Share

ಕಥನ | ಮುಕ್ತಾಯ
ಗಣೇಶ್ ಕರ್ಕೇರ, ಮೈಸೂರು

 

ಕಥನ

 

 

 

ದಿನದ ಮುಕ್ತಾಯಕ್ಕೆ ಡೈರಿ ಬರೆಯುವುದೊಂದು ಚಟ ನನ್ನ ಪಾಲಿಗೆ. ಅದೆಷ್ಟೋ ಸುಳ್ಳುಗಳನ್ನು ಬರೆದ ಈ ಪಾಪಿ ಕೈಗಳು ಸತ್ಯವನ್ನು ಬರೆಯುವುದು ಇಲ್ಲಿ ಮಾತ್ರ. ಅಂದ ಹಾಗೆ ಇಂದು ಈ ದಿನದ ಮುಕ್ತಾಯವಷ್ಟೇ ಅಲ್ಲ ನನ್ನ ಜೀವನದ್ದೂ ಕೂಡಾ. ರಣರಂಗದಲ್ಲಿ ವೈರಿಗಳೊಡನೆ ಕಾದಾಡುವಾಗ, ಅದೆಷ್ಟೋ ಸೈನಿಕರ ಛಿದ್ರವಾದ ಶವಗಳನ್ನು ಮಣ್ಣು ಮಾಡಿ ಎದೆಗುಂದಿದಾಗ, ಯುಧ್ಧಖೈದಿಯಾಗಿ ಶತ್ರುದೇಶಕ್ಕೆ ಸೆರೆಸಿಕ್ಕಿ ಅವರು ಕೊಟ್ಟ ಚಿತ್ರಹಿಂಸೆಗಳನ್ನು ಅನುಭವಿಸಿದಾಗ ಬರದ ಸಾವನ್ನು ಇಂದು ಸ್ವ ಇಚ್ಛೆಯಿಂದ ಬರಮಾಡಿಕೊಳ್ಳುತ್ತಿದ್ದೇನೆ ಬಳಿಗೆ. ಅವಮಾನವಾಗುತ್ತಿದೆ, ಆದರೂ ಮುಂದಾಗುವ ಅವಮಾನಕ್ಕಿಂತ ದೊಡ್ಡದೇನಲ್ಲ.

