Share

ಅಧಿಕ ಪ್ರಸಂಗ | ನ್ಯೂಸ್ ರೂಮಿನಲ್ಲಿ ‘ಹಾದಿ ತಪ್ಪಿದವರು’

ಕೆದರಿದ ಕೂದಲು, ಬೆವರಿದಂತಿದ್ದ ಮುಖ, ಆಗತಾನೆ ಬಾಡಿ ಸ್ಪ್ರೇ ಮೊರೆಹೋಗಿದ್ದುದರ ಕುರುಹಾಗಿ ಮೂಗಿಗೆ ಬಡಿಯುತ್ತಿದ್ದ ಅಸಾಧ್ಯ ಘಾಟು ಹೀಗೆ ಪರಿಪರಿಯಾಗಿ ವಿಜೃಂಭಿಸುತ್ತ ದುಡುಗುಟ್ಟಿಕೊಂಡು ಆ ಸೀನಿಯರ್ ರಿಪೋರ್ಟರ್ ಹೊಕ್ಕಿದಾಗ, ನ್ಯೂಸ್ ರೂಮಿನೊಳಗಿನ ಮಾಮೂಲಿ ಗದ್ದಲಕ್ಕೆ ಇನ್ನಷ್ಟು ಗದ್ದಲ ಸೇರಿತು. ‘ಏನಾದ್ರೂ ಬ್ರೇಕಿಂಗ್ ನ್ಯೂಸ್ ಇದೆಯಾ?’ ಎಂಬ ಪ್ರಶ್ನೆಯೂ ಎದ್ದಿತು. ‘ಬ್ರೇಕಿಂಗ್ ಏನು, ಶಾಕಿಂಗೇ ಕೊಡ್ತೀನಿ. ಟೈಪ್ ಮಾಡಿಟ್ಟುಕೊಳ್ಳಿ. ಕನ್ಫರ್ಮ್ ಮಾಡಿ ಹೇಳಿದ ಮೇಲೆ ತೆಗೆದುಕೊಳ್ಳುವಿರಂತೆ’ ಎಂದ. ‘ಏನ್ರೀ ಅದು ಶಾಕಿಂಗು?’ ಎಂದು ಮತ್ತೆ ಪ್ರಶ್ನೆಗಳೆದ್ದವು. ‘ಹಿರಿಯ ಸಾಹಿತಿಯೊಬ್ಬರು ಗೊಟಕ್ ಅಂದಿರೋ ಹಾಗಿದೆ’ ಎಂದು ಭಾರೀ ಗುಟ್ಟಿನಲ್ಲೆಂಬಂತೆ ಹೇಳಿದ. ಇನ್ನೊಂದು ಚಾನೆಲ್ಲಿನ ಆಫೀಸಿಗೆ ಕೇಳಿಸಿಬಿಟ್ಟೀತು ಎಂಬ ಆತಂಕ ಅವನ ಅ ದನಿಯಲ್ಲಿತ್ತು.

ಇಂತಿಂಥಾ ಹೆಸರಿನ ಹಿರಿಯ ಸಾಹಿತಿ ನಿಧನ; ಅವರಿಗೆ 60 ವರ್ಷ ವಯಸ್ಸು; ಬೆಳಗ್ಗೆ ಎದ್ದು ವಾಕಿಂಗ್‍ಗೆ ಅಂತ ಹೋಗಿದ್ದರು; ಇಂತಿಂಥಾ ಪುಸ್ತಕಗಳನ್ನು ಬರೆದಿದ್ದರು; ಅವರ ಇಂಥಾ ಪುಸ್ತಕಕ್ಕೆ ಇಂಥಾ ಪ್ರಶಸ್ತಿ ಬಂದಿತ್ತು; ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು; ಈಗಲೂ ಹದಿನೈದು ದಿನಗಳಿಗೊಮ್ಮೆ ಸಲೂನಿಗೆ ಹೋಗಿ ಇರುವ ಕೆಲವೇ ಕೂದಲುಗಳನ್ನು ಟ್ರಿಮ್ ಮಾಡಿಸಿಕೊಂಡು ಬರುವುದು ಅವರ ಇಷ್ಟದ ರೂಢಿಯಾಗಿತ್ತು; ಅದ್ಯಾವುದೋ ಬಳ್ಳಿಯ ಕಷಾಯ ಕುಡಿಯುತ್ತಿದ್ದುದು ಅವರ ಆರೋಗ್ಯದ ಗುಟ್ಟಾಗಿತ್ತು; ಪತ್ನಿಯು ಅವರನ್ನು ಮೊದಲೇ ಅಗಲಿದ್ದರಿಂದ ಇವರು ಪತ್ನಿಯನ್ನು ಅಗಲುವ ಸಂದರ್ಭ ಬರಲಿಲ್ಲ… ಹೀಗೆಲ್ಲಾ ಟೈಪು ಮಾಡಿಸಲು ಇದ್ದಬಿದ್ದ ಶ್ರಮವನ್ನೆಲ್ಲಾ ಹಾಕಿ ಅರ್ಧ ತಾಸು ತಕ್ಕೊಂಡ.

