Share

ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

ಪ್ರವಾಸಿ ಸವಿತಾ ಕಂಡ ಇಂಡಿಯಾ

 

ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ಸಂಚಿಕೆಯಿಂದ ‘ಹೊಸ ಮನುಷ್ಯ’ ಎಂದು ಪುನರ್ನಾಮಕರಣಗೊಂಡಿತು) 2011ರ ಸೆಪ್ಟಂಬರಿನಿಂದ 2012ರ ಆಗಸ್ಟ್ ಸಂಚಿಕೆಗಳವರೆಗೆ ಧಾರಾವಾಹಿಯಾಗಿ ಪ್ರಕಟವಾಗಿತ್ತು.

-ಸವಿತಾ ನಾಗಭೂಷಣ, ಶಿವಮೊಗ್ಗ

 

ಭಾಗ-12

ನಾವು ಜಮ್ಮು ತಲುಪಿ ಕಟ್ರಾದ ಛತ್ರದಲ್ಲಿ ವೈಷ್ಣೋದೇವಿ ಯಾತ್ರೆಗೆ ಸಿದ್ಧರಾಗುತ್ತಿದ್ದೆವು. ‘ಹೆಲಿಕಾಪ್ಟರ್, ಡೋಲಿ, ಕುದುರೆ, ಕಾಲ್ನಡಿಗೆ… ವೈಷ್ಣೋದೇವಿಯ ದರ್ಶನಕ್ಕೆ ಯಾವುದನ್ನು ಆಯ್ದುಕೊಳ್ಳುವಿರಿ? ನಿಮ್ಮ ನಿಮ್ಮಲ್ಲೇ ಚರ್ಚಿಸಿ ಒಮ್ಮತಕ್ಕೆ ಬನ್ನಿ’ ಎಂದು ಟೂರ್ ಮ್ಯಾನೇಜರ್ ಹೇಳಿದ. ವೈಷ್ಣೋದೇವಿ ಭಾರತದ ಸುಪ್ರಸಿದ್ಧ ಶಕ್ತಿದೇವತಾ ಕೇಂದ್ರಗಳಲ್ಲೊಂದಾಗಿದ್ದು, ಅದು ತ್ರಿಕೂಟ ಪರ್ವತದ ತುದಿಯಲ್ಲಿದ್ದು, ಅದನ್ನೇರುವುದೇ ಒಂದು ಸಾಹಸ ಎಂದು ಕೇಳಿದ್ದೆನಾದ್ದರಿಂದ, ನಾನು ಕಾಲ್ನಡಿಗೆ ಆಯ್ದುಕೊಂಡೆ.

ಇಪ್ಪತ್ತು ವರ್ಷಗಳ ಹಿಂದೆ ಹಿಮಾಲಯದ ಕೇದಾರಕ್ಕೆ ಹದಿನಾಲ್ಕು ಕಿ.ಮೀ. ಕಾಲ್ನಡಿಗೆಯಲ್ಲೇ ಕ್ರಮಿಸಿದ್ದರಿಂದ ನಡೆದೇ ವೈಷ್ಣೋದೇವಿಯನ್ನು ಮುಟ್ಟುವ ಹಂಬಲ ಇತ್ತಾದರೂ, ಈ ಮಧ್ಯವಯಸ್ಸಿನಲ್ಲಿ 13 ಕಿ.ಮೀ ನಡೆಯಲು ಸಾಧ್ಯವೇ ಎಂಬ ಅಳುಕು ಇದ್ದೇ ಇತ್ತು. ‘ನಾನಂತೂ ನಡೆದೇ ಹೋಗುವುದು!’ ಅಂತ ರೈತಾಪಿ ಜನರ ಜೊತೆ ಸೇರಿದಾಗ ಕಷ್ಟ ಆಗುತ್ತೆ; ಯೋಚನೆ ಮಾಡಿ ಎಂದು ಟೂರ್ ಮ್ಯಾನೇಜರ್ ಎಚ್ಚರಿಸಲು ಮರೆಯಲಿಲ್ಲ.

