Share

ದೇಶ ವಿಶೇಷ | ಕಂಗೊಳಿಸುವ ಅಪ್ಸರೆಯರ ‘ಟೆನೆರಿಫ್’ ಸಮ್ಮೋಹಕ ಮೆರವಣಿಗೆ
ಡಾ. ಪ್ರೇಮಲತ ಬಿ

 

 

ಅದಿಯಿಂದ, ಅಂತ್ಯದವರೆಗೆ ಇದನ್ನು ನಿಂತು ನೋಡಲು 6-8 ಗಂಟೆಗಳೇ ಬೇಕು!

 

 

 

 

ಸ್ಪೈನ್ ದೇಶದ ದಕ್ಷಿಣ ಭಾಗದಲ್ಲಿ ಕೆನೆರಿಯ ದ್ವೀಪಗಳಿವೆ. ಈ ಏಳು ದ್ವೀಪಗಳಲ್ಲಿ ಟೆನೆರಿಫ಼್ ದ್ವೀಪ ಅತಿ ದೊಡ್ಡದು ಮತ್ತು ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಶಿಸುವಂತದ್ದು. ನಮ್ಮಲ್ಲಿ ಪ್ರತಿ ವರ್ಷ ಕಾಶಿ – ರಾಮೇಶ್ವರಕ್ಕೆ ತಪ್ಪದೆ ಹೋಗುವಂತೆ, ಪ್ರಪಂಚದ ನಾನಾ ದೇಶಗಳಿಂದ ಟೆನೆರಿಫ಼್ ದ್ವೀಪಕ್ಕೆ ಬರುವವರಿದ್ದಾರೆ!

ದ್ವೀಪ ಪ್ರವಾಸಿಗರಿಗೆ ಅತಿ ಪ್ರಿಯವಾದ ತಾಣ. ಆಂಗ್ಲರಿಗೆ ಸ್ಪೈನ್ ಮತ್ತು ಬಿಸಿಲು ಒಂದು ರೀತಿಯಲ್ಲಿ ಪರ್ಯಾಯ ಪದಗಳು. ಅದರಲ್ಲೂ ದಕ್ಷಿಣ ಭಾಗದ ಸ್ಪೈನ್ ದ್ವೀಪಗಳಲ್ಲಿ ಸೂರ್ಯನ ಬಿಸಿಲು ಹುಡುಕಿ ಹೊರಟವರಿಗೆ ನಿರಾಸೆಯಿಲ್ಲ. ಹಾಗಾಗಿ ಹಲವರು ಈ ದ್ವೀಪದಲ್ಲಿ ಮನೆಗಳನ್ನು, ಫ್ಲಾಟುಗಳನ್ನು ಕೊಂಡುಕೊಂಡು ಇಡೀ ಚಳಿಗಾಲವನ್ನು ಇಲ್ಲಿ ಕಳೆಯುತ್ತಾರೆ. ಮಿಕ್ಕಂತೆ, ಈ ಮನೆಗಳನ್ನು ಇತರೆ ಪ್ರವಾಸಿಗರಿಗೆ ಬಾಡಿಗೆ ನೀಡಿ ಖರ್ಚು ಹುಟ್ಟಿಸಿಕೊಳ್ಳುತ್ತಾರೆ.