‘ಇದು ಬ್ರೇಕಿಂಗ್ ಅಲ್ರೀ, ಗಜಪ್ರಸವ’ ಎಂದು ಜೋರುದನಿಯಲ್ಲೇ ಹಾಸ್ಯ ಮಾಡಿ, ಇಡೀ ಡೆಸ್ಕೇ ನಗುವಂತೆ ಮಾಡಿದ ನ್ಯೂಸ್ ಎಡಿಟರು, ‘ಕನ್ಫರ್ಮ್ ಆಯ್ತೇನ್ರಿ? ಬೇಗ ಹಾಕೋಣ’ ಎಂದು ಗಡಿಬಿಡಿ ಮಾಡಿದರು. ‘ಇಲ್ಲ ಇಲ್ಲ, ಈಗ ವಿಚಾರಿಸಿ ಹೇಳ್ತೀನಿ. ಎಲ್ಲ ರೆಡಿ, ಹೌದಾದರೆ ನಮ್ಮದೇ ಬ್ರೇಕಿಂಗ್. ಯಾರಿಗೂ ಸಿಕ್ಕಿಲ್ಲ’ ಎಂದ. ‘ಕನ್ಫರ್ಮ್ ಆಗಿಲ್ಲ, ಜಾಗೃತೆ. ತಗೊಂಡುಬಿಟ್ಟೀರಿ ಮತ್ತೆ. ಆಮೇಲೆ ನಮ್ಮ ತಲೆ ಹೋಗುತ್ತೆ’ ಅಂತ ಮತ್ಯಾರೋ ಒಬ್ಬ ಸೀನಿಯರ್ ಕೂಗಿ ಹೇಳಿದ. ‘ಇವ್ನಿಗೆ ತಲೆ ಇದ್ರೆ ತಾನೆ ಹೋಗೋಕೆ’ ಅಂತ ದೂರದಲ್ಲಿ ಕೂತಿದ್ದ ಅವರಿಗಾಗದ ಮತ್ತೊಬ್ಬ ತನ್ನ ಬಾಜೂ ಇದ್ದ ಹುಡುಗಿಯರ ಜೊತೆ ಪಿಸುಗುಟ್ಟಿದ್ದಕ್ಕೆ ಅಲ್ಲಿ ಕಿಸಕಿಸ ಸಮೂಹಗಾನವೇ ಆಯಿತು.

