇರುವುದರಿಂದ ಅಲ್ಪ ಸಂಖ್ಯಾತ ಕೆಟಗರಿಯಲ್ಲಿ ಚುನಾವಣೆ ಎದುರಿಸುವುದು ಕಷ್ಟವಿದೆ. ಏನಿದ್ದರೂ ಜನರಲ್ ಕೆಟಗರಿಯಲ್ಲಿ ಟಿಕೆಟ್ ಪಡೆಯಬೇಕು. ಇದು ಕಷ್ಟ ಸಾಧ್ಯ. ಇದು ಒಂದು ವಿಚಾರವಾದರೆ, ರಾಜಕೀಯದಲ್ಲಿ ಹಿಂದೂ ಮಠಾಧೀಶರಂತೆ ರಾಜಕೀಯ ಪ್ರಕ್ರಿಯೆಗಳಲ್ಲಿ ಮೂಗುತೂರಿಸದೆ ತಮ್ಮ ಪಾಡಿಗೆ ತಾವು ತಮ್ಮ ಧಾರ್ಮಿಕ ಚಟುವಟಿಕೆಗಳಲ್ಲಿ ಮುಳುಗಿಹೋದವರು.

ಹುಸಿ ರಾಷ್ಟ್ರ ಭಕ್ತಿಯಲ್ಲಿ ಆರ್ಭಟಿಸುವ ಹಿಂದುತ್ವದ ಸ್ವಘೋಷಿತ ವಾರಸುದಾರರು ಮಾತೆತ್ತಿದರೆ ಕ್ರೈಸ್ತರನ್ನು ಈ ದೇಶದವರಲ್ಲ, ಅವರನ್ನು ದೇಶದಿಂದ ಒದ್ದೋಡಿಸಬೇಕು ಎನ್ನುವಂತೆ ವರ್ತಿಸುತ್ತಾರೆ. ಆದರೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಪ್ರತಿ ರಾಷ್ಟ್ರೀಯ ಹಬ್ಬಗಳನ್ನೂ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ಆಚರಿಸಿಯೇ ಧಾರ್ಮಿಕ ಚಟುವಟಿಕೆಯನ್ನು ಶುರುಮಾಡುವ ಕ್ರೈಸ್ತರಿಂದ ಕಲಿಯುವುದು ಬೇಕಾದಷ್ಟಿದೆ. ಆಸ್ಪತ್ರೆ, ಶಿಕ್ಷಣ, ಸಮಾಜ ಸುಧಾರಣೆಯ ಕಾರ್ಯಗಳಲ್ಲಿ ಕ್ರೈಸ್ತ ಸಂಸ್ಥೆಗಳು ಮಾಡುವ ಸೇವೆಯನ್ನು ಈ ದೇಶ, ಈ ಸರಕಾರಗಳು ನೆನೆಯುವುದು ಅಗತ್ಯವಿದೆ.

