Share

ತಮಿಳು ‘ಪುಲಿಕೇಶಿ’!
ಈಶ್ವರ ದೈತೋಟ ಕಾಲಂ

IMG-20160412-WA0006

ರ್ನಾಟಕದೊಳಗೆಯೇ ಕನ್ನಡ ಮಾತನಾಡಲು ಅಂಜಿಕೆ ನಮ್ಮಲ್ಲಿದೆ. ಹತ್ತು ಸಮಸ್ತರಿದ್ದಾಗ ಕನ್ನಡ ಶಬ್ದ ಹೊರಬಿದ್ದರೆ, ಡಿಗ್ನಿಟಿ ಇಳಿದುಬಿಟ್ಟೀತೆಂಬ ಚಿಂತನೆ ನಮ್ಮದಾಗುತ್ತಿದೆ. ತಾಯ್ನುಡಿಯನ್ನು ಅತಳ, ವಿತಳ, ಸುತಳ, ಪಾತಾಳ ಎಂದುಯಾವ ಲೋಕದಲ್ಲಿಯೂ ಹೇಗೆ ಮಾತನಾಡಬೇಕೆಂದು ವೀರಪಾಂಡ್ಯನ್‍ಕಟ್ಟ ಬೊಮ್ಮನ್ನರಿಂದ ಕಲಿಯಬೇಕೆಂದು 1994 ರಲ್ಲಿ ನಾನು ಕಂಡುಕೊಂಡೆನು.

ಅಂತಹ ತಾಜಾ ನಿದರ್ಶನ ಸಿಕ್ಕಿದ್ದು ನಾವೊಂದಷ್ಟು ಪತ್ರಕರ್ತರು ಕಾರ್ಯಾರ್ಥ ಅಹ್ಮದಾಬಾದಿಗೆ ಹೋಗಿದ್ದಾಗ. ಬೆಂಗಳೂರಿನಲ್ಲಿ ನಾವೇರಿದ ವಿಮಾನದಲ್ಲಿ ಜೊತೆಯಾದ, ಸ್ವಂತ ಭಾಷೆ ಬಿಟ್ಟು ಬೇರೊಂದು ನಾಲಿಗೆ ಉಂಟೆಂದೂ ನಂಬದ ತಮಿಳುನಾಡಿನ ಸ್ನೇಹಿತರೊಬ್ಬರು ಮೊಳೆ ಹೊಡೆದಂತೆ ಅದನ್ನು ಛಾಪಿಸಿದರು.

ಬೆಲ್ ಮಾಡಿದರೆ ಮೂಗುದ್ದ ಮಾಡುವ ಗಗನಸಖಿಯರನ್ನು ಪದೇ ಪದೇ ಕರೆದು ತಮಿಳಿನಲ್ಲಿಯೇ ಆದೇಶ ನೀಡಿ, ಬೇಕಾದ ಸೇವೆ ಪಡೆದ ಈ ಕಟ್ಟ ಬೊಮ್ಮನ್‍ರನ್ನು ಮೊದಲ ನೋಟಕ್ಕೇ ಮೆಚ್ಚದಿರಲಾಗಲಿಲ್ಲ, ಬೆಚ್ಚದಿರಲಾಗಲಿಲ್ಲ. ಗುಜರಾತಿನಲ್ಲಿದ್ದಷ್ಟೂ ದಿನ ಅವರ ನಾಲಿಗೆಯಿಂದ ಹೊರಬಂದದ್ದು ತಮಿಳು ಮಾತ್ರ.