ಅವನೊಬ್ಬನಿದ್ದ ಬಾಲ್ಯದ ಗೆಳೆಯ. ಚಿಕ್ಕಂದಿನಿಂದಲೂ ಒಟ್ಟಿಗೆ ಆಡಿ ಬೆಳೆದು, ಓದಿ ಇಬ್ಬರೂ ಒಟ್ಟಾಗಿಯೇ ಸೈನ್ಯಕ್ಕೆ ಸೇರಿದ್ದೆವು. ಹದಿನಾಲ್ಕು ವರ್ಷದ ಹಿಂದೆ. ಅವನ ಎಲ್ಲಾ ನಲಿವುಗಳನ್ನು ನಾನು ಕಂಡಿದ್ದೇನೆ; ನನ್ನೆಲ್ಲಾ ನೋವುಗಳನ್ನು ಅವನೂ ಕಂಡಿದ್ದಾನೆ. ಕಷ್ಟಪಟ್ಟು ರಜೆಗಿಟ್ಟಿಸಿ ಅವನ ಮದುವೆಗೆ ಓಡಾಡಿದ್ದೇನೆ. ಹೊಸಜೀವನದ ಹೊಸ್ತಿಲಲಿ ನಿಂತವನಿಗೆ ತುಂಬುಹೃದಯದಿಂದ ಹಾರೈಸಿದ್ದೇನೆ. ರಜೆ ಮುಗಿಸಿ ಹಿಂದಿರುಗುವಾಗ ಇಡೀ ಕುಟುಂಬಕ್ಕೆ ಧೈರ್ಯ ತುಂಬಿ ಅವನನ್ನು ಕರೆತಂದಿದ್ದೇನೆ. ನೆನ್ನೆಯವರೆಗೂ ಹಸಿಯಾಗಿದ್ದ ಅವನ ಅರಿಶಿನದ ಮೈ ಒಮ್ಮೆಲೆ ಈ ಮರುಭೂವಿಯ ರಣಬಿಸಿಲಿಗೆ ಒಣಗಿ ಕಮರಿ ಹೋದದ್ದನ್ನು ಕಂಡಿದ್ದೇನೆ. ಅವನ ಚಡಪಡಿಕೆ, ಮನದ ಕಾಮನೆಗಳನ್ನು ಹಿಡಿದಿಡಲು ಪಡುತ್ತಿದ್ದ ಪರಿಪಾಟಿಲುಗಳನ್ನು ಗಮನಿಸಿದ್ದೇನೆ. ಕ್ರಮೇಣ ಎಲ್ಲವೂ ಸರಿಯಾಗುವ ಹೊತ್ತಿಗೆ, ಎತ್ತನೋಡಿದರೂ ಅಷ್ಟು ದೂರಕ್ಕೆ ಕಾಣುವ ಸಣ್ಣ ರವೆಯ ಗಾತ್ರದ ಮರಳು ತುಂಬಿದ ಭೂಮಿಯಲ್ಲಿ ಒಮ್ಮೆಲೆ ನೀರಿನ ಬುಗ್ಗೆಯೊಂದು ಊಟೆ ಹೊಡೆದು ಆಳೆತ್ತರ ಚಿಮ್ಮಿದಾಗ ಆಗುವ ಖುಷಿಯ ತದ್ರೂಪಿನ ಖುಷಿಯ ಮುಖ ಹೊತ್ತು ಬಂದವನು. ತಾನು ತಂದೆಯಾಗುತ್ತಿರುವ ವಿಷಯ ಹೇಳಿಕೊಂಡಿದ್ದ. ಸಂಭ್ರಮಿಸಿದ್ದೆವು ಅಂದು. ತಿಂಗಳುಗಳ ಬಳಿಕ ಅದೊಂದು ಶುಧ್ದ ಹುಣ್ಣಿಮೆಯ ದಿನ ಪೌರ್ಣಮಿಯಂತಹದ್ದೇ ರೂಪಿನ ಮಗಳು ಜನಿಸಿದ್ದಳು ಗೆಳೆಯನಿಗೆ. ಊರಿಗೆ ಹೋಗಲು ರಜೆಗಿಟ್ಟಿಸುವ ಪ್ರತಿ ಪ್ರಯತ್ನವೂ ವಿಫಲವಾಗಿ ಪೆಚ್ಚುಮೋರೆ ಹೊತ್ತು ಬರುವ ಹೊತ್ತಿಗೆ ಅಚಾನಕ್ ಯುಧ್ಧಘೋಷಣೆಯಾಗಿತ್ತು.