ಕ್ರೈಸ್ತರು ಮತ್ತು ಮತಾಂತರದ ಸುತ್ತಮುತ್ತ: ನಮ್ಮ ಸಂವಿಧಾನದಲ್ಲಿ ನಮ್ಮ ದೇಶದಲ್ಲಿ ಯಾವುದೇ ಧರ್ಮವಾಚರಿಸಲು ಮತ್ತು ಮತಾಂತರ ಹೊಂದಲು ಮುಕ್ತ ಅವಕಾಶವಿದೆ. ಆದರೂ ಕ್ರೈಸ್ತರ ವಿರುದ್ಧ ಮತಾಂತರದ ಗುರುತರ ಆಪಾದನೆಯನ್ನು ಹೊರಿಸುವ ಮತ್ತು ಘರ್ ವಾಪಸಿಯಂತಹ ಯೋಜನೆಯನ್ನು ಹಾಕಿಕೊಂಡು ಕ್ರೈಸ್ತರ ಮರುಮತಾಂತರ ಮಾಡುವ ಸಂವಿಧಾನ ವಿರೋಧಿ ಕೃತ್ಯಗಳನ್ನು ನಾವಿಂದು ನೋಡಿದ್ದೇವೆ. ನಿಜ ಹೇಳಬೇಕೆಂದರೆ ಕ್ರೈಸ್ತರಲ್ಲಿ ರೋಮನ್ ಕಥೋಲಿಕ್ ಮತ್ತು ಪ್ರಾಟೆಸ್ಟೆಂಟ್ ಎಂಬ ಬೃಹತ್ ಸಮುದಾಯಗಳಲ್ಲಿ ಮತಾಂತರ ನಡೆಯುವುದನ್ನು ನಿಲ್ಲಿಸಿ ಮುಕ್ಕಾಲು ಶತಮಾನವೇ ಕಳೆದಿದೆ. ಯಹೋವ ವಿಟ್ನೆಸ್, ಪೆಂತೆಕೋಸ್ತ್, ಬ್ರದರನ್ ಮುಂತಾದ ಚಿಕ್ಕಪುಟ್ಟ ಸಮುದಾಯಗಳು ಬೈಬಲ್ಲಿನ ಸುವಾರ್ತೆ ಸಾರುವ ಕೆಲಸ ಮಾಡಿದರೂ ಅವರು ತಮ್ಮ ಪಂಗಡಗಳಿಗೆ ಈ ಕಥೋಲಿಕ, ಪ್ರಾಟೆಸ್ಟೆಂಟ್(ಸಿ.ಎಸ್.ಐ) ಈ ಪಂಗಡಗಳ ಜನರನ್ನೇ ‘ನಿಮ್ಮ ಪಂಗಡದಲ್ಲಿ ಪೂಜಾವಿಧಾನ ಸರಿಯಿಲ್ಲ ಪ್ರಾರ್ಥನಾ ವಿಧಾನವೇ ಸರಿಯಿಲ್ಲ’ ಎಂದು ತಮ್ಮ ಪಂಗಡಗಳಿಗೆ ಪಂಗಡಾಂತರ ಮಾಡಿಕೊಳ್ಳುವುದಿದೆ. ಮೊದಲನೇದಾಗಿ ಈ ಸಣ್ಣ ಪುಟ್ಟ ಪಂಗಡಗಳಿಗೆ ಕ್ಯಥೋಲಿಕ್, ಪ್ರಾಟೆಸ್ಟೆಂಟರಂತೆ ಬುಡವೂ ತುದಿಯೂ ಗಟ್ಟಿಯಿಲ್ಲದೆ ಗಲ್ಲಿಗೊಬ್ಬ ಸ್ವಘೋಷಿತ ಪಾಸ್ಟರ್ ಇದ್ದು ಈ ಪಂಗಡಗಳು ಎಷ್ಟು ಬೇಗ ಕಟ್ಟಲ್ಪಡುತ್ತವೋ ಅಷ್ಟೇ ಬೇಗ ಚದುರಿಯೂ ಹೋಗುತ್ತವೆ. ಇವರು ಅ ಕ್ರೈಸ್ತರನ್ನು ತಮ್ಮ ಪಂಗಡಗಳಿಗೆ ಮತಾಂತರ ಮಾಡಿಕೊಂಡರೂ ದಾಖಲಾತಿಗಳಲ್ಲಿ ಅವರು ತಮ್ಮ ಮೂಲ ಜಾತಿಯನ್ನೇ ಉಳಿಸಿಕೊಂಡಿರುತ್ತಾರೆ ಮತ್ತು ಹಣ ದೊರೆಯುವ, ಕಾಯಿಲೆ ವಾಸಿಯಾಗುವ ಆಶೋತ್ತರಗಳನ್ನು ಕಣ್ಣಿನಲ್ಲಿ ಮುಡಿದು ಮತಾಂತರಗೊಂಡವರು ಒಂದು ಕಾಲನ್ನು ತಮ್ಮ ಮೂಲ ಜಾತಿಯನ್ನೂ ಇನ್ನೊಂದು ಕಾಲನ್ನು ಈ ಹೊಸ ಜಾತಿಯಲ್ಲೂ ಇಟ್ಟುಕೊಂಡು ಅಲ್ಲೂ ಇರಲಾಗದೆ ಇಲ್ಲೂ ಇರಲಾಗದೆ ಈ ಮತಾಂತರವು ಬಿದ್ದುಹೋಗುವ ಸಂದರ್ಭಗಳೇ ಹೆಚ್ಚು. ಅಲ್ಲದೆ ಕ್ರೈಸ್ತರ ಒಳಪಂಗಡಗಳಲ್ಲಿ ಮದುವೆಗಳು ನಡೆಯುವುದಿಲ್ಲ. ಹೀಗಾಗಿಯೇ ಏನೋ, ಕ್ರೈಸ್ತರ ಜನಸಂಖ್ಯೆ ಐವತ್ತು ವರ್ಷಗಳ ಹಿಂದೆ ಇದ್ದ ಪ್ರಮಾಣಕ್ಕಿಂತ ಈಗ ಕುಸಿತ ಕಂಡಿದೆಯೇ ಹೊರತು ಏರಿಕೆಯಾಗಿಲ್ಲ. ಭಾರತದ ಜನಗಣತಿಯ ಪ್ರಕಾರ 1951ರಲ್ಲಿ 2.30%, 1991ರಲ್ಲಿ 2.32%, 2001ರಲ್ಲಿ 2.30%, 2011ರಲ್ಲಿ 2.30 ಮತ್ತು ಈಗ ಕೇವಲ 2.3% ಕ್ರೈಸ್ತರು ಇದ್ದಾರೆಂದು ದಾಖಲೆಗಳು ಹೇಳುತ್ತವೆ. ಅಂದಮೇಲೆ ಈ ಮತಾಂತರದ ಆರೋಪದಲ್ಲಿ ಎಷ್ಟು ಮಾತ್ರದ ಹುರುಳಿದೆ ಎನ್ನುವುದನ್ನು ಯೋಚಿಸಬೇಕಾಗುತ್ತದೆ.

