Share

‘ಸ್ವರ’ ಭಾಸ್ಕರ್ ಮಿಂಚು!

ಸ್ತ್ರೀವಾದವೆಂದರೆ ಮೂಗು ಮುರಿಯುವವರೇ ಬಹಳಷ್ಟಿರುವ ಈ ಜಗತ್ತಿಗೆ, ಹಾಗೆಂದರೆ ಸಂಕುಚಿತ ಅರ್ಥದಲ್ಲಿ ನೋಡಬೇಕಿಲ್ಲ ಎಂದು ತಿರುಗೇಟು ಕೊಟ್ಟ ದಿಟ್ಟೆ ಸ್ವರ ಭಾಸ್ಕರ್.

ಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುವ ಚಿತ್ರರಂಗದ ಚೆಲುವೆಯರ ನಡುವೆ, ಮಹಿಳೆಯರು ಎದುರಿಸುವ ಸವಾಲು, ಸಂಕಟಗಳ ಬಗ್ಗೆ ಅಥವಾ ಮಹಿಳೆಯರಿಗೆ ಅನ್ಯಾಯವಾಗುತ್ತಿರುವ ಯಾವುದೇ ಸಂದರ್ಭ, ವಿಚಾರದ ಬಗ್ಗೆ ಧ್ವನಿಯೆತ್ತುವ ಕೆಲವೇ ಕೆಲವರಲ್ಲಿ ಸ್ವರ ಭಾಸ್ಕರ್ ಕೂಡ ಒಬ್ಬರು. ಸ್ವರ ಭಾಸ್ಕರ್ ಫೆಮಿನಿಸಂ ವಿಚಾರದಲ್ಲಿ ಮತ್ತೆ ಮತ್ತೆ ಮಾತನಾಡುತ್ತಲೇ ಬಂದವರು. ತೆಲುಗು ನಾಡಿನ ಸ್ವರ, ಓದಿದ್ದು ದೆಹಲಿಯಲ್ಲಿ. ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಬಳಿಕ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದದ್ದು ಜೆಎನ್‍ಯೂನಿಂದ. ಸೋಮವಾರ (ಏ.9) ಇವರಿಗೆ ಮೂವತ್ತು ತುಂಬಿತು.

ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿಯಿದ್ದ ಸ್ವರ, ಬಾಲಿವುಡ್‍ಗೆ ಕಾಲಿಟ್ಟಿದ್ದು ‘ಮಾಧೋಲಾಲ್ ಕೀಪ್ ವಾಕಿಂಗ್’ ಚಿತ್ರದ ಮೂಲಕ. ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ಅಭಿನಯದ ‘ಗುಜಾರಿಶ್’ ಚಿತ್ರದಲ್ಲೂ ಕಾಣಿಸಿಕೊಂಡಿದ್ದ ಈ ಪ್ರತಿಭಾವಂತೆ ಮಿಂಚಿದ್ದು ‘ತನು ವೆಡ್ಸ್ ಮನು’ ಚಿತ್ರದಲ್ಲಿ ಕಂಗನಾ ರನೌತ್‍ ಗೆಳತಿಯ ಪಾತ್ರದಲ್ಲಿ. ಅನಾರ್ಕಲಿ ಆಫ್ ಅರ್ಹಾ ಆಕೆಯ ಮುಖ್ಯ ಚಿತ್ರಗಳಲ್ಲಿ ಒಂದು. ಆರ್ಕೆಸ್ಟ್ರಾ ಒಂದರಲ್ಲಿ ಡಾನ್ಸರ್ ಆಗಿದ್ದವಳು, ಹೇಗೆ ಬೇಕಾದರೂ ಬಳಸಿಕೊಳ್ಳಲು ತಕ್ಕವಳು ಎಂದು ತನ್ನ ಕುರಿತು ಸಮಾಜ ಯೋಚಿಸುವುದರ ವಿರುದ್ಧ ನಿಲ್ಲುವ ಕಥೆಯಿದ್ದ ಚಿತ್ರ ಅದು.