ಈ ದ್ವೀಪ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಮನರಂಜಿಸಲು ಸಿದ್ಧವಾದ ತಾಣ. ಪ್ರವಾಸೋದ್ಯಮ ಈ ದ್ವೀಪಗಳ ಮುಖ್ಯ ಆದಾಯಮೂಲ ಕೂಡ. ಈ ಕೆನೆರಿಯ ದ್ವೀಪಗಳ ವೈಶಿಸ್ಸ್ಟ್ಯ ಎಂದರೆ, ಈ ಏಳೂ ದ್ವೀಪಗಳು ಅಗ್ನಿಪರ್ವತಗಳ ಸಿಡಿತದಿಂದ ಸಮುದ್ರದಲ್ಲಿ ಉದ್ಭವವಾದಂಥವು. ಪ್ರಾಚೀನ ಕಾಲದ ಲ್ಯಾಟಿನ್ನಿನಲ್ಲಿ ‘ಕೆನೆರಿಯ ದ್ವೀಪ’ ಅಂದರೆ ‘ನಾಯಿಗಳ ದ್ವೀಪ’ ಎಂದು. ಇಲ್ಲಿ ಅಂತಹ ನಾಯಿಗಳೇನೂ ಇಲ್ಲ. ಸಮುದ್ರದ ಭಾರೀ ಗಾತ್ರದ ಅಪಾರ ಸಂಖ್ಯೆಯ ಸೀಲುಗಳನ್ನು ಉದ್ದೇಶಿಸಿ ಹಿಂದಿನ ಕಾಲದಲ್ಲಿ ರೋಮನ್ನರಿಟ್ಟ ಹೆಸರೇ ಈಗಲೂ ಉಳಿದಿದೆ. ವಿಪರ್ಯಾಸ ಅಂದರೆ ಈಗ ಆ ಜಾತಿಯ ಸೀಲ್ ಗಳು ಸಂಪೂರ್ಣ ಅವನತಿಯಾಗಿರುವುದು! ಕೆನೆರಿಯ ದ್ವೀಪಗಳ ಹೆಸರಿನ ಬಗ್ಗೆ ಇನ್ನೂ ಅನೇಕ ಪ್ರತೀತಿಗಳಿವೆ.

 

ಈ ದೇಶದಲ್ಲಿ ಪ್ರತಿ ಫೆಬ್ರವರಿ ಅಥವಾ ಸೆಪ್ಟೆಂಬರಿನಲ್ಲಿ ಒಂದು ವಿಶೇಷ ಮೆರವಣಿಗೆ ನಡೆಯುತ್ತದೆ. ರೋಮನ್-ಕ್ಯಾಥೊಲಿಕರ ಕಾಲದ ಈ ಸಾಂಪ್ರದಾಯಿಕ ಮೆರವಣಿಗೆ ಪ್ರಪಂಚದ ಎರಡನೆಯ ದೊಡ್ಡ ಮೆರವಣಿಗೆ. ಹಾಡು ನ್ರುತ್ಯ, ಛದ್ಮವೇಷಧಾರಿಗಳು, ನಗೆ ಬರಿಸುವ ಜೋಕರುಗಳು ಅವರೊಡನೆ ಸಾಲಂಕೃತಗೊಂಡ ಪುಟಾಣಿಗಳು,
ವೃದ್ಧರು ಎಲ್ಲರೂ ಸೇರಿ ಇಡೀ ನಗರ ಸಂಚಾರ ಮಾಡಿ ಎಲ್ಲರಲ್ಲೂ ಹಬ್ಬದ ಹರ್ಷ ತರುತ್ತಾರೆ.

ಟೆನೆರಿಫ್ಹ್ ಕಾರ್ನಿವಲ್
ಈ ಕಾರ್ನಿವಲ್ ಎಂಬುದು ಅದ್ಭುತವಾದ ಒಂದು ಮೆರವಣಿಗೆ. ಇದೇ ಮೆರವಣಿಗೆಯನ್ನು ಒಂದು ವಾರದ ನಂತರ ಮತ್ತೊಂದು ಭಾಗವಾದ ಪೋರ್ಟೊ ಡಿ ಲ ಕ್ರೂಜಿನಲ್ಲಿ ಮತ್ತೆ ಮಾಡುತ್ತಾರೆ. ಈ ಮೆರವಣಿಗೆ ಬ್ರೆಜಿಲ್ ದೇಶದ ಸುಪ್ರಸಿದ್ಧ ಮೆರವಣಿಗೆಯನ್ನು ಬಿಟ್ಟಂತೆ, ಪ್ರಪಂಚದಲ್ಲೇ ಅತಿ ಪ್ರಸಿದ್ದ ಮತ್ತು ದೊಡ್ಡ ಮೆರವಣಿಗೆ.