ಸ್ವಲ್ಪ ಹೊತ್ತಾದ ಮೇಲೆ ಆ ರಿಪೋರ್ಟರ್ ಸೀದಾ ನ್ಯೂಸ್ ಎಡಿಟರ್ ಬಳಿ ಬಂದು ಬಾಲಾಪರಾಧಿಯ ಥರ ನಿಂತ. ಕಥೆ ಏನಾಗಿತ್ತೆಂದರೆ, ಬೆಳಗ್ಗೆ ಯಾವುದೋ ಇವೆಂಟ್ ಕವರೇಜಿಗೆ ಹೋಗಿದ್ದಾಗ ಐದಾರು ಮಂದಿ ಸೀನಿಯರ್ ಸಿಟಿಜನ್ಸು ಸಣ್ಣಗೆ ಮಾತಾಡ್ತಾ ನಿಂತಿದ್ದುದು ಈ ರಿಪೋರ್ಟರ್ ಗಮನಕ್ಕೆ ಬಂತು. ಅವರ ಗಮನಕ್ಕೆ ಬಾರದ ಹಾಗೆ ದೂರವೇ ನಿಂತು, ಆದರೆ ಕಿವಿಯನ್ನು ಮಾತ್ರ ಅವರ ಮಾತಿಗೆ ಅಂತ ತೆರೆದಿಟ್ಟಾಗ, ಆ ಹಿರಿಯ ಸಾಹಿತಿಯ ಹೆಸರು, ವಯಸ್ಸು, ಬೆಳಗ್ಗೆ ವಾಕಿಂಗ್‍ಗೆ ಅಂತ ಹೋಗಿದ್ದುದು, ಪತ್ನಿ ಈಗಾಗಲೇ ತೀರಿಕೊಂಡಿದ್ದು ಇಷ್ಟು ವಿಚಾರ ಕಿವಿಮೇಲೆ ಬಿತ್ತು. ಮತ್ತೆ ಹಿಂದೆಮುಂದೆ ಯೋಚಿಸದೆ, ಇನ್ನಾವ ರಿಪೋರ್ಟರಿಗೂ ಗೊತ್ತಾಗಬಾರದೆಂದು ಅಸಾಧಾರಣ ಗುಟ್ಟು ಹೊತ್ತವನ ಭಾರದಲ್ಲಿ, ಕ್ಯಾಬ್ ಡ್ರೈವರ್‍ನನ್ನು ‘ಬೇಗ ಬೇಗ’ ಎಂದು ತಿವಿಯುತ್ತ ಅಂತೂ ಆಫೀಸಿಗೆ ಬಂದು ಬ್ರೇಕಿಂಗ್ ಅಲ್ಲ ಶಾಕಿಂಗೇ ಅಂದಿದ್ದ. ನಿಜ ಗೊತ್ತಾದ ಬಳಿಕ ಹೀಗೆ ನ್ಯೂಸ್ ಎಡಿಟರ್ ಎದುರು ಬಂದು ಪೂರ್ತಿ ಗಾಳಿ ಹೋದವನಾಗಿ ನಿಂತಿದ್ದ.

‘ಸರಿ ಬಿಡ್ರಿ, ಆಯ್ತು. ಈಗೇನು ತಲೆ ಹೋಗಿಲ್ಲ ತಾನೆ?’ ಎಂದು ಅವನನ್ನು ಸಮಾಧಾನ ಮಾಡಿದ ನ್ಯೂಸ್ ಎಡಿಟರು, ‘ಅವ್ರಿಗೇನೂ ಆಗಿಲ್ಲರಿ, ವಾಕಿಂಗ್‍ಗೆ ಹೋಗಿದ್ದರಂತೆ. ಹೋದವ್ರು ಇನ್ನೂ ಬಂದಿಲ್ವಲ್ಲ ಅಂತ ಮನೆಯವರು, ನೆರೆಯವ್ರು ಗಾಬರಿಯಾಗಿದ್ರಂತೆ. ಆಮೇಲೆ ಬಂದ್ರಂತೆ. ದಾರಿ ತಪ್ಪಿಬಿಟ್ಟಿದ್ದರಂತೆ’ ಎಂದರು, ಎಲ್ಲರೂ ಕೇಳಿಸಿಕೊಳ್ಳುವ ಹಾಗೆ. ಅದಕ್ಕೆ ತಕ್ಷಣ, ಸಾಹಿತ್ಯವನ್ನು ಲಿಟರೇಚರು ಎಂದೇ ಹೇಳುತ್ತಿದ್ದ ಕೊಂಚ ಬುದ್ಧಿಜೀವಿ ಆಕಾರದ ಒಬ್ಬ ಕಾಪಿ ಎಡಿಟರ್, ‘ಅವ್ರು ಆಗ್ಲೇ ನವ್ಯದ ಟೈಮಲ್ಲೇ ಹಾದಿ ತಪ್ಪಿದ್ದ್ರಲ್ಲ ಸರ್’ ಎಂದ. ಕೆಲವರು ನಕ್ಕರು. ‘ಜೋಕು ಕಣ್ರೀ, ನಗ್ರೀ’ ಎಂದು ಇತರರನ್ನೂ ನಗಿಸಿದ ನ್ಯೂಸ್ ಎಡಿಟರು, ‘ಇವತ್ತು ಹಾದಿ ತಪ್ಪಿದ್ದು ನಮ್ಮ ರಿಪೋರ್ಟರು’ ಎಂದರು. ಡೆಸ್ಕಿನಲ್ಲಿ ಮತ್ತೆ ಕುಕ್ಕುಕ್ಕು.