ನಾವೇರಿದ ಪ್ರವಾಸಿ ಬಸ್ಸಿನ ಚಾಲಕನ ಸನಿಹದಲ್ಲಿಯೇ ಕೂತು, ಸ್ವಯಂ ಮಾರ್ಗದರ್ಶಿಯಾಗಿ ತಮಿಳಿನಲ್ಲಿಯೇ ಆದೇಶ-ವಿಚಾರಣೆಗಳನ್ನು ನಡೆಸುವಂತಹ ಆತನ ಆತ್ಮವಿಶ್ವಾಸ- ನೈಪುಣ್ಯತೆ ಮೆಚ್ಚಲೇ ಬೇಕು. ನೀವಿಲ್ಲಿದ್ದರೆ ಇವರಿಗೆಲ್ಲಾ ಗುಜರಾಥಿ- ಹಿಂದಿ ಮರೆತೇ ಹೋದೀತೆಂದು ಕಿಲಾಡಿ ಸ್ಥಳೀಯ ಗೈಡ್ ಬೆಚ್ಚಿಬಿದ್ದು ಹೇಳಿಬಿಟ್ಟ. ಟೂರಿಸ್ಟ್ ಎಟ್ರಾಕ್ಷನ್ ವಿಲೇಜ್‍ ರೆಸ್ಟಾರೆಂಟ್ನಲ್ಲಿ ಸಾಂಪ್ರದಾಯಿಕ ವೇಷಭೂಷಣದ ಮಾಣಿಗಳಿಗೆ ಊಟ ಬಡಿಸುವುದು ಹೇಗೆಂದು ತಮಿಳಿನಲ್ಲಿ ಹೇಳಹೊರಟಾಗ ಸೆಕ್ಯೂರಿಟಿಯವರು ಬರುವಷ್ಟು ಗಲಿಬಿಲಿ ವಾತಾವರಣವೇ ಸೃಷ್ಟಿಯಾಗಿತ್ತು.

ವಿದೇಶಗಳಿಂದಲೂ ವಿದ್ಯಾರ್ಥಿಗಳನ್ನಾಕರ್ಷಿಸುವ ಮೇನೇಜ್‍ಮೆಂಟ್‍ ಇನ್ಸ್‍ಟಿಟ್ಯೂಟಿನ ಸರ್ದಾರ್ಜಿ ವಿದ್ಯಾರ್ಥಿಯೊಬ್ಬನಿಗೆ “ಪೊಂಬಳೆ’ ಎಂದರೆ ಲಡ್ಕಿ, ಸಾಪಾಡ್‍ ಎಂದರೆ ಖಾನಾ, ಮೀಸೈ ಎಂದರೆ ಮೀಸೈ, ಎಂಗೆ ಎಂದರ್ ವೇರ್‍ ಎಂದು ಪಾಠವನ್ನೇ ಮಾಡಿದಾಗ ನಾವು ಕಂಗಾಲಾದೆವು. ಅಹ್ಮದಾಬಾದಿನ ಬೀದಿಬದಿಯ ಗಿರಿಜನ ಹೆಮ್ಮಕ್ಕಳೊಂದಿಗೆ ಮಣಿ ಮತ್ತು ಗಾಜಿನ ಗಾಗ್ರಾ-ಚೋಲಿಗಳ ಚೌಕಾಸಿ, ರತನ್‍ಪೂರ್‍ನ ಪಟೇಲರುಗಳಂಗಡಿಯಲ್ಲಿ ಪ್ಯಾಂಟ್-ಶರ್ಟ್ ಕೊಳ್ಳಾಟ, ದಾಲ್ಗಡ್‍ವಾಲಿನಲ್ಲಿಕಸೂತಿ ಸೀರೆ, ಸೆಲ್ವಾರ್‍ ಕಮೀಜ್ ವ್ಯಾಪಾರ ಎಂದು ಈ ತಮಿಳುವೀರ ಕೊಂಡುತಂದ ವಸ್ತುಗಳ ಬೆಲೆ ನಮ್ಮೆಲ್ಲರಿಗಿಂತಲೂ ಸ್ವಲ್ಪ ಕಮ್ಮಿಯೇ ಆಗಿತ್ತು. ತಮಿಳನ್ನು ಮೂರುಲೋಕಕ್ಕೆ ಪಸರಿಸುವ ಸಾಮರ್ಥ್ಯವಿದ್ದ ಈ ಮಿತ್ರನಿಗೆ ತಮಿಳು ದೊರೈ ಎಂದು ಬಿರುದಂತೂ ಕೊಡುವುದು ಅಸಾಧ್ಯವಾಗಿತ್ತು. ಏಕೆಂದರೆ, ಅವರಿಗೆ ಅಪ್ಪ-ಅಮ್ಮ ಇಟ್ಟ ಹೆಸರೇ ಅದಾಗಿತ್ತು.