ರಿಯೋ ಡಿ ಜನೈರೋದಂತೆಯೇ ಸಾಲ್ಸ,ರೊಂಬಾ, ಕಾಂಗಾ ಮತ್ತು ಸಾಂಬ ನ್ರುತ್ಯಗಳ ಜೊತೆ ನಡೆವ 6-8 ಗಂಟೆಗಳ ಈ ಮೆರವಣಿಗೆ ಕಣಿಗೆ ಹಬ್ಬ. ಸಾವಿರಾರು ಮಂದಿ ಹಲವು ವೇಶಗಳನ್ನು ಧರಿಸಿ ನೆಗೆಯುತ್ತಾ, ನರ್ತಿಸುತ್ತಾ ಮನರಂಜಿಸುತ್ತಾರೆ. ಅಂಬೆಗಾಲಿಡುವ ಮಕ್ಕಳಿಂದ ಹಿಡಿದು ಕೈಲಾಗುವ ಮುದುಕರವರೆಗೆ ಎಲ್ಲರೂ ಇದರಲ್ಲಿ ಭಾಗವಹಿಸುತ್ತಾರೆ. ಇದನ್ನು ನೋಡಲು ರಸ್ತೆಗಳ ಇಕ್ಕೆಲಗಳಲ್ಲೂ ಜನರು ನೆರೆದು, ತಾವೂ ಬಣ್ಣಬಣ್ಣದ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಂಡು ಇಡೀ ದಿನವನ್ನು ಹರ್ಷದಲ್ಲಿ ಕಳೆಯುತ್ತಾರೆ. ಈ ದಿನ ಇಡೀ ದ್ವೀಪಕ್ಕೆ ರಜಾ ಘೋಷಿಸಿ ಸರ್ಕಾರ ಜನರಿಗೆ ಬಿಗಿ ಬಂದೋ ಬಸ್ತನ್ನು ಒದಗಿಸುತ್ತದೆ. ಸುಮಾರು 15 ದಿನಗಳ ಕಾಲಹಬ್ಬದಂತೆ ಪ್ರತಿ ಹಳ್ಳಿ, ನಗರಗಳಲ್ಲಿ ಈ ಜಾತ್ರೆ ಮತ್ತು ಮೆರವಣಿಗೆ ನಡೆಯುತ್ತದೆ. ಇಡೀ ದ್ವೀಪ ಈ ಜಾತ್ರೆಯಲ್ಲಿ ಪಾಲುಗೊಳ್ಳುತ್ತದೆ. ಪ್ರತಿ ಗುಂಪೂ ತನ್ನದೇ ವಿಶೇಷತೆಯನ್ನು ತೋರಿದರೂ ಈ ಜಾತ್ರೆಯಲ್ಲಿ ಬರುವ ಹಲವು ರಾಣಿಯರು ಮಾತ್ರ ಮೈನವಿರೇಳಿಸಿ ಗಮನ ಸೆಳೆಯುತ್ತಾರೆ.

ಕಾರ್ನಿವಲ್ ರಾಣಿಯರು
ಟೆನೆರಿಫ಼ ಮೆರವಣಿಗೆಯ ಮಧ್ಯೆ ಮಧ್ಯೆ ಕಾಣಸಿಗುವ ಕಾರ್ನಿವಲ್ ರಾಣಿಯರು ಹಲವರು. ಪ್ರತಿಯೊಬ್ಬರೂ ಒಂದೊಂದು ಕಥೆಯನ್ನೋ, ಕಲ್ಪನೇಯನ್ನೋ ಆಧರಿಸಿ, ಸಾಲಂಕೃತಗೊಂಡಿರುತ್ತಾರೆ.