ಹಿಂದುತ್ವವಾದಿಗಳ ಕ್ರೈಸ್ತವಿರೋಧಿ ನೀತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಅವರು ಕ್ರೈಸ್ತರ ವಿರುದ್ಧ ಬರೆಯುವ ಪೋಸ್ಟುಗಳೂ, ಮತಾಂತರದಂತಹ ಗುರುತರ ಆಪಾದನೆಗಳು ಮತ್ತು ಬೆದರಿಕೆಗಳಿಂದ, ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡಿ ಅವರು ಮಾಡುವ ಹಲ್ಲೆಗಳಿಂದ ನಿತ್ಯ ಅಭದ್ರತಾ ಭಾವ, ಭಯ, ನೋವು, ಆತಂಕಗಳನ್ನ ಎದುರಿಸುತ್ತಾ ಭಯಭೀತ ವಾತಾವರಣದಲ್ಲಿ ಬದುಕುವಂತಾದರೂ ಈ ಎಲ್ಲವನ್ನೂ ಗಟ್ಟಿದನಿಯಿಂದ ಹೇಳಿಕೊಳ್ಳಲು, ಇದರ ವಿರುದ್ಧ ಸೆಣೆಸಲು ಅವರಿಗಿನ್ನೂ ಸಾಧ್ಯವಾಗಿಲ್ಲವೆನಿಸುತ್ತದೆ. ಇದೀಗ ಆರ್ಚ್ ಬಿಷಪ್ ಅನಿಲ್ ಕೌಟೋರವರು ದೇಶದ ಪ್ರಕ್ಷುಬ್ಧ ಪರಿಸ್ಥಿತಿಯು ಪ್ರಜಾಪ್ರಭುತ್ವ ತತ್ವಗಳು ಹಾಗೂ ಜಾತ್ಯತೀತ ವ್ಯವಸ್ಥೆಗೆ ಬೆದರಿಕೆಯಾಗಿದೆ. ಇದಕ್ಕಾಗಿ ಪ್ರಾರ್ಥನಾ ಅಭಿಯಾನ ಶುರುಮಾಡಲು ಕರೆ ಕೊಟ್ಟ ಅವರ ಪತ್ರದ ಹಿಂದಿನ ದನಿಯನ್ನು ಗುರುತಿಸಿದ ಕೇಂದ್ರ ಸರಕಾರ ಹಾಗೂ ಹಿಂದುತ್ವವಾದಿಗಳು, ಮುಂಬರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ದನಿಯು ತಮಗೆ ಎಲ್ಲಿ ಮುಳುವಾಗುವುದೋ ಎಂಬ ಆತಂಕದಿಂದ ಈ ದನಿಯನ್ನೇ ಅಡಗಿಸುವ ಹುನ್ನಾರ ನಡೆಸಿದಂತಿದೆ. ಇದು ಪ್ರಜಾಪ್ರಭುತ್ವ ರಾಷ್ಟ್ರವೊಂದರ ಜಾತ್ಯತೀತ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ವಾಸಿಸುವ ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯದ ಮತ್ತು ಅಭಿವ್ಯಕ್ತಿ ಸ್ವಾಂತಂತ್ರದ ಹರಣವಲ್ಲದೆ ಬೇರೇನೂ ಅಲ್ಲ.