ಅದೊಂದು ಮುಂಜಾನೆಯ ಮೊದಲ ಜಾವಕ್ಕೆ ಯುದ್ಧಕ್ಕೆ ಹೊರಡಲು ಅಣಿಯಾಗುತ್ತಿದ್ದ ನಮ್ಮ ವಾಹನ ಏರಿ ಕುಳಿತಿದ್ದ ಎಲ್ಲರ ಕೆಚ್ಚೆದೆಯಲ್ಲೂ ಶತ್ರುರಾಷ್ಟ್ರವನ್ನು ಹುರಿದು ಮುಕ್ಕುವ ಆವೇಶ ತುಂಬಿದ್ದರೂ, ಮನೆ, ಮಡದಿ, ಮಕ್ಕಳ ನೆನಪು ಕೂಡಾ ಎದೆಯ ಮೂಲೆಯಲ್ಲಿ ಹೊತ್ತಿಸಿಟ್ಟ ಪುಟ್ಟ ಅಗ್ಗಿಷ್ಟಕೆಯಂತೆ ಸಣ್ಣಗೆ ಉರಿಯುತ್ತಲೇ ಇತ್ತು. ಮರಳುಗಾಡಿನ ಯುಧ್ಧ ಭೂಮಿಯಲ್ಲಿ ಅಡಗಿಕೊಳ್ಳಲು ಯಾವುದೇ ಸೂಕ್ತ ಪ್ರದೇಶ ಸಿಕ್ಕುವುದಿಲ್ಲ. ಎತ್ತ ನೋಡಿದರೂ ಬಟಾಬಯಲು, ಮರಳನ್ನು ಹೊತ್ತು ಜೋರಾಗಿ ಬೀಸುವ ಗಾಳಿ, ಅದಕ್ಕಿಂತಲೂ ವೇಗವಾಗಿ ಬಂದು ಎದೆಸೀಳಿಬಿಡಬಹುದಾದ ಶತ್ರುವಿನ ಗುಂಡು. ಕೇವಲ ದಿಕ್ಕುಗಳ ಆಧಾರದ ಮೇಲೆ ನಾವೆಲ್ಲಿದ್ದೇವೆ, ಹೇಗೆ ಸಾಗಬೇಕೆಂಬುದನ್ನು ಯೋಚಿಸಿ ಮುನ್ನಡೆಯುವ ಸವಾಲು. ಇಡೀ ರಕ್ತಸಂಬಂಧಗಳ ಕೊಂಡಿಯನ್ನೇ ಕಳಚಿಟ್ಟು ಯುಧ್ಧಭೂಮಿಗಿಳಿಯುವ ನಮಗೆ ಜೊತೆಗಾರ ಜೊತೆಯಲ್ಲಿ ಬರುತ್ತಿದ್ದಾನೋ ಇಲ್ಲವೋ ಎಂಬುದನ್ನು ಗಮನಿಸಲೂ ಸಮಯವಿರುವುದಿಲ್ಲ. ನಮ್ಮ ಗುರಿಯಂತೂ ಸ್ಪಷ್ಟ. ಅದೇ ಶತ್ರು ಸಂಹಾರ. ಅಲ್ಲೆಲ್ಲೋ ಒಂಟೆಗಳ ಮೇಲೆ ನಮ್ಮ ಸೈನಿಕರು ಬಂದು ಊಟ ಕೊಡುತ್ತಾರೆ. ಮತ್ತೂ ಕೆಲವೊಮ್ಮೆ ಶತ್ರಗಳೂ ಬರುತ್ತಾರೆ. ಗುಂಡಿನ ಮಳೆಗರೆದು ಹೋಗುತ್ತಾರೆ. ಬರೋಬ್ಬರಿ ಮೂರು ದಿನಗಳ ನಂತರ ಬಳಲಿದ ದೇಹ ಹೊತ್ತು, ಶತ್ರುಗಳನ್ನು ದಮನಿಸಿದ ವಿಜಯದ ಕಳೆಯಿಂದ ನಮ್ಮ ನಮ್ಮ ಜಾಗಗಳಿಗೆ ಮರಳಿದೆವು. ಕೆಲವರು ಹುತಾತ್ಮರಾಗಿದ್ದರು, ಕೆಲವರಿಗೆ ಪೆಟ್ಟುಗಳಾಗಿದ್ದವು, ಮತ್ತೆ ಕೆಲವರು ಕಾಣೆಯಾಗಿದ್ದರು. ಹೌದು, ಆ ಕಾಣೆಯಾದವರ ಪಟ್ಟಿಯಲ್ಲಿ ನನ್ನ ಜೀವದ ಗೆಳೆಯನಿದ್ದ. ಆಕಾಶವೇ ಕಳಚಿಬಿದ್ದಂತಾಯ್ತು. ಆದರೂ ಮಾಡುವುದೇನು? ಮೇಲಧಿಕಾರಿಗಳನ್ನು ವಿಚಾರಿಸುತ್ತಲೇ ಇದ್ದೆ. ದಿನಗಳು, ವಾರಗಳು, ತಿಂಗಳುಗಳು, ವರ್ಷಗಳು ಹೀಗೇ ಸಾಗುತ್ತಲೇ ಹೋದವು. ಇಲ್ಲ, ಗೆಳೆಯ ಮರಳಿ ಬರಲೇ ಇಲ್ಲ, ಶವ ಸಿಗದ ಹೊರತು ಸತ್ತಿದ್ದಾನೆ ಎಂದು ಸೈನ್ಯ ಅಧಿಕೃತವಾಗಿ ಘೋಷಿಸುವುದೂ ಇಲ್ಲ. ಬದುಕಿದ್ದಾನೆ, ಬಂದೇ ಬರುತ್ತಾನೆ ಎಂದು ಅದೆಷ್ಟೋ ಸಾವಿರ ಬಾರಿ ನನ್ನದೇ ಒಳಮನಸ್ಸು ನನ್ನನ್ನು ಸಂತೈಸಿದ್ದಿದೆ; ನಾನೂ ನಂಬಿದ್ದೇನೆ.