ತಮ್ಮ ಅಂದದ ಮೈಮಾಟ ತೋರುವ ಉಡುಗೆ ಉಟ್ಟು ಬರುವ ಈ ಚಂದದ ಹುಡುಗಿಯರು ಕಣ್ಣಿಗೆ ಹಬ್ಬವಾಗುತ್ತಾರೆ. ಇವರು ವೈವಿಧ್ಯಮಯ ವಿಶೇಷ ಅಲಂಕಾರ ಮತ್ತು ಉಡುಗೆಗಳೊಂದಿಗೆ ಗಮನ ಸೆಳೆಯುತ್ತಾರೆ. ಈ ರಾಣಿಯರ ಆಯ್ಕೆ ಹಲವು ಸ್ಪರ್ಧೆಗಳ ಮೂಲಕ ನಡೆಯುತ್ತದೆ. ಇದರ ನೇರ ಟಿವಿ ಪ್ರಸಾರವನ್ನು ಲಕ್ಷಾಂತರ ಜನ ಕೂತು ನೋಡುತ್ತಾರೆ. ರಾಣಿಯಾಗಲು ಆಯ್ಕೆಯಾದ ನಂತರ ಅವರ ತರಬೇತಿ ನಡೆಯುತ್ತದೆ. 50-60 ಕೆಜಿ ತೂಕದ ಉಡುಗೆಗಳನ್ನು ಇವರಿಗಾಗಿ ಆಯ್ಕೆ ಮಾಡುತ್ತಾರೆ. ಕೆಲವು ಬಾರಿ, ಉಡುಗೆಯ ತೂಕವನ್ನು ಅವರ ಮೈಮೇಲೆ ಹೊರಿಸುವ ಬದಲು, ಆಧಾರ ನೀಡುವ ಹಲವು ವಿಶೇಷ ಚೌಕಟ್ಟುಗಳನ್ನು ನಿರ್ಮಿಸಿ ರಾಣಿಯರನ್ನು ಅದರಲ್ಲಿ ಮಿಳಿತಗೊಳಿಸುತ್ತಾರೆ. ದೈವಲೋಕದ ಅಪ್ಸರೆಯರು ತಮ್ಮ ರಥಗಳಲ್ಲಿ ಬಂದು ರಸ್ತೆಗಳಲ್ಲಿ ಹಾದು ಹಾದುಹೋದರೇನೋ ಎನ್ನುವ ಕಲ್ಪನೆ ಬರಿಸುತ್ತಾರೆ. ಸಾಲುಗಟ್ಟಿ ನಿಂತ ಜನರು ಭಾಜ-ಭಜಂತ್ರಿಗಳೊಡನೆ ಬರುವ ಈ ಪ್ರತಿ ರಾಣಿಯರನ್ನು ಕೈಚಪ್ಪಾಳೆ, ಸಿಳ್ಳಿನ ಮೂಲಕ ಬರಗೊಂಡು ಬೀಳ್ಕೊಡುತ್ತಾರೆ. ಪರ್ತಿ ತಂಡಗಳು ಆಗಾಗ ನಿಂತೊ ಜನರು ಫೋಟೊ ತೆಗೆಯಲು, ಅವರನ್ನು ಮತ್ತಷ್ಟು ಕಣ್ತುಂಬ ತುಂಬಿಕೊಳ್ಳಲು ಅನುವು ಮಾಡಿಕೊಳ್ಳುತ್ತಾರೆ.