Share

2 Comments For "ಕ್ರೈಸ್ತರ ಪ್ರಾರ್ಥನಾ ಅಭಿಯಾನದ ಕರೆಯ ಸುತ್ತಮುತ್ತ
ಕಾದಂಬಿನಿ
"

 1. Abraham
  28th May 2018

  “ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಮರಣಕ್ಕೆ ಹಿಂತೆಗೆಯದೆ ಯಜ್ಞದ ಕುರಿಯಾದಾತನ ರಕ್ತದ ಬಲದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಜಯಿಸಿದರು.” ಪ್ರಕಟನೆ:12:11

  ಎಲ್ಲಾ ಕ್ರೈಸ್ತರೂ ಈ ಮೇಲಿನ ವಾಕ್ಯದ ಪ್ರಕಾರ ನಡೆದರೆ ಮಾತ್ರ ಈ ಹಿಂದುತ್ವದ ಹಿಂದೆ ಇರುವ ದುರಾತ್ಮವನ್ನು ಜಯಿಸಲು ಸಾಧ್ಯ. ಉಳಿದೆಲ್ಲವೂ ವ್ಯರ್ಥ.

  “ನಾವು ಹೋರಾಡುವದು ಮನುಷ್ಯ ಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.”
  ಎಫೆಸದವರಿಗೆ 6:12

  “ತನ್ನ ಪ್ರಾಣವನ್ನು ಕಂಡುಕೊಂಡವನು ಅದನ್ನು ಕಳಕೊಳ್ಳುವನು; ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಕಂಡುಕೊಳ್ಳುವನು.”
  ಮತ್ತಾಯ 10:39

  Reply
 2. ಮೇಡಂ ನಿಮ್ಮ ಮನಸಿನ ಬಾರವಾದ ಮಾತುಗಳು ನನಗೆ ಒಮ್ಮೊಮ್ಮೆ ನಿಜವೆನಿಸುತ್ತದೆ. ನೀವು ಹೇಳುವಂತೆ ನಿಜವಾಗಿಯೂ ಕ್ರೈಸ್ತರು ಈ ದೇಶದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಬಯಪಡಿಸಿದವರಲ್ಲ. ರಾಜಕೀಯವಾಗಿ ಸಣ್ಣಪ್ರಮಾಣದಲ್ಲಿ ಮೇಲೇರಿರಬಹುದು . ಸಹನೆ ಪ್ರೀತಿ ವಿಶ್ವಾಸ ಸ್ನೇಹ ಬಾಂದವ್ಯ ಇವುಗಳಿಗೆ ಮತ್ತು ಇಂದಿನ ದಿನದಲ್ಲಿ ನವೀನ ಜೀವನ ಶೈಲಿಗೆ ಹೆಸರಾದವರು.

  ದೇಶಭಕ್ತಿಗೆ ರಾಷ್ಟ್ರಪ್ರೇಮಕ್ಕೆ ಆರೋಗ್ಯ ಶಿಕ್ಷಣ ಸಹಾಯಹಸ್ತ ಹೀಗೆ ಹಲವಾರು ಉನ್ನತ ಸಾಮಾಜಿಕ ಕಳಕಳಿಯ ಮಾನವೀಯ ಗುಣಲಕ್ಷಣಗಳನ್ನು ಅಳವಡಿಸಿಕೊಂಡು ನಡೆದುಬರುತ್ತಿರುವವರು. ಧಾರ್ಮಿಕವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ಯಾವುದೇ ಅಡೆತಡೆ ಇಲ್ಲದೆ ಎಲ್ಲಾ ಸ್ವಾತಂತ್ರ್ಯ ಗಳನ್ನು ಹೊಂದಿ ಬದುಕುತ್ತಿರುವವರು .