ನಾವೆಲ್ಲ ಬೆಳಗಿನ ಉಪಾಹಾರ ಮುಗಿಸಿ ಹತ್ತು ಘಂಟೆಗೆ ಹುರುಪಿನಿಂದ ನಡಿಗೆ ಶುರು ಮಾಡಿದೆವು. ದಾರಿಯುದ್ದಕ್ಕೂ ಸಾಲು ಸಾಲು ಪರ್ವತ ಶ್ರೇಣಿಗಳು, ಚಲಿಸುವ ಮೋಡಗಳು, ಕಣಿವೆಗಳ ಇಳಿಜಾರುಗಳ ತುಂಬಾ ಛತ್ರಿಗಳಂತೆ ಹರಡಿಕೊಂಡ ಹಸಿರು ರಾಶಿ, ನಸು ಬೆಚ್ಚಗಿನ ಸೂರ್ಯರಶ್ಮಿ, ಮಧ್ಯೆ ಮಧ್ಯೆ ತುಂತುರು ಮಳೆ, ಕಾಮನ ಬಿಲ್ಲು, ಆಗಾಗ್ಗೆ ಬೀಸಿ ಮುದಗೊಳಿಸುವ ತಂಗಾಳಿ, ‘ಜೈ ಮಾತಾ ದೀ!’ ಎಂಬ ಜಯಘೋಷ ನಮಗರಿವಿಲ್ಲದಂತೆಯೇ ನಮ್ಮ ಕಾಲುಗಳಿಗೆ ಕಸುವು ತುಂಬಿದ್ದವು. ಮುದುಕರು, ಮಕ್ಕಳು. ಸಾಧು-ಸಂತರಿಂದ ಹಿಡಿದು ಸಾಮಾನ್ಯ ಭಕ್ತರು ದೇವಿಯೆಡೆಗೆ ಇರುವೆಯೋಪಾದಿಯಲ್ಲಿ ಸಾಗುತ್ತಿದ್ದು ದೂರದವರೆಗೆ ಕಾಣುತ್ತಿತ್ತು.

ಬಲು ಉತ್ಸಾಹದಿಂದ ನಮ್ಮ ನಡಿಗೆಯನ್ನು ಆರಂಭಿಸಿದೆವಾದರೂ, ಏರು ಪರ್ವತವಾದ್ದರಿಂದ ಮೂರು ಕಿ.ಮೀ. ನಡೆಯುವಷ್ಟರಲ್ಲೇ ಸುಸ್ತಾಗಿ ಇನ್ನುಳಿದ ಹಾದಿ ಹೇಗಪ್ಪಾ ಸವೆಸುವುದು ಎನಿಸತೊಡಗಿತು. ಏದುಸಿರು ಬಿಡುತ್ತಾ ‘ದೇವಿ! ದೇವಿ!’ ಎಂದು ಚೀರುತ್ತಾ, ಒಂದೊಂದು ಹೆಜ್ಜೆಯನ್ನೂ ಪ್ರಯಾಸದಿಂದ ಕೀಳುತ್ತಾ ದಾರಿ ಮಧ್ಯೆಯಿದ್ದ ತಂಗುದಾಣಗಳಲ್ಲಿ ಕೆಲ ನಿಮಿಷ ಕೂತು, ಮಲಗಿ, ‘ಯಾಕಪ್ಪಾ ಈ ನಡಿಗೆಯ ಪರೀಕ್ಷೆ!’ ಎಂದು ಕೇಳಿಕೊಳ್ಳುತ್ತಾ, ಕೊನೆ ಕೊನೆಗೆ ಕೆಲವರು ತೆವಳಿಕೊಂಡು ಮುನ್ನೆಡೆದವು. ಇಷ್ಟೂ ಆಗದವರು ಅರ್ಧ ದಾರಿಯಲ್ಲಿ ಸಿಕ್ಕ ಕುದುರೆಗಳನ್ನು ಏರಿ ಸಾಗಿದರೆ, ಕೆಲವರು ಕೇಳಿದಷ್ಟು ಬೆಲೆ ನೀಡಿ ಡೋಲಿಗಳನ್ನು ಆಶ್ರಯಿಸಿದರು.