 

10,000 ಜನರು ಈ ಮೆರವಣಿಗೆಯಲ್ಲಿ ವಿಶೇಷ ಅಲಂಕಾರಗಳನ್ನು ಮಾಡಿಕೊಂಡು ನಗರದ ಮುಖ್ಯ ರಸ್ತೆಗಳಲ್ಲಿ ನಡೆದು ಹೋಗುತ್ತಾರೆ. ರಸ್ತೆಯಲ್ಲಿ ಲಾಗ ಹಾಕುವವರು, ಕುಣಿಯುವವರು, ನಗಿಸುವವರು, ಜನರೊಂದಿಗೆ ನಿಂತು ಚಿತ್ರ ತೆಗೆಸಿಕೊಳ್ಳುವ ಛದ್ಮವೇಷಧಾರಿಗಳು ನಿರಂತರ ಸಾಗುತ್ತಾರೆ. ರಸ್ತೆಬದಿ ಸಾಲು ನಿಲ್ಲುವ ಜನರು ತಾವೂ ಮನಬಂದಂತೆ ವೇಷಗಳನ್ನು ಧರಿಸಿ, ಆನಂದಿಸುತ್ತಾರೆ. ಕೆಲವು ಸಣ್ಣ ತಿನಿಸಿನ ಅಂಗಡಿಗಳು ಮಾತ್ರ ತೆರೆದಿದ್ದು, ಅಲ್ಲಿ ಕಾಲಿಡಲೂ ಆಗದಂತೆ ಜನ ಸೇರಿರುತ್ತಾರೆ.

ಸ್ಪೈನ್ ದೇಶದ ಸಿವಿಲ್ ಯುದ್ಧ, ಬರ, ಇನ್ನಿತರ ಸಂಕಷ್ಟಗಳ ನಡುವೆಯೂ ಈ ದ್ವೀಪಗಳ ಜನರು ತಮ್ಮ ಈ ಸಂಪ್ರದಾಯವನ್ನು ಸುಮಾರು 200 ವರ್ಷಗಳಿಂದ ನಡೆಸುತ್ತಾ ಬಂದಿದ್ದಾರೆ. ರಸ್ತೆಯಲ್ಲಿ ನಡೆವ ಈ ಹಬ್ಬ ವರ್ಣರಂಜಿತ. ಈದಕ್ಕಾಗಿ ಸರ್ಕಾರ ಸುಮಾರು 50 ದಶಲಕ್ಶ ಯೂರೋಗಳನ್ನು ಖರ್ಚು ಮಾಡುತ್ತದಂತೆ. ಅದಿಯಿಂದ, ಅಂತ್ಯದವರೆಗೆ ಇದನ್ನು ನಿಂತು ನೋಡಲು 6-8 ಗಂಟೆಗಳೇ ಬೇಕು!

ಡಾ. ಪ್ರೇಮಲತ ಬಿ

ದಂತವೈದ್ಯೆ. ಕಳೆದ 15 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ಹಲವಾರು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ. ಕಥೆ, ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನಿತರು.

Share

One Comment For "ದೇಶ ವಿಶೇಷ | ಕಂಗೊಳಿಸುವ ಅಪ್ಸರೆಯರ ‘ಟೆನೆರಿಫ್’ ಸಮ್ಮೋಹಕ ಮೆರವಣಿಗೆ
ಡಾ. ಪ್ರೇಮಲತ ಬಿ
"