ಎಲ್ಲರ ಮನಸ್ಸಿನಲ್ಲೂ ನಿಲ್ಲಬಲ್ಲ ಪಾತ್ರಗಳಿಗಾಗಿ ಕಾಯುವ, ಹೆಣ್ಣಿನ ಸ್ಥಾನ ಇವತ್ತಿನ ಸಮಾಜದಲ್ಲಿ ಎಂಥದು ಎಂಬುದನ್ನು ಬಿಂಬಿಸಬಲ್ಲ ಪಾತ್ರಗಳಿಗೆ ಜೀವ ತುಂಬುವ ಸ್ವರ, ಯಾವುದೇ ವಿಚಾರದಲ್ಲಿ ತಮ್ಮ ನಿಲುವನ್ನು ನಿಚ್ಚಳವಾಗಿ ಹೇಳುವ ದಿಟ್ಟೆ. ಸಮಾಜದ ಎಲ್ಲದಕ್ಕೂ ಬಾಯ್ಮುಚ್ಚಿಕೊಂಡಿರಬೇಕೆಂಬ ಉದ್ಯಮ ಕಟ್ಟುಗಳಲ್ಲಿ ಸೆರೆಯಾಗದ ಕೆಲವೇ ನಟಿಯರ ಸಾಲಲ್ಲಿ ನಿಲ್ಲುತ್ತಾರೆ ಸ್ವರ. ಸಂಜಯ್ ಲೀಲಾ ಬನ್ಸಾಲಿಯ ‘ಪದ್ಮಾವತ್’ ಚಿತ್ರದ ಕಲಾತ್ಮಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದಾಗ, ನಾಯಕಿಯ ಪಾತ್ರದ ವೈಭವೀಕರಣದ ಬಗ್ಗೆ, ಸತಿ ಪದ್ಧತಿಯನ್ನು ಉತ್ತೇಜಿಸುವ ಥರದ ನಿರೂಪಣೆ ಬಗ್ಗೆ ತನಗನ್ನಿಸಿದ್ದನ್ನು ಮರೆಮಾಚದೆ ಹೇಳಿ ವಿರೋಧ ಎದುರಿಸಿದ್ದ ನಟಿಯೀಕೆ.

ಕೆಲವರಿಂದ ಫೇಕ್ ಸ್ತ್ರೀವಾದಿ ಎಂದೂ ಟೀಕೆಗೊಳಗಾಗಿ, ಅಂಥವರಿಗೂ ದಿಟ್ಟ ಉತ್ತರ ನೀಡಿ ಗೆದ್ದವರು ಸ್ವರ ಭಾಸ್ಕರ್. ಸ್ತ್ರೀವಾದವೆಂದರೆ ಮೂಗು ಮುರಿಯುವವರೇ ಬಹಳಷ್ಟಿರುವ ಈ ಜಗತ್ತಿಗೆ, ಹಾಗೆಂದರೆ ಸಂಕುಚಿತ ಅರ್ಥದಲ್ಲಿ ನೋಡಬೇಕಿಲ್ಲ ಎಂದು ತಿಳಿಹೇಳುವ ಪ್ರಯತ್ನ ಸ್ತ್ರೀವಾದ ಕುರಿತಂತೆ ಸ್ವರ ಹೇಳಿರುವ ಇಲ್ಲಿನ ಕೆಲವು ಮಾತುಗಳಲ್ಲಿದೆ:

“ಸ್ತ್ರೀವಾದ ಎಂದರೆ ಮಹಿಳೆಗೆ ವಿಶೇಷವಾದುದನ್ನು ಅಥವಾ ಇನ್ನಷ್ಟು ಹಕ್ಕುಗಳನ್ನು ಕೇಳುವುದರ ಕುರಿತದ್ದಲ್ಲ.”

“ಸ್ತ್ರೀವಾವೆಂಬುದು ಕಟ್ಟುಕಟ್ಟಳೆಗಳನ್ನು ವಿಧಿಸುವ ಧರ್ಮವಲ್ಲ. ಇಂಥದೇ ನಿಯಮಗಳೆಂಬುದು ಇದರಲ್ಲಿಲ್ಲ.”

“ಸ್ತ್ರೀವಾದವೆಂದರೆ ಪುರುಷನನ್ನು ಅಶಕ್ತಗೊಳಿಸುವುದಾಗಲೀ ಅಥವಾ ಜಗತ್ತನ್ನು ಸ್ವಾಧೀನಪಡಿಸಿಕೊಳ್ಳುವುದರ ಕುರಿತದ್ದಾಗಲೀ ಅಲ್ಲ.”