  ಆದರೆ ಮೇಡಂ ಈ ದೇಶದ ಇತಿಹಾಸವನ್ನು ಒಮ್ಮೆ ನೀವು ಅವಲೋಕಿಸಬೇಕಾಗುತ್ತದೆ ಹೇಳಿಕೇಳಿ ಇದು ಹಿಂದು ರಾಷ್ಟ್ರ . ಈ ದೇಶಕ್ಕೆ ಬಂದ ದಾಳಿಕೋರ ಪಾಶ್ಚಿಮಾತ್ಯ ರಲ್ಲಿ ಕ್ರೈಸ್ತರು ಮುಸಲ್ಮಾನ ರು ಜಾಸ್ತಿ .ಇಲ್ಲಿನ ಸಂಪತ್ತು ಸಂಸ್ಕೃತಿಗಳ ನಾಶ ಬಲವಂತವಾಗಿ ಹಿಂದೂಗಳ ಮತಾಂತರ ಸೊತ ಹಿಂದೂರಾಜರುಗಳ ಹೆಂಡತಿ ಮಕ್ಜಳುಗಳ ಅತ್ಯಚಾರ ಇವೆಲ್ಲಾ ಮೊಗಲರ ಕಾಲದಲ್ಲ ಹಿಂದು ಪಂಗಡದ ಮೇಲೆ ನಡೆದ ಧಾರಣ ವ್ಯಭಿಚಾರ ವಾಗಿದೆ . ಅನ್ಯರಿಂದ ಹಿಂದು ಪಂಗಡ ನಾಶವಾಗುತ್ತಿರುವಾಗ ಸುಮ್ಮನಿರಲು ಸಾದ್ಯವೆ. ಬಿಡಿ ಇವೆಲ್ಲಾ ಇತಿಹಾಸ ಮರೆತು ಬಿಡೋಣ. ಇತ್ತೀಚಿಗೆ ಎರಡು ಮೂರು ವರ್ಷಗಳಿಂದ ಮಾತ್ರ ಹಿಂದುಗಳು ಎತ್ತೆಚ್ಚುಕೊಂಡಿರುವುದು ಹಿಂದುಗಳು ಯಾವ ಇತಿಹಾಸದ ಕಾಲದಿಂದಲೂ ಯಾರನ್ನು ಮತಾಂತರಿಸಿದವರಲ್ಲ ಯಾರಮೇಲೂ ಆಕ್ರಮಣ ಮಾಡಿ ಅತ್ಯಾಚಾರ ಮಾಡಿದವರಲ್ಲ ನಮ್ಮ ದೇಶಕ್ಕೆ ಯಾರು ಬರದೇ ಇದ್ದಿದ್ದರೆ ನಮ್ಮ ದೇಶ ಪ್ರಪಂಚದಲ್ಲೆ ಅತೀ ಶ್ರೀಮಂತ ವಾಗಿರುತಿತ್ತು. ಎಲ್ಲರನ್ನು ಕೂಡಿಕೊಂಡು ಬರೆತು ಸಮಾನ ಹಕ್ಕು ಕೊಟ್ಟು ನಡೆಸುತ್ತಿರು‌ವ ವಿಶ್ವದ ಏಕೈಕ ರಾಷ್ಟ್ರ ಭಾರತ.