 1. Nagesh Hegde
  23rd October 2018

  ಧನ್ಯವಾದ ಡಾಕ್ಟರೆ, ನೃತ್ಯ ಮೆರವಣಿಗೆಗಳನ್ನು ಸೊಗಸಾಗಿ ವಿವರಿಸಿ ಕಣ್ಣಿಗೆ ಹಬ್ಬದಂತೆನಿಸುವ ಚಂದದ ಚಿತ್ರಗಳನ್ನೂ ಒದಗಿಸಿದ್ದೀರಿ. ಇದನ್ನೆಲ್ಲ ನೋಡಿದ ನಂತರ ನನಗೆ ಉಂಟಾದ ಕುತೂಹಲ ಏನೆಂದರೆ ಈ ಥಳಕಿನ ವೇಷಭೂಷಣಗಳನ್ನೆಲ್ಲ ಆಮೇಲೆ ಏನು ಮಾಡುತ್ತಾರೆ? ಬಿಸಾಕುತ್ತಾರೆಯೆ, ಹಾಗೆಲ್ಲ ನಮ್ಮಲ್ಲಿಯಂತೆ ಎಲ್ಲೆಂದರಲ್ಲಿ ತಳ್ಳಿ ಬೆಂಕಿ ಕೊಡಲಿಕ್ಕಿಲ್ಲ. ನಮ್ಮ ಯಕ್ಷಗಾನ ಕಲಾವಿದರು ತಾವು ಬಳಸುವ ವೇಷಭೂಷಣಗಳನ್ನೆಲ್ಲ ಜೋಪಾನವಾಗಿ ಪೆಟ್ಟಿಗೆಯಲ್ಲಿಟ್ಟು ಮುಂದಿನ ಶೋದಲ್ಲಿ ಮತ್ತೆ ಬಳಸುತ್ತಾರೆ. ಇಲ್ಲಿ ಅದೂ ಸಾಧ್ಯವಿಲ್ಲವೇನೊ ಅನ್ನಿಸುತ್ತದೆ. ಹಾಗಿದ್ದರೆ ಏನು ಮಾಡಬಹುದು? ಭಾರತಕ್ಕೆ ಅಲ್ಲಿನವರು ರಫ್ತು ಮಾಡುವ ಪ್ಲಾಸ್ಟಿಕ್‍ ತ್ಯಾಜ್ಯಗಳ ಗಟ್ಟಿಇಟ್ಟಿಗೆಗಳಲ್ಲಿ ಇವೂ ಮುದುರಿ ಕೂತಿರುತ್ತವೆಯೆ?

  Reply

Leave a comment

Your email address will not be published. Required fields are marked *

Recent Posts More

 • 1 month ago No comment

  ಪಂಡಿತರ ಹಳ್ಳಿಯ ‘ಮಂದರಗಿರಿ’

                ಇದು ಪ್ರವಾಸಿಗಳ ಯುಗ. ಹೊಸ ತಲೆಮಾರಿನ ಜನರಿಗೀಗ ಮನೆಯಲ್ಲಿ ಕೂರುವುದೆಂದರೆ ಬಹಳ ಬೇಜಾರಿನ ಸಂಗತಿ. ಆಗೀಗಲಾದರೂ ದೊಡ್ಡ ಅಥವಾ ಸಣ್ಣ ಪ್ರವಾಸಗಳಿಗೆ ಹೋದರೆ ಮನಸ್ಸಿಗೂ ಸುಖ ಎನ್ನುವ ತಲೆಮಾರಿನವರು ಈಗ ಹೆಚ್ಚು ಕಾಣಸಿಗುತ್ತಾರೆ. ಹೆಸರುವಾಸಿ ತಾಣಗಳಲ್ಲಿ ಸದಾ ಜನಜಂಗುಳಿಯಿರುತ್ತದೆ. ದೂರದ ಊರುಗಳೆಂದರೆ ಅದಕ್ಕೆ ತಯಾರಿ ಬೇಕು. ಹಲವು ದಿನಗಳ ಸಿದ್ಧತೆ, ಪ್ರಯಾಣ, ವಿಪರೀತ ಖರ್ಚು ಎಲ್ಲವೂ ಹೌದು. ವಯಸ್ಸಾದವರಿಗೆ ...

 • 3 months ago No comment

  ಬಿಜೆಪಿ ವಿರೋಧಿ ರಂಗ: ಪ್ರತಿಪಕ್ಷ ಸಭೆಯಲ್ಲಿ 20 ಪಕ್ಷಗಳು

  ಆರ್ಬಿಐ ,ಸಿಬಿಐ, ಚುನಾವಣಾ ಆಯೋಗದಂಥ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ನಾಯಕರು ಕಟುವಾಗಿ ಟೀಕಿಸಿದರು.   ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಪ್ರತಿಶಕ್ತಿಯನ್ನು ಕಟ್ಟುವ ಯತ್ನವಾಗಿ ನಡೆದ ಪ್ರತಿಪಕ್ಷ ಸಭೆಗೆ 20 ಪಕ್ಷಗಳ ನಾಯಕರು ಹಾಜರಾಗಿದ್ದರು. ಅಷ್ಟೇ ಅಚ್ಚರಿಯ ವಿಚಾರವೆಂದರೆ, ಈ ಸಭೆಗೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದಿಂದ ಯಾವುದೇ ಮುಖಂಡರು ಆಗಮಿಸಿರಲಿಲ್ಲ. ಡಿ.10ರಂದು, ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ...