*

k1ನನಗೆ ಕನ್ನಡಾಭಿಮಾನವನ್ನು ಮೂಲತಃ ನಾಟಿಸಿದವರು ಅಂಕಣಕಾರ, ಸಾಹಿತಿ ಎಚ್ಚೆಸ್ಕೆ ಅವರು. 1978 ರಲ್ಲಿಅವರು ಹೈದಾರಾಬಾದಿನಲ್ಲಿ ದೂರದರ್ಶನಕ್ಕಾಗಿ ನಡೆಸಿಕೊಟ್ಟ ಆಕಾಶ ಭಾರತಿ ಆಯೋಗದ ವರದಿ ಚರ್ಚೆಯಲ್ಲಿ ನಾನೂ ಜೊತೆಗಿದ್ದೆ. ಆ ದಿನ ಹೈದರಾಬಾದಿನಲ್ಲಿ ದೊಂಬಿ, ಗಲಭೆಗಳಾಗಿ ಕರ್ಫ್ಯೂ ಲಗಾವಾಗಿತ್ತು. ಊಟ, ತಿಂಡಿ ಏನೂ ಸಿಗದೆ ಪರದಾಡಿಕೊಂಡು ಹಸಿದ ಹೊಟ್ಟೆಯಲ್ಲಿ ರಾತ್ರೆ ರೈಲಿಗೆ ಸ್ಟೇಶನ್‍ ತಲುಪಿದೆವು.

ಅಲ್ಲಿ  ತಳ್ಳುಗಾಡಿ ಚಾಕಾಫಿ ಕ್ಯಾಂಟೀನ್‍ಕಂಡಿತು. ಎಚ್ಚೆಸ್ಕೆ ನನ್ನ ಕೈಹಿಡಿದೆಳೆದು ಕರೆದೊಯ್ದು ‘ಬೇಗನೇ ಎರಡು ವಡೆ, ಎರಡು ಟೀ ಕೊಡು’ ಎಂದು ಆರ್ಡರ್ ಮಾಡಿ, ನಾವಿಬ್ಬರೂ ಅವನ್ನು ಸವಿದು ರೈಲಿಗೇರುತ್ತಿದ್ದಂತೆ ಪ್ರಶ್ನಿಸಿದೆ. ‘ಚಾದಂಗಡಿಯವನು ಕನ್ನಡದವನೆಂದು ನಿಮಗೆ ಹೇಗೆ ಗೊತ್ತಾಯ್ತು ಸಾರ್?’

‘ನನ್ನದು ಕನ್ನಡ ಭಾಷೆ. ನನ್ನ ಜೇಬಿನ ಕಾಸು ಅವನಿಗೆ ಬೇಕಾದ್ರೆ ಅವ್ನು ಅರ್ಥ ಮಾಡ್ಕೋತಾನೆ, ಅವ್ನ ಭಾಷೆ ಕಟ್ಕೊಂಡು ನಾವೇನು ಮಾಡ್ಬೇಕು’ ಎಂದು ನಕ್ಕರು. ಎಲ್ಲಿ ಬೇಕಾದರೂ ಕನ್ನಡ ಮಾತಾಡಬಹುದೆಂಬ ಜೀವನದ ಘನ ಪಾಠವನ್ನು ಅವರು ನನ್ನ ಮಂಡೆಗೆ ಹೊಡೆದಂತೆ ಹೇಳಿಕೊಟ್ಟರು.