  ಇಲ್ಲಿ ಓಟಿಗಾಗಿ ಜಾತಿ ರಾಜಕಾರಣ ಮಾಡಿ ಅಲ್ಪ ಸಂಖ್ಯಾತರಿಗೆ ಹಿಂದೂಗಳಿಗಿಂತ ಬಾರಿ ವಿಶೇಷ ಸವಲತ್ತುಗಳನ್ನು ನೀಡಿ ಓಲೈಸುತ್ತಿರುವುದು ಧಾರ್ಮಿಕ ವಾಗಿ ಮಸೀದಿಗಳಿಗೆ ಮತ್ತು ಚರ್ಚ್ ಗಳಿಗೆ ಹಿಂದು
  ದೇವಾಲಯಗಳಿಂದ ಬಂದ ಹಣ ಅನುದಾನ ನೀಡುತ್ತಿರುವುದು. ಇತ್ತೀಚೆಗೆ ಕೆಲವು ಹಿಂದು ಸಂಘಟನೆ ಮಾಡಿಕೊಂಡು ನಶಿಸಿಹೋಗುತ್ತಿರುವ ಹಿಂದು ಸಂಸ್ಕೃತಿಯನ್ನು ಕಾಪಾಡುವ ಚಲ ಹೊಂದಿವೆಯಷ್ಟೇ. ಇಲ್ಲಿ ಎಲ್ಲರೂ ಒಂದೇ, ಎಲ್ಲರಿಗೂ ಒಂದೇ ಸ್ಥಾನಮಾನ

  ಕೃಷ್ಣಮೂರ್ತಿ

  Reply

Leave a comment

Your email address will not be published. Required fields are marked *

Recent Posts More

 • 5 days ago No comment

  ಕಾದಂಬಿನಿ ಕವಿತೆಗಳ ಇನ್ನೊಂದು ಕಟ್ಟು: ಫಸ್ಟ್ ಲುಕ್

  ಹೊಸ ಪುಸ್ತಕ       ಕಾದಂಬಿನಿ ಅವರ ಎರಡನೇ ಕಾವ್ಯ ಸಂಕಲನ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಪ್ರಕಟಗೊಂಡಿದೆ. 100 ಕವಿತೆಗಳಿವೆ ಈ ಸಂಕಲನದಲ್ಲಿ. ಸಂಕಲನಕ್ಕೆ ವಿಮರ್ಶಕ, ರಂಗಕರ್ಮಿ ವಸಂತ ಬನ್ನಾಡಿ ಅವರ ಮುನ್ನುಡಿ, ಕವಿ ಹೆಚ್ ಎಸ್ ಶಿವಪ್ರಕಾಶ್ ಅವರ ಬೆನ್ನುಡಿ ಇದೆ. “ಜನಸಾಮಾನ್ಯರ ಸಂಕಟಗಳಿಗೆ ಮಾತು ಕೊಡಬೇಕು ಎಂಬುದು ಕಾದಂಬಿನಿ ಕಾವ್ಯದ ಕೇಂದ್ರಪ್ರಜ್ಞೆ. ಸಾಮಾಜಿಕ ಹಾಗೂ ರಾಜಕೀಯ ವಿಷಯಗಳನ್ನು ಮುಟ್ಟಿದರೆ ಮನಸ್ಸು ಕೊಳಕಾಗುವುದೆಂಬ ಮನೋಭಾವ ...

 • 1 week ago No comment

  ಕಾಲದ ಬೆವರಿನ ಬಡಿತಗಳು

  ಕವಿಸಾಲು   ಹುಲ್ಲಿನೆಳೆಗಳಲಿ ಬಿದಿರ ಕೊಂಬಿಗೆ ಆತುಗೊಂಡ ಜೋಪಡಿಯೊಳಗ ಚುಕ್ಕಿಗಳ ದಿಂಬಾಗಿಸಿದ ಹೊಂಗೆಯ ನೆರಳಿನ ಗುರುತುಗಳು ಸಗಣಿಯಿಂದ ಸಾರಿಸಿದ ಪಡಸಾಲಿ ಮದುವಣಗಿತ್ತಿಯಂತೆ ವಳ್ಳು ಬೀಸುಕಲ್ಲುಗಳ ಹೊಕ್ಕಳಲಿ ದಕ್ಕಿಸಿಕೊಂಡ ಅವಳು ನಡುಮನೆಯ ಮೈದಾನದಾಗ ನಡುಗಂಬದ ನೆಲೆ ಬಿರುಕ ಕಿಂಡಿಗಳಲಿ ಮುರಿದ ಟೊಂಗೆಗಳೆಲ್ಲಾ ಬೆಸೆದು ಗುಡಿಸಲ ಕಣ್ಣಾಗಿ ಚಂದಿರನ ಜೋಗುಳ ಕಟ್ಯಾವು ಗಾಯದ ಬೆನ್ನು ನಿದ್ರಿಸಲು ಮಳೆಯ ರಭಸದಲಿ ಕೆರೆಯಂತಾಗುವ ಜೋಪಡಿಯೊಳಗ ಎಳೆಯ ರೆಕ್ಕೆಗಳನು ಪಕ್ಕೆಲುಬಲಿ ಅವಿತುಕೊಂಡು ಬೆಚ್ಚನೆಯ ಭರವಸೆ ತುಂಬ್ಯಾಳೊ ...