ಅವನು ಕಣ್ಮರೆಯಾಗಿ ಒಂದೆರಡು ತಿಂಗಳಲ್ಲಿ ಅವನ ಮನೆಯಿಂದ ಬರುವ ಪತ್ರಗಳ ಸಂಖ್ಯೆ ಹೆಚ್ಚಾಗತೊಡಗಿತು. ಇವನ ಕೊರಗಿನಿಂದ ತಾಯಿಯ ತೀರಾ ಹದಗೆಟ್ಟ ಆರೋಗ್ಯದ ಬಗ್ಗೆ ಕೇಳಿ ಆದ ನೋವಿನಲ್ಲಿ ನಾನು ಕೈಗೊಂಡ ಘೋರ ನಿರ್ಧಾರ ಅವನ ಹೆಸರಿನಲ್ಲಿ ಅವರುಗಳ ಪತ್ರಗಳಿಗೆ ಉತ್ತರಿಸಿದ್ದು. ರಜೆಯೇ ಇಲ್ಲವೆಂಬ ಸುಳ್ಳು ಹೇಳಿ ಕೆಲವು ವರ್ಷ ಕಳೆದೆ. ತೀರಾ ಸಂಕಟಕ್ಕಿಟ್ಟುಕೊಂಡಾಗ ಗೆಳೆಯನನ್ನು ಕಳಿಸುತ್ತೇನೆ ಎಂದು ಬರೆದು ಹಿಂದೆಯೇ ನಾನೇ ಹೋಗಿಬಂದೆ. ಅವನ ಹೆಸರಿನಲ್ಲಿ ಮನೆಯವರಿಗೆಲ್ಲಾ ಹೊಸಬಟ್ಟೆ ಕೊಡಿಸಿ, ಅವರೆಲ್ಲಾ ದೀಪಾವಳಿ ಆಚರಿಸಿ ಬೆಳಕು ಹಂಚುವಾಗ ನನ್ನೆದೆಯ ಕಡುಗತ್ತಲ ಕೋಣೆಯೊಳಗೆ ಮಾತ್ರ ಭೀಕರ ಯುಧ್ಧ. ಕರುಳು ಕಿವುಚಿತ್ತು ಕೊಂಡೊಯ್ದ ಸೀರೆಯನ್ನು ಕಣ್ಣಿಗೊತ್ತಿಕೊಂಡು ಉಟ್ಟಾಗ ಅವನ ಹೆಂಡತಿ. ಕಣ್ಣೀರಾದೆ ಕಣ್ಣು ಕಾಣದ ತಾಯಿ ಮಗ ಕಳಿಸಿದ ಕೌದಿಯ ಮಡಿಕೆಯನ್ನೂ ಬಿಚ್ಚದೆ ಎದೆಗವಚಿಕೊಂಡಾಗ. ದುಃಖ ಉಮ್ಮಳಿಸಿತ್ತು ತಾವೆಲ್ಲಾ ಇಲ್ಲಿ ಸುಖವಾಗಿದ್ದೇವೆ, ಚಿಂತಿಸಬೇಡ ಎಂದು ಮಗನಿಗೆ ಹೇಳು ಎಂದು ಕಿತ್ತು ಹೋದ ಚಪ್ಪಲಿಗೆ ಪಿನ್ನು ಚುಚ್ಚುತ್ತಾ ಅವನಪ್ಪ ಹೇಳಿದಾಗ.