ಹೀಗೆ ನಾವು ಅಂತೂ ಇಂತೂ ರಾತ್ರಿ ಎಂಟು ಗಂಟೆಗೆ ವೈಷ್ಣೋದೇವಿಯ ಮಹದ್ವಾರ ತಲುಪಿದೆವು. ಅಲ್ಲಿ ಮತ್ತೆ ಸರತಿಯ ಸಾಲಿನಲ್ಲಿ ಒಂದು ತಾಸು ನಿಂತು ಹಿಮಪರ್ವತದ ಜಲಧಾರೆಯಲ್ಲಿ ನಮ್ಮ ಕಾಲು ತೋಯಿಸಿಕೊಂಡು ದೇವಿಯ ತಾಣ ತಲುಪಿದಾಗ ನಮಗೆ ಆಶ್ಚರ್ಯ ಕಾದಿತ್ತು. ಗರ್ಭಗುಡಿಯೆಂದರೆ ಮತ್ತೇನೂ ಅಲ್ಲ. ಪ್ರಾಕೃತಿಕವಾಗಿ ರೂಪುಗೊಂಡ ಹಿಮಗುಹೆಗಳು. ಕೊರಕಲು ಕಿಂಡಿಯೊಳಗೆ ದೇವಿ ವಿರಾಜಮಾನಳಾಗಿದ್ದಳು. ದುಂಡನೆಯ ದಿವಿ ಹಲಸಿನ ಗಾತ್ರದ ಮೂರು ಕಲ್ಲುಗಳೇ ದೇವಿಯರು! ನಾವು ಮೂಕವಿಸ್ಮಿತರಾಗಿ ಆ ಕಲ್ಲುಗಳಿಗೇ ನಮಿಸಿದೆವು. ಇದನ್ನು ನೋಡಲು ಇಷ್ಟು ಕಷ್ಟಪಟ್ಟು ಇಲ್ಲಿಗೆ ಬರಬೇಕೇ! ಎಂದು ನನಗಂತೂ ಅನಿಸಿತು.

ಅದಾಗಲೇ ರಾತ್ರಿ ಒಂಭತ್ತು ಘಂಟೆಯಾದ್ದರಿಂದ ಹಸಿವೆಯಿಂದ ಹಾದಿ ಬದಿಯ ಹೋಟೆಲಿಗೆ ಎಡತಾಕಿದೆವು. ಊಟದಲ್ಲಿ ಸಾಸಿವೆ ಎಣ್ಣೆ ಬಳಸಿದ್ದುದರಿಂದ ಒಂದು ತುತ್ತೂ ಗಂಟಲಿಗೆ ಇಳಿಯದೆ, ಕೊನೆಗೆ ಬಾಳೆಹಣ್ಣು ಖರೀದಿಸಿ ತಿಂದು ಹೊಟ್ಟೆ ತುಂಬಿಸಿಕೊಂಡೆವು. ಈಗ ಪರ್ವತದ ಕೆಳಗಿನ ನಮ್ಮ ಬಿಡಾರಕ್ಕೆ ವಾಪಸಾಗುವುದು ಹೇಗೆ ಎಂಬ ಚಿಂತೆ ಆರಂಭವಾಯಿತು. ಕಾಲುಗಳು ಬಾತಿದ್ದುದರಿಂದ ಒಂದು ಹೆಜ್ಜೆಯೂ ಮುಂದಿಡಲಾರದವರಾಗಿ ಸತ್ತೆನೋ ಕೆಟ್ಟೆನೋ ಎಂದು ಹಲವರು ಬೆಟ್ಟದ ಮೇಲಣ ಯಾತ್ರಿ ನಿವಾಸಗಳನ್ನು ಆಶ್ರಯಿಸಿದರು. ಕೆಲವರು ಕುದುರೆ ಹತ್ತಿದರು. ನಮ್ಮ ಅಸಹಾಯಕತೆಯ ಲಾಭ ಪಡೆಯಲು ಕುದುರೆಯ ಮಾಲೀಕರು ಮನಸೋ ಇಚ್ಛೆ ಬೆಲೆ ಹೇಳಿದಾಗ ಆರಂಭವಾದ ಚೌಕಾಶಿಯಿಂದ ನಾನು ರೋಸಿಹೋಗಿ ನನ್ನ ಪಾಡಿಗೆ ನಾನು ಕಾಲ್ನಡಿಗೆಯಲ್ಲಿ ಪರ್ವತ ಇಳಿಯತೊಡಗಿದೆ.