“ಸ್ತ್ರೀವಾದವೆಂಬುದು ಬಸ್ಸುಗಳಲ್ಲಿ, ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಸೀಟುಗಳನ್ನು ಮೀಸಲಿಡುವುದಕ್ಕೆ ಮಾತ್ರವೇ ಸೀಮಿತವಾದದ್ದಲ್ಲ.”

“ಸ್ತ್ರೀವಾದವೆಂದರೆ ಬ್ರಾಗಳನ್ನು ಸುಡುವುದಾಗಲೀ ಅಥವಾ ಹಾಗೆ ಸುಡಲ್ಪಟ್ಟ ಇನ್ನಾವುದರ ಕುರಿತದ್ದಾಗಲೀ ಅಲ್ಲ.”

“ಸ್ತ್ರೀವಾದವೆಂದರೆ ಆಯ್ಕೆಯನ್ನು ಕುರಿತದ್ದಾಗಲೀ ಅಥವಾ ದೇಹದ ರೋಮವನ್ನು ತೆಗೆಯುವುದರ ಕುರಿತದ್ದಾಗಲೀ ಅಲ್ಲ.”

“ಸ್ತ್ರೀವಾದವೆಂಬುದು ಗಂಡಸನ್ನು ಸುಳ್ಳು ವರದಕ್ಷಿಣೆ ಪ್ರಕರಣ ಅಥವಾ ಸುಳ್ಳು ಅತ್ಯಾಚಾರ ಪ್ರಕರಣಗಳಲ್ಲಿ ಸಿಲುಕಿಸುವ ಸಂಚಲ್ಲ.”

Share

Leave a comment

Your email address will not be published. Required fields are marked *

Recent Posts More

  • 5 days ago No comment

    ಕಾದಂಬಿನಿ ಕವಿತೆಗಳ ಇನ್ನೊಂದು ಕಟ್ಟು: ಫಸ್ಟ್ ಲುಕ್

    ಹೊಸ ಪುಸ್ತಕ       ಕಾದಂಬಿನಿ ಅವರ ಎರಡನೇ ಕಾವ್ಯ ಸಂಕಲನ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಪ್ರಕಟಗೊಂಡಿದೆ. 100 ಕವಿತೆಗಳಿವೆ ಈ ಸಂಕಲನದಲ್ಲಿ. ಸಂಕಲನಕ್ಕೆ ವಿಮರ್ಶಕ, ರಂಗಕರ್ಮಿ ವಸಂತ ಬನ್ನಾಡಿ ಅವರ ಮುನ್ನುಡಿ, ಕವಿ ಹೆಚ್ ಎಸ್ ಶಿವಪ್ರಕಾಶ್ ಅವರ ಬೆನ್ನುಡಿ ಇದೆ. “ಜನಸಾಮಾನ್ಯರ ಸಂಕಟಗಳಿಗೆ ಮಾತು ಕೊಡಬೇಕು ಎಂಬುದು ಕಾದಂಬಿನಿ ಕಾವ್ಯದ ಕೇಂದ್ರಪ್ರಜ್ಞೆ. ಸಾಮಾಜಿಕ ಹಾಗೂ ರಾಜಕೀಯ ವಿಷಯಗಳನ್ನು ಮುಟ್ಟಿದರೆ ಮನಸ್ಸು ಕೊಳಕಾಗುವುದೆಂಬ ಮನೋಭಾವ ...

  • 1 week ago No comment

    ಕಾಲದ ಬೆವರಿನ ಬಡಿತಗಳು

    ಕವಿಸಾಲು   ಹುಲ್ಲಿನೆಳೆಗಳಲಿ ಬಿದಿರ ಕೊಂಬಿಗೆ ಆತುಗೊಂಡ ಜೋಪಡಿಯೊಳಗ ಚುಕ್ಕಿಗಳ ದಿಂಬಾಗಿಸಿದ ಹೊಂಗೆಯ ನೆರಳಿನ ಗುರುತುಗಳು ಸಗಣಿಯಿಂದ ಸಾರಿಸಿದ ಪಡಸಾಲಿ ಮದುವಣಗಿತ್ತಿಯಂತೆ ವಳ್ಳು ಬೀಸುಕಲ್ಲುಗಳ ಹೊಕ್ಕಳಲಿ ದಕ್ಕಿಸಿಕೊಂಡ ಅವಳು ನಡುಮನೆಯ ಮೈದಾನದಾಗ ನಡುಗಂಬದ ನೆಲೆ ಬಿರುಕ ಕಿಂಡಿಗಳಲಿ ಮುರಿದ ಟೊಂಗೆಗಳೆಲ್ಲಾ ಬೆಸೆದು ಗುಡಿಸಲ ಕಣ್ಣಾಗಿ ಚಂದಿರನ ಜೋಗುಳ ಕಟ್ಯಾವು ಗಾಯದ ಬೆನ್ನು ನಿದ್ರಿಸಲು ಮಳೆಯ ರಭಸದಲಿ ಕೆರೆಯಂತಾಗುವ ಜೋಪಡಿಯೊಳಗ ಎಳೆಯ ರೆಕ್ಕೆಗಳನು ಪಕ್ಕೆಲುಬಲಿ ಅವಿತುಕೊಂಡು ಬೆಚ್ಚನೆಯ ಭರವಸೆ ತುಂಬ್ಯಾಳೊ ...