 • 3 months ago No comment

  ಅರ್ಧನಾರಿ ಕಥೆಯ ಮತ್ತೆರಡು ಭಾಗಗಳು

  ‘ಮಧೋರುಬಗನ್’ (ಅರ್ಧನಾರಿ) ಎಂಬ ಕಾದಂಬರಿ ಬರೆವ ಮೂಲಕ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ಈಗ ಆ ಕಾದಂಬರಿಯ ಮತ್ತೆರಡು ಭಾಗಗಳ ಪ್ರಕಟಣೆಯೊಂದಿಗೆ ಸುದ್ದಿಯಾಗಿದ್ದಾರೆ. ಆ ಕಾದಂಬರಿಯ ಕೆಲವು ಭಾಗಗಳು ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿವೆ ಎಂದು ಆರೋಪಿಸಿದ್ದ ಬಲಪಂಥೀಯ ಕಾರ್ಯಕರ್ತರು ಹಲ್ಲೆಯೆಸಗಿದಾಗ, ತಮ್ಮ ಬರವಣಿಗೆ ಮೇಲೆ ಸ್ವಯಂ ನಿಷೇಧ ಹೇರಿಕೊಂಡಿದ್ದ ಮುರುಗನ್, ಇದೀಗ ಆ ಕಾದಂಬರಿ ಮುಗಿದಲ್ಲಿಂದಲೇ ಆರಂಭಿಸಿ ಮತ್ತೆರಡು ಭಾಗಗಳನ್ನು ಹೊರತಂದಿದ್ದಾರೆ. ಮೊದಲ ...

 • 3 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 3 months ago No comment

  ಅಲೆಗಳಾಗುವ ಹಾಡು

      ಕವಿಸಾಲು         ಕನಸುಗಳ ಜಾತ್ರೆ, ಮನಸುಗಳ ಹಬ್ಬ ಎಲ್ಲ ನಿಶ್ಯಬ್ದ, ಮೌನದಲಿ ಮನ ಬಿಡಿಸಿದ ಮೂರ್ತ ರೂಪಕ್ಕೆ ತದ್ರೂಪು ನಿನ್ನದೇ ಸೊಬಗು ಸುರಿವ ಮಳೆ, ಬೀಸೋ ಗಾಳಿ ಒದ್ದೆಯಾದ ಒಡಲಿನಲಿ ಉರಿವ ನನ್ನೆದೆಯ ಮೇಲೆ ಚಿತ್ತಾರ ಬಿಡಿಸುತ್ತವೆ ನಿನ್ನ ಬೆರಳು ಕರಿಕಪ್ಪು ಚಳಿ ರಾತ್ರಿಯಲಿ ಒಂದಪ್ಪುಗೆಯ ಧ್ಯಾನದಲಿ ಬೆನ್ನ ಸುಳಿ ಸೀಳಿ ಮೇಲೇರುವ ನಡುಕದಲಿ ನಿನ್ನೆದೆಯ ಹರವು ಯಾರೋ, ಯಾವತ್ತೋ ಮರಳ ...


Editor's Wall

 • 08 December 2018
  3 months ago No comment

  170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

  ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

 • 30 November 2018
  3 months ago No comment

  ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ

  ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...

 • 29 November 2018
  3 months ago No comment

  ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?

    ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.     ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ...

 • 09 November 2018
  4 months ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

 • 28 October 2018
  4 months ago No comment

  ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

    ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...