ಹೋದ ಶತಮಾನದಲ್ಲಿ ಮೋಸ್ಕೋದ ಪ್ರಗತಿ ಪ್ರಕಾಶನ ಕನ್ನಡ ಪುಸ್ತಕ, ನಿಯತಕಾಲಿಕಗಳನ್ನು ಪ್ರಕಟಿಸುತ್ತಿತ್ತು. (ಮೋಸ್ಕೋ ರೇಡಿಯೋದಲ್ಲಿ ಕನ್ನಡ ಬಾನುಲಿಯಿತ್ತು.) ಅದರ ಸಂಪಾದಕರಾಗಿದ್ದ ಎಂ ಎ ದಷ್ಕೋ ಕನ್ನಡದಲ್ಲಿ ಪಂಡಿತರು- ಹಲವಾರು ಕನ್ನಡ ಪುಸ್ತಕಗಳನ್ನು ಬರೆದಿದ್ದರು, ಬಸವಣ್ಣನವರ ವಚನಗಳನ್ನೂ ರಶಿಯನ್ ಭಾಷೆಗೆ ಅನುವಾದಿಸಿದ್ದರು. ಅವರದು ವ್ಯಾಕರಣ ಬದ್ಧ ಆಕರ್ಷಕ ಶೈಲಿ-ತಪ್ಪಿಲ್ಲದ ಬರವಣಿಗೆ. 80ರ ದಶಕದಲ್ಲಿ ಅವರು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದಾಗ ಕನ್ನಡ ಬೋರ್ಡ್‍ಗಳಲ್ಲಿನ ಅಕ್ಷರ ತಪ್ಪುಗಳು, ಅನರ್ಥ ಪದಗಳನ್ನೆಲ್ಲಾ ಪಟ್ಟಿ ಮಾಡಿಕೊಟ್ಟಿದ್ದರಂತೆ.

1994 ರಲ್ಲಿರಬೇಕು. ಕುಲಪತಿಯಾಗಿದ್ದ ಡಾ. ಎಚ್ ನರಸಿಂಹಯ್ಯನವರು ‘ಅಯ್ಯೋ ಅಭಿಮಾನ ಶೂನ್ಯ ಬೆಂಗಳೂರೇ’ ಎಂಬ ಲೇಖನವೊಂದನ್ನು ಪ್ರಕಟಿಸಿದ್ದರು. ಅದರಲ್ಲೊಂದು ಪ್ಯಾರಾ ಹೀಗಿತ್ತು. “ನಾನು ಪ್ರತಿನಿತ್ಯ ಬೆಳಿಗ್ಗೆ ಲಾಲ್‍ಬಾಗಿಗೆ 30 ವರ್ಷಗಳಿಂದ ಹೋಗುತ್ತಿದ್ದೇನೆ. ಕೆಲವು ಪ್ರತಿಷ್ಠಿತ ವರ್ಗದವರು ನಾಯಿಗಳನ್ನು ಹಿಡಿದುಕೊಂಡು ಬರುತ್ತಾರೆ. ಇವರಿಗೆಲ್ಲಾ ಇಂಗ್ಲೀಷ್ ಮೇಲೆ ಎಷ್ಟು ಅಭಿಮಾನವೆಂದರೆ ನಾಯಿಗಳ ಜೊತೆಯಲ್ಲಿಯೂ ಇಂಗ್ಲೀಷ್ ಮೀಡಿಯಂನಲ್ಲೇ ಮಾತನಾಡುತ್ತಾರೆ. ಇಲ್ಲಿಯತನಕ ಒಂದೂ ಕನ್ನಡ ಮೀಡಿಯಂ ನಾಯಿ ಸಿಕ್ಕೇ ಇಲ್ಲ, ಎಲ್ಲಾ ಇಂಗ್ಲೀಷ್ ಮೀಡಿಯಂ ನಾಯಿಗಳೇ. ಒಂದು ಮಾತ್ರ ತೆಲುಗು ಮೀಡಿಯಂ”.

ಪತ್ರಕರ್ತನಾಗಿ ನಾನು ಜಗತ್ತಿನ ಐದು ಭೂಖಂಡಗಳಲ್ಲಿ ಪ್ರವಾಸ ಮಾಡಿ ಬಂದು ಕನ್ನಡ ಪತ್ರಿಕೋದ್ಯಮದಲ್ಲೇ ಆಸೆ ಪಟ್ಟು ಉಳಿದಿದ್ದೇನೆ, ಬೆಂಗಳೂರಿನಲ್ಲಿಯೇ ನೆಲೆಸಿದ್ದೇನೆ.