  • 1 week ago No comment

    ಕಾಲ ಮತ್ತು ನಾನು

          ಕವಿಸಾಲು       ಅಂತರಂಗದ ಅನಿಸಿಕೆಗಳ ಅದ್ಭುತ ರಮ್ಯ ಕನಸುಗಳ ಜತನವಾಗಿಟ್ಟುಕೊಂಡ ರಹಸ್ಯಗಳ ದುಂಡಗೆ ಬರೆದು ದಾಖಲಿಸಿ ಸಾವಿರ ಮಡಿಕೆಗಳಲಿ ಒಪ್ಪವಾಗಿ ಮಡಚಿ ಮೃದು ತುಟಿಗಳಲಿ ಮುತ್ತಿಟ್ಟು ಬೆವರ ಕೈಗಳಲಿ ಬಚ್ಚಿಟ್ಟು ಯಾರೂ ಕಾಣದಾಗ ಕದ್ದು ಹಿತ್ತಲಿನ ತೋಟಕ್ಕೆ ಒಯ್ದು ನನ್ನ ನಾಲ್ಕರಷ್ಟೆತ್ತರದ ಮರ ದಟ್ಟಕ್ಕೆ ಹರಡಿದ ಎಲೆಗಳ ನಡುವೆ ಟೊಂಗೆಗಳ ಸೀಳಿನಲಿ ಮುಚ್ಚಿಟ್ಟೆ ಅಲ್ಲಿಂದ ಮುಂದೆ ಮರ ಮರವಾಗಿ ಉಳಿಯಲಿಲ್ಲ ರಹಸ್ಯಗಳನ್ನೆಲ್ಲ ...

  • 1 week ago No comment

    ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

    ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...

  • 2 months ago No comment

    ಪಂಡಿತರ ಹಳ್ಳಿಯ ‘ಮಂದರಗಿರಿ’

                  ಇದು ಪ್ರವಾಸಿಗಳ ಯುಗ. ಹೊಸ ತಲೆಮಾರಿನ ಜನರಿಗೀಗ ಮನೆಯಲ್ಲಿ ಕೂರುವುದೆಂದರೆ ಬಹಳ ಬೇಜಾರಿನ ಸಂಗತಿ. ಆಗೀಗಲಾದರೂ ದೊಡ್ಡ ಅಥವಾ ಸಣ್ಣ ಪ್ರವಾಸಗಳಿಗೆ ಹೋದರೆ ಮನಸ್ಸಿಗೂ ಸುಖ ಎನ್ನುವ ತಲೆಮಾರಿನವರು ಈಗ ಹೆಚ್ಚು ಕಾಣಸಿಗುತ್ತಾರೆ. ಹೆಸರುವಾಸಿ ತಾಣಗಳಲ್ಲಿ ಸದಾ ಜನಜಂಗುಳಿಯಿರುತ್ತದೆ. ದೂರದ ಊರುಗಳೆಂದರೆ ಅದಕ್ಕೆ ತಯಾರಿ ಬೇಕು. ಹಲವು ದಿನಗಳ ಸಿದ್ಧತೆ, ಪ್ರಯಾಣ, ವಿಪರೀತ ಖರ್ಚು ಎಲ್ಲವೂ ಹೌದು. ವಯಸ್ಸಾದವರಿಗೆ ...


Editor's Wall

  • 12 March 2019
    1 week ago No comment

    ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

    ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...