ಎಂದಾದರೊಂದು ದಿನ ಬಂದೇ ಬರುತ್ತಾನೆ ಎಂಬ ನಿರೀಕ್ಷೆಯಲ್ಲೇ ಕಳೆದಯುತ್ತಿದ್ದವನ ಸಂಪೂರ್ಣ ಭರವಸೆ ಮಣ್ಣುಪಾಲಾಗಿದ್ದು ಇಂದ ಬೆಳಿಗ್ಗೆ ಸಿಕ್ಕಿದ ಸುದ್ದಿಯಿಂದ. ಹೌದು, ಜೀವದ ಗೆಳೆಯ ಅಂದಿನ ಯುಧ್ಧದಲ್ಲಿ ಯಾರಿಗೂ ಕಾಣದ ಜಾಗದಲ್ಲಿ ಶತ್ರುವಿನ ಗುಂಡಿಗೆ ಎದೆಯೊಡ್ಡಿದ್ದ. ಹನ್ನೊಂದು ವರ್ಷಗಳ ನಂತರ ಈಗ ಗೆಳೆಯನ ಶವ ಸಿಕ್ಕಿದೆ ಅರ್ಥಾತ್ ಅವನು ಅಧಿಕೃತವಾಗಿ ಸತ್ತಿದ್ದಾನೆ; ಜೊತೆಗೆ ನಾನೂ.

ಇಷ್ಟು ವರ್ಷ ಆ ಮುಗ್ಧ ಹೃದಯಗಳ ಜೊತೆ ನಾಟಕವಾಡಿದ್ದಕ್ಕೆ, ನಂಬಿಸಿದ್ದಕ್ಕೆ, ವಂಚಿಸಿದ್ದಕ್ಕೆ ನನಗೀ ಶಿಕ್ಷೆ. ಮತ್ತಾವ ದಾರಿಯೂ ಕಾಣುತ್ತಿಲ್ಲ. ಆ ತಾಯಿಯ ಪಾದಗಳಡಿಯಲ್ಲಿ ಬಿದ್ದು ಬೇಡಲೇ; ಕ್ಷಮಿಸಿಯಾಳೇ…? ಒಂಟಿ ಜೀವನವನ್ನು ವ್ರತದಂತೆ ಬದುಕಿದ ಅವನ ಹೆಂಡತಿಯ ಕಣ್ಣಿನಲ್ಲಿ ಕಣ್ಣಿಟ್ಟು ನೋಡಬಲ್ಲೆನೆ; ಆಕೆ ತಲೆ ಎತ್ತಿಯಾಳೇ…? ಇನ್ನು ಆ ಮಗಳ ಪ್ರಶ್ನೆಗಳನ್ನು ಎದುರಿಸಬಲ್ಲೆನೇ; ನನ್ನನ್ನು ಪ್ರಶ್ನಿಸಿಯಾಳೇ…? ಬೇಡವೇ ಬೇಡ. ನನ್ನ ನಿರ್ಧಾರವೇ ಸರಿ. ನಾನಿನ್ನು ಹೋರಡುತ್ತೇನೆ. ತಡಮಾಡುವಂತಿಲ್ಲ. ಅವನ ಶವದೊಟ್ಟಿಗೇ ನನ್ನದೂ ಊರು ತಲುಪಲಿ. ಹರಸಿಬಿಡಿ ಒಮ್ಮೆ.
ಶುಭವಿದಾಯ.

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 1 week ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 1 week ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  3 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...