90 ರದಶಕದಲ್ಲಿ ದಕ್ಷಿಣ ಅಮೇರಿಕಾದ ಬ್ರೆಜಿಲಿನರಿಯೋ ಡಿ ಜೆನೈರೋದಲ್ಲಿ ಅರ್ತ್ ಸಮ್ಮಿಟ್‍ ವರದಿ ಮಾಡಲು ದೀರ್ಘ ಕಾಲವಿದ್ದೆ. ಒಂದಷ್ಟು ಇಂಡಿಯನ್‍ ಜರ್ನಲಿಸ್ಟರುಗಳು ನಾವು ಜೊತೆಯಲ್ಲಿ ಊಟೋಪಚಾರಗಳಿಗೆ ಹೋಗುತ್ತಿದ್ದೆವು. ಮೊದಲ ರಾತ್ರೆಯೂಟದಲ್ಲೇ ನಮ್ಮ ಜೊತೆಯಿದ್ದ ಸರ್ದಾರಿಣಿಯೊಬ್ಬರಿಗೆ ಚಿಕನ್‍ ತಿನ್ನಬೇಕೆಂಬ ಆಸೆ ತಡೆಯಲಿಲ್ಲ. ಸ್ಥಳೀಯರಿಗೆ ಪೋರ್ಚುಗೀಸ್, ಫ್ರೆಂಚ್‍ ಎರಡೇ ಭಾಷೆಗಳು ಬರುತ್ತಿದ್ದವು. ‘ವಿ  ವಾಂಟ್‍ ಚಿಕನ್‍ ಚಿಕನ್’ ಎಂದೇನೇನು ಹೇಳಿದರೂ ಸಪ್ಲಯರಿಗೆ ಅರ್ಥವಾಗಲಿಲ್ಲ.

ಅವರೆಲ್ಲರೂ ಕೈಚೆಲ್ಲಿದಾಗ ನಾನು ಕನ್ನಡದಲ್ಲಿ ಹೇಳುತ್ತೇನೆ, ಅವನು ಖಂಡಿತಾ ನೀವು ಆಸೆಪಟ್ಟಂತೆ ಚಿಕನ್‍ ತಂದೇ ತರುತ್ತಾನೆ ಎಂದೆ. ಇವನದೇನಪ್ಪಾ ವಿಚಿತ್ರ ಎಂದೆನಿಸಿದರೂ, ಹೇಳು ನೋಡೋಣವೆಂದು, ತಮಾಶೆ ನೋಡಲುಕಾಯತ್ತಾ ವೈಟರ್‍ನ್ನು ಮತ್ತೊಮ್ಮ ಕರೆದರು. ನಾನು ‘ನನಗೆ ಕೊಕ್ಕೋಕೋಕೋ ಬೇಕು’ ಎಂದು ಕನ್ನಡದಲ್ಲಿಯೇ ಹೇಳಿದೆ. ತಕ್ಷಣವೇ ಅವನ್ನು ಫ್ರಾಂಗೋ, ಫ್ರಾಂಗೋಎಂದು ಖುಶಿಯಾಗಿ ಕುಣಿದಾಡುತ್ತಾ ಚಿಕನ್‍ ಡಿಸಸ್ ತಂದಿರಿಸಿದ.

ಆವತ್ತಿನಿಂದ ನಾನು ಇಂಗ್ಲೀಷ್‍ ಅರಿಯದ ರಶಿಯಾ, ಫ್ರಾನ್ಸ್, ಸ್ವಿಜರ್‍ಲ್ಯಾಂಡ್, ಸ್ಪೈನ್‍ ಇತ್ಯಾದಿ ರಾಷ್ಟ್ರಗಳಲ್ಲಿ ಕನ್ನಡದಲ್ಲೇ ಮಾತನಾಡುವಷ್ಟು ಜಾಣನಾಗಿಬಿಟ್ಟಿದ್ದೇನೆ.

———————-

ಈಶ್ವರ ದೈತೋಟ

IMG-20160410-WA0002ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆ. 1991ರಿಂದ 2011ರವರೆಗಿನ ಎರಡು ದಶಕಗಳಲ್ಲಿ ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯ ಕರ್ನಾಟಕದ ಫೌಂಡರ್ ಚೀಫ್ ಎಡಿಟರ್. ಮಣಿಪಾಲದ ಉದಯವಾಣಿ ರೆಸಿಡೆಂಟ್ ಎಡಿಟರ್, ಟೈಮ್ಸ್ ಆಫ್ ಇಂಡಿಯಾ (ಕ) ಎಡಿಟರ್, ಕನ್ನಡದ ಸೀನಿಯರ್ ಮೋಸ್ಟ್ ದೈನಿಕ ಸಂಯುಕ್ತ ಕರ್ನಾಟಕದ ಚೀಫ್ ಎಡಿಟರ್ ಹಾಗೂ ನೂತನ ವಾರಪತ್ರಿಕೆ ಚೀಫ್ ಎಡಿಟರ್ ಆಗಿ ಹೊಣೆಹೊತ್ತವರು.

ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಷನ್ನಿನಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಅನುಭವ. ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ ಮತ್ತು ಮೀಡಿಯಾ ಮ್ಯಾನೇಜ್‌ಮೆಂಟ್‌ನಲ್ಲಿಯೂ ಅಪಾರ ಸಾಧನೆ. ಯುಜಿಸಿ ಮತ್ತು ಯೂನಿಸೆಫ್ ತರಬೇತಿ ಯೋಜನೆಗೆ ಡೆವಲಪ್‌ಮೆಂಟ್‌ ಕನ್ಸಲ್ಟೆಂಟ್ ಎಂದು ಮನ್ನಣೆ.

2015ರಲ್ಲಿ ಪ್ರತಿಷ್ಠಿತ ಟಿಎಸ್ಆರ್ ಪತ್ರಿಕೋದ್ಯಮ ಪ್ರಶಸ್ತಿ, ಮೂಡಬಿದ್ರೆಯ ನುಡಿಸಿರಿ ಪ್ರಶಸ್ತಿ, 2008ರಲ್ಲಿ ಅಭ್ಯುದಯ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ, ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ (2006). 2008ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್‌ನಿಂದ ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮೀಡಿಯಂ ಮತ್ತು ಪತ್ರಿಕೋದ್ಯಮಕ್ಕೆ ಅತಿ ದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತು ಅತ್ಯಂತ ಜನಪ್ರಿಯ ಮೀಡಿಯಾ ಪರ್ಸನ್ (ವೀಕ್ಷಕರ ಆಯ್ಕೆ) ಎಂಬೆರಡು ಪ್ರಶಸ್ತಿಗಳು. ವಾಯ್ಸ್ ಆಫ್ ಅಮೇರಿಕಾ ಮತ್ತು ಕೆನೆಡಿಯನ್ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವು ಇಂಟರ್‌ನ್ಯಾಷನಲ್ ಜರ್ನಲ್‌ಗಳಿಗೂ ಲೇಖನ ಬರೆದಿದ್ದಾರೆ.

ಅಭ್ಯುದಯ ಪತ್ರಿಕೋದ್ಯಮ ಅವರ ನಿತ್ಯ ಜಪ. ಅಭ್ಯುದಯ ಸಂಬಂಧಿತ ಅನೇಕ ಡಾಕ್ಯುಮೆಂಟರಿಗಳನ್ನು, ರೇಡಿಯೋ ರೂಪಕಗಳನ್ನು ತಯಾರಿಸಿರುವ ಅನುಭವ. ಪತ್ರಿಕೋದ್ಯಮ ಮತ್ತಿತರ ವಿಷಯಗಳ ಬಗ್ಗೆ ಅವರು ಬರೆದಿರುವ, ಅನುವಾದಿಸಿರುವ ಪುಸ್ತಕಗಳ ಸಂಖ್ಯೆ 75ಕ್ಕೂ ಹೆಚ್ಚು.

Share

2 Comments For "ತಮಿಳು ‘ಪುಲಿಕೇಶಿ’!
ಈಶ್ವರ ದೈತೋಟ ಕಾಲಂ
"

 1. jayashree Deshpande
  13th June 2016

  ಕನ್ನಡ ನಿರಾಭಿಮಾನಿಗಳಿಗೆ ಹಾಸ್ಯದ ಚಾದರಿನಲ್ಲಿ ಸುತ್ತಿ ಸುತ್ತಿಗೆಯೇಟು ಕೊಟ್ಟ ಹಾಗಿದೆ. ಓದುತ್ತಿದ್ದ೦ತೆ ಬಿ ಜಿ ಎಲ್ ಸ್ವಾಮಿಯವರ ನೆನಪಾಗದೆ ಇರದು.

  Reply
  • Ishwar Daitota
   19th June 2016

   vandanegalu

   Reply

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...