ಅದೆಲ್ಲದರ ಮಧ್ಯೆ, ಆ ಸಾಹಿತಿಯ ಪ್ರೊಫೈಲು ಬರೆಯುವ ಅಸೈನ್‍ಮೆಂಟು ತನಗೆ ಬಂದು ಗಂಟುಬಿದ್ದದ್ದರಿಂದ ಸಾಹಿತ್ಯದ ತುದಿಬುಡ ಗೊತ್ತಿಲ್ಲದೆ ಒದ್ದಾಡುತ್ತ ಕೂತಿದ್ದ ಮತ್ತೊಬ್ಬ ಕಾಪಿ ಎಡಿಟರ್, ಸದ್ಯ ತಾನು ಬಚಾವಾದೆ ಎಂದು ದೊಡ್ಡದಾಗಿ ನಿಟ್ಟುಸಿರು ಬಿಟ್ಟದ್ದು ಯಾರ ಗಮನಕ್ಕೂ ಬರಲೇ ಇಲ್ಲ. ತನ್ನನ್ನು ಯಾರೂ ಗಮನಿಸಲೇ ಇಲ್ಲವಲ್ಲ ಎಂದು ಒಳಗೊಳಗೇ ಕುದ್ದುಹೋದ ಅವನು, ಆ ಸಾಹಿತಿ ನಿಜವಾಗಿಯೂ ಸತ್ತಿದ್ದಿದ್ದರೆ ಇವರೆಲ್ಲ ಇವತ್ತು ನನ್ನನ್ನು ಬದುಕಲು ಬಿಡುತ್ತಿದ್ದರಾ ಎಂದು ಮತ್ತಷ್ಟು ಉರಿಯತೊಡಗಿದ.

*

ಓ ಮೈ ಗಾಡ್!

ರ್ನಾಟಕದಲ್ಲಿ ಎಲೆಕ್ಷನ್ ಟೈಮು ಎಂದು ಗೊತ್ತಾಗಿ ಹೊಸ ಹೊಸ ಗಿಮಿಕ್ಕು ಕಲ್ತುಕೊಳ್ಳೋಕೆ ಸರಿಯಾದ ಸಂದರ್ಭ ಇದು, ಬರೀ ಮಹಾಭಾರತ ಕಾಲದ್ದೇ ಇನ್ನೂ ಇಟ್ಟುಕೊಂಡು ಒದ್ದಾಡ್ತಿದ್ದೇನಲ್ಲ ಎನ್ನಿಸಿತು ದೇವರಿಗೆ. ಸರಿ, ವಿಧಾನಸೌಧದೆದುರಿಗೆ ಇಳಿದೇಬಿಟ್ಟ. ಆಗ ಗೊತ್ತಾಯ್ತು: ಯಾರೂ ಇಲ್ಲಿಲ್ಲ; ಕೃಷ್ಣಾ, ಕ್ವೀನ್ಸು, ರೇಸ್‍ಕೋರ್ಸು, ಮಲ್ಲೇಶ್ವರಮ್ಮು, ಪದ್ಮನಾಭನಗರ ಹೀಗೆ ಪೊಲಿಟೀಷಿಯನ್ನುಗಳೆಲ್ಲ ಚದುರಿಹೋಗಿದ್ದಾರೆ.

ಇನ್ನೇನು ಮಾಡೋದಪ್ಪ ಎಂದು ತಲೆಕೆರೆದುಕೊಳ್ಳುತ್ತ ನಿಂತಿದ್ದಾಗ, ಅಷ್ಟೊತ್ತಿಗೆ ಮೀಡಿಯಾದವರೆಲ್ಲ ದೇವರು ಬಂದ ವಾಸನೆ ಸಿಕ್ಕಿ ತಪ್ಪಿಸಿಕೊಳ್ಳಲಾರದ ಹಾಗೆ ಸುತ್ತುವರಿದುಬಿಟ್ಟರು. ಅಷ್ಟೊಂದು ಲೋಗೋ ಮೈಕುಗಳನ್ನು ನೋಡಿ ಭಯವೂ ಬೆರಗೂ ಏಕಕಾಲಕ್ಕೇ ಆಗುತ್ತಿರಲು ದೇವರಿಗೆ ಒಂದೇ ಸಮನೆ ಪ್ರಶ್ನೆಗಳ ಮೊಳೆಗಳು ಎಲ್ಲಾ ದಿಕ್ಕಿನಿಂದಲೂ ಬಂದು ನಾಟತೊಡಗಿದವು.