ಹಾಸನದ ಕಡೆಯ ಇಬ್ಬರು ರೈತಾಪಿ ಮಹಿಳೆಯರು ನನ್ನ ಬೆನ್ನ ಹಿಂದೆಯೇ ಇದ್ದುದರಿಂದ ಧೈರ್ಯದಿಂದ ಹೆಜ್ಜೆ ಹಾಕಿದೆನಾದರೂ, ಸ್ವಲ್ಪ ಹೊತ್ತಿಗೇ ಬಲವಾದ ಗಾಳಿ ಬೀಸಿ ಗುಡುಗು-ಮಿಂಚು ಶುರುವಾಗಿ ಪಟ ಪಟ ಮಳೆಯೂ ಸುರಿಯತೊಡಗಿದಾಗ ನಿಜವಾಗಿಯೂ ಭೀತಳಾದೆನು. ಬೆಳಗ್ಗಿಂದ ನಡೆದೂ ನಡೆದೂ ಸುಸ್ತಾದ್ದರಿಂದ ರೈತಾಪಿ ಮಹಿಳೆಯರ ಸಮ ನಡೆಯಲಾರದೆ ನಾನು ಕೊಂಚ ಹಿಂದೆ ಬಿದ್ದೆ. ನಾಲ್ವರು ಪುರುಷ ರೈತರು ಬೀಸುಗಾಲು ಹಾಕುತ್ತಾ ಅದಾಗಲೇ ಎಷ್ಟೋ ಮುಂದೆ ಹೋಗಿದ್ದರು. ಒಬ್ಬಳೇ ಒಂಟಿಯಾಗಿ ಕಗ್ಗತ್ತಲಿನಲ್ಲಿ ಅತಿ ಪ್ರಯಾಸದಿಂದ ಹೆಜ್ಜೆ ಇಡುವ ಹೊತ್ತಿನಲ್ಲಿ ಆಗಸ ಮಿಂಚಿದಂತೆಲ್ಲ ಏನೋ ಒಂದು ರೀತಿ ರೋಮಾಂಚನವಾಗುತ್ತಿತ್ತೆಂಬುದೂ ನಿಜವೇ. ಆಗ ಗುಡುಗು-ಮಿಂಚು-ಮಳೆ-ಗಾಳಿ ಈ ಪ್ರಕೃತಿ ಇವಳೇ ಅಲ್ಲವೇ ವೈಷ್ಣೋದೇವಿ ಎಂದು ಹೊಳೆದಂತಾಗಿ ಅಪಾರ ಚೈತನ್ಯ ಒದಗಿ ಬಂದು ‘ದೇವಿ ಈ ರೀತಿಯಾಗಿ ದರುಶನ ನೀಡಿದಳಲ್ಲ!’ ಎಂದು ಪರಮ ಸಂತೋಷದಿಂದ ನಿರಾಳವಾಗಿ ಅಂಜಿಕೆಯಿಲ್ಲದೆ ಒಂದೊಂದೇ ಹೆಜ್ಜೆ ಇಡುತ್ತಾ ಇಳಿಯತೊಡಗಿದೆನು.