  • 08 December 2018
    3 months ago No comment

    170ಕ್ಕೂ ಹೆಚ್ಚು ಭತ್ತದ ತಳಿಗಳ ಜೋಪಾನ ಮಾಡಿದ್ದ ಜಯರಾಮನ್

    ಬೀಜಗಳ ಸಂರಕ್ಷಣೆ, ತಮಿಳ್ನಾಡಿನಾದ್ಯಂತ ಕೃಷಿಯಲ್ಲಿ ಸ್ಥಳೀಯ ಶೈಲಿಯ ಅಳವಡಿಕೆ ಮತ್ತು ಬೀಜ ಪ್ರಭೇದಗಳನ್ನು ಉತ್ತೇಜಿಸುವ ಕೆಲಸದಲ್ಲಿ ಜಯರಾಮನ್ ತೊಡಗಿಸಿಕೊಡಿದ್ದರು.   ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿದ್ದ, ನೂರಾರು ಭತ್ತದ ತಳಿಗಳ ಪುನಶ್ಚೇತನಕ್ಕೆ ಕಾರಣರಾಗಿದ್ದ ತಮಿಳ್ನಾಡಿನ ಕೆ ಆರ್ ಜಯರಾಮನ್ ನಿಧನರಾಗಿದ್ದಾರೆ. ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. ನೆಲ್ (ಭತ್ತವನ್ನು ತಮಿಳಿನಲ್ಲಿ ಹೀಗೇ ಕರೆಯುತ್ತಾರೆ) ಎಂದೇ ಹೆಚ್ಚು ಪರಿಚಿತರಾಗಿದ್ದ ಜಯರಾಮನ್, 170 ಕ್ಕಿಂತಲೂ ಹೆಚ್ಚು ಸ್ಥಳೀಯ ಭತ್ತದ ವೈವಿಧ್ಯಗಳನ್ನು ಪುನಶ್ಚೇತನಗೊಳಿಸಿದ್ದುರ. ...

  • 30 November 2018
    4 months ago No comment

    ರಕ್ಕಸ ವ್ಯೂಹದಲ್ಲಿ ಹೆಣ್ಣಿನ ಹೋರಾಟ

    ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ.    2017ರಲ್ಲಿ ಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ. ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ ನ.25ರಂದು ಬಿಡುಗಡೆ ಮಾಡಿರುವ ಅಧ್ಯಯನ ವರದಿ. ನವೆಂಬರ್ 25, ...

  • 29 November 2018
    4 months ago No comment

    ರೈತರ ಸಂಕಟಗಳಿಗೆ ಸಿಗುವುದೆ ಮುಕ್ತಿ?

      ಕಳೆದ ವರ್ಷದ ನಾಸಿಕ್-ಮುಂಬಯಿ ಕಿಸಾನ್ ಲಾಂಗ್ ಮಾರ್ಚ್ ಅನ್ನೇ ಪ್ರೇರಣೆಯಾಗಿಟ್ಟುಕೊಂಡು ‘ಸಿಂಗೂರು- ರಾಜಭವನ್ ಕಿಸಾನ್ ಮುಕ್ತಿಮಾರ್ಚ್’ ಆಯೋಜಿಸಲಾಗಿದೆ. ಅಖಿಲಭಾರತ ಕಿಸಾನ್ ಸಭಾದ ಜನರಲ್ ಸೆಕ್ರೆಟರಿ ಹನ್ನಾನ್ ಮೊಲ್ಲಾ ಅವರು ‘ಅಧಿಕಾರಕ್ಕೆ ಬರಬೇಕೆನ್ನುವ ರಾಜಕೀಯ ಪಕ್ಷಗಳು ರೈತರ ಸಂಕಟಗಳಿಗೆ ಜೊತೆಯಾಗುವ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.     ಕಳೆದ ಇಪ್ಪತ್ತು ವರ್ಷಗಳಲ್ಲಿ 3 ಲಕ್ಷ ರೈತರ ಆತ್ಮಹತ್ಯೆಗಳಾಗಿವೆ ಎನ್ನುವುದು ಭಾರತದ ರೈತರ ಸಂಕಟಗಳ ತೀವ್ರತೆಯನ್ನು ತೋರಿಸುತ್ತದೆ. ನರೇಂದ್ರ ...

  • 09 November 2018
    4 months ago No comment

    ಹೊಸ ಕಾಲದ ಹರಕೆಯ ಕುರಿಗಳು!

      ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...