 • 1 week ago No comment

  ಕಾಲ ಮತ್ತು ನಾನು

        ಕವಿಸಾಲು       ಅಂತರಂಗದ ಅನಿಸಿಕೆಗಳ ಅದ್ಭುತ ರಮ್ಯ ಕನಸುಗಳ ಜತನವಾಗಿಟ್ಟುಕೊಂಡ ರಹಸ್ಯಗಳ ದುಂಡಗೆ ಬರೆದು ದಾಖಲಿಸಿ ಸಾವಿರ ಮಡಿಕೆಗಳಲಿ ಒಪ್ಪವಾಗಿ ಮಡಚಿ ಮೃದು ತುಟಿಗಳಲಿ ಮುತ್ತಿಟ್ಟು ಬೆವರ ಕೈಗಳಲಿ ಬಚ್ಚಿಟ್ಟು ಯಾರೂ ಕಾಣದಾಗ ಕದ್ದು ಹಿತ್ತಲಿನ ತೋಟಕ್ಕೆ ಒಯ್ದು ನನ್ನ ನಾಲ್ಕರಷ್ಟೆತ್ತರದ ಮರ ದಟ್ಟಕ್ಕೆ ಹರಡಿದ ಎಲೆಗಳ ನಡುವೆ ಟೊಂಗೆಗಳ ಸೀಳಿನಲಿ ಮುಚ್ಚಿಟ್ಟೆ ಅಲ್ಲಿಂದ ಮುಂದೆ ಮರ ಮರವಾಗಿ ಉಳಿಯಲಿಲ್ಲ ರಹಸ್ಯಗಳನ್ನೆಲ್ಲ ...

 • 1 week ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...

 • 2 months ago No comment

  ಪಂಡಿತರ ಹಳ್ಳಿಯ ‘ಮಂದರಗಿರಿ’

                ಇದು ಪ್ರವಾಸಿಗಳ ಯುಗ. ಹೊಸ ತಲೆಮಾರಿನ ಜನರಿಗೀಗ ಮನೆಯಲ್ಲಿ ಕೂರುವುದೆಂದರೆ ಬಹಳ ಬೇಜಾರಿನ ಸಂಗತಿ. ಆಗೀಗಲಾದರೂ ದೊಡ್ಡ ಅಥವಾ ಸಣ್ಣ ಪ್ರವಾಸಗಳಿಗೆ ಹೋದರೆ ಮನಸ್ಸಿಗೂ ಸುಖ ಎನ್ನುವ ತಲೆಮಾರಿನವರು ಈಗ ಹೆಚ್ಚು ಕಾಣಸಿಗುತ್ತಾರೆ. ಹೆಸರುವಾಸಿ ತಾಣಗಳಲ್ಲಿ ಸದಾ ಜನಜಂಗುಳಿಯಿರುತ್ತದೆ. ದೂರದ ಊರುಗಳೆಂದರೆ ಅದಕ್ಕೆ ತಯಾರಿ ಬೇಕು. ಹಲವು ದಿನಗಳ ಸಿದ್ಧತೆ, ಪ್ರಯಾಣ, ವಿಪರೀತ ಖರ್ಚು ಎಲ್ಲವೂ ಹೌದು. ವಯಸ್ಸಾದವರಿಗೆ ...


Editor's Wall

 • 12 March 2019
  1 week ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...

 • 08 December 2018
  3 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 30 November 2018
  4 months ago No comment

  ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ

  ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...

 • 29 November 2018
  4 months ago No comment

  ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?

    ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.     ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ...

 • 09 November 2018
  4 months ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...