ಸ್ವಲ್ಪ ದೂರ ಕ್ರಮಿಸಿದಂತೆ ರಾತ್ರಿಯ ಹೊತ್ತು ದೇವಿಯ ದರ್ಶನ ಪಡೆಯಲು ಬೆಟ್ಟ ಹತ್ತಲು ತೊಡಗಿದ್ದ ಭಕ್ತರ ಗುಂಪು ಎದುರಾಯಿತು. ಅಪರಾತ್ರಿಯಲ್ಲಿ ಒಬ್ಬಂಟಿಗಳಾಗಿ ಬೆಟ್ಟ ಇಳಿಯುತ್ತಿದ್ದ ನನ್ನನ್ನು ಕಂಡು ‘ಜೈ ಮಾತಾ ದೀ!’ ಎಂದು ಕೂಗಿ ಹುರಿದುಂಬಿಸಿದರಷ್ಟೆ. ಇದೀಗ ನನ್ನ ಸಹಯಾತ್ರಿ ರೈತಾಪಿ ಮಹಿಳೆಯರು ದಾರಿ ಬದಿಯ ತಂಗುದಾಣದಲ್ಲಿ ಕಾಲು ಚಾಚಿ ಕೂತು ವಿಶ್ರಮಿಸಿಕೊಳ್ಳುತ್ತಿರುವುದು ಕಂಡುಬಂತು. ನಾನವರಿಗೆ ಕೈಬೀಸಿ ಅಲ್ಲೇ ಸನಿಹದಲ್ಲಿದ್ದ ಟೀ ಅಂಗಡಿಯ ಬೆಂಚಿನ ಮೇಲೆ ಕೂತುಕೊಂಡೆ. ಇನ್ನು ಅರ್ಧ ಕಿ.ಮೀ. ನಡೆದರೆ ಬೆಟ್ಟದ ಬುಡದ ನಮ್ಮ ಛತ್ರ ತಲುಪಬಹುದಿತ್ತು. ಆದರೆ ನಾನು ಎಷ್ಟು ಸೋತಿದ್ದೆನೆಂದರೆ ‘ಒಂದು ಲೋಟ ಟೀ’ ಎಂದು ಕೇಳುವಷ್ಟೂ ಚೈತನ್ಯವಿರಲಿಲ್ಲ. ಜೋಲು ಮೋರೆ ಹಾಕಿಕೊಂಡು ಕುದಿಯುತ್ತಿದ್ದ ಚಹಾ ನೋಡುತ್ತಿದ್ದ ನನ್ನ ಸ್ಥಿತಿಯನ್ನು ಅಂಗಡಿಯಾತ ಅರ್ಥ ಮಾಡಿಕೊಂಡವನಂತೆ ಬಿಸಿ ಬಿಸಿಯಾಗಿ ರುಚಿ ರುಚಿಯಾಗಿದ್ದ ಚಹಾ ನೀಡಿದ. ತೃಪ್ತಿಯಿಂದ ಕುಡಿದು ಸಾವರಿಸಿಕೊಂಡು ಆ ಇಬ್ಬರು ಮಹಿಳೆಯರಿಗೂ ಚಹಾ ನೀಡಿ ಎಂದು ಅಂಗಡಿಯವನನ್ನು ಕೋರಿದೆ.

ಆಗ ಬೆಳಗಿನ ಜಾವ ನಾಲ್ಕೂವರೆ ಘಂಟೆ. ಸುತ್ತಲೂ ಬೆಳಗಿನ ರೋಮಾಂಚನ ಆರಂಭವಾಗಿತ್ತು. ಮೆಲ್ಲಗೆ ಟಕ್ ಟಕ್ ಟಕ್ ಸದ್ದು ಕೇಳತೊಡಗಿತು. ಓಹ್! ಅದು ಕುದುರೆಯ ನಡಿಗೆಯ ಸದ್ದು. ನಮ್ಮ ಸಹಯಾತ್ರಿಕರು ಒಬ್ಬೊಬ್ಬರೇ ಕುದುರೆಯ ಮೇಲೆ ಕುಳಿತು ಬರುತ್ತಿದ್ದುದು ಮಸುಕಾಗಿ ಕಾಣತೊಡಗಿತು.

(ಮುಗಿಯಿತು)

Share

Leave a comment

Your email address will not be published. Required fields are marked *

Recent Posts More

  • 1 week ago No comment

    ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

            ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

  • 1 week ago No comment

    ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

          ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

  • 1 week ago No comment

    ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

    ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

  • 2 weeks ago No comment

    ಉಷಾ ಚಿತ್ತ | ಮೊಲದ ಮರಿ ಗಿಫ್ಟ್

          ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

  • 2 weeks ago No comment

    ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

    ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

  • 14 April 2019
    1 week ago No comment

    ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

            ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

  • 04 April 2019
    2 weeks ago No comment

    ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

    ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

  • 29 March 2019
    3 weeks ago One Comment

    ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                      ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

  • 26 March 2019
    4 weeks ago No comment

    ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

    ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

  • 12 March 2019
    1 month ago No comment

    ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

    ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...