ಹೀಗೆ ತೀರಾ ಅಷ್ಟೊಂದು ಹಳೇ ದಡ್ಡನ ಥರ ಇದ್ದರೆ ಇವರ ಮುಂದೆ ಆಟ ಸಾಗದು ಎಂದು ಹೊಳೆದದ್ದೇ ದೇವರು, ‘ಸೈಲೆನ್ಸ್ ಪ್ಲೀಸ್’ ಎಂದು ಪಾಂಚಜನ್ಯದ ಸ್ವರವನ್ನು ಹೃಸ್ವಗೊಳಿಸಿದರೆ ಯಾವ ಪ್ರೆಷರಿನಲ್ಲಿ ಹೊಮ್ಮಿ ಕಿವಿಗಡಚಿಕ್ಕಬಹುದೋ ಅಂಥ ವಾಯ್ಸಿನಲ್ಲಿ ಗುಡುಗಿದ. ಮತ್ತು ಈಗ ದೇವರು ಥೇಟ್ ದೇವೇಗೌಡರು, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಇತ್ಯಾದಿ ಇತ್ಯಾದಿಗಳಂತೆಯೇ ಕಂಡ.

ಬರೀ ಕಾಣುತ್ತಿರುವನೊ ಅಥವಾ ಹಾಗೆಯೇ ಆಗಿಬಿಟ್ಟನೊ ಎಂಬುದನ್ನು ವಿಶ್ಲೇಷಕರು ವಿಷದೀಕರಿಸಬೇಕಿದೆ.

*

ಒಂಚೂರು ಬೇತಾಳ

ಥಾಪ್ರಕಾರ ರಾಜ ವಿಕ್ರಮಾದಿತ್ಯನ ಭುಜದ ಮೇಲಿಂದ ಇಳಿಬಿದ್ದು ಜೋತಾಡತೊಡಗಿದ ಬೇತಾಳ, ಯಕಶ್ಚಿತ್ ಇರುವೆಯೊಂದು ಕಚ್ಚಿದ್ದಕ್ಕೆ ಪ್ರಾಣವೇ ಹೋದವನಂತೆ ಚೀರಾಡಿದ ರಾಜನೊಬ್ಬನ ಕಥೆ ಹೇಳಿತು; ಎಲ್ಲಿಯೂ ಅವನ ಹೆಸರನ್ನು ಬಹಿರಂಗಪಡಿಸದೆ. ಪೊಲಿಟೀಷಿಯನ್ನುಗಳು, ಪತ್ರಕರ್ತರ ಥರ ಶೈಲಿಯನ್ನು ಕಲಿತುಕೊಂಡ ಬೇತಾಳದ ಬಗ್ಗೆ ವಿಕ್ರಮಾದಿತ್ಯನಿಗೆ ಒಳಗೊಳಗೇ ಭಯವಾಯಿತು. ಇನ್ನು ಆ ರಾಜ ಯಾರೆಂದು ಕೇಳಿದರೆ ಏನು ಹೇಳಲಿ ಎಂದು ಬೆವರತೊಡಗಿದ. ಆದರೆ ಬೇತಾಳ ಏನನ್ನೂ ಕೇಳದೆ ಅವನ ಭುಜದ ಮೇಲಿಂದ ಹಾರಿ ಗಾಳಿಯಲ್ಲಿ ತೇಲಾಡುತ್ತ, ‘ಅವನಾದರೊ ಇರುವೆ ಕಚ್ಚಿದ್ದಕ್ಕೆ ಚೀರಾಡಿದ್ದ, ನೀನು ಮಾತ್ರ ಯಾವುದೂ ಕಚ್ಚದೆ ಇಷ್ಟೊಂದು ಭಯಬೀಳುತ್ತಿದ್ದಿಯಲ್ಲೊ’ ಎಂದು ಹೀಗಳೆದು ಕಿಕ್ಕಿಕ್ಕಿಕ್ಕೀ ನಗುತ್ತ ಹೋಗಿ ಎದುರಿಗಿದ್ದ ಹುಣಸೆಮರದ ರೆಂಬೆಗೆ ನೇತಾಡತೊಡಗಿತು.

Share

Leave a comment

Your email address will not be published. Required fields are marked *

Recent Posts More

 • 6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 7 days ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 7 days ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 1 week ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  3 